Sunday, November 4, 2012

ಗಾಳಿಗೆ ಏನು ಗೊತ್ತು ?

ಗಾಳಿಗೆ ಏನು ಗೊತ್ತು ?
ಅದು ತನ್ನ ಮಂದ ಗತಿಯಲಿ ಬಂದು
ನನ್ನ ದೇಹವನ್ನು ಸೋಕಿ
ನನ್ನಲ್ಲಿ ಸಂವೇದನೆ ನಿರ್ಮಿಸಿ
ಹೊರಟು ಹೋಯಿತು !

ಗಾಳಿಗೆ ಏನು ಗೊತ್ತು ?
ನನ್ನ ಮನಸ್ಸ ವ್ಯಥೆ
ನನ್ನ ಭಾವನೆಗಳ ಗುಟ್ಟು
ಅವಳ ನೆನಪಿನ ಕಟ್ಟು 
ಎಷ್ಟೊಂದು ನನ್ನನ್ನು ಕಾಡುತಿದೆ ಎಂದು !

ಗಾಳಿಗೆ ಏನು ಗೊತ್ತು ?
ಅದೇಕೆ ಬಂದಿತೆಂದು
ನನ್ನ ಮನಸ್ಸ ದೀಪ ನಂದಿಸಲೆಂದೇ
ಅಲ್ಲವೇ ನನ್ನ ಆಸೆಯ ಬೀಜ 
ಪುನಃ ಮೊಳಕೆ ಬಿಡಲೆಂದೇ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...