Tuesday, November 6, 2012

ಕಣ್ಣೀರು

ನಾನು ಹಾದಿಯಲ್ಲಿ ಬಿದ್ದ ಕಣ್ಣೀರು
ಒಂದು ಕ್ಷಣದಿ ಒಣಗಿ ಹೋಗುವೆ
ಭಾವ ನೋವ ತುಂಬಿದ ಎನಗೆ
ಈ ಭೂಮಿಯಲಿ ಅಲ್ಪ ಸಮಯದ ಬದುಕು !

ತಡೆಯಲಾರದ ಸ್ಥಿತಿಯಲ್ಲಿ 
ನಾ ಕಣ್ಣಿಂದ ಹೊರ ಹರಿಯುವೆ
ಹೃದಯ ವೇದನೆಯ ಪರಿಣಾಮ ಎನಗೆ 
ಈ ದೇಹದಲ್ಲಿ ಅಲ್ಪ ಸಮಯದ ನಿವಾಸ !

ಆದರೆ ನನ್ನ ಪ್ರಭಾವ ಪ್ರಭಲ
ಅನೇಕರ ಹೃದಯ ಕರಗಿಸುವೆ
ಪ್ರೇಮ ರೋಷ ದ್ವೇಷದಲಿ ಹೊರ ದೂಡುವ ಎನಗೆ
ಈ ಭಾವಾತ್ಮಕ ಜೀವಿಗಳ ಅಲ್ಪ ಸಮಯದ ಸಹವಾಸ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...