Saturday, November 24, 2012

ಕಿಡಿವೊಂದು ಕೆರಳಿದರೆ

ಕಿಡಿವೊಂದು ಕೆರಳಿದರೆ
ಮಳೆ ಅದನ್ನು ನಂದಿಸುವುದು
ಮಳೆಯೇ ಜ್ವಲಿಸಿದ್ದರೆ
ಅದನ್ನು ನಡಿಸುವವರು ಯಾರು?
ಶರತ್ಕಾಲದಲಿ ಹೂದೋಟ ನಾಶವಾದರೆ
ಆ ಹೂದೋಟದಲಿ ವಸಂತಕಾಲ ಅರಳುವುದು
ವಸಂತಕಾಲದಲಿ ಹೂದೋಟ ನಾಶವಾದರೆ
ಅದನ್ಯಾರು ಅರಳಿಸುವರು?

ನನ್ನಿಂದ ಕೇಳಬೇಡ ಹೇಗೆ
ಮಂದಿರ ಮುರಿಯಿತು ಕನಸಿನ
ಜನರ ಮಾತಲ್ಲ ಇದು
ಇದು ಕಥೆ ನಮ್ಮವರದ್ದೆ 
ಯಾರೋ ವೈರಿ ನೋವಿಸಿದ್ದರೆ
ಪ್ರೀತಿ ಸಾವರಿಸುವುದು
ಒಲವೆ ನೋವು ನೀಡಿದರೆ
ಅದನ್ಯಾರು ಸಾವರಿಸುವರು?

ಗೊತ್ತಿಲ್ಲ ಏನಾಗುತ್ತಿತ್ತು
ಗೊತ್ತಿಲ್ಲ ನಾನೇನು ಮಾಡುತ್ತಿರುತ್ತಿದ್ದೆ
ಕುಡಿಯುವೆಯೆಂದು ಜೀವದಲ್ಲಿದ್ದೇನೆ
ಕುಡಿಯದಿದ್ದರೆ ನಾ ಸಾಯುತ್ತಿದ್ದೆ
ಜಗ ದಾಹದಲ್ಲಿಟ್ಟರೆ
ಮದ್ಯ ದಾಹ ತಣಿಸುವುದು
ಮದ್ಯವೆ ದಾಹ ನೀಡಿದರೆ
ಅದನ್ಯಾರು ತಣಿಸುವರು ?

ಒಪ್ಪಿದೆ ಬಿರುಗಾಳಿಯ ಮುಂದೆ
ಯಾರದ್ದು ನಡೆಯುವುದಿಲ್ಲ
ಅಲೆಗಳ ದೋಷವಿಲ್ಲ
ಈ ದೋಷ ಇನ್ನೊಬ್ಬರದ್ದು
ಕಡಲ ಮಧ್ಯೆ ದೋಣಿ ಮುಳುಗಿದರೆ
ನಾವಿಕ ತೀರ ಸೇರಿಸುವನು
ನಾವಿಕ ದೋಣಿ ಮುಳುಗಿಸಿದ್ದರೆ
ಅದನ್ಯಾರು ಉಳಿಸುವರು ?

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡಿ ಬರ್ಮನ್
ಚಿತ್ರ : ಅಮರ್ ಪ್ರೇಮ್
chingari koyi bhadake toh sawan use bujhaye
sawan jo agan lagaye use kaun bujhaye
patjhad jo bag ujade woh bag bahar khilaye
jo bag bahar me ujade use kaun khilaye

hamse mat puchho kaise mandir tuta sapno kaa
logo kee bat nahee hai, yeh kissa hain apano kaa
koyi dushman thens lagaye toh mit jiya bahalaye
manamit jo ghanv lagaye use kaun mitaye

naa janey kya ho jata janey ham kya kar jate
pite hain toh jinda hai naa pite toh mar jate
dooniya jo pyasa rakhe toh madira pyas bujhaye
madira jo pyas lagaye use kaun bujhaye

mana tufan ke aage, nahee chalata jor kisi kaa
maujo kaa dosh nahee hai, yeh dosh hain aur kisi kaa
majhadhar me naiyya dole, toh manzi par lagaye
manjhi jo naw duboye use kaun bachaye  
www.youtube.com/watch?v=BMqkEnUxrNw

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...