ಗೋರಿ ಕಟ್ಟೋಣ ಬನ್ನಿ
ಸ್ವತಃ ನಮ್ಮದೇ
ಸಾವು ನಿಶ್ಚಿತ
ಎಂದು ಗೊತ್ತು ನಮಗೆ
ಅದರ ಮೇಲೆ
ಸುಂದರ ಅಕ್ಷರದಿಂದ
ನಮ್ಮ ಹೆಸರು ಬರೆಯುವ ಬನ್ನಿ
ಯಾರಿಗೆ ಗೊತ್ತು ನಾಳೆ ಏನೆಂದು ?
ನಾಳೆ ಯಾರು ಉಳಿಯುವರೆಂದು ?
ನಮ್ಮ ಅಂತ್ಯ ಸಂಸ್ಕಾರ
ಸ್ವತ ನಾವೇ ಮಾಡುವ ಬನ್ನಿ
ಶ್ವೇತ ವಸ್ತ್ರ ಧರಿಸಿ
ಚಂದನ ಲೇಪ ಹಚ್ಚಿಯೇ ತಿರುಗುವ ಇನ್ನು
ಈಗಲೇ ನಮ್ಮ ವೈಕುಂಠ ಸಮಾರಾಧನೆ ಆಚರಿಸೋಣ ಬನ್ನಿ
ಮೃಷ್ಟಾನ್ನ, ಭೋಜನ
ಹೋಳಿಗೆ ಪಾಯಸದ
ರುಚಿ ರುಚಿಯ ಅಡುಗೆ ಮಾಡಿ
ಬಂಧು ಬಳಗ ಮಿತ್ರರಿಗೆ ಬಡಿಸುವ ಬನ್ನಿ
ಬಡವರಿಗೆ ಬ್ರಾಹ್ಮಣರಿಗೆ ದಾನ ನೀಡೋಣ ಬನ್ನಿ
ನಾಳೆ ಅನ್ಯರು ಮಾಡುವುದನ್ನು
ಇಂದು ನಾವೇ ಸ್ವತ ಮಾಡುವ ಬನ್ನಿ
ಗೋರಿ ಕಟ್ಟೋಣ ಬನ್ನಿ
by ಹರೀಶ್ ಶೆಟ್ಟಿ, ಶಿರ್ವ
ಸ್ವತಃ ನಮ್ಮದೇ
ಸಾವು ನಿಶ್ಚಿತ
ಎಂದು ಗೊತ್ತು ನಮಗೆ
ಅದರ ಮೇಲೆ
ಸುಂದರ ಅಕ್ಷರದಿಂದ
ನಮ್ಮ ಹೆಸರು ಬರೆಯುವ ಬನ್ನಿ
ಯಾರಿಗೆ ಗೊತ್ತು ನಾಳೆ ಏನೆಂದು ?
ನಾಳೆ ಯಾರು ಉಳಿಯುವರೆಂದು ?
ನಮ್ಮ ಅಂತ್ಯ ಸಂಸ್ಕಾರ
ಸ್ವತ ನಾವೇ ಮಾಡುವ ಬನ್ನಿ
ಶ್ವೇತ ವಸ್ತ್ರ ಧರಿಸಿ
ಚಂದನ ಲೇಪ ಹಚ್ಚಿಯೇ ತಿರುಗುವ ಇನ್ನು
ಈಗಲೇ ನಮ್ಮ ವೈಕುಂಠ ಸಮಾರಾಧನೆ ಆಚರಿಸೋಣ ಬನ್ನಿ
ಮೃಷ್ಟಾನ್ನ, ಭೋಜನ
ಹೋಳಿಗೆ ಪಾಯಸದ
ರುಚಿ ರುಚಿಯ ಅಡುಗೆ ಮಾಡಿ
ಬಂಧು ಬಳಗ ಮಿತ್ರರಿಗೆ ಬಡಿಸುವ ಬನ್ನಿ
ಬಡವರಿಗೆ ಬ್ರಾಹ್ಮಣರಿಗೆ ದಾನ ನೀಡೋಣ ಬನ್ನಿ
ನಾಳೆ ಅನ್ಯರು ಮಾಡುವುದನ್ನು
ಇಂದು ನಾವೇ ಸ್ವತ ಮಾಡುವ ಬನ್ನಿ
ಗೋರಿ ಕಟ್ಟೋಣ ಬನ್ನಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment