Friday, November 30, 2012

ಮರುಭೂಮಿಯ ಮರಳ ಎದೆ

ಮರುಭೂಮಿಯ ಮರಳ
ಎದೆಗೆ ಒಂಚೂರು
ಮಳೆ ನೀರಿನ ಸಿಂಚನ
ತೃಪ್ತಿ ,ಆತ್ಮ ಸಂತುಷ್ಟಿ
ತುಂಬಿದ ಎದೆಯಿಂದ
ಕೇವಲ
ಒಂದು ಉದ್ಗಾರ
ಧನ್ಯವಾದ ಧನ್ಯವಾದ
ಧನ್ಯವಾದ
ಅಲ್ಪ ಕ್ಷಣಕ್ಕೆ ನನ್ನ ಎದೆ ತಣಿಸಿದಕ್ಕೆ
by ಹರೀಶ್ ಶೆಟ್ಟಿ, ಶಿರ್ವ 

Thursday, November 29, 2012

ಇಲ್ಲ ಯಾವುದರಲ್ಲೂ ಮನಸ್ಸಿಲ್ಲ


ಇಲ್ಲ
ಯಾವುದರಲ್ಲೂ ಮನಸ್ಸಿಲ್ಲ
ನಿನ್ನ ವಿನಾಃ ನನ್ನ ಎಲ್ಲಿಯೂ ಮನಸ್ಸಿಲ್ಲ
ಇಲ್ಲ
ಯಾವುದರಲ್ಲೂ ಮನಸ್ಸಿಲ್ಲ 

ಜೀವಿಸಲು ಮರೆತಿದೆ
ಎಲ್ಲಿ ನೆನಪಿಲ್ಲ
ನಿನ್ನನ್ನು ಪಡೆದೆ ಎಲ್ಲಿ
ಉಸಿರು ಬಂತಲ್ಲಿ
ಜೀವನ ನಿನ್ನ ವಿನಾಃ ಒಲವಿಲ್ಲ
ಇಲ್ಲ
ಯಾವುದರಲ್ಲೂ ಮನಸ್ಸಿಲ್ಲ

ಇಲ್ಲ
ಯಾವುದರಲ್ಲೂ ಮನಸ್ಸಿಲ್ಲ
ಪ್ರಿಯ ನಿನ್ನ ಮರುಳಿಗೆ ಇರಲಾಗುವುದಿಲ್ಲ
ಇಲ್ಲ
ಯಾವುದರಲ್ಲೂ  ಮನಸ್ಸಿಲ್ಲ
ಪ್ರಿಯ ನಿನ್ನ ಮರುಳಿಗೆ ಇರಲಾಗುವುದಿಲ್ಲ

ಒಂದು ವೇಳೆ
ಎಲ್ಲಿಯೂ ಎಂದೂ ನೀ ಹೋದರೆ
ಸಮಯಕ್ಕೆ ಹೇಳು ಸ್ವಲ್ಪ
ನಿಲ್ಲು ಅಲ್ಲಿಯೇ ಎಂದು
ಆ ಸಮಯ ಅಲ್ಲೇ ನಿಲ್ಲಲ್ಲಿ
ಹೋಗದಿರಲಿ
ಇಲ್ಲ
ಯಾವುದರಲ್ಲೂ  ಮನಸ್ಸಿಲ್ಲ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್
ಸಂಗೀತ : ಸಲಿಲ್ ಚೌಧರಿ
ಚಿತ್ರ : ಆನಂದ್

Naa, jiyaa laage naa
Tere binaa, meraa kahii.n, jiyaa laage naa
Naa, jiyaa laage naa

Jiinaa bhuule the kahaa.N yaad nahii.n
Tujhako paayaa hai jahaa.N, saa.Ns phir aaii vahii.n
Zi.ndagii , tere binaa haay, bhaaye naa
Naa, jiyaa laage naa ...

Naa, jiyaa laage naa
Tere binaa, bhanwari se raha jaaye na
Naa, jiyaa laage naa
Tere binaa, bhanwari se raha jaaye na

Tum agar jaao kabhi jaao kahii.n
Vaqt se kahanaa zaraa, vo Thahar jaaye vahii.n
Vo gha.Dii , vahii.n ruke naa jaaye naa
Naa, jiyaa laage naa ...
www.youtube.com/watch?v=IO3D-JfItCU

ಕ್ಷಣ ಕ್ಷಣ ಹೃದಯದ ಹತ್ತಿರ ನೀನಿರುವೆ

ಕ್ಷಣ ಕ್ಷಣ ಹೃದಯದ ಹತ್ತಿರ
ನೀನಿರುವೆ
ಜೀವನ ಸಿಹಿ ಸಾಗರ
ಎಂದೇಳುವೆ
ಕ್ಷಣ ಕ್ಷಣ ಹೃದಯದ ಹತ್ತಿರ
ನೀನಿರುವೆ

ಪ್ರತಿ ಸಂಜೆ ಕಣ್ಣ ಮುಂದೆ
ನಿನ್ನ ಸೆರಗ ತರಂಗಗಳಿರುತ್ತದೆ 
ಪ್ರತಿ ರಾತ್ರಿ ನೆನಪಿನ
ಮೆರವಣಿಗೆ ತರುತ್ತದೆ
ನಾನು ಉಸಿರಾಡುವಾಗ
ನಿನ್ನ ಸುಗಂಧ ಬರುತ್ತದೆ
ಒಂದು ಸುವಾಸಿತ ಸುವಾಸಿತ
ಸಂದೇಶ ತರುತ್ತದೆ
ನನ್ನ ಹೃದಯಬಡಿತ ಸಹ
ನಿನ್ನ ಹಾಡನ್ನು ಹಾಡುತ್ತದೆ
ಕ್ಷಣ ಕ್ಷಣ ಹೃದಯದ ಹತ್ತಿರ ನೀನಿರುವೆ......

ನಿನ್ನೆ ನಿನ್ನನ್ನು ಕಂಡಿದೆ
ನಾನು ನನ್ನ ಅಂಗಳದಲಿ
ನೀನು ಹೇಳುತ್ತಿದಂತೆ ನನ್ನನ್ನು
ಕಟ್ಟಿಹಾಕು ನಿನ್ನ ಬಂಧನದಲಿ
ಎಂಥದಿದು ಸಂಬಂಧ
ಕನಸುಗಳು ಎಂಥದಿದು
ಅಪರಿಚಿತವಾಗಿಯೂ
ಅನಿಸುತ್ತದೆ ಪರಿಚಿತವಾದದ್ದು
ನಾನು ಯೋಚನೆಯಲ್ಲೇ ಇರುವೆ
ಭಯ ಭಯದಿಂದಲೇ ಹೇಳುವೆ
ಕ್ಷಣ ಕ್ಷಣ....

ನೀನು ಯೋಚಿಸುವೆ ಇಷ್ಟ್ಯಾಕೆ
ನಾನು ನಿನ್ನನ್ನು ಪ್ರೀತಿಸುವೆ
ನೀನು ಮರುಳೆಂದು ಭಾವಿಸುವೆ
ನಾನದನ್ನು ಸ್ವೀಕರಿಸುವೆ
ಮರುಳರ ಈ ಮಾತು
ಮರುಳರಿಗೆ ತಿಳಿದಿದೆ
ಉರಿಯುವುದರಲ್ಲಿ ಎಂಥ ಮೌಜಿದೆಯೆಂದು
ಪತಂಗಕ್ಕೆ ತಿಳಿದಿದೆ
ನೀನು ಹೀಗೆಯೇ ಕಾಡುತ್ತಿರು
ಬಂದು ಬಂದು ಕನಸಲ್ಲಿ
ಕ್ಷಣ ಕ್ಷಣ ಹೃದಯದ ಹತ್ತಿರ ನೀನಿರುವೆ......

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಬ್ಲಾಕ್ಮೇಲ್
Pal Pal Dil Ke Paas Tum Rehti Ho
Jeevan Meethi Pyaas Yeh Kehti Ho
Pal Pal Dil Ke Paas Tum Rehti Ho

Har Shyam Aankhon Par
Tera Aanchal Lehraye
Har Raat Yaadon Ki
Baarat Le Aaye
Maein Saans Leta Hoon
Teri Khushboo Aati Hai
Ek Mehka Mehka Sa
Paigham Laati Hai
Meri Dil Ki Dhadkan Bhi
Tere Geet Gaati Hai
Pal Pal ...

Kal Tujhako Dekhaa Thaa, 
Maine Apane Aa.Ngan Me.N
Jaise Kah Rahii Thii Tum, 
Mujhe Baa.Ndh Lo Bandhan Me.N
Ye Kaisaa Rishtaa Hai, 
Ye Kaise Sapane Hai.N
Begaane Ho Kar Bhii, 
Kyuu.N Lagate Apane Hai.N 
Mai.N Soch Mai.N Rahataa Huu.N, 
Dar Dar Ke Kahataa Huu.N
Pal Pal ...

Tum Sochogi Kyon Itna
Maein Tumse Pyaar Karoon
Tum Samjhogi Deewana
Maein Bhi Iqraar Karoon
Dewaanon Ki Yeh Baatein
Deewane Jaante Hain
Jalne Mei Kya Mazaa Hai
Parwanr Jaante Hain
Tum Yunhi Jalate Rehna
Aa Aakar Khwabon Mein
Pa L Pal ...



http://www.youtube.com/watch?v=viKdF7sp_cY

ನನ್ನ ಮನಸ್ಸಿಗೆ ನಿನ್ನದೇ ತೃಷೆ

ನನ್ನ ಮನಸ್ಸಿಗೆ ನಿನ್ನದೇ ತೃಷೆ
ನನ್ನ ಮನಸ್ಸಿಗೆ ನಿನ್ನ
ಈಡೇರುವುದು ಯಾವಾಗ ಆಸೆ
ನನ್ನ ಮನಸ್ಸಿಗೆ ನಿನ್ನದೇ.....

ನಿನ್ನ ನೋಡಿದ ಕ್ಷಣ
ನನ್ನ ಹೃದಯ ಉಳಿಯಲಿಲ್ಲ, ನನ್ನ
ಕೊಡು ನಿನ್ನ ಕೈ ನನ್ನ ಕೈಯಲ್ಲಿ
ಏನು ಹೋಗುವುದು, ನಿನ್ನ
ಈಗಾದರೂ ಮುರಿಯದಿರು ಆಸೆ
ನನ್ನ ಮನಸ್ಸಿಗೆ ನಿನ್ನದೇ ....

ಜೀವನ ನನ್ನದೊಂದು ಜೂಜು
ನೀನು ಸೋಲು ಗೆಲುವು ,ನನ್ನ
ಹಾಗೆ, ಹೀಗೆ ಹೇಗಾದರೂ ಆಡು
ನನ್ನೊಟ್ಟಿಗೆ ನೀನು, ಇಚ್ಚೆಯಂತೆ ,ನಿನ್ನ
ಎಷ್ಟು ಮುಗ್ಧೆ ಆಸೆ
ನನ್ನ ಮನಸ್ಸಿಗೆ ನಿನ್ನದೇ....

ಗೊತ್ತಿಲ್ಲ ಯಾರು ನಾನು
ಏನು ನಾನು ಹಾಗು ಎಲ್ಲಿ ಹೋಗಲಿದೆ ,ನನಗೆ
ನನ್ನ ಆ ಕತೆ ಅಶ್ರುತವಾಗಿಯೂ ಆಯಿತು, ಕಥನ
ಜೀವನ ಏನು, ತಮಾಷೆ
ನನ್ನ ಮನಸ್ಸಿಗೆ ನಿನ್ನದೇ ....

ಮೂಲ : ನೀರಜ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಎಸ್ .ಡಿ.ಬರ್ಮನ್
ಚಿತ್ರ : ಗ್ಯಾಂಬ್ ಲರ್

Mera Man Tera Pyaasa, Mera Man Tera
Poori Kab Hogi Aasha, Mera Man Tera
Jab Se Maine Dekha Tujhe Mera Dil Nahin Raha, Mera
De De Apna Haath Mere Haathon Mein Kya Jaye, Tera
Ab To Na Todo Aasha, Mera Man Tera...
Zindagi Hai Meri Ek Daanv, Tu Hai Haar Jeet, Meri
Aise Vaise Kaise Bhi Tu Khel Humse Jaisi Marzi, Teri
Kitni Hai Bholi Aasha, Mera Man Tera...
Pata Nahin Kaun Hoon Maein, Kya Hoon Aur Kahan Mujhe, Jaana
Apni Vo Kahaani Jo Anjaani Ho Ke Ban Gayi, Fasaana
Jeevan Kya Hai, Tamaasha, Mera Man Tera...
www.youtube.com/watch?v=pmHgKxuD1uM

ನಮಗೆ ನಾವೇ ಪ್ರೇರಣೆ

ನಮಗೆ ನಾವೇ ಪ್ರೇರಣೆ
ನಮ್ಮ ತಪ್ಪುಗಳೆ ನಮ್ಮ ಮಾರ್ಗದರ್ಶಕ
ನಮ್ಮ ಆತ್ಮ ಸಂತುಷ್ಟಿಯೆ ನಮ್ಮ ಪ್ರಶಂಸೆ 
ನಮ್ಮ ಕೈಗಳೆ ನಮ್ಮ ಸೊತ್ತು 
ನಮ್ಮ ದೇಹವೆ ನಮ್ಮ ಸಾಮ್ರಾಜ್ಯ
ನಮ್ಮ ನಾಲಗೆ ನಮ್ಮ ಶಸ್ತ್ರ 
ನಮ್ಮ ಹೃದಯದ ನುಡಿಯೆ ಸತ್ಯ ನುಡಿ 
ನಮ್ಮ ಕಣ್ಣೀರು ನಮ್ಮ ನೋವು 
ನಮ್ಮ ಭಯ ನಮ್ಮ ರೋಗ 
ನಮ್ಮ ಧೈರ್ಯವೆ ನಮ್ಮ ಔಷದಿ 
ನಮ್ಮ ಛಲ ನಮ್ಮ ಗೆಲುವು
ನಮ್ಮ ಆಲಸ್ಯ ನಮ್ಮ ಸೋಲು 
ನಮ್ಮ ಹಠ, ಕೋಪ ನಮ್ಮ ಶತ್ರು 
ನಮ್ಮ ತಾಳ್ಮೆ ನಮ್ಮ ಮಿತ್ರ 
by ಹರೀಶ್ ಶೆಟ್ಟಿ, ಶಿರ್ವ

Wednesday, November 28, 2012

ಹದಿನಾರನೆ ಹರೆಯದ

ಪ್ರಯತ್ನ ಮಾಡಿ ನೋಡಿ
ಕಡಲೆಲ್ಲ ನದಿಯೆಲ್ಲ
ಹೃದಯದ ಅಗ್ನಿ ತಣಿಸಲಾಗದು
ತಣಿಸಬಹುದು ಪ್ರತಿ ಕಿಡಿಯನ್ನೂ

ಹದಿನಾರನೆ ಹರೆಯದ
ಎಳೆಯ ವಯಸ್ಸಿಗೆ ನಮನ
ಪ್ರೀತಿ ನಿನ್ನ ಪ್ರಥಮ ನೋಟಕ್ಕೆ ನಮನ

ಜಗದಲ್ಲಿ ಎಲ್ಲರಿಂದ ಮೊದಲು
ಈ ಹೃದಯ ನೀಡಿದವರು
ಜಗದ ಎಲ್ಲರಿಂದ ಮೊದಲ ಪ್ರೇಮಿಗೆ ನಮನ
ಹೃದಯದಿಂದ ಹೊರಡುವ
ಹಾದಿಗೆ ವಂದನೆಗಳು
ಹೃದಯ ತನಕ ತಲುಪುವ ಮಾರ್ಗಕ್ಕೆ ನಮನ
ಪ್ರೀತಿ ನಿನ್ನ ಪ್ರಥಮ ನೋಟಕ್ಕೆ ನಮನ....

ಯೌವನ ಬಂದು
ಅಪಕೀರ್ತಿಗೆ ಪಾತ್ರವಾದ
ಆ ನಗರ ಆ ಗಲ್ಲಿ ಆ ಮನೆಗೆ ನಮನ
ನಮ್ಮ ಸಂಗಮ ಮಾಡಿದವರು
ನಮ್ಮನ್ನು ಪ್ರತ್ಯೇಕ ಮಾಡಿದವರು
ಆ ಸಮಯ ಆ ಕ್ಷಣ ಆ ಕಾಲಕ್ಕೆ ನಮನ
ಪ್ರೀತಿ ನಿನ್ನ ಪ್ರಥಮ ನೋಟಕ್ಕೆ ನಮನ....

ಭೇಟಿಯಾಗುತ್ತಿದ್ದೆವು ಇಲ್ಲಿ
ಬರೆದಿದೆ ಅದು ಇಲ್ಲಿ
ಆ ಬರಹದ ಶೋಕ ಸಂತಾಪಕ್ಕೆ ನಮನ
ತೀರದ ಮರಳಲ್ಲಿ
ಹೃದಯದ ತರಂಗಿಸುವಾಗ
ಕಡಲಲ್ಲಿ ಏರಿ ಬರುವ ಪ್ರತಿ ಅಲೆಗಳಿಗೆ ನಮನ
ಈ ಆಳ ಆಳವಾದ ಕಣ್ಣ ಸರೋವರದಲ್ಲಿ
ನಮ್ಮನ್ನು ಮುಳುಗಿಸಿದ ಆ ಸುಳಿಗೆ ನಮನ
ತಲೆಯಿಂದ ಸರಿದು ಹೋದ ಸೀರೆಯ
ಆ ದುಷ್ಟ ಬಾಲಿಶ ಸೆರಗಿಗೆ ನಮನ
ಒಲವ ವೈರಿಗಳು ಸಾವಿರ ಪ್ರಯತ್ನ ಮಾಡಿದರು
ಆದರೂ ಬಗ್ಗದ ಆ ಪರಿಶುದ್ಧ ನೋಟಕ್ಕೆ ನಮನ
ಪ್ರೀತಿ ನಿನ್ನ ಪ್ರಥಮ ನೋಟಕ್ಕೆ ನಮನ....

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಅನುಪ್ ಜಲೋಟ ,ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್
ಚಿತ್ರ : ಏಕ್ ದುಜೆ ಕೆ ಲಿಯೇ

[koshish Kar Ke Dekh Le Dariya Saare Nadiya Saari
Dil Ki Lagi Nahin Bujhati, Bujhati Hai Har Chingari]
Solah Baras Ki Baali Umar Ko Salaam
Pyaar Teri Paheli Nazar Ko Salaam...............

Duniya Men Sab Se Pahele Jis Ne Ye Dil Diya
Duniya Ke Sab Se Pahele Dilabar Ko Salaam
Dil Se Nikalane Vaale Raste Ka Shukriya
Dil Tak Pahunchane Vaali Dagar Ko Salaam
Pyaar Teri Paheli Nazar Ko Salaam ...................

Jis Men Javaan Ho Kar, Badanaam Ham Hue
Us Shahar, Us Gali, Us Ghar Ko Salaam
Jis Ne Hamen Milaaye, Jis Ne Juda Kiya
Us Vaqt, Us Ghadi, Us Pahar Ko Salaam
Pyaar Teri Paheli Nazar Ko Salaam ....................

Milate Rahe Yahaan Ham, Ye Hai Yahaan Likha
Us Likhaavat Ki Zer-o-zabar Ko Salaam
Saahil Ke Ret Pe Jo Lahara Utha Ye Dil
Saagar Men Uthane Vaali Har Lahar Ko Salaam
Yun Mast Gahari-gahari Aankhon Ki Jheel Men
Jis Ne Hamen Duboya Us Bhanvar Ko Salaam
Ghoonghat Ko Chhod Ke Jo, Sar Se Sarak Gayi
Aisi Nigodi Bhaali Chunar Ko Salaam
Ulfat Ke Dushmanon Ne Koshish Hazaar Ki
Phir Bhii Nahin Jhuki Jo, Us Nazar Ko Salaaam
Pyaar Teri Paheli Nazar Ko Salaam.............
http://www.youtube.com/watch?v=Y8Yzv0uNBM8

Tuesday, November 27, 2012

ಪ್ರೀತಿಯ ಅಂತ್ಯಕ್ರಿಯೆ

ಪ್ರೀತಿ ಅಂದರೆ ಇದೇ ಎಂದು
ತಿಳಿದಿದ್ದರೆ
ನಾನ್ಯಾಕೆ ಈ ಪಥದಲ್ಲಿ ನಡೆಯುವ
ಸಾಹಸ ಮಾಡುತ್ತಿದ್ದೆ !

ಒಟ್ಟಿಗೆ ನಡೆದ ಹಾದಿಯಲ್ಲಿ
ಈಗ ಒಬ್ಬಂಟಿ
ಅಲೆಮಾರಿಯಾಗಿ
ತಿರುಗುತ್ತಿದ್ದೇನೆ !

ಸುಟ್ಟು ಬೂದಿಯಾದ
ಬಯಕೆಗಳನ್ನು
ಗಂಗೆಯಲ್ಲಿ ಹರಿಸಿ
ತನ್ನ ದೇಹವನ್ನೂ ಶುಚಿಮಾಡಿ ಬಂದೂ ಆಯಿತು  !

ಇನ್ನು ಪ್ರೀತಿಯ ಅಂತ್ಯಕ್ರಿಯೆ
ಆಯಿತೆಂದು ತಿಳಿದಿದ್ದೆ
ಆದರೆ ಈ ಹೃದಯ ಎಂಬ
ಶವವನ್ನು  ಹೊತ್ತುಕೊಂಡೆ ತಿರುಗಬೇಕೆಂದು ಮರೆತಿದ್ದೆ !

ಸತ್ತ ಪ್ರೀತಿಯ
ನೆನಪ ಅನ್ನ ತಿನ್ನಲು 
ಯಾವುದೇ ಕಾಗೆ ಬರಲ್ಲ
ಸ್ವತ ಇಡಿ ಜೀವನ ತಿನ್ನಬೇಕಲ್ಲವೇ !

ಪ್ರೀತಿಯಲ್ಲಿ ಕಾಲ್ಪನಿಕ
ತೃಪ್ತಿ ಪಡೆಯಲು ಹೋಗಿ 
ಇಂದು ವಾಸ್ತವದಲ್ಲಿ
ಜೀವನದಲ್ಲಿ ಉಳಿದದ್ದು ಸಂಕಟ ಅತೃಪ್ತಿ !
by ಹರೀಶ್ ಶೆಟ್ಟಿ, ಶಿರ್ವ

ಗಗನಸಖಿ

ನನ್ನವಳು
ಗಗನಸಖಿ
ಇದರ ಕಾರಣ
ನಾನು
ಹೆಚ್ಚಾಗಿ ಇರುತ್ತೇನೆ
ದುಃಖಿ
by ಹರೀಶ್ ಶೆಟ್ಟಿ, ಶಿರ್ವ 

ಏನಾಯಿತು ನಿನ್ನ ಕೊಟ್ಟ ಭಾಷೆ

ಏನಾಯಿತು ನೀ ಕೊಟ್ಟ ಭಾಷೆ 
ಆ ಶಪಥ ಆ ಅಭಿಲಾಷೆ

ಏನಾಯಿತು ನೀ ಕೊಟ್ಟ ಭಾಷೆ
ಆ  ಶಪಥ ಆ ಅಭಿಲಾಷೆ
ಮರೆದ ದಿನ ನಿನ್ನನ್ನು ನಾ
ಆ ದಿನ ಜೀವನದ ಕೊನೆಯ ದಿನವಾಗುವುದು
ಏನಾಯಿತು ನೀ ಕೊಟ್ಟ ಭಾಷೆ
ಆ  ಶಪಥ ಆ ಅಭಿಲಾಷೆ

ಮರೆದ ದಿನ ನಿನ್ನನ್ನು ನಾ
ಆ ದಿನ ಜೀವನದ ಕೊನೆಯ ದಿನವಾಗುವುದು
ಏನಾಯಿತು ನೀ ಕೊಟ್ಟ ಭಾಷೆ
ಆ ಶಪಥ ಆ ಅಭಿಲಾಷೆ

!!ನೆನಪಿದೆ ನನಗೆ ನೀನೆಳಿದ್ದು
ನಿನ್ನಿಂದ ಎಂದೂ ಮುನಿಸಲಾರೆಯೆಂದು
ಹೃದಯದ ಹಾಗೆ ಕೈಗಳು ಕೂಡಿದೆ
ಹೇಗೆ ಅದು ದೂರವಾಗುವುದುದೆಂದು
ನಿನ್ನ ಬಾಹುಗಳಲ್ಲಿ ಕಳೆದ ಪ್ರತಿ ಸಂಜೆ
ಪ್ರೇಮ ದ್ರೋಹಿ ನಿನಗದೂ ನೆನಪಿಲ್ಲವೇ!!

ಏನಾಯಿತು ನೀ ಕೊಟ್ಟ ಭಾಷೆ 
ಆ ಶಪಥ ಆ ಅಭಿಲಾಷೆ
ಮರೆದ ದಿನ ನಿನ್ನನ್ನು ನಾ
ಆ ದಿನ ಜೀವನದ ಕೊನೆಯ ದಿನವಾಗುವುದು
ಏನಾಯಿತು ನೀ ಕೊಟ್ಟ ಭಾಷೆ 
ಆ ಶಪಥ ಆ ಅಭಿಲಾಷೆ

!!ಓ ಹೇಳುವವರೇ ನನ್ನನ್ನು ಕಪಟಿ
ಯಾರು ಕಪಟಿ ಎಂದು ಹೇಳಿ ಸ್ವಲ್ಪ
ಪ್ರೀತಿಗೋಸ್ಕರ ಕಣ್ಣೀರು ಕುಡಿದವ
ಅಥವಾ ಪ್ರೀತಿಯನ್ನು ಮಾರಿದವ
ನಶೆ ಸಂಪತ್ತಿನ ಇಷ್ಟು ಸಹ ಏನು
ಅಂದರೆ ನಿನಗೇನೂ ನೆನಪಿಲ್ಲ !!

ಏನಾಯಿತು ನೀ ಕೊಟ್ಟ ಭಾಷೆ 
ಆ  ಶಪಥ ಆ ಅಭಿಲಾಷೆ

ಮೂಲ : ಮಜರೂಹ್ ಸುಲ್ತಾನ್ ಪುರಿ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ , ಸುಷ್ಮಾ ಶ್ರೇಷ್ಠ
ಸಂಗೀತ :ಆರ್ .ಡಿ.ಬರ್ಮನ್
ಚಿತ್ರ : ಹಮ್ ಕಿಸಿಸೆ ಕಮ್ ನಹಿ

--MALE--
Kya hua tera waada
Woh kasam, woh iraada

Kya hua tera waada
Woh kasam, woh iraada
bhoolega dil jis din tumhe
Woh din zindagi ka aakhri din hoga
Kya hua tera waada
Woh kasam, woh iraada

--FEMALE--
Bhoolega dil jis din tumhe
Woh din zindagi ka aakhri din hoga
Kya hua tera waada

--MALE--
Yaad hai mujhko, tune kaha tha
Tumse nahin roothenge kabhi
Dil ki tarah se haath mile hain
Kaise bhala chhootenge kabhi
Teri baahon mein beeti har shyaam
Bewafa yeh bhi kya yaad nahin

Kya hua tera waada
Woh kasam, woh iraada
Bhoolega dil jis din tumhe
Woh din zindagi ka aakhri din hoga
Kya hua tera waada
Woh kasam, woh iraada

Oh kehne waale mujhko farebi
Kaun farebi hai yeh bata
Woh jisne gham liya pyaar ki khaatir
Ya jisne pyaar ko bech diya
Nasha daulat ka aisa bhi kya
Ke tujhe kuch bhi yaad nahin

Kya hua tera waada
Woh kasam, woh iraada
Bhoolega dil jis din tumhe
Woh din zindagi ka aakhri din hoga
Kya hua tera waada
Woh kasam woh irada
http://www.youtube.com/watch?v=V6MFr3d-9Ks

Monday, November 26, 2012

ಜೀವನ ಸಂಘರ್ಷ

ಸುಂದರ ಜೀವನ
ಎಳೆ ವಯಸ್ಸು

ತುಂಬು ಯೌವನ
ಕಣ್ಣಲ್ಲಿ ಕನಸು

ಕಾಮುಕ ದೃಷ್ಟಿ
ವರಿಸುವ ಯತ್ನ

ಧೈರ್ಯದ ಪರಿಚಯ
ತನ್ನ ಸಂರಕ್ಷಣೆ

ಕ್ರೂರ ನರಪ್ರಾಣಿ
ಅಮಾನುಷ ವರ್ತನೆ

ಸುಂದರ ಮುಖಕ್ಕೆ
ಆಮ್ಲದ ಸಿಂಪಡಣೆ

ವಿಕಾರ ಮುಖ
ನೋವು ಅಸಹನೀಯ

ಬಾಳು ಕಂಬನಿ
ವ್ಯರ್ಥ ಬದುಕು

ಪೋಷಕರ ಲಾಲನೆ
ಜನರ ಸಹಾಯ ಆಂದೋಲನ

ಜೀವನ ಸಂಘರ್ಷ
ಶಕ್ತಿಯ ಸಂಚರಣೆ

ಧೈರ್ಯದಿಂದ ಸಾಗಿದೆ ಬದುಕು
ನಿರ್ಮಿಸಿ ಒಂದು ಉದಾಹರಣೆ
by ಹರೀಶ್ ಶೆಟ್ಟಿ, ಶಿರ್ವ

ದೋಸೆಯ ಪರಿಮಳ

ಗೆಳತಿ...
ನೆರೆಮನೆಯಿಂದ
ಬರುವ
ದೋಸೆಯ ಪರಿಮಳದಿಂದ
ನನ್ನ
ಹೊಟ್ಟೆ ಉರಿಯುವುದಿಲ್ಲ
ನಿನ್ನ
ದೋಸೆ ನೆನೆದು 
ನನ್ನ
ಹೃದಯ ಉರಿಯುತ್ತದೆ
by ಹರೀಶ್ ಶೆಟ್ಟಿ, ಶಿರ್ವ

ನಿನ್ನ ಕಣ್ಣಲ್ಲಿ


ನಿನ್ನ ಕಣ್ಣಲ್ಲಿ
ಏನೋ ಸುಗಂಧಿತ ಗುಟ್ಟಿದೆ
ನಿನ್ನಿಂದಲೂ ಸುಂದರ
ನಿನ್ನ ಈ ಶೈಲಿಯಾಗಿದೆ
ನಿನ್ನ ಕಣ್ಣಲ್ಲಿ
ಏನೋ ಸುಗಂಧಿತ ಗುಟ್ಟಿದೆ -೨

ತುಟಿಯ ಕಂಪಿಸಿದರೆ
ಮಲ್ಲಿಗೆಯ ಹೂವು ಅರಳುತ್ತದೆ ಎಲ್ಲಿಯೋ -೨ 
ನಿನ್ನ ಕಣ್ಣಲ್ಲೇನು
ಕಡಲ ತೀರ ಸಹ ಸಿಗುತ್ತದೆ ಎಲ್ಲಿಯೋ 
ನಿನ್ನ ಮೌನ ಸಹ
ನಿನ್ನ ಸ್ವರವಾಗಿದೆ

ನಿಮ್ಮ ಕಣ್ಣಲ್ಲಿ
ಏನೋ ಸುಗಂಧಿತ ಗುಟ್ಟಿದೆ
ನಿಮ್ಮಿಂದಲೂ ಸುಂದರ
ನಿಮ್ಮ ಈ ಶೈಲಿಯಾಗಿದೆ
ನಿಮ್ಮ ಕಣ್ಣಲ್ಲಿ ಏನೋ ಸುಗಂಧಿತ ಗುಟ್ಟಿದೆ -೨

ನಿಮ್ಮ ಮಾತಲ್ಲಿ
ಪುನಃ ತಮಾಷೆ ಇಲ್ಲವಲ್ಲ
ಅನಾವಶ್ಯಕ ಹೊಗಳುವುದು
ನಿಮ್ಮ ಸ್ವಭಾವ ಅಲ್ಲವಲ್ಲ
ನಿಮ್ಮ ಪೋಕರಿತನದ
ಇದು ಹೊಸ ಶೈಲಿಯಾಗಿದೆ

ನಿಮ್ಮ ಕಣ್ಣಲ್ಲಿ
ಏನೋ ಸುಗಂಧಿತ ಗುಟ್ಟಿದೆ
ನಿಮ್ಮಿಂದಲೂ ಸುಂದರ
ನಿಮ್ಮ ಈ ಶೈಲಿಯಾಗಿದೆ
ನಿಮ್ಮ ಕಣ್ಣಲ್ಲಿ
ಏನೋ ಸುಗಂಧಿತ ಗುಟ್ಟಿದೆ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಸಂಗೀತ: ಆರ್.ಡಿ.ಬರ್ಮನ್
ಚಿತ್ರ : ಘರ್

aap kee aankho me kuchh mehke huye se raj hai - (2)
aap se bhee khubsurat aap ke andaz hai
aap kee aankho me kuchh mehke huye se raj hai

lab hile toh mogare ke phul khilte hai kahee - (2)
aap kee aankho me kya sahil bhee milte hai kahee
aap kee khamoshiya bhee aap kee aawaj hai

aap kee aankho me kuchh mehke huye se raj hai
aap se bhee khubsurat aap ke andaz hai
aap kee aankho me kuchh mehke huye se raj hai

aap kee baton me phir koyee shararat toh nahee - (2)
bevajeh tareef karna aap kee aadat toh nahee
aap kee badmashiyo ke yeh naye andaz hai

aap kee aankho me kuchh mehke huye se raj hai
ho aap se bhee khubsurat aap ke andaz hai
aap kee aankho me kuchh mehke huye se raj ಹಾಯ್
www.youtube.com/watch?v=2YE3ShJGzAs

Sunday, November 25, 2012

ನಿನ್ನ ಮಕರಂದ

ಗುಲಾಬಿ ಹೂವೆ 
ನಿನ್ನ ಮಕರಂದ 
ಹೀರಲೆಂದು ಬಂದ 
ನನಗೆ 
ನಿನ್ನ ಕಾವಲ ಮುಳ್ಳು 
ಚುಚ್ಚಿ ನನ್ನದೇ ರಕ್ತ ಹೀರಿತಲ್ಲ 
ವೇದನೆಯಿಂದ 
ಇಂತಿ,
ದುಂಬಿ
by ಹರೀಶ್ ಶೆಟ್ಟಿ, ಶಿರ್ವ

ನಿನ್ನ ಉತ್ಸಾಹ

ಒಹ್ ಮನವೆ
ಅವಸರಿಸದಿರು 
ನಿನ್ನ ಉತ್ಸಾಹ 
ನಿನ್ನ ವೈರಿ 
ಆಗದಿರಲಿ 
ನಿನ್ನ ಕಾರ್ಯದಕ್ಷತೆಯ ಮೇಲೆ 
ಶಂಕೆ ಮೂಡದಿರಲಿ 
by ಹರೀಶ್ ಶೆಟ್ಟಿ, ಶಿರ್ವ

ಒಂಟಿತನ

ಗೆಳತಿ 
ಈ ಒಂಟಿತನ 
ಕಷ್ಟದಾಯಕ 
ಆದರೆ ಹಿತ ನೀಡುತ್ತದೆ 
ನಿನ್ನ ಸಿಹಿ ನೆನಪು 
by ಹರೀಶ್ ಶೆಟ್ಟಿ, ಶಿರ್ವ

Saturday, November 24, 2012

ಕಿಡಿವೊಂದು ಕೆರಳಿದರೆ

ಕಿಡಿವೊಂದು ಕೆರಳಿದರೆ
ಮಳೆ ಅದನ್ನು ನಂದಿಸುವುದು
ಮಳೆಯೇ ಜ್ವಲಿಸಿದ್ದರೆ
ಅದನ್ನು ನಡಿಸುವವರು ಯಾರು?
ಶರತ್ಕಾಲದಲಿ ಹೂದೋಟ ನಾಶವಾದರೆ
ಆ ಹೂದೋಟದಲಿ ವಸಂತಕಾಲ ಅರಳುವುದು
ವಸಂತಕಾಲದಲಿ ಹೂದೋಟ ನಾಶವಾದರೆ
ಅದನ್ಯಾರು ಅರಳಿಸುವರು?

ನನ್ನಿಂದ ಕೇಳಬೇಡ ಹೇಗೆ
ಮಂದಿರ ಮುರಿಯಿತು ಕನಸಿನ
ಜನರ ಮಾತಲ್ಲ ಇದು
ಇದು ಕಥೆ ನಮ್ಮವರದ್ದೆ 
ಯಾರೋ ವೈರಿ ನೋವಿಸಿದ್ದರೆ
ಪ್ರೀತಿ ಸಾವರಿಸುವುದು
ಒಲವೆ ನೋವು ನೀಡಿದರೆ
ಅದನ್ಯಾರು ಸಾವರಿಸುವರು?

ಗೊತ್ತಿಲ್ಲ ಏನಾಗುತ್ತಿತ್ತು
ಗೊತ್ತಿಲ್ಲ ನಾನೇನು ಮಾಡುತ್ತಿರುತ್ತಿದ್ದೆ
ಕುಡಿಯುವೆಯೆಂದು ಜೀವದಲ್ಲಿದ್ದೇನೆ
ಕುಡಿಯದಿದ್ದರೆ ನಾ ಸಾಯುತ್ತಿದ್ದೆ
ಜಗ ದಾಹದಲ್ಲಿಟ್ಟರೆ
ಮದ್ಯ ದಾಹ ತಣಿಸುವುದು
ಮದ್ಯವೆ ದಾಹ ನೀಡಿದರೆ
ಅದನ್ಯಾರು ತಣಿಸುವರು ?

ಒಪ್ಪಿದೆ ಬಿರುಗಾಳಿಯ ಮುಂದೆ
ಯಾರದ್ದು ನಡೆಯುವುದಿಲ್ಲ
ಅಲೆಗಳ ದೋಷವಿಲ್ಲ
ಈ ದೋಷ ಇನ್ನೊಬ್ಬರದ್ದು
ಕಡಲ ಮಧ್ಯೆ ದೋಣಿ ಮುಳುಗಿದರೆ
ನಾವಿಕ ತೀರ ಸೇರಿಸುವನು
ನಾವಿಕ ದೋಣಿ ಮುಳುಗಿಸಿದ್ದರೆ
ಅದನ್ಯಾರು ಉಳಿಸುವರು ?

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡಿ ಬರ್ಮನ್
ಚಿತ್ರ : ಅಮರ್ ಪ್ರೇಮ್
chingari koyi bhadake toh sawan use bujhaye
sawan jo agan lagaye use kaun bujhaye
patjhad jo bag ujade woh bag bahar khilaye
jo bag bahar me ujade use kaun khilaye

hamse mat puchho kaise mandir tuta sapno kaa
logo kee bat nahee hai, yeh kissa hain apano kaa
koyi dushman thens lagaye toh mit jiya bahalaye
manamit jo ghanv lagaye use kaun mitaye

naa janey kya ho jata janey ham kya kar jate
pite hain toh jinda hai naa pite toh mar jate
dooniya jo pyasa rakhe toh madira pyas bujhaye
madira jo pyas lagaye use kaun bujhaye

mana tufan ke aage, nahee chalata jor kisi kaa
maujo kaa dosh nahee hai, yeh dosh hain aur kisi kaa
majhadhar me naiyya dole, toh manzi par lagaye
manjhi jo naw duboye use kaun bachaye  
www.youtube.com/watch?v=BMqkEnUxrNw

ಗುನುಗುನಿಸುತ್ತಿದೆ ಭ್ರಮರ


ಗುನುಗುನಿಸುತ್ತಿದೆ ಭ್ರಮರ, 
ಅರಳುತ್ತಿದೆ ಸುಮಗಳು,
ಗುನುಗುನಿಸುತ್ತಿದೆ ಭ್ರಮರ
ಅರಳುತ್ತಿದೆ ಸುಮಗಳು...

ಸ್ವಲ್ಪ ನೋಡು ಪ್ರೀಯೆ,
ಮೋಸಗಾರ ಭ್ರಮರ ಹೇಗೆ ನಗುತ್ತಿದೆ,
ಅಯ್ಯೋ ಸುಮ ಹೀಗೆ ನಾಚುತ್ತಿದೆ,
ಸೆರಗಲ್ಲಿ ಮುಖ ಯಾರೋ ಅಡಗಿಸುವಂತಿದೆ,
ಋತು ಹೀಗೆ ,ಆಯ್ಯೋ ಹೀಗೆ,
ಈ ಪವನ ಬೀಸುತ್ತಿದೆ ಗಲ್ಲಿ ಗಲ್ಲಿಯಲ್ಲೂ,
ಗುನುಗುನಿಸುತ್ತಿದೆ ಭ್ರಮರ,
ಅರಳುತ್ತಿದೆ ಸುಮಗಳು.....


ಯಾರಿಗೇನು ಹೇಳಲಿ,
ನಮ್ಮ ಹೃದಯ ಮರೆಯಾಗಿದೆ,
ಅಯ್ಯೋ ಅಯ್ಯೋ.... ನೋಡಿ ಹೇಗೆ.....
ಹೃದಯ ಹೇಗೆ ಮರೆಯಾಗಿದೆ,
ಮುದ್ದು ಮನಸ್ಸಲಿ ಬಯಕೆ ಹುಟ್ಟುತ್ತಿದೆ,
ಋತು ಹೀಗೆ, ಅಯ್ಯೋ ಹೀಗೆ,
ಈ ಪವನ ಬೀಸುತ್ತಿದೆ ಗಲ್ಲಿ ಗಲ್ಲಿಯಲ್ಲೂ,
ಗುನುಗುನಿಸುತ್ತಿದೆ ಭ್ರಮರ,
ಅರಳುತ್ತಿದೆ ಸುಮಗಳು.....

ನೋಡು ಹತ್ತಿರ ಬರದಿರು,
ಸುಮಗಳ ನೆಪ ಹೇಳಿ ಪ್ರೀತಿ ತೋರಿಸದಿರು,
ಹೋಗು ನೀನು ಮಾತನ್ನು ತಿರುಗಿಸದಿರು,
ಭ್ರಮರ ಎಂದು ಕಣ್ಣಾಟ ಆಡದಿರು -೨
ಋತು ಹೀಗೆ, ಅಯ್ಯೋ ಹೀಗೆೆ,
ಈ ಪವನ ಬೀಸುತ್ತಿದೆ ಗಲ್ಲಿ ಗಲ್ಲಿಯಲ್ಲೂ,
ಗುನುಗುನಿಸುತ್ತಿದೆ ಭ್ರಮರ,
ಅರಳುತ್ತಿದೆ ಸುಮಗಳು...... ...

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ ರಫಿ ,ಆಶಾ ಭೋಂಸ್ಲೆ
ಸಂಗೀತ :ಎಸ್ .ಡಿ.ಬರ್ಮನ್
ಚಿತ್ರ : ಆರಾಧನಾ

Gun-guna Rahe Hain Bhanware
Khil Rahi Hai Kali Kali - (2)
Gali Gali Kali Kali,
Gun-guna Rahe.........

Zara Dekho Sajan
Beyiman Bhanwra Kaise Muskaye
Hay Kali Yu Sharmaye
Ghunghat Me Jaise Koyi Chhup Jaye - 2
Ritu Aisi, Hay Kaisi
Ye Pawan Chali Gali Gali
Gun-guna Rahe Hain Bhanware
Khil Rahi Hai Kali Kali - (2)
Gali Gali Kali Kali

Kisi Ko Kya Kahe
Ham Dono Bhi Hain Dekho Kuchh Khoye
Khoye Huye Kya Oye Oye
Jaage Jiya Me Arman Soye -2
Ritu Aisi Haye Kaisi
Yeh Pawan Chali Gali Gali
Gunguna Rahein...
Gali Gali.. Kali Kali

suno Pas Na Aao
Kaliyo Ke Bahane Pyar Na Jatao
ao Chalo Bat Na Banao
Bhanwre Ke Bahane Aankh Na Ladao - 2
Ritu Aisi Hay Kaisi
Yeh Pawan Chali Gali Gali
Gun-guna Rahe Hain Bhanwar Khil Rahi Hai Kali Kali - (2)
Gali Gali Kali Kali, Gun-guna Rahe.........
www.youtube.com/watch?v=yTktbXFZP6o

Friday, November 23, 2012

ಮಹಾ ಕಾವ್ಯ

ಗೆಳತಿ...
ನಾನು ಬರೆದೆ
ನಮ್ಮ ಪ್ರೀತಿಯ ಮಹಾ ಕಾವ್ಯ
ಆದರೆ ಅದರಲ್ಲಿ
ನನ್ನ ಹೆಸರು
ಕೇವಲ ಕಾವ್ಯದ ಕೊನೆಯಲ್ಲಿ
ಬರೆದಿತ್ತು
ಕಾವ್ಯದ ಲೇಖಕನೆಂದು
by ಹರೀಶ್ ಶೆಟ್ಟಿ, ಶಿರ್ವ

ಬಂಜರ ಭೂಮಿ

ಗೆಳತಿ
ನಿನ್ನ ಪ್ರೀತಿಯ
ಒಸರಿಲ್ಲದೆ
ನನ್ನ ಹೃದಯ
ಈಗ ಬಂಜರ ಭೂಮಿ
by ಹರೀಶ್ ಶೆಟ್ಟಿ, ಶಿರ್ವ
 

ಜೀವನ

ಬಂಜರ ಭೂಮಿಯ
ಅಡಿಯಲ್ಲಿ ಒಂದು
ಒಣಗಿದ ಬೀಜ
ಜೀವನಕ್ಕಾಗಿ ಒದ್ದಾಡುತ ಇದೆ !

ನೀರ ಒಸರು ಹೆಚ್ಚಾಗಿ
ಹೂವಿನ ಗಿಡದ ಬೇರು
ಮಣ್ಣಿಂದ ಅಗಲಿ ಬಿದ್ದು
ಜೀವನದ ಕೊನೆ ಉಸಿರು ಎಳೆಯುತ್ತಿದೆ !

ದೊಡ್ಡ ಮರವೊಂದು
ಬಿರುಗಾಳಿಯಲ್ಲಿ ಸಿಕ್ಕಿ
ತನ್ನ ಫಲ ಪುಷ್ಪ ಹಾಗು
ಭೂಮಿಯಿಂದ ತನ್ನ ಆಧಾರ ಕಳೆದು
ಇಂದು ಜೀವನ ಮರಣದ ಮಧ್ಯೆ ಸಿಲುಕಿದೆ!

ದೀರ್ಘ ಸಮಯದಿಂದ
ಹಾರುತ್ತಿದ್ದ ಗಾಳಿಪಟವೊಂದು
ಹಿಂಬಾಲಿಸಿ ಬಂದ ಗಾಳಿಪಟದ ದಾರಕ್ಕೆ ಸಿಕ್ಕಿ ತುಂಡಾಗಿ
ಹಾರಾಡುತ ಬಂದು ವಿದ್ಯುತ್ ಕಂಬಕ್ಕೆ ಸಿಲುಕಿ
ಇನ್ನೊಂದು ಜೀವನಕ್ಕಾಗಿ ಬೇಡುತ್ತಿದೆ !
by ಹರೀಶ್ ಶೆಟ್ಟಿ, ಶಿರ್ವ

Thursday, November 22, 2012

ಜನರು ಏನೇನು ಹೇಳುತ್ತಿರುವರು



ಜನರು ಏನೇನು ಹೇಳುತ್ತಿರುವರು
ಜನರ ಕೆಲಸ ಹೇಳುತ್ತಿರುವುದು
ಬಿಡು ವ್ಯರ್ಥದ ಮಾತುಗಳಲ್ಲಿ
ಕಳೆದೋಗದಿರಲಿ ಈ ಸಮಯ
ಜನರು ಏನೇನು ಹೇಳುತ್ತಿರುವರು...

ಕೆಲವು ಪದ್ಧತಿ ಜಗದ ಹೀಗಿದೆ
ಪ್ರತಿಯೊಂದು ಹಗಲಿನ ಸಂಜೆಯಾಗಿದೆ
ನೀನ್ಯಾರು ನಿನ್ನ ಹೆಸರೇನಿದೆ
ಸೀತೆಯ ಕೂಡ ಇಲ್ಲಿ ಅವಮಾನವಾಗಿದೆ
ಮತ್ಯಾಕೆ ಪ್ರಪಂಚದ ಮಾತಲ್ಲಿ
ನಿನ್ನ ಕಂಗಳು ಸುರಿಸುತ್ತಿದೆ ಕಣ್ಣೀರು
ಜನರು ಏನೇನು ಹೇಳುತ್ತಿರುವರು...

ನಮಗ್ಯಾರು ನಿಂದಿಸುತ್ತಾರೋ
ನಾವು ಕಾಲ ಕಳೆಯುತ್ತಿರುತ್ತೇವೆ ಮದ ಮೋಜಿನಲಿ
ನಾನು ಕಂಡಿದ್ದೇನೆ ಅವರನ್ನೂ
ಕದ್ದು ಕದ್ದು ಬರುತ್ತಿರುವುದನ್ನು ಈ ಬೀದಿಯಲಿ
ಇದು ಸತ್ಯ ಸುಳ್ಳು ಮಾತಲ್ಲ
ನೀನೇ ಹೇಳು ಇದು ಸತ್ಯವಲ್ಲವೆ
ಜನರು ಏನೇನು ಹೇಳುತ್ತಿರುವರು...

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಕಿಶೋರ್ ಕುಮಾರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಅಮರ್ ಪ್ರೇಮ್

Kuch To Log Kahenge
Logon Ka Kaam Hai Kehna
Chhodo Bekaar Ki Baaton Mein
Kahin Beet Na Jaaye Raina
Kuch To Log Kahenge
Logon Ka Kaam Hai Kehna

Kuch Reet Jagat Ki Aisi Hai
Har Ek Subah Ki Shaam Hui
Tu Kaun Hai Tera Naam Hai Kya
Seeta Bhi Yahan Badnaam Hui
Phir Kyon Sansaar Ki Baaton Se
Bheeg Gaye Tere Naina
Kuch To Log Kahenge
Logon Ka Kaam Hai Kehna

Humko Jo Taane Dete Hain
Hum Khoyen Hai Inn Rang Raliyon Mein
Humne Unko Bhi Chhup Chhup Ke
Aate Dekha Inn Galiyon Mein
Yeh Sach Hai Jhoothi Baat Nahin
Tum Bolon Yeh Sach Hain Na

Kuch To Log Kahenge
Logon Ka Kaam Hai Kehna
www.youtube.com/watch?v=AlubAvt_Caw

Wednesday, November 21, 2012

ಇತ್ತೀಚಿನ ದಿನಗಳಲ್ಲಿ

ಇತ್ತೀಚಿನ ದಿನಗಳಲ್ಲಿ
ನನ್ನ ಪಾದಗಳು ನೆಲದ ಮೇಲಿರುವುದಿಲ್ಲ
ಹೇಳಿ ನನ್ನನ್ನು ಹಾರುವುದನ್ನು ನೀವೆಂದೂ ನೋಡಿದ್ದೀರಾ

ನಿನ್ನ ಕೈಯ ಹಿಡಿದಾಗಲೆಲ್ಲಾ
ನೋಡಿದೆ ನಾ ಅಂದು
ಜನರೆಲ್ಲ ಹೇಳುತ್ತಾರೆ
ಅದು ಕೇವಲ ಹಸ್ತ ರೇಖೆಯೆಂದು
ನಾನು ನೋಡಿದ್ದೇನೆ
ಭಾಗ್ಯವನ್ನು ಸೇರುವುದನ್ನು ಇಲ್ಲಿ
ಇತ್ತೀಚಿನ ದಿನಗಳಲ್ಲಿ......

ನಿದ್ರೆಯ ಹಾಗಿರುತ್ತದೆ
ಸ್ವಲ್ಪ ಮಾದಕತೆ ಇರುತ್ತದೆ
ಹಗಲು ರಾತ್ರಿ ಕಣ್ಣಲಿ
ಒಂದು ಮುಖ ನೆಲೆಸಿರುತ್ತದೆ
ಎಂದೂ ನೋಡಿದ್ದೀರಾ ರೆಕ್ಕೆ ಇದ್ದ ಕಣ್ಣನ್ನು ಇಲ್ಲಿ
ಹೇಳಿ
ಇತ್ತೀಚಿನ ದಿನಗಳಲ್ಲಿ......

ಏನಾಗುತ್ತದೋ
ಪ್ರತಿ ವಿಷಯದಲಿ ಏನೋ ಆಗುತ್ತದೆ
ಹಗಲಲ್ಲಿ ಏನೋ ಆಗುತ್ತದೆ 
ರಾತ್ರಿಯಲಿ ಏನೋ ಆಗುತ್ತದೆ
ಹಿಡಿದಿಡಿ ನನ್ನನ್ನು
ಎಂದಾದರೂ ನೋಡಿದ್ದರೆ ಹಾರುವುದನ್ನು ಅಲ್ಲಲ್ಲಿ
ಇತ್ತೀಚಿನ ದಿನಗಳಲ್ಲಿ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್
ಚಿತ್ರ : ಘರ್

aaj kal paw jamin par nahee padate mere
bolo dekha hain kabhee, tumane mujhe udate huye

jab bhee thama hain teraa hath toh dekha hain
log kahate hain kee, bas hath kee rekha hain
ham ne dekha hain do takadiron ko judate huye

nind see rahatee hai, halakasa nasha rahata hain
rat din aakhon me, ek chehara basa rahata hain
par lagee aakhon ko dekha hain kabhee udate huye

jane kya hota hai, har bat pe kuchh hota hain
din me kuchh hota hai, aur rat me kuchh hota hain
tham lena jo kabhee dekho humei udate ಹುಯೆ
http://www.youtube.com/watch?v=xtK9KEKXFT8

ನಿನ್ನ ವಿನಾಃ ಜೀವಿಸಲಾರೆ ನಾ

ನಿನ್ನ ವಿನಾಃ ಜೀವಿಸಲಾರೆ ನಾ-೨
ವಿನಾಃ ನಿನ್ನ
ನಿನ್ನ ವಿನಾಃ ಪ್ರಿಯತಮ
ಉಸಿರಲಿ ಉಸಿರು ಬಾರದೆನ್ನ

ನಿನ್ನ ವಿನಾಃ ಜೀವಿಸಲಾರೆ ನಾ-೨

ನನ್ನ ಯೋಚನೆಯಲಿ
ನೀ ಬಂದಾಗಲೆಲ್ಲಾ
ನನ್ನ ದೇಹದಿಂದ
ಪರಿಮಳ ಹರಡುತ್ತದೆ ನಲ್ಲ
ಸುವಾಸಿತ ದೇಹದಲಿ ನಾ ಇರಲಾರೆನು
ಇರಲಾರೆನು ನಾ

ನಿನ್ನ ವಿನಾಃ ಜೀವಿಸಲಾರೆ ನಾ-೨

ಮೋಹಕ ರಾತ್ರಿ
ಪ್ರತಿ ದಿನ ಇರಲಾರದು
ಈ ಅವಸರ
ಪ್ರತಿ ದಿನ ಸಿಗಲಾರದು
ಜೀವನ ನಿನ್ನ ವಿನಾಃ  ಕ್ಷಣ ಕ್ಷಣ ಬೇಸರ
ಬೇಸರ ಕ್ಷಣ ಕ್ಷಣ

ನಿನ್ನ ವಿನಾಃ ಜೀವಿಸಲಾರೆ ನಾ-೨

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್
ಚಿತ್ರ : ಘರ್

Tere bina jiya jaaye na 2
Bin tere tere bin saajana
Saans mein saans aaye na

Tere bina jiya jaaye na 2

Jab bhi kayaalon mein tuu aaye
Mere badan se kushbuu aaye
Mehake badan mein raha na jaaye
Raha jaaye na
Tere bina jiya jaaye na

Reshami raatein roz na hongi
Yeh saugaatein roz na hongi
Zindagi tujh bin raas na aaye
Raas aaye na

Tere bina jiya jaaye na2
http://www.youtube.com/watch?v=6F3_NrSCxyo

Tuesday, November 20, 2012

ನಿನ್ನ ನೆನಪು ಮಾತ್ರ

ಗೆಳತಿ...
ಕೂಡಿ ಬಾಳಬೇಕೆಂದು
ಅದೆಷ್ಟೋ ಆಸೆ ಇತ್ತು ನಮ್ಮಲ್ಲಿ
ಈಗಲೂ
ಕೂಡಿ ಬಾಳುತ್ತಿದ್ದೇನೆ
ಆದರೆ ಜೊತೆಯಲ್ಲಿ
ನೀನಿಲ್ಲ
ನಿನ್ನ ನೆನಪು ಮಾತ್ರ!
by ಹರೀಶ್ ಶೆಟ್ಟಿ , ಶಿರ್ವ

ಕಾವ್ಯಗಳು

ಗೆಳತಿ...
ನಿನ್ನನ್ನು ಕುರಿತು
ಅನೇಕ ಕವನ ಬರೆದೆ
ಆದರೆ ಈಗಲೂ
ನನ್ನ ಒಳಗೆ
ನಿನ್ನನ್ನೆ ಕುರಿತು
ಅನೇಕ ಕಾವ್ಯಗಳು
ಅಡಗಿವೆ !
by ಹರೀಶ್ ಶೆಟ್ಟಿ , ಶಿರ್ವ

ಸೂರ್ಯ ಸ್ವಲ್ಪ ತಾಳು

ಸೂರ್ಯ ಸ್ವಲ್ಪ ತಾಳು
ಕರಿ ಮೋಡಗಳೆ ಒಳಿತು ನನ್ನ ಜೀವನಕ್ಕಾಗಿ
ಬೇಸರದಿ ಮನಸ್ಸು ಶಾಂತವಾಗಿದೆ
ನೀ ಉದಯವಾದರೆ
ಮನಸ್ಸ ಕತ್ತಲು ಕವಿಯಬಹುದು
ಆಸೆಯ ಬೆಳಕು ಪ್ರಕಾಶಿಸಬಹುದು
ಅಡಗಿದ ವ್ಯಾಮೋಹ ಪುನಃ ಹುಟ್ಟಬಹುದು
ಪ್ರೀತಿಯ ಮೊಳಕೆ ಪುನಃ ಚಿಗುರೊಡೆಯಬಹುದು!

ಸೂರ್ಯ ಸ್ವಲ್ಪ ತಾಳು ನೀ
ಏನೂ ಬೇಡವಾಗಿದೆ
ನಿರುತ್ಸಾಹ ದೇಹ ಜಡವಾಗಿದೆ
ನೀ ಉದಯವಾದರೆ
ಪುನಃ ಮನಸ್ಸಲ್ಲಿ
ಹೊಸ ಉತ್ಸಾಹ ನಿರ್ಮಾಣವಾಗಬಹುದು
ನಿಸರ್ಗ ನನ್ನನ್ನು ತನ್ನಡೆ ಎಳೆಯಬಹುದು
ಕೋಗಿಲೆಯ ಹಾಡು ಮನ ಸೆಳೆಯಬಹುದು!

ಸೂರ್ಯ ಸ್ವಲ್ಪ ತಾಳು ನೀ
ಆಗಲಿ ಮನಸ್ಸು ಹಗುರ ಸ್ವಲ್ಪ
ನಿಲ್ಲಲಿ ಈ ಕಣ್ಣೀರ ಓಟ
ನೀ ಉದಯವಾದರೆ
ಜೀವನದ ಸತ್ಯ ಅರಿವಾಗಬಹುದು
ಪ್ರೀತಿಯ ಆಟ ಬಯಲಾಗಬಹುದು
ಹೃದಯದ ಗಾಯ ಗುಣವಾಗಬಹುದು
ಹೊಸ ಜೀವನ ಪ್ರಾರಂಭವಾಗಬಹುದು !
by ಹರೀಶ್ ಶೆಟ್ಟಿ, ಶಿರ್ವ

Monday, November 19, 2012

ಬಿರುಗಾಳಿ

ಗೆಳತಿ...
ಈ ಏಕಾಂತದಲಿ 
ನಿನ್ನ ನೆನಪು 
ತಂಗಾಳಿಯಂತೆ ಬೀಸಿ ಬಂದು 
ಮನಸ್ಸಲ್ಲಿ ಬಿರುಗಾಳಿ ಎಬ್ಬಿಸಿ 
ಹೊರಟು ಹೋಯಿತಲ್ಲವೇ
by ಹರೀಶ್ ಶೆಟ್ಟಿ, ಶಿರ್ವ

ಗೋರಿ ಕಟ್ಟೋಣ ಬನ್ನಿ

ಗೋರಿ ಕಟ್ಟೋಣ ಬನ್ನಿ
ಸ್ವತಃ ನಮ್ಮದೇ
ಸಾವು ನಿಶ್ಚಿತ
ಎಂದು ಗೊತ್ತು ನಮಗೆ
ಅದರ ಮೇಲೆ
ಸುಂದರ ಅಕ್ಷರದಿಂದ
ನಮ್ಮ ಹೆಸರು ಬರೆಯುವ ಬನ್ನಿ
ಯಾರಿಗೆ ಗೊತ್ತು ನಾಳೆ ಏನೆಂದು ?
ನಾಳೆ ಯಾರು ಉಳಿಯುವರೆಂದು  ?
ನಮ್ಮ ಅಂತ್ಯ ಸಂಸ್ಕಾರ
ಸ್ವತ ನಾವೇ ಮಾಡುವ ಬನ್ನಿ 
ಶ್ವೇತ ವಸ್ತ್ರ ಧರಿಸಿ
ಚಂದನ ಲೇಪ ಹಚ್ಚಿಯೇ ತಿರುಗುವ ಇನ್ನು
ಈಗಲೇ ನಮ್ಮ ವೈಕುಂಠ ಸಮಾರಾಧನೆ ಆಚರಿಸೋಣ ಬನ್ನಿ
ಮೃಷ್ಟಾನ್ನ, ಭೋಜನ
ಹೋಳಿಗೆ ಪಾಯಸದ 
ರುಚಿ ರುಚಿಯ ಅಡುಗೆ ಮಾಡಿ
ಬಂಧು ಬಳಗ ಮಿತ್ರರಿಗೆ ಬಡಿಸುವ ಬನ್ನಿ
ಬಡವರಿಗೆ ಬ್ರಾಹ್ಮಣರಿಗೆ  ದಾನ ನೀಡೋಣ ಬನ್ನಿ 
ನಾಳೆ ಅನ್ಯರು ಮಾಡುವುದನ್ನು
ಇಂದು ನಾವೇ ಸ್ವತ ಮಾಡುವ ಬನ್ನಿ
ಗೋರಿ ಕಟ್ಟೋಣ ಬನ್ನಿ
by ಹರೀಶ್ ಶೆಟ್ಟಿ, ಶಿರ್ವ

ದುಷ್ಟತೆ

ಸರ್ಪ ಕಾರುವುದು ವಿಷ ವಿನಃ ಅಮೃತವಲ್ಲ 
ಕಹಿ ಬೇವು ಸಿಹಿ ರುಚಿ ನೀಡದು 
ಕಲ್ಮಶ ತುಂಬಿದ ಹೃದಯದಿಂದ ಪ್ರೀತಿ ಒಸರದು 
ಕಾಗೆ ಕೋಗಿಲ ಸ್ವರದಲಿ ಹಾಡಲಾರದು
ಪಾಳು ಬಾವಿಯಿಂದ ನೀರು ಸಿಗದು 
ನಂಜು ಬಸಿರು ಮಾಡಿದಲ್ಲಿ ಸಹೃದಯತೆ ಹುಟ್ಟದು
by ಹರೀಶ್ ಶೆಟ್ಟಿ, ಶಿರ್ವ

ನಶ್ವರ

ಬಿದ್ದ ಕಣ್ಣೀರಲ್ಲಿ ಬಣ್ಣವಿಲ್ಲ 
ಆದರೆ ಅದರಲ್ಲಿ 
ಕಾಮನಬಿಲ್ಲು ನಿನ್ನ ವೇದನೆಯ !

ಕ್ರೂರಿ ಎಂದು ಪ್ರಸಿದ್ದ ಮಾಡಿದೆ ನೀ ನನ್ನನ್ನು 
ಆದರೆ ಅದರಲ್ಲಿ 
ಅಡಗಿದೆ ನಿನ್ನ ಹೃದಯ ಪ್ರೀತಿಯ !

ಮೃತ್ಯು ಒಂದು ಕಟು ಸತ್ಯ 
ಆದರೆ ಅದರಲ್ಲಿ 
ಮಾಡಿದ ಕರ್ಮದ ಲೆಕ್ಕಾಚಾರ !

ಸುಟ್ಟು ಬಿಟ್ಟೆ ಅಲ್ಲವೇ ದೇಹವನ್ನು 
ಆದರೆ ಅದರಲ್ಲಿ 
ನೆಲೆಸಿದೆ ಆತ್ಮ ಶಾಂತಿಪ್ರಿಯ !
by ಹರೀಶ್ ಶೆಟ್ಟಿ, ಶಿರ್ವ

Sunday, November 18, 2012

ಮಾನನೀಯ ಬಾಳ ಸಾಹೇಬ್ ಠಾಕ್ರೆ ಅವರ ಮೇಲೊಂದು ನನ್ನ ಕವಿತೆಯ ಶ್ರದ್ದಾಂಜಲಿ

ಮಾನನೀಯ ಬಾಳ ಸಾಹೇಬ್ ಠಾಕ್ರೆ ಅವರ ಮೇಲೊಂದು ನನ್ನ ಕವಿತೆಯ ಶ್ರದ್ದಾಂಜಲಿ
_______________
ಸಾಲದು ನಿನ್ನ ಈ ಒಂದು ಜನ್ಮ
ಇನ್ನೂ ಮಾಡಲಿದೆ
ನಿನಗೆ ಅನೇಕ ಕಾರ್ಯಗಳು !

ಸಾಮಾನ್ಯನಲ್ಲ ನೀನು
ನಿನ್ನಂತ ನೀನೊಬ್ಬನೇ
ನೀನು ಒಬ್ಬನೇ ಒಂದು ಸೇನೆ !

ಭಯ ಇಲ್ಲದೆ ಸಾಗಿದೆ ನೀನು
ರಾಷ್ಟ್ರ ಪ್ರೇಮ ಅದ್ಭುತ ನಿನ್ನ
ಕಾಪಾಡಿದೆ ನೀ ತಂದೆ ಆಗಿ ಎಲ್ಲರನ್ನ !

ಯಾರೂ ನಿನ್ನ ಹಾಗೆ ಇಲ್ಲ
ಭಾಷಾ ಪ್ರೇಮ ನಿನ್ನ ಹಾಗೆ ಯಾರಲ್ಲೂ ಇಲ್ಲ
ನಿನಗೆ ಯಾವುದೇ ಹುದ್ದೆ ಬೇಕೆಂದು ಆಸೆ ಇಲ್ಲ ! 

ಅನನ್ಯ ನೀನೊಬ್ಬ ವ್ಯಂಗ ಚಿತ್ರಕಾರ
ನಿನ್ನ ಪ್ರತಾಪದಿಂದ ಉಳಿದವರು ಯಾರೂ
ಅತ್ಮಿಯತೆಯಿಂದ ಪ್ರೀತಿಸುತ್ತಾರೆ ನಿನಗೆ ಎಲ್ಲರೂ !

ನಿನ್ನ ನೇರ ಮಾತನ್ನು
ನಿನ್ನ ಅವಗುಣ ಎಂದು ಭಾವಿಸುತ್ತಿದ್ದರು ಅನೇಕರೂ
ಇಂದು ಅವರೇ ನಿನ್ನ ಈ ಸ್ವಭಾವನ್ನು ಹೊಗಳುವರು !

ಹಕ್ಕುಗಳಿಗಾಗಿ ಹೋರಾಟ ಇತ್ತು ನಿನ್ನ
ರಾಷ್ಟ್ರಕ್ಕಾಗಿ ಸಮರ್ಪಿಸಿದೆ ಈ ಬದುಕು ನಿನ್ನ
ಪಡೆಯಲೆ ಬೇಕು ನಿನಗೆ ಇನ್ನೊಂದು ಜೀವನ !
by ಹರೀಶ್ ಶೆಟ್ಟಿ, ಶಿರ್ವ
 

Saturday, November 17, 2012

ಮೌನವೆ ಒಳಿತು

ಮೌನವೆ ಒಳಿತು
ಸಂಭಾಷಣೆಯ ಸಂತೆಯಲಿ
ಮಾತುಗಳ ಕೊರತೆ ಉಂಟಾದಾಗ !

ಖಾಲಿ ಹಾಳೆಯೆ ಒಳಿತು
ಭಾವಗಳ ಮಂಥನದಲಿ
ಪದಗಳು ತೇಲಿ ಹೋದಾಗ !

ಅರ್ಥೈಸುವುದೆ ಒಳಿತು
ಮುಖವ ಓದಿ
ಕಣ್ಣೀರು ತುಂಬಿದ ಕಣ್ಣುಗಳು ಯಾಚಿಸುವಾಗ !

ಕ್ಷಮಿಸುವುದೆ ಒಳಿತು
ಪ್ರಮಾದ ತಿಳಿದು
ಪಶ್ಚಾತಾಪದ ಅಗ್ನಿಯಲಿ ಉರಿಯುವಾಗ !
by ಹರೀಶ್ ಶೆಟ್ಟಿ, ಶಿರ್ವ

ಪವಿತ್ರ ಪ್ರೀತಿ

ಗೆಳತಿ...
ಈ ಪ್ರೀತಿಯಲಿ ಆಗಿದೆ 
ನನ್ನದು ಸೋಲು 
ನಿನ್ನದು ಸೋಲು 
ಆದರೆ ಪ್ರೀತಿಯ ಆಗಿದೆ 
ಸೋಲೆಂದು ಹೇಳಲಾರೆ 
ಇದು ನಮ್ಮ 
ಪವಿತ್ರ ಪ್ರೀತಿಯ ಗೆಲುವು
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...