Tuesday, November 6, 2012

ಕೆಲವೊಮ್ಮೆ ಎನಿಸುತ್ತದೆ

ಕೆಲವೊಮ್ಮೆ ಎನಿಸುತ್ತದೆ
ಎಲ್ಲೊ ಹೋಗಿ
ಶಾಂತತೆಯಲಿ ಕುಳಿತು
ತನ್ನ ಜೀವನವನ್ನು
ಪರಿಶೀಲಿಸ ಬೇಕೆಂದು !

ನಾನು ಗಳಿಸಿದ್ದು ಏನು ?
ನಾನು ಕಳೆದುಕೊಂಡದ್ದು ಏನು ?
ನನ್ನ ಕುಟುಂಬಕ್ಕಾಗಿ ನಾನು ಮಾಡಿದ್ದೇನು ?
ನನ್ನ ಸಮಾಜಕ್ಕಾಗಿ ನಾನು ಮಾಡಿದ್ದೇನು ?
ನನ್ನ ದೇಶಕ್ಕಾಗಿ ನಾನು ಮಾಡಿದ್ದೇನು ?

ನಾನು ಯಾರೆಂದು ?
ನಾನು ಭೂಮಿಗೆ ಬಂದದ್ದು ಯಾಕೆ ?
ನನ್ನ ಈ ಜೀವನ ವ್ಯರ್ಥವೆ ?
ನನ್ನ ಈ ಜೀವನ ಸಾರ್ಥಕವೆ ?
ನನ್ನ ಈ ಜೀವನ ಉಪಯುಕ್ತವೆ ?

ನಾನು ಸತ್ಯಸಂಧನೆ ?
ನಾನು ಸುಳ್ಳುಗಾರನೆ ?
ನಾನು ಒಳ್ಳೆ ಮಗನೆ ?
ನಾನು ಒಳ್ಳೆ ಗಂಡನೆ ?
ನಾನು ಒಳ್ಳೆ ತಂದೆಯೇ ?

ಕೆಲವೊಮ್ಮೆ ಎನಿಸುತ್ತದೆ
ಎಲ್ಲೊ ಹೋಗಿ
ಶಾಂತತೆಯಲಿ ಕುಳಿತು
ತನ್ನ ಜೀವನವನ್ನು
ಪರಿಶೀಲಿಸ ಬೇಕೆಂದು !
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಯೋಚಿಸುವ ಅಗತ್ಯವಿಲ್ಲ.ಧ್ಯಾನದಲ್ಲಿ,ಮೌನದಲ್ಲಿ,ಮನದಾಳದಲ್ಲಿ ಎಲ್ಲಕ್ಕೂ ಉತ್ತರಗಳಿವೆ.ನಿಮ್ಮೊಳಗೇ ಉತ್ತರವಿದೆ.ನಿಮ್ಮೊಳಗೇ ಶಾಂತಿಯಿದೆ.ನಿಮ್ಮೊಳಗೇ ಆನಂದವಿದೆ.ನಿಮಗದು ಸಿಗಲಿ ಎನ್ನುವುದೇ ನನ್ನ ಹಾರೈಕೆ.ನಮಸ್ಕಾರ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...