Monday, November 26, 2012

ಜೀವನ ಸಂಘರ್ಷ

ಸುಂದರ ಜೀವನ
ಎಳೆ ವಯಸ್ಸು

ತುಂಬು ಯೌವನ
ಕಣ್ಣಲ್ಲಿ ಕನಸು

ಕಾಮುಕ ದೃಷ್ಟಿ
ವರಿಸುವ ಯತ್ನ

ಧೈರ್ಯದ ಪರಿಚಯ
ತನ್ನ ಸಂರಕ್ಷಣೆ

ಕ್ರೂರ ನರಪ್ರಾಣಿ
ಅಮಾನುಷ ವರ್ತನೆ

ಸುಂದರ ಮುಖಕ್ಕೆ
ಆಮ್ಲದ ಸಿಂಪಡಣೆ

ವಿಕಾರ ಮುಖ
ನೋವು ಅಸಹನೀಯ

ಬಾಳು ಕಂಬನಿ
ವ್ಯರ್ಥ ಬದುಕು

ಪೋಷಕರ ಲಾಲನೆ
ಜನರ ಸಹಾಯ ಆಂದೋಲನ

ಜೀವನ ಸಂಘರ್ಷ
ಶಕ್ತಿಯ ಸಂಚರಣೆ

ಧೈರ್ಯದಿಂದ ಸಾಗಿದೆ ಬದುಕು
ನಿರ್ಮಿಸಿ ಒಂದು ಉದಾಹರಣೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...