Thursday, February 27, 2020

ವೃದ್ಧಾಶ್ರಮ ೧೯


ಸಂಜೆ ಮನೆಯಲ್ಲಿ ಕೋಲಕ್ಕಾಗಿ ಸೇರಿದ ಅತಿಥಿಗಳ ಊಟ ಉಪಚಾರ ಆದ ನಂತರ ಸುಮಾರು ರಾತ್ರಿ ೮ ಗಂಟೆಗೆ ಕೋಲ ಶುರುವಾಯಿತು, ತುಳು ನಾಡಿನ ಸಂಸ್ಕೃತಿ ವಿಶಾಲವಾದದ್ದು, ದೈವಾರಾಧನೆ ತುಳು ನಾಡಿನ ಮೂಲ ಸಂಸ್ಕೃತಿ, ಈಗಲೂ ತುಳು ನಾಡಿನ ಜನರು ಈ ಸಂಸ್ಕೃತಿಯನ್ನು  ಉಳಿಸಿ ಕಾಪಾಡಿದ್ದಾರೆ ಅಂದರೆ ತುಳುನಾಡಿನ ಜನರಲ್ಲಿ ಇದರ  ಮಹತ್ವ ಎಷ್ಟಿದೆಯೆಂದು ತಿಳಿಯಬಹುದು, ತುಂಬಾ ಭಕ್ತಿ ಭಾವದಿಂದ ತುಳು ನಾಡಿನ ಜನರು ಇದನ್ನು ಏರ್ಪಡಿಸುತ್ತಾರೆ. 

ತುಂಬಾ ವರುಷದ ನಂತರ ರಮೇಶ ಕೋಲ ನೋಡುತ್ತಿದ್ದ, ಸುಂದರ ವೇಷಭೂಷಣ, ಅದ್ಭುತ ನೃತ್ಯ, ಸಂವಾದ, ವಿವಿಧ ಭೂತಗಳ ವಿವಿಧ ಶೈಲಿ, ಭೂತ ವೇಷಧಾರಿಯರ ಮನಮೋಹಕ ನೃತ್ಯದ   ಸೊಬಗು ಕಣ್ಣಿಗೆ ತಂಪು ನೀಡುತ್ತಿತ್ತು, ಸಮ್ಮೋಹನಗೊಳಿಸುವಂತ್ತಿತ್ತು, ಅಮ್ಮ ಒಳಗೆ ಕಿಟಕಿಯಿಂದ ಸ್ವಲ್ಪ ಹೊತ್ತು ಕೋಲ ನೋಡಿ ನಿದ್ದೆಗೆ ಹೋಗಿದ್ದರು, ತಡರಾತ್ರಿ ದೈವಗಳ ದರ್ಶನ, ಮಧ್ಯದಲ್ಲಿ ಸ್ವಲ್ಪ ವಿರಾಮ, ಅದ್ಭುತ ಶಹನಾಯಿ ವಾದನ,  ಈ ಕೋಲದ ಸೊಬಗನ್ನು ನೋಡುವುದೇ ಒಂದು ಭಾಗ್ಯ ಎಂದು ರಮೇಶನಿಗೆ ಅನಿಸಿತು,  ಮುಂಜಾನೆ ೫ ಗಂಟೆ ತನಕ ಕೋಲ ನಡೆಯಿತು. 

ಕೋಲದ ನಂತರ  ಮನೆಯಿಂದ ಎಲ್ಲರು ಹೋದ ನಂತರ ಹೆಚ್ಚಿನಂಶ ಎಲ್ಲರು ನಿದ್ದೆ ಮಾಡಲು ಹೋದರು, ಮಕ್ಕಳೆಲ್ಲ ಮತ್ತು ಕೆಲವರು ಕೋಲದ ನಡೆಯುತ್ತಿದ್ದಂತೆ ಅರ್ಧದಲ್ಲೇ  ಮಧ್ಯೆಗೆ  ಬಂದು ಮಲಗಿದ್ದರು, ಸುಮಾ ಹಾಗು ಆತೀಶ ಸಹ ಮಧ್ಯ ರಾತ್ರಿ ತನಕ ಕೋಲಾ ನೋಡಿ ನಿದ್ದೆ ತಡೆಯಲಾರದೆ ಬಂದು ಮಲಗಿದ್ದರು. 

ರಮೇಶ ಒಂದೆರಡು ಗಂಟೆ ನಿದ್ದೆ ಮಾಡಿ ಎಚ್ಚರವಾದಾಗ ಎಲ್ಲರು ಮಲಗಿದ್ದನ್ನು ನೋಡಿ ಪೇಟೆಗೆ ಹೋಗಿ ಏನಾದರೂ ಬೆಳಿಗ್ಗೆಯ ಉಪಹಾರಕ್ಕೆ ತರುವಯೆಂದು ಪೇಟೆಗೆ ಹೋದ. 

ಪೇಟೆಯ ಭಟ್ರು ಹೋಟೆಲಲ್ಲಿ ದೋಸೆ, ವಡೆ ತಿಂದು ಚಹಾ ಕುಡಿದು ನಂತರ ಅವನು ಮನೆಗೋಸ್ಕರ ಬಿಸಿ ಬಿಸಿ ಬಟಾಟೆ ವಡೆ, ಗೋಲಿ ಬಜೆ ಕಟ್ಟಿಸಿಕೊಂಡು ಮನೆಗೆ ಬಂದ. 

ವಡೆ, ಗೋಲಿ ಬಜೆಯ ಪರಿಮಳ ಮನೆಯವರನ್ನು ಎಬ್ಬಿಸಿತು ಹಾಗು ವಡೆ, ಗೋಲಿ ಬಜೆ ತಂದಿದಕ್ಕೆ ಎಲ್ಲರು ರಮೇಶನನ್ನು ಕೊಂಡಾಡಿದರು, ಪರ ಊರಿನಿಂದ ಊರಿಗೆ ಬಂದವರಿಗೆ ಗೋಲಿ ಬಜೆ ತಿನ್ನದೆ ಊರಿಗೆ ಬಂದ ಹಾಗೆ ಅನಿಸುವುದಿಲ್ಲ, ಅಷ್ಟು ರುಚಿಕಾರವಾಗಿರುತ್ತದೆ ಈ ಗೋಲಿ ಬಜೆ, ಎಲ್ಲರ ಬಾಯಿ ಚಪ್ಪರಿಸುವ ರುಚಿಕಾರ ಗೋಲಿ ಬಜೆಗೆ  ಈ ತುಳು ನಾಡಿನ  ಜನರ  ಹೃದಯದಲ್ಲಿ ಒಂದು ವಿಶೇಷ ಸ್ಥಾನ ಒದಗಿದೆ.  

ಉಪಹಾರ ಎಲ್ಲ ಆದ ನಂತರ ಕೆಲಸದ ಹುಡುಗಿ ಸುಮ್ಮಿ ರಮೆಶನಲ್ಲಿಗೆ ಬಂದು "ಅಣ್ಣ, ನನ್ನ ಮೊಬೈಳಿಗೆ ೧೦೦ ರೂಪಾಯಿ ರಿಚಾರ್ಜ್  ಮಾಡಿ ಪ್ಲೀಸ್, ನನ್ನ ರಿಚಾರ್ಜ್ ಮುಗಿದಿದೆ" ಎಂದಳು.  

ರಮೇಶ "ಓ. ಕೆ, ಈಗ ತಾನೇ ಪೇಟೆಯಿಂದ ಬಂದೆ, ಮೊದಲು ಹೇಳಬೇಕಿತ್ತು, ಈಗ ಪುನಃ ಪೇಟೆಗೆ  ಹೋದರೆ ಮಾಡುತ್ತೇನೆ, ನಿನ್ನ ನಂಬರ್ ಕೊಟ್ಟಿಡು" ಎಂದ. 

"ಇನ್ನು ಯಾವಾಗ ಹೋಗುವಿರಿ ಅಣ್ಣ, ನನಗೆ ಸ್ವಲ್ಪ ಅರ್ಜೆಂಟ್ ಮಾತಾಡಲಿಕ್ಕಿತ್ತು" ಎಂದು ಕೇಳಿದಳು  ಸುಮ್ಮಿ. 

"ನಾನಿಲ್ಲದಿದ್ದರೆ ಬೇರೆ ಯಾರಾದರೂ ಹೋಗಬಹುದು, ಅಷ್ಟು ಅರ್ಜೆಂಟ್ ಮಾತಾಡಲಿಕಿದ್ದರೆ ನನ್ನ ಮೊಬೈಲಿಂದ ಮಾಡು" ಎಂದ ರಮೇಶ. 

"ಓ ಕೆ " ಎಂದು ಸುಮ್ಮಿ ತನ್ನ ಮೊಬೈಲ್ ನಂಬರ್ ಕೊಟ್ಟು ಹೋದಳು. 

ಇದನ್ನು ನೋಡಿ ಊರ್ವಶಿ ಚಿಕ್ಕಮ್ಮ ರಮೇಶನಿಗೆ  "ಇವಳಿಗೆ ಏನಷ್ಟು ಅರ್ಜೆಂಟ್? ಯಾರ ಹತ್ತಿರ ಮಾತಾಡಲಿಕ್ಕೆ, ನೀನಷ್ಟು ತಲೆಗೆ ಇಡಬೇಡ ಇವಳನ್ನು"

ರಮೇಶ "ನಮಗೇನು ಮಾತಾಡಲಿ, ಸಂಬಳದಿಂದ ಕಡಿತ ಮಾಡಿ ಕೊಟ್ಟರಾಯಿತು"

ಸಂಜೆ ಮನೆಯಲ್ಲಿ ತಂಬಿಲ ಇತ್ತು,ತಂಬಿಲ ಅಂದರೆ ಇದನ್ನು ಭೂತಾರಾಧನೆಯ ನಂತರ ಭೂತಗಳಿಗೆ ಕೊಡುವ  ನೈವೇದ್ಯ ಎನ್ನಬಹುದು, ತುಳುನಾಡಿನ ಸಂಸ್ಕೃತಿ  ಪ್ರಕಾರ  ಕೋಲ ಆದ ನಂತರ ಈ ಭವ್ಯ ಔತಣಕೂಟ ಏರ್ಪಡಿಸುತ್ತಾರೆ ಹಾಗು ಮೊದಲು ಭೂತಗಳಿಗೆ ಊಟ ಬಡಿಸಿದ  ನಂತರವೇ  ಬಂದ  ನೆಂಟರಿಷ್ಟರಿಗೆ  ಊಟ ಬಡಿಸುತ್ತಾರೆ.   

ವಿಕ್ರಮ ಮಾವ ರಮೇಶ ಹಾಗು ಅವನ ಕಸಿನ್ ಆನಂದನನ್ನು ಕರೆದು ಒಂದು ಪಟ್ಟಿ ಕೊಟ್ಟು "ರಮೇಶ ನೀವಿಬ್ಬರು ಪೇಟೆಗೆ ಹೋಗಿ ಈ ಸಾಮಾನು ಖರೀದಿ ಮಾಡಿಕೊಂಡು ಬನ್ನಿ, ನಾನು ಇಲ್ಲಿಯ ಬೇರೆ ಕೆಲಸ ನೋಡುತ್ತೇನೆ " ಎಂದರು. 

ರಮೇಶ "ಓ ಕೆ " ಎಂದು ಅವರಿಂದ ಸಾಮಾನಿನ ಪಟ್ಟಿ ತೆಗೆದುಕೊಂಡ. 

ಸ್ನಾನ ಎಲ್ಲ ಮುಗಿಸಿ ರಮೇಶ ಮತ್ತು ಆನಂದ ಪೇಟೆಗೆ ತೆರಳಿದರು. 


(ಮುಂದುವರಿಯುತ್ತದೆ)


By ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 25, 2020

ವೃದ್ಧಾಶ್ರಮ ೧೮


ಸಂಜೆ ಕೋಲ ಇದ್ದ ಕಾರಣ ಮನೆಯಲ್ಲಿ ಹಬ್ಬದ ವಾತಾವರಣ ಇತ್ತು, ಎಲ್ಲರು ಏನಾದರೊಂದು ಕೆಲಸದಲ್ಲಿದ್ದರು, ರಮೇಶ ಅಮ್ಮನ ಚಾಕರಿಗೆ ಬಂದ ಹುಡುಗಿ ಸುಮ್ಮಿಗೆ  ಅಮ್ಮನ ಏನೇನು ಕೆಲಸ ಇದೆ ಅದನ್ನು ಅವಳಿಗೆ ತಿಳಿಸಿದ ಹಾಗು ಅವಳ ಸಹಾಯದಿಂದ ಅಮ್ಮನ ಸ್ನಾನ ಸಹ ಮುಗಿಸಿದ.   

ಮಧ್ಯಾಹ್ನದ ನಂತರ ಮನೆಗೆ ನೆಂಟರಿಷ್ಟರೆಲ್ಲರ ಆಗಮನ ಶುರುವಾಯಿತು, ಎಲ್ಲರು ಅವರವರ ಸಂಬಂಧಿಕರನ್ನು ಗೌರವದಿಂದ ಸ್ವಾಗತಿಸಿ ಅವರೊಟ್ಟಿಗೆ ಮಾತಾಡುವುದರಲ್ಲಿ ನಿರತರಾದರು. 

ಕೋಲ ಇದ್ದ ಕಾರಣ ಸುಮಾ ಆತೀಶನೊಟ್ಟಿಗೆ ತವರು ಮನೆಯಿಂದ ಹಿಂತಿರುಗಿ  ಮನೆಗೆ ಬಂದಿದ್ದಳು ಒಟ್ಟಿಗೆ ಅವಳ ತಂದೆ ಸಹ ಬಂದಿದ್ದರು, ಕೋಲಕ್ಕೆ  ನೆಂಟರಿಷ್ಟರನ್ನೆಲ್ಲ ಕರೆಯುವುದು ಊರಿನ ಹಳೆ ಪದ್ಧತಿ, ಇದರಿಂದ ಸಂಬಂಧ ಬೆಳೆದು ಸಧೃಡವಾಗುತ್ತಿತ್ತು.  

ಮನೆಗೆ ಬಂದವರೆಲ್ಲ ಅಮ್ಮನನ್ನು ನೋಡಲು ಅವರ ಕೋಣೆಗೆ ಹೋಗುತ್ತಿದ್ದರು, ಅಮ್ಮನ ಮುಖದಲ್ಲಿ ಯಾವುದೇ ಭಾವನೆ ಮೂಡುತ್ತಿರಲಿಲ್ಲ, ಅವರ ಮುಖದಲ್ಲಿ ಒಂತರಹ ಹತಾಶೆ ಕಾಣುತ್ತಿತ್ತು,  ಅವರಿಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ, ಸಂತೋಷದಲ್ಲಿರುವುದನ್ನು ಅವರು ಮರೆತು ಹೋಗಿದ್ದರು, ರಮೇಶನಿಗೆ ತಿಳಿದಿತ್ತು ಅಮ್ಮನ ಮನಸ್ಥಿತಿ ಆದ್ದರಿಂದ ಅವನು ಅವರಿಗೆ ಏನೂ ಹೇಳಲು ಹೋಗುತ್ತಿರಲಿಲ್ಲ.   

ಅಮ್ಮನಿಗೆ ಸ್ಪಷ್ಟ ಹಾಗು ಹೆಚ್ಚು ಮಾತಾಡಲು ಆಗುತ್ತಿರಲಿಲ್ಲ, ತೊದಲುತ್ತ ಉತ್ತರ ಕೊಡುತ್ತಿದ್ದರು, ಬಂದವರು ಹೆಚ್ಚು ಪ್ರಶ್ನೆ ಕೇಳಿದರೂ ಅವರಿಗೆ ಕಿರಿಕಿರಿ ಆಗುತಿತ್ತು. 

ಆರೋಗ್ಯ ಸರಿ ಇರದಿದ್ದಾಗ, ನೋವಿನಿಂದ ದೇಹ ಬಳಲುತ್ತಿದ್ದಾಗ, ಮನಸ್ಸಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತದೆ, ಆ ನೋವಿನಿಂದ ಹೊರ ಬರಲು ಹಾಗು ಆರೋಗ್ಯಕರ ಮತ್ತು ಸುರಕ್ಷಿತವಾಗಿದ್ದೇನೆ ಎಂದು ಅನುಭವಿಸಲು ಸಮಯ ಬೇಕಾಗುತ್ತದೆ, ಈ ಒತ್ತಡದಿಂದ  ಸುರಕ್ಷತೆಯ ಪ್ರಜ್ಞೆ ಚೂರುಚೂರಾಗುತ್ತದೆ, ಈ  ಅಸಹಾಯಕತೆಯ  ಅನುಭವದಿಂದ ಮನಸ್ಸಲ್ಲಿ ಅಸಮಾಧಾನ, ನಿರಾಸೆ, ಆತಂಕ  ಮನೆ ಮಾಡಿಕೊಳ್ಳುತ್ತದೆ, ನೆನಪು ಶಕ್ತಿಯೂ ಕ್ಷೀಣವಾಗುತ್ತದೆ, ಜೀವ ಜಡವೆನಿಸುತ್ತದೆ, ಸಂಬಂಧದಲ್ಲಿ ವಿಶ್ವಾಸ ಉಳಿಯುವುದಿಲ್ಲ.

ಅಮ್ಮ ಈಗ ಇದೇ  ಪರಿಸ್ಥಿತಿಯಲ್ಲಿದ್ದರು, ಅವರಿಗೆ ಯಾವುದು ಬೇಡ ಅನಿಸುತ್ತಿತ್ತು, ಜೀವನ ಕಠಿಣವೆನಿಸುತ್ತಿತ್ತು.     

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Monday, February 24, 2020

ವೃದ್ಧಾಶ್ರಮ ೧೭


ಮಾರನೇ ದಿನ ಬೆಳಿಗ್ಗೆ ಮನೆಯಲ್ಲಿ ಒಟ್ಟಿಗೆ ಎಲ್ಲರು ಕೂತು ಚಹಾ ಉಪಹಾರ ಮಾಡುವಾಗ  ಮನೆಗೆ ದಿರೇಶನನ್ನು ಕೇಳಿ ಒಬ್ಬ ವಯಸ್ಕ ಮನುಷ್ಯ ಒಂದು ಚಿಕ್ಕ ಹುಡುಗಿಯ ಜತೆ ಬಂದ, ಹುಡುಗಿಗೆ  ಸಾಧಾರಣ ೧೬, ೧೭ ವಯಸ್ಸಾಗಿರಬೇಕು ಅವಳೊಟ್ಟಿಗೆ ಒಂದು ಹ್ಯಾಂಡ್ ಬ್ಯಾಗ್ ಸಹ ಇತ್ತು, ಎಲ್ಲರಿಗೆ ಅಂದಾಜಾಯಿತು ಇದು ಅಮ್ಮಗೋಸ್ಕರ ಕೆಲಸಕ್ಕೆ ಹೇಳಿದ ಹುಡುಗಿಯೇ ಇರಬೇಕೆಂದು, ದಿರೇಶ ಅವರನ್ನು ನೋಡಿ ಅವರಿಗೆ ಒಳಗೆ ಬರಲು ಹೇಳಿ ರಮೇಶನನ್ನು ಕರೆದು "ರಮೇಶ ಇವರೇ, ಈ ಹುಡುಗಿಯೇ ಅಮ್ಮಗೋಸ್ಕರ ಹೇಳಿದ್ದು".

ರಮೇಶ ಅವಳನ್ನು ನೋಡಿ "ಆದರೆ ಇವಳು ತೀರಾ ಚಿಕ್ಕ ಹುಡುಗಿ ಇವಳಿಂದ ಅಮ್ಮನ ಕೆಲಸ ಆಗಬಹುದ"?

ಹುಡುಗಿಯ ತಂದೆ "ಚಿಕ್ಕ ಏನಿಲ್ಲ ಸಾರ್, ೧೯ ವರುಷ ಆಗಿದೆ ಇವಳಿಗೆ, ಮೈ ಬೆಳೆಯಲಿಲ್ಲ ಅಷ್ಟೇ  ಎಲ್ಲ ಕೆಲಸ ಮಾಡುತ್ತಾಳೆ ಸಾರ್,  ಈ ತರಹದ ಕೆಲಸ ಮಾಡಿದ್ದಾಳೆ, ನಿಮಗೆ ಏನೂ ತೊಂದರೆ ಆಗದು".

ಅದಕ್ಕೆ ಆಶಾ ಚಿಕ್ಕಮ "ನೀವು ನಮ್ಮ ಅಕ್ಕನವರನ್ನು ನೋಡಿದ್ದೀರಾ, ಅವರನ್ನು ಎತ್ತಲು ಎರಡು ಮೂರು ಜನ ಬೇಕು, ಇವಳಿಂದ ಅದೆಲ್ಲ ಹೇಗೆ ಸಾಧ್ಯ".

ಆಗ ಆ ಹುಡುಗಿ "ಇಲ್ಲಕ್ಕ, ನನಗೆ ಗೊತ್ತು ಕೆಲಸ,ನಾನು ಮಾಡಿದ್ದೇನೆ ವಯಸ್ಕರ ಸೇವೆ ಜೊತೆಗೆ ನಾನು ಮನೆಯ ಕೆಲಸದಲ್ಲೂ ನಿಮ್ಮ ಸಹಾಯ  ಮಾಡುತ್ತೇನೆ" ಎಂದಳು.

ಆಶಾ ಚಿಕ್ಕಮ್ಮ "ನಂತರ ನೀನು ಅದಾಗುದಿಲ್ಲ, ಇದಾಗುದಿಲ್ಲ ಎಂದು ಹೇಳ ಬಾರದು".

ಹುಡುಗಿಯ ತಂದೆ "ಇಲ್ಲಮ್ಮ, ನೀವು ಏನೂ ಚಿಂತೆ ಮಾಡಬೇಡಿ, ಇವಳೆಲ್ಲ ಮಾಡುತ್ತಾಳೆ ಮತ್ತೆ ಇಲ್ಲೆ ಇರುತ್ತಾಳೆ, ಅವಳ ಬಟ್ಟೆ ಎಲ್ಲ ತಂದಿದ್ದೇನೆ, ಕೇವಲ ತಿಂಗಳಿಗೊಮ್ಮೆ ಮನೆಗೆ ಹೋಗಿ ಬರುತ್ತಾಳೆ ಅಷ್ಟೇ".

ರಮೇಶ ಎಲ್ಲರೊಟ್ಟಿಗೆ ವಿಚಾರ ವಿಮರ್ಶೆ ಮಾಡಿದ ನಂತರ ಆ ಹುಡಿಗಿಯನ್ನು ಕೆಲಸಕ್ಕೆ ಇಡಬೇಕೆಂದು ನಿರ್ಧಾರ ಆಯಿತು.

ರಮೇಶ ದಿರೇಶನಿಗೆ "ಸಂಬಳ ಎಷ್ಟು ಎಂಟು ಸಾವಿರನೇನ"?

ದಿರೇಶ "ಹೌದು, ಇವರು ಕಡಿಮೆ ಆಗಲ್ಲ ಅಂತ ಹೇಳಿದ್ದಾರೆ"

ಹುಡುಗಿಯ ತಂದೆ " ಸಾರ್, ಇದು ಕಡಿಮೇನೆ, ಎಲ್ಲೂ ಕೇಳಿ ನೋಡಿ"

ರಮೇಶ "ಓ ಕೆ, ಹಾಗಾದರೆ, ಬ್ಯಾಗ್ ತಂದಿದ್ದಿ ತಾನೇ, ಹೋಗು ಒಳಗೆ "ಎಂದು ಹುಡುಗಿಗೆ ಅಮ್ಮನ ಕೋಣೆ ತೋರಿಸಿದ. 

ಹುಡುಗಿಯ ತಂದೆ "ಸಾರ್, ನನ್ನ ಒಂದು ಕಂಡೀಶನ್ ಸಾರ್, ಸಂಬಳ ವಾರೊಕ್ಕೊಮ್ಮೆ ಕೊಡಬೇಕೆಂದು, ಮತ್ತೆ ಈಗ ಸ್ವಲ್ಪ  ಅಡ್ವಾನ್ಸ್ ಸಿಕ್ಕಿದರೆ ಒಳ್ಳೆಯದಿತ್ತು"

ಇದನ್ನು ಕೇಳಿ ರಮೇಶ ದಿರೇಶನ ಮುಖ ನೋಡಿದ.

ದಿರೇಶ ಹುಡುಗಿಯ ತಂದೆಗೆ "ಏನು ನೀವು ಇದನೆಲ್ಲ ಮೊದಲು ಹೇಳಬೇಕಲ್ಲ, ರಮೇಶ ಕೊಡು ಇವರಿಗೆ ಒಂದು ಸಾವಿರ"

ಹುಡುಗಿಯ ತಂದೆ "ಅಷ್ಟು ಕಡಿಮೇನಾ, ಒಂದು ಎರಡು ಸಾವಿರ ಆದರೂ ಕೊಡಿ"

ಆಗ ಉಷಾ ಚಿಕ್ಕಮ್ಮ " ನಿಮ್ಮದು ಒಳ್ಳೆಯದು ಇನ್ನು ಕೆಲಸ ಶುರುವಾಗಲಿಲ್ಲ ನಿಮಗೆ ಅಡ್ವಾನ್ಸ್ ಬೇಕಾ, ಯಾವ ಊರು ನಿಮ್ಮದು".

ಹುಡುಗಿಯ ತಂದೆ "ನಮ್ಮದ್ದು ಹಳೆ ಊರು ಅಲ್ಲಿಯ ದೇವಸ್ಥಾನದ ಬದಿಯಲ್ಲಿ ಗೂಡು ಮನೆ ಇದೆಯಲ್ಲ, ಅದೇ ನಮ್ಮ ಮನೆ".

ಉಷಾ ಚಿಕ್ಕಮ್ಮ "ಓಹ್, ಅದು ಮನೆಯ!!! ಹಾಗಾದರೆ, ಇವಳೇ ಸುಮ್ಮಿಯ , ನಿಮ್ಮ ಮಗಳ ಹೆಸರು ಸುಮ್ಮಿ ತಾನೇ"

ಊರಿನಲ್ಲಿದ್ದವರಿಗೆ ವಿಶೇಷವಾಗಿ ಹೆಂಗಸರಿಗೆ ಹೀಗೆ ದೂರ ದೂರದವರ ಪರಿಚಯ ಇರುವುದು ಸಾಮಾನ್ಯ ಸಂಗತಿ, ಊರಿನಲ್ಲಿ ಹೆಂಗಸರ ಗುಂಪು  ಅಲ್ಲಿ ಇಲ್ಲಿಯ ಮಾತಾಡಿ ಹೀಗೆ ಎಲ್ಲೆಲ್ಲಿಯ ಸುದ್ಧಿ ಗೊತ್ತು ಮಾಡುತ್ತಾರೆ ಹಾಗು ಈ ಎಲ್ಲ ಸುದ್ಧಿ ಬಿ. ಬಿ. ಸಿ ದವರ ಸುದ್ದಿಕ್ಕಿಂತಲೂ ಹೆಚ್ಚು ಬೇಗ ಇಡೀ ಊರಲ್ಲಿ ಹರಡುತ್ತದೆ. 

ಹುಡುಗಿಯ ತಂದೆ "ಹೌದು, ನಿಮಗೆ ಪರಿಚಯ ಇದೆಯಾ ನಮ್ಮ".

ಉಷಾ ಚಿಕ್ಕಮ್ಮ "ಹ್ಮ್ಮ್, ಕೇಳಿದ್ದೇನೆ ನಿಮ್ಮ ಬಗ್ಗೆ"

ದಿರೇಶ " ಇರಲಿ ಚಿಕ್ಕಮ್ಮ, ಬಿಡಿ ......ರಮೇಶ  ಎರಡು ಸಾವಿರ ಕೊಡು ಇವರಿಗೆ" ಎಂದು ಹೇಳಿದ.

ರಮೇಶ ಒಳಗಿನಿಂದ ತಂದು ಅವನಿಗೆ ಎರಡು ಸಾವಿರ ಕೊಟ್ಟ.

ಹುಡುಗಿಯ ತಂದೆ ಹೋದ ನಂತರ ಹುಡುಗಿ ಅಮ್ಮನ ಕೋಣೆಗೆ ಹೋದಳು.

ಉಷಾ ಚಿಕ್ಕಮ್ಮ ರಮೇಶನಿಗೆ" ಅಡ್ವಾನ್ಸ್ ಕೊಡಬಾರದಿತ್ತು ರಮೇಶ, ನಿನಗೆ ಗೊತ್ತಿಲ್ಲ ಇಲ್ಲಿ ಎಂತ ಎಂತ ತರಹದ ಜನರಿದ್ದಾರೆಂದು, ನಾನು ಇವನ ಬಗ್ಗೆ ಕೇಳಿದ್ದೇನೆ ಇವನು ದೊಡ್ಡ ಕುಡುಕನಂತೆ,  ಇಷ್ಟು ಚಿಕ್ಕ ಹುಡುಗಿ ಕೆಲಸ ಮಾಡಿ ಇವನು ಅವಳ ಸಂಬಳ ತಿನ್ನುವುದ?, ಈ ದಿರೇಶನಿಗೆ ಅವಸರ ಇಲ್ಲಾದರೆ ಈಗಲೇ ಅವನಿಂದ ಎಲ್ಲ ತಿಳಿದು ಕೊಳ್ಳುತ್ತಿದ್ದೆ"

ದಿರೇಶ "ನಮಗೇನು ಮಾಡಲಿಕ್ಕಿದೆ ಚಿಕ್ಕಮ್ಮ, ಹುಡುಗಿ ಕೆಲಸ ಮಾಡಿದರೆ ಸಾಕು, ಇವನು ಹೀಗೆಯೇ ಹಣ ಸಿಕ್ಕಿದ ಕೂಡಲೇ ಗಡಂಗಿಗೆ ಹೋಗಿ ಕುಡಿಯುತ್ತಾನೆ, ಈಗ ಇಲ್ಲಿಂದ ಸೀದಾ ಗಡಂಗಿಗೆ ಕುಡಿಲಿಕ್ಕೆ ಹೋಗುತ್ತಾನೆ " ಎಂದು ನಕ್ಕ. 

ಉಷಾ ಚಿಕ್ಕಮ್ಮ ದಿರೇಶನಿಗೆ "ಮತ್ತೇನು, ನಿನಗೆ ನಗು ಬರಬಹುದು, ನಿನಗೆ ಕುಡುಕನಲ್ಲದೆ ಬೇರೆ ದೋಸ್ತಿ ಇಲ್ಲವ" ಎಂದು ಬೈದರು.   

ದಿರೇಶ "ಅವನು ಕುಡುಕನಾದರೆ ನಮಗೇನು, ನಮ್ಮ ಕೆಲಸ ಆಯಿತಲ್ಲ".

ಉಷಾ ಚಿಕ್ಕಮ್ಮ "ಇನ್ನು ಎರಡು ದಿವಸಕ್ಕೊಮ್ಮೆ ಹಣಕ್ಕಾಗಿ ಬರುತ್ತಾನೆ ಇಲ್ಲವ ನೋಡು ಅವನು ಇಲ್ಲಿಗೆ".

ದಿರೇಶ "ಹಾಗೆ ಬಂದರೆ, ಅವನನ್ನು ಒದೆದು ಹೊರಗೆ ಹಾಕಿದರೆ ಸಾಕು" ಎಂದು ಹೇಳಿ ನಕ್ಕು ಒಳಗೆ ಹೋದ.

ಉಷಾ ಚಿಕ್ಕಮ ದಿರೇಶನ ಈ ಕಚ್ಚಾಟದಿಂದ ಮನೆಯಲ್ಲಿ ಎಲ್ಲರ ಮುಖದಲ್ಲೂ ನಗು ಹರಿದು ಬಂತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Sunday, February 23, 2020

ವೃದ್ಧಾಶ್ರಮ ೧೬

ಸಂಜೆಗೆ  ರಮೇಶ ಚಹಾ ಕುಡಿಯುತ್ತ ಹೊರಗೆ ಅಂಗಳಕ್ಕೆ ಬಂದಾಗ, ಅಲ್ಲಿ ವಿಕ್ರಮ ಮಾಮ ಗಂಭೀರ ಮುದ್ರೆಯಲ್ಲಿ ಕೂತು ಚಹಾ ಕುಡಿಯುತ್ತಿದ್ದರು, ರಮೇಶನನ್ನು ನೋಡಿ ಅವರು "ರಮೇಶ ಇಲ್ಲಿ ಬಾ" ಎಂದು ಕರೆದರು.

ರಮೇಶ ಅವರತ್ತಿರ ಹೋಗಿ ಒಂದು ಚೇರ್ ಎಳೆದು ಕೂತುಕೊಂಡ.

ವಿಕ್ರಮ ಮಾಮ ರಮೇಶನಿಗೆ "ನೋಡು ರಮೇಶ, ನನ್ನ ಮಾತಿಗೆ ಬೇಸರಿಸಬೇಡ, ಆದರೆ ಈ ಹೆಂಗಸರು ಕಿರಿಕಿರಿ ಮಾಡಿ ಕೆಲಸ ಮಾಡುವುದನ್ನು ನೋಡಿ ನನಗೆ ಕೋಪ ಏರಿ ಹೋಯಿತು, ಇವರಿಗೆ ಈಗ ಯಾರೂ ಬೇಡವಾಗಿದ್ದಾರೆ, ಅವರಿಗೆ ಅವರ ಶರೀರವೇ ಭಾರವಾಗಿದೆ,  ಮೇಲಿಂದ ಮನೆ ಕೆಲಸ ಅದು ಇದು, ಅವರಿಗೆ ಈ ಸಮಯ ಏನು ಹೇಳಿದರೆ ಮತ್ತೆ ಇನ್ನು ಸ್ಥಿತಿ ಇಲ್ಲಿ ಹಾಳಾಗಬಹುದು ಆದ್ದರಿಂದ  ನಾನು ಬೇಕಂತೆ ನಿನ್ನ ಮೇಲೆ ರೋಷ ತೋರಿಸಿದೆ, ಅಕ್ಕನ ಚಿಂತೆ ನನಗೂ ಇದೆ ಹಾಗು ನಿನ್ನ ಅಸಹಾಯಕತೆ ಬಗ್ಗೆಯೂ ನನಗೆ ಅರಿವಿದೆ,  ಆದರೆ ನೀನು ದಯಮಾಡಿ ಅವರ ಕಾಳಜಿ  ಇಡಲು ಯಾರನ್ನಾದರೂ ಇಟ್ಟು ಹೋಗು, ಇಲ್ಲಾದರೆ ಇವರು ನನ್ನ ಜೀವ ತಿಂದು ಬಿಡುತ್ತಾರೆ, ಹೇಗೂ ವಿಜಯನ ಕಾರಣ ಇವರಿಗೆ ಎಲ್ಲೂ ಹೋಗಲಿಕ್ಕೆ ಬರಲಿಕ್ಕೆ ಇಲ್ಲ".

ರಮೇಶ " ಓ ಕೆ ಮಾಮ, ನನಗೆ ಇದರೆಲ್ಲದರ ಅರಿವಿದೆ, ನಾನು ದಿರೇಶನಿಗೆ ಹೇಳಿದ್ದೇನೆ, ನಾಳೆ ಒಂದು ಹುಡುಗಿ ಬರುತ್ತಾಳೆ ಮತ್ತೆ ನಿಮ್ಮ ಬೈಗುಳದಿಂದ ನನಗೇನು ಬೇಜಾರವಾಗಿಲ್ಲ, ಈ ಮನೆಯ ಗುರಿಕಾರ ಆಗಿದ್ದರಿಂದ ಎಲ್ಲ ನಿಮಗೆ ಕೇಳಬೇಕಾಗುತ್ತದೆ, ಬಿಡಿ...........ಅವರವರ ಸ್ವಭಾವ, ಅವರಿಗೂ ಕಷ್ಟವಾಗುತ್ತಿರಬೇಕು, ಇಲ್ಲಾದರೆ  ಅವರೇನು ಅಷ್ಟು ಕಠೋರ ಮನಸ್ಸಿನವರಲ್ಲ". 

ವಿಕ್ರಮ ಮಾಮ ಪುನಃ "ಬೇಸರಿಸಬೇಡ ಪ್ಲೀಸ್, ಕೋಲದ್ದು ತುಂಬಾ ಕೆಲಸವಿದೆ, ನಾನು ಸ್ವಲ್ಪ ತಯಾರಿ ನೋಡಿ ಬರುತ್ತೇನೆ" ಎಂದೇಳಿ ಅಲ್ಲಿಂದ ಎದ್ದು ಹೋದರು. 

ದಕ್ಷಿಣ ಕನ್ನಡದ  ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ "ಭೂತ ಕೋಲ" ಅಂದರೆ ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ, ಕೋಲ ಹೆಚ್ಚಾಗಿ ರಾತ್ರಿ  ಶುರುವಾಗಿ ಪ್ರಾತಃ  ೫ ಗಂಟೆ ತನಕ  ನಡೆಯುತ್ತದೆ,  ಮನೆಯ ಅಂಗಳದಲ್ಲಿ ಚಪ್ಪರ ಹಾಕಿ ಹೂ ತೋರಣಗಳಿಂದ ಕೋಲ ನಡೆಯುವ ಸ್ಥಳವನ್ನು ಸಿಂಗರಿಸುತ್ತಾರೆ, ರಾತ್ರಿಗೆ  ನೆಂಟ ಮಿತ್ರರ  ಹಾಗು ಊರವರೆಲ್ಲರ ಆಗಮನದ ನಂತರ ಮನೆಯ ಯಜಮಾನ ಹಾಗು ಮನೆಯ ಸದಸ್ಯರು ತಲೆಗೆ ಮುಂಡಾಸು ಕಟ್ಟಿಕೊಂಡು ಸಮಸ್ತ ಹಿರಿಯರ ಜೊತೆ  ವಾದ್ಯ ವೃಂದದ ಜೊತೆಗೆ ಭೂತದ ಗುಡಿಗೆ ಹೋಗಿ ಭೂತಗಳಿಗೆ ಫೂಜೆ ಸಲ್ಲಿಸಿ ಭೂತದ ಭಂಡಾರ ಅಂದರೆ ಭೂತದ ಗಂಟೆ ಹಾಗು ಆಯುಧಗಳನ್ನು ಗುಡಿಯಿಂದ ತಂದು ಸಿಂಗರಿಸಿದ ಚಪ್ಪರದಲ್ಲಿ ಇಡುತ್ತಾರೆ.
ಕೋಲ ಅಂದರೆ  ಭೂತಾರಾಧನೆ  ಶುರುವಾಗುವ ಸಮಯದಲ್ಲಿ ಭೂತದ ವೇಷ ಹಾಕುವ ಪಾತ್ರದಾರಿ  ತನ್ನ ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ಧರಿಸುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ, ಎಲ್ಲ ಭೂತಕ್ಕೆ ಒಂದೇ ರೀತಿಯ ವೇಷಭೂಷಣಗಳು ಇರುವುದಿಲ್ಲ, ಪ್ರತ್ಯೇಕ ದೈವಗಳ ವೇಷ ವಿಭಿನ್ನವಾಗಿರುತ್ತದೆ ಅದರಲ್ಲಿ ಪಾತ್ರದಾರಿಗಳು  ತೆಂಗಿನ ಗರಿಯಿಂದ ಮಾಡಿದ ಹೊದಿಕೆ ಹಾಗು ರಂಗು ರಂಗಿನ ವಸ್ತ್ರಗಳುನ್ನು ಧರಿಸುತ್ತಾರೆ ಹಾಗು ಮುಖಕ್ಕೆ ಸಿಂಗಾರ ಮಾಡುವಾಗ ಕೇವಲ ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ.   ಭೂತಾರಾಧನೆಯಲ್ಲಿ ವಾದ್ಯಗಳ ತುಂಬಾ ಮಹತ್ವವಿರುತ್ತದೆ, ಭೂತಾರಾಧನೆಯಲ್ಲಿ ವಾದ್ಯಗಳ ಉಚ್ಚ ಸ್ವರದ ಧ್ವನಿಯಿಂದ ಪಾತ್ರದಾರಿಯ ಮೈಮೇಲೆ ದೈವ ಬಂದಾಗ  ಅವರ   ಸುಂದರ ನೃತ್ಯದ ಮೂಲಕ  ದೈವದ  ಕಾರ್ಣಿಕ ತೋರಿಸುತ್ತದೆ. 

ಹಲವು ವರುಷಗಳ ಇತಿಹಾಸ ಹೊಂದಿರುವ ಭೂತಾರಾಧನೆಯನ್ನು ತುಳುನಾಡಿನ ಜನರು  ಇಂದಿಗೂ ಆಚರಣೆಯನ್ನು ಮಾಡಿಕೊಂಡು ಬಂದಿದುದರಿಂದ  ತುಳುನಾಡಿನ ಸಂಸ್ಕೃತಿಗಳು, ಆಚರಣೆಗಳು ಇಂದು ಜೀವಂತವಾಗಿದೆ.

(ಭೂತ ಕೋಲದ ಬಗ್ಗೆ ಹೆಚ್ಚು ಮಾಹಿತಿಗಾಗಿ  ಇಲ್ಲಿ ಕ್ಲಿಕ್ಕಿಸಿ https://kn.wikipedia.org/s/16oj )

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Wednesday, February 19, 2020

ವೃದ್ಧಾಶ್ರಮ ೧೫


ಮನೆಯಲ್ಲಿ ರಮೇಶನ ಇಡೀ ಕುಟುಂಬ ಒಟ್ಟಾಗಿದ್ದ ಕಾರಣ ಮನೆಯಲ್ಲಿ ಪರಸ್ಪರ  ಹಾಸ್ಯ, ಗಮ್ಮತ್ತು, ವಿಚಾರ ವಿಮರ್ಶೆ ನಡೆಯುತ್ತಲೇ ಇತ್ತು, ತುಂಬಾ ದಿವಸದ ನಂತರ ಒಬ್ಬರನೊಬ್ಬರು ಭೇಟಿಯಾದ ನಂತರ ಆಗುವ ಖುಷಿಯೇ ಬೇರೆ, ಪರಸ್ಪರ ಮನಸ್ಸಲ್ಲಿ ಎಷ್ಟೇ ಭಿನ್ನಾಭಿಪ್ರಾಯ, ಕ್ಲೇಶ, ಕಲ್ಮಶ ಇದ್ದರೂ ಹೀಗೆ  ಎಲ್ಲರು  ಒಟ್ಟಿಗೆ ಸೇರಿದಾಗ ಮನಸ್ಸು ನಿರ್ಮಲವಾಗುತ್ತದೆ ಹಾಗು ಮನಸ್ಸಿನಲ್ಲಿದ್ದ  ಭಾರ ಮನೋಭಾವ ಹಗುರವಾಗುತ್ತ ಹೋಗುತ್ತದೆ,   ಕುಟುಂಬ ಅಂದರೆ ಹೀಗೆಯೇ ಇರುತ್ತದೆ.  

ಹಿಂದಿನ ಕಾಲದಲ್ಲಿ ಜಂಟಿ ಕುಟುಂಬ ಅಸ್ತಿತ್ವದಲ್ಲಿತ್ತು, ಅದರಲ್ಲಿ ಹಲವಾರು ತಲೆಮಾರುಗಳ ಸದಸ್ಯರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು, ಅವರ ಅಡುಗೆಮನೆ, ಪೂಜೆ ಮತ್ತು ಆಸ್ತಿ ಎಲ್ಲ ಸಾಮೂಹಿಕವಾಗಿರುತ್ತಿತ್ತು, ಜಂಟಿ ಕುಟುಂಬದಲ್ಲಿ ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ ಪ್ರೇಮ ಹೆಚ್ಚು ಕಂಡು ಬರುತಿತ್ತು, ಅವರು ತಮ್ಮನ್ನು ತುಂಬಾ ಸುರಕ್ಷಿತವಾಗಿದ್ದಂತೆ ಭಾವಿಸುತ್ತಿದ್ದರು, ಅವರಿಗೆ  ಉತ್ತಮ ಮೌಲ್ಯಗಳು  ಪಾರಂಪಾರಿಕವಾಗಿ ಸಿಗುತ್ತಿತ್ತು,  ಮೆಲ್ಲ ಮೆಲ್ಲ ಸಮಯ ಬದಲಾದಂತೆ  ಕುಟುಂಬದ ಸದಸ್ಯರು ದೂರ ದೂರ ಕೆಲಸ ಕಾರ್ಯಕ್ಕೆ ಹೋದಂತೆ ಅಲ್ಲಿಯೇ ಪ್ರತ್ಯೇಕ  ಪರಿವಾರ ಹೂಡಿ ಇರಲಾರಂಭಿಸಿದರು ಹಾಗು ಈ ಚಲನೆ ಮುಂದೆ ನಡೆಯುತ್ತಲೇ ಹೋಯಿತು, ಕ್ರಮೇಣ ಈ  ಜಂಟಿ ಕುಟುಂಬದ ಪದ್ಧತಿ ಮುಗಿಯುತ್ತ ಹೋಯಿತು ಹಾಗು ಒಂದೇ ಕುಟುಂಬ ಅಂದರೆ ಮೂಲ ಕುಟುಂಬದ ಪದ್ಧತಿ ಸ್ಥಾಪಿತವಾಯಿತು, ಇಂದಿನ ಕಾಲದಲ್ಲಿ ಎಲ್ಲಿ ನೋಡಿದರೂ ಇದೇ ಪದ್ಧತಿ  ಕಂಡು ಬರುತ್ತದೆ. 

ಮಧ್ಯಾಹ್ನ ಊಟ ಮುಗಿದ ನಂತರ ಸುಮಾ ಅತೀಶನ ಜೊತೆ ತನ್ನ ತವರು ಮನೆಗೆ ಹೋದಳು, ರಮೇಶ ಹಾಗು ಅವನ ಸೋದರಸಂಬಂಧಿಗಳು ಹಾಗು ಎಲ್ಲ ಮಕ್ಕಳು  ಸೇರಿ ಊರಲ್ಲಿದ್ದ ನದಿಗೆ ಈಜಲೂ ಹೋದರು, ಒಂದೆರಡು ಗಂಟೆ ಅಲ್ಲಿ ಮೋಜು, ಗಮ್ಮತ್ತು ಮಾಡಿ ಮನೆಗೆ ಬಂದಾಗ ರಮೇಶನ ದೊಡ್ಡ ಮಾವ ವಿಕ್ರಮ ಬೊಬ್ಬೆ ಹಾಕುವುದು ಕೇಳಿ ಬಂತು. 

ರಮೇಶ ಮತ್ತು ಎಲ್ಲರು ಮನೆಗೆ ಕಾಲು ಇಟ್ಟಾಗಲೇ ಕೋಪದಲ್ಲಿ ಪ್ರಸಿದ್ಧವಾಗಿದ್ದ ವಿಕ್ರಮ ಮಾಮ ರಮೇಶನಿಗೆ "ನೀನೆಲ್ಲಿಗೆ ಹೋಗಿದ್ದಿಯ?, ಇಲ್ಲಿ ನಿನ್ನ ಅಮ್ಮ ಮಲ ಮೂತ್ರಕ್ಕೆ  ಕರೆಯುವಾಗ ನೀನಿಲ್ಲ ಇಲ್ಲಿ, ನಿನ್ನ ಹೆಂಡತಿಯು ಇಲ್ಲ, ಇಲ್ಲಿದ್ದವರಿಗೆ ಮೊದಲೇ  ತುಂಬಾ ಕೆಲಸ ಇದೆ, ನಾಳೆ *ಭೂತ ಕೋಲ ಇದೆ, ಅದರ ಕೆಲಸ ಬೇರೆ ಇದೆ, ಇನ್ನು ನಿನ್ನಮ್ಮನ ಚಾಕರಿ ಸಹ ಇವರು ಮಾಡುವುದ"? ಎಂದು ಜೋರಿನಿಂದ ಕೇಳಿದರು. 

*ಭೂತ ಕೋಲ (ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ)

ರಮೇಶ "ಸಾರೀ, ಅವರು ಊಟ ಮಾಡಿ ಮಲಗಿದ್ದರು ಅದಕ್ಕೆ ನಾನಸಿದೆ ಇನ್ನು ಅವರು ಬೇಗ ಏಳುವುದಿಲ್ಲ ಮತ್ತೆ ಮನೆಯಲ್ಲಿ ಎಲ್ಲರಿದ್ದರಲ್ಲ  ಅದಕ್ಕೆ ನಾವೆಲ್ಲಾ ನದಿಗೆ ಹೋದದ್ದು". 

ವಿಕ್ರಮ ಮಾಮ "ನೀನು ಮೊದಲು ಅವರ ಚಾಕರಿಗೋಸ್ಕರ ವ್ಯವಸ್ಥೆ ಮಾಡು ಮತ್ತೆ ಎಲ್ಲಿ  ಹೋಗಲಿಕ್ಕಿದೆ ಹೋಗು, ಇಲ್ಲಿ ಅವರ ಕೆಲಸ ಮಾಡಲಿಕ್ಕೆ ಬೇರೆ ಯಾರ ಹತ್ತಿರ ಸಮಯವಿಲ್ಲ" ಎಂದು ಕೋಪದಿಂದ  ಹೇಳಿದರು. 

ಆಗ ಅಲ್ಲೇ ಇದ್ದ ಗುಡ್ಡಿ  ಚಿಕ್ಕಮನವರು"ಇರಲಿ ಆಯಿತಲ್ಲ ಇನ್ನು, ನೀನ್ಯಾಕೆ ಅಷ್ಟು ರೇಗಾಡುತ್ತಿದ್ದಿ" ಎಂದು ವಿಕ್ರಮ ಮಾಮನಿಗೆ ಬೈದರು. 

ರಮೇಶನಿಗೆ ಬೇಜಾರಾಗುತ್ತದೆ ಎಂದು ಉಷಾ ಚಿಕ್ಕಮ್ಮ ಸಹ ವಿಕ್ರಮ ಮಾಮನಿಗೆ "ಅಣ್ಣ, ನಿಮಗೆ ಸುಮ್ಮನೆ ಇರಲಾಗುದಿಲ್ಲವೇ, ನಾವು ಅವರಿಗೆ ಟಾಯ್ಲೆಟ್ ಮಾಡಿಸಿ ಆಗಿದೆಯಲ್ಲ, ಈಗ ಯಾಕೆ ಸುಮ್ಮನೆ ಬೊಬ್ಬೆ ಹಾಕುತ್ತಿದ್ದೀರಿ". 

ವಿಕ್ರಮ ಕೈಕಾಲು ಬಡಿದು ಮನೆಯಿಂದ ಹೊರಗೆ ಹೋದರು. 

ರಮೇಶ ಸುಮ್ಮನೆ ಏನು ಹೇಳದೆ ಒಳಗೆ ಅಮ್ಮನ ಕೋಣೆಗೆ ಹೋದ, ಅಮ್ಮ ಎಚ್ಚರದಲ್ಲಿದ್ದರು. ರಮೇಶ ಅವರಿಗೆ "ಏನು ಟಾಯ್ಲೆಟ್ ಬಂದಿತ್ತಾ"?

ಅಮ್ಮ ಬೇಜಾರದಿಂದ "ಹೌದು, ನನಗೆ ಗೊತ್ತಿರಲಿಲ್ಲ ನೀನಿಲ್ಲ ಅಂತ"

ರಮೇಶ "ದಿರೇಶ  ಎಲ್ಲಿಗೆ ಹೋದ"? 

"ಅವನೆಲ್ಲಿ ನಿಲ್ಲುತ್ತಾನೆ, ಪೇಟೆಗೆ ಹೋಗಿರಬೇಕು ಅಲೆಯಲು" ಎಂದು ದಿರೇಶನ ಕುಡಿಯುವ ಚಟ  ಅರಿತ ಅಮ್ಮ ಕೋಪದಿಂದ ಹೇಳಿದರು. 

ರಮೇಶ ಕೋಣೆಯಿಂದ ಹೊರಗೆ ಬಂದ, ಅವನಿಗೆ ಮನೆಯಲ್ಲಿದ್ದ ಎಲ್ಲರ ಮನಸ್ಥಿತಿ ಅರ್ಥವಾಗುತ್ತಿತ್ತು, ಎಲ್ಲರೂ ಅವರವರ ಜೀವನದಲ್ಲಿ ವ್ಯಸ್ತವಾಗಿರುವಾಗ, ಯಾರು ಯಾಕೆ ಬೇರೆಯವರ ಕೆಲಸ ಮಾಡಲು ಸಿದ್ಧರಿದ್ದಾರೆ, ವಿಕ್ರಮ ಮಾಮನ ಉದ್ದೇಶ ಅವನಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು, ಯಾವಾಗಲೂ ಅವರ ಕೋಪ ಅವರ ಮೂಗಿನಲ್ಲಿ ಇರುತ್ತಿತ್ತು ಮತ್ತೆ ಅದರಿಂದ ಮನೆಯ ವಾತಾವರಣ ಹಾಳಾಗುತ್ತದೆ ಇದೆಲ್ಲದ್ದರ ಬಗ್ಗೆ ಯೋಚನೆ ಮಾಡುವ ಶಕ್ತಿ ಅವರಲ್ಲಿ ಇರಲಿಲ್ಲ, ಅವರ ಸ್ವಭಾವ ಅರಿತು ರಮೇಶ ಅವರಿಂದ ಹೆಚ್ಚು ವಾದ ಮಾಡಲು ಹೋಗಿರಲಿಲ್ಲ, ಮೌನವಾಗಿ ಇರುವುದಲ್ಲದೆ  ಈಗ ಅವನಲ್ಲಿ ಬೇರೆ ಏನು ಊಪಯವಿರಲಿಲ್ಲ. 

ಅವನು ದಿರೇಶನಿಗೆ ಫೋನ್ ಮಾಡಿದ " ಎಲ್ಲಿದ್ದೀಯ"?

ದಿರೇಶ "ಪೇಟೆಯಲ್ಲಿ, ಏನು ಏನಾಯಿತು"?

ರಮೇಶ "ಏನಾಯಿತು ಆ ಹುಡುಗಿಯ, ಹೇಳಿದ್ದೀಯಾ ಬರಲಿಕ್ಕೆ"?

ದಿರೇಶ "ಅವಳ ತಂದೆಗೆ ಫೋನ್ ಮಾಡಿದೆ, ನಾಳೆ ಅವನು ಅವಳನ್ನು ಕರೆದುಕೊಂಡು ಬರುತ್ತಾನೆ"

ರಮೇಶ "ಓ. ಕೆ" ಎಂದು ಫೋನ್ ಇಟ್ಟ. 

(ಮುಂದುವರಿಯುತ್ತದೆ)


by ಹರೀಶ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 18, 2020

ವೃದ್ಧಾಶ್ರಮ ೧೪


ರಮೇಶ  ಕಾರಿನಿಂದ  ಹೊರಗೆ ತನ್ನ ಊರಿನ ಸುಂದರ ದೃಶ್ಯ  ನೋಡುತ್ತಿದ್ದ, ಸುತ್ತಲೂ ಗದ್ದೆ, ತೋಟ , ಮಧ್ಯದಲ್ಲಿ ಕಾಡು, ಹಸಿರು ಬೆಟ್ಟ, ಹಸಿರು ಹಸಿರು ಗಿಡಮರಗಳು, ಪ್ರಕೃತಿಯ ಸುಂದರ ವಾತಾವರಣ ಮನಮೋಹಕವಾಗಿತ್ತು, ಊರಿನ ಸೊಬಗನ್ನು ನೋಡಿ ರಮೇಶನ ಮನಸ್ಸು  ಪ್ರಫುಲ್ಲಿತವಾಯಿತು,  ಕೆಲವು ನಿಮಿಷದ ನಂತರ ಕಾರ್ ರಮೇಶನ ಹಳ್ಳಿ ಮನೆ ದುರ್ಗಾಮಂದಿರಕ್ಕೆ ಮುಟ್ಟಿತು. 

ಕಾರ್ ನೋಡಿ ಮನೆಯವರೆಲ್ಲ ಹೊರಗೆ ಬಂದರು, ಮನೆಯಲ್ಲಿ ದೇವರ ಕೆಲಸ ಇದ್ದ ಕಾರಣ ಪರ ಊರಿನಲ್ಲಿದ್ದ ಕುಟುಂಬದ ಹಲುವು ಸದಸ್ಯರು ಬಂದಿದ್ದರು, ಎಲ್ಲರು ಒಟ್ಟು ಕೂಡಿ ಅಮ್ಮನನ್ನು ಕಾರಿನಿಂದ ಇಳಿಸಿ ಮನೆಯ ಒಂದು ಕೋಣೆಗೆ ಸೇರಿಸಿದರು. ಸಾಮಾನೆಲ್ಲ ತೆಗೆದ ನಂತರ ರಮೇಶ ಡ್ರೈವರ್ ಗೆ ಬಾಡಿಗೆ ಎಷ್ಟೆಂದು ಕೇಳಿದ, ಡ್ರೈವರ್ ಸಜ್ಜನನಾಗಿದ್ದ, ಸರಿಯಾದ ಬಾಡಿಗೆನೇ ಹೇಳಿದ, ರಮೇಶ ಹೇಳಿದಷ್ಟು ಬಾಡಿಗೆ ಕೊಟ್ಟು ಅವನಿಗೆ ಧನ್ಯವಾದ  ಸಲ್ಲಿಸಿದ. ರಮೇಶ ಸ್ಟೇಷನಲ್ಲಿ ಬಾಡಿಗೆ ಕೇಳದಕ್ಕೆ  ಸುಮಾ ಅಸಮಾಧಾನದಲ್ಲಿದ್ದಳು, ಈಗ ಡ್ರೈವರ್ ತುಂಬಾ ಹೆಚ್ಚು ಹೇಳುತ್ತಾನೆಂದು ಸುಮಾ ಡ್ರೈವರ್ ಗೆ ಬಾಡಿಗೆ ಕೊಡುವ ತನಕ ಕಾದು ಅವರನ್ನೇ ನೋಡುತ್ತಿದ್ದಳು, ಡ್ರೈವರ್  ಸರಿಯಾದ ಕಡಿಮೆ ಬಾಡಿಗೆ  ಹೇಳಿದ ಕೂಡಲೇ  ರಮೇಶ ಖುಷಿಯಿಂದ ಅವಳನ್ನು ನೋಡಿ ನಗೆ ಬೀರಿದ, ಸುಮಾ ನಗುತ ಅವನಿಗೆ "ಹ್ಮ್ಮ್" ಎಂದು ತೆಪ್ಪಗೆ  ಅಲ್ಲಿಂದ ಮನೆಕಡೆ ಹೋದಳು, ಹೆಂಡತಿ  ಗಂಡನಿಗೆ ಬೈಯುವ ಒಂದು ಅವಕಾಶ ಸಹ ಬಿಡುವುದಿಲ್ಲ, ಆದರೆ ಇಲ್ಲಿ ಸುಮಾಳಿಗೆ ನಿರಾಸೆ ಆಯಿತು, ಡ್ರೈವರ್ ಪ್ರಾಮಾಣಿಕನಾಗಿದ್ದ ಹಾಗು ನಿಯತ್ತಿನ ಬಾಡಿಗೆ ಕೇಳಿದ್ದ.  

ಪ್ರಪಂಚದಲ್ಲಿ ಎಲ್ಲರು ಒಂದೇ ತರಹ ಇರುವುದಿಲ್ಲ,  ಎಲ್ಲರನ್ನು ಒಂದೇ ಮಾನದಂಡದಲ್ಲಿ ಹೋಲಿಸುವುದು ಸರಿಯಲ್ಲ.  ನಾವು  ಜೀವನಕ್ಕೆ ಬರುವಾಗ ಒಂದು ಖಾಲಿ ಪುಸ್ತಕದ ಹಾಗೆ ಇರುತ್ತೇವೆ, ಕ್ರಮೇಣ ಆ ಪುಸ್ತಕ ನಾವು ಮಾಡಿದ ಕರ್ಮದಿಂದ ತುಂಬುತ್ತಲೇ ಹೋಗುತ್ತದೆ, ಅದರ ಕೆಲವು ಪುಟ ನಾವು ಪುನಃ ಪುನಃ ಓದ ಬಯಸುತ್ತೇವೆ, ಕೆಲವು ಪುಟಗಳನ್ನು ನಾವು ಹರಿದು ಬಿಸಾಕ ಬಯಸುತ್ತೇವೆ, ಎಲ್ಲರು ತನ್ನ ಈ ಪುಸ್ತಕವನ್ನು ತನ್ನೊಟ್ಟಿಗೆ ಇಟ್ಟು ತಿರುಗುತ್ತಾರೆ ಹಾಗು ಇತರರೂ ಅದನ್ನು ಓದಬೇಕೆಂದು ಬಯಸುತ್ತಾರೆ, ಆದರೆ ಎಲ್ಲ ಪುಟ ಒಂದೇ ಸಮಾನ ಇರುವುದಿಲ್ಲ, ಕೆಲವು ದಪ್ಪ ಅಕ್ಷರದಲ್ಲಿ  ಬರೆದದ್ದಿರುತ್ತದೆ, ಕೆಲವು  ನಾಜೂಕು ಅಕ್ಷರದಲ್ಲಿ ಬರೆದದ್ದು, ಕೆಲವು ಕಣ್ಣೀರಿನಿಂದ  ಮರೆಯಾಗುತ್ತವೆ, ಕೆಲವು ನಗುವಿನಲ್ಲಿ ಅರಳುತ್ತವೆ, ಕೆಲವು ಕಥೆಗಳನ್ನು ನಾವು  ನೆನಪಿಡಲು ಬಯಸುತ್ತೇವೆ, ಕೆಲವು ಘಟನೆಗಳನ್ನು ನಾವು ಅಳಿಸಬಯಸುತ್ತೇವೆ, ಈ ಪುಸ್ತಕದ ಪ್ರಥಮ ಓದುಗಾರ ನಮ್ಮ ಮನಸ್ಸೇ, ಅದರ ನಂತರ ಕೇವಲ ಕೆಲವೇ ಜನರು ಇದರ ಓದುಗಾರರು ಹಾಗು ನಮ್ಮನ್ನು ಅರ್ಥೈಸುವವರು, ಈ ಪುಸ್ತಕವೇ  ನಮ್ಮ ಜೀವನದ ಕನ್ನಡಿ. 

ಡ್ರೈವರ್ ಹೋದ ನಂತರ ರಮೇಶ ಮನೆಯೊಳಗೇ ಬಂದ, ರಮೇಶನ ಅಮ್ಮನ ಕುಟುಂಬ ಬಹಳ ದೊಡ್ಡದು,ಅದರಲ್ಲಿ ಹೆಚ್ಚಿನವರು ಊರಿನಿಂದ ದೂರ ಪರ ಊರಲ್ಲಿಯೇ ಇರುತ್ತಿದ್ದರು, ಕೆಲವರು ಮುಂಬೈ, ಬೆಂಗಳೂರ್ ಹಾಗು ಕೆಲವರು ವಿದೇಶದಲ್ಲಿದ್ದರು, ಊರಿನಲ್ಲಿ ಕೇವಲ ರಮೇಶನ ಆಶಾ ಮತ್ತು ಉಷಾ ಚಿಕ್ಕಮ, ರಮೇಶನ ಅಣ್ಣನ ಮಗ ಅರ್ಜುನ ಹಾಗು ವಿಜಯ ಮಾಮ ಇರುತ್ತಿದ್ದರು. ಊರಲ್ಲಿ ಏನಾದರೊಂದು ಉತ್ಸವ, ಸಮಾರಂಭ, ಮದುವೆ  ಹಾಗು ದೇವರ ಕಾರ್ಯ ಇದ್ದರೇನೇ ಎಲ್ಲ ಕುಟುಂಬದವರು ಒಟ್ಟಾಗುತ್ತಿದ್ದರು. ಮುಂಬೈಯಿಂದ ರಮೇಶನ ಅಮ್ಮನಿಂದ ಚಿಕ್ಕವರು ಗುಡ್ಡಿ ಚಿಕ್ಕಮ ಅವರ ಮಕ್ಕಳು , ಊರ್ವಶಿ ಚಿಕ್ಕಮ ಮತ್ತು ರಮೇಶನ ದೊಡ್ಡ ಮಾವ ವಿಕ್ರಮ ಬಂದಿದ್ದರು, ರಮೇಶನ ವಿದೇಶದಲ್ಲಿದ್ದ ಚಿಕ್ಕ ಮಾವ ದಿನಕರ ಸಹ ಪರಿವಾರ ಸಹಿತ ಬಂದಿದ್ದರು, ಎಲ್ಲರು ಬಂದಿದ್ದ ಕಾರಣ ಮನೆಯಲ್ಲಿ ಗೌಜಿ ಗಲಾಟೆ ನಡೆಯುತ್ತಿತ್ತು, ಮಕ್ಕಳು ಅಲ್ಲಿಂದಿಲ್ಲಿ ಓಡಾಡುತ್ತಿದ್ದರು.

ಚಾ, ತಿಂಡಿ ಆದ ನಂತರ ಎಲ್ಲರೂ ತನ್ನ ತನ್ನ ಸ್ನಾನ ಮುಗಿಸಿ ತನ್ನ ತನ್ನ ಕೆಲಸದಲ್ಲಿ ನಿರತರಾದರು, ಕೆಲವರು ಪೇಟೆಗೆ ಹೋದರು. ಸುಮಾ ಚಿಕ್ಕಮನವರೊಟ್ಟಿಗೆ ಅಮ್ಮನನ್ನು ಸ್ನಾನ ಮಾಡಿಸಿ, ಅವರಿಗೆ ತಿಂಡಿ, ಚಾ ಕೊಟ್ಟು ನಂತರ ಅವರಿಗೆ ಆರಾಮ ಮಾಡಲು ಹೇಳಿದ್ದಳು,  ಪ್ರಯಾಣದಲ್ಲಿ ಸೋತು ಹೋದ ಕಾರಣ ಅಮ್ಮ ಬೇಗನೆ ನಿದ್ದೆಗೆ ಹೋದರು.

ಮಧ್ಯಾಹ್ನ ರಮೇಶನ ಅಣ್ಣ ದಿರೇಶ ಬಂದ ಕೂಡಲೇ ರಮೇಶ ಅವನಿಂದ ಹೋಮ್ ನರ್ಸ್ ಬಗ್ಗೆ ಕೇಳಿದ, ಅದಕ್ಕೆ ಅವನು "ನಾನು ಕೆಲವರಿಗೆ ಕೇಳಿದೆ ಆದರೆ ಯಾರೂ ಇಷ್ಟು ದೂರ ಒಳಗೆ ಹಳ್ಳಿಗೆ ಬರಲು ಕೇಳುವುದಿಲ್ಲ, ಆದರೆ ನನ್ನ ಪರಿಚಯದವರು ಒಬ್ಬರಿದ್ದಾರೆ, ತುಂಬಾ ಬಡವರು,ಅವರು  ಅವರ ಮಗಳನ್ನು ಕಳಿಸಲು ರೆಡಿ ಇದ್ದಾರೆ, ಅವಳು ನರ್ಸ್ ಅಲ್ಲ, ಆದರೆ ಮನೆಯಲ್ಲಿ ಈ ತರಹ ಕೆಲಸ ಮಾಡಿದ್ದಾಳೆ, ಅಮ್ಮನ ಚಾಕರಿ ಎಲ್ಲ ಮಾಡುತ್ತಾಳೆ, ಊಟ ತಿಂಡಿ ಕೊಟ್ಟು ಸಂಬಳ ೮೦೦೦ ಕೊಡಬೇಕಂತೆ,  ಈಗ ನೀನು ಹೇಳು ಏನು ಮಾಡಬೇಕು, ಒಪ್ಪಿಗೆ ಇದ್ದರೆ ಈಗಲೇ ಫೋನ್ ಮಾಡಿ ಕರೆಸುತ್ತೇನೆ".

ರಮೇಶ "ಎಂಟು ಸಾವಿರ ಹೆಚ್ಚಲ್ಲವೇ"?

ಅದಕ್ಕೆ ದಿರೇಶ "ಅರೆ... ನಿನಗೆ ಈ ಊರಿನ ಕಥೆ ಗೊತ್ತಿಲ್ಲ, ಇಲ್ಲಿ ಯಾರೂ ಕೆಲಸಕ್ಕೆ ಸಿಗುವುದಿಲ್ಲ, ಇದು ನಮ್ಮ ಅದೃಷ್ಟ ಒಳ್ಳೆದಿದೆ ಅದಕ್ಕೆ ಅವರು ಅವರ ಮಗಳನ್ನು ಕಳುಹಿಸುತ್ತಿದ್ದಾರೆ, ಮತ್ತೆ ನೀನೆ ಯೋಚಿಸು" ಎಂದು ಹೇಳಿದ.

ಅದಕ್ಕೆ ಅಲ್ಲೇ ಇದ್ದ ಉಷಾ ಚಿಕ್ಕಮ್ಮನವರು "ಹೌದು ರಮೇಶ, ದಿರೇಶ ಹೇಳುವುದು ಸರಿ, ಇಲ್ಲಿ ಕೆಲಸಕ್ಕೆ ಜನನೇ ಸಿಗುವುದಿಲ್ಲ, ತುಂಬಾ ಕಷ್ಟ, ಅವಳನ್ನೇ ಕರೆಸು ಇಲ್ಲಾದರೆ ಬೇರೆ ಯಾರೂ ನಂತರ ಸಿಗದಿದ್ದರೆ ಕಷ್ಟ ಆಗುತ್ತದೆ".

ಈ ಬಗ್ಗೆ ತುಂಬಾ ಚರ್ಚೆ ಮಾಡಿದ ನಂತರ ರಮೇಶನಿಗೆ ಬೇರೆ ಯಾವುದೇ ಮಾರ್ಗ ಕಾಣದೆ  ಅಮ್ಮನ ಚಾಕರಿ ಮಾಡಲು ದಿರೇಶ ಹೇಳಿದ ಹುಡುಗಿಯನ್ನೇ ಕರೆಯಲು ನಿರ್ಧಾರ ಮಾಡಿದ.

(ಮುಂದುವರಿಯುತ್ತದೆ)


by  ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ : ಗೂಗಲ್ 

Sunday, February 16, 2020

ವೃದ್ಧಾಶ್ರಮ ೧೩


ಸುಮಾ ಮತ್ತು ಕೂಲಿ ತಳ್ಳಿ ಬರುತ್ತಿದ್ದ ಬಂಡಿಯನ್ನು ನೋಡಿ ರಮೇಶ ಆಶ್ಚರ್ಯದಿಂದ "ಇದೇನು"?

ಸುಮಾ "ಇಲ್ಲಿಯ ಸ್ಟೇಷನಲ್ಲಿ ವೀಲ್ ಚೇರ್ ಇಲ್ಲ, ಅದಕ್ಕೆ ಬೇರೆ ದಾರಿ ಇಲ್ಲದೆ ಈ ಕೂಲಿಗೆ  ಬಂಡಿ  ತರಲಿಕ್ಕೆ ಹೇಳಿದೆ, ಇದರಲ್ಲಿ ಅಮ್ಮನನ್ನು ಕೂರಿಸಿ ರಿಕ್ಷಾ ಸ್ಟಾಂಡ್ ತನಕ ಹೋಗುವ"

ರಮೇಶ "ಒಹ್!!!....ಆದರೆ ಇದರಲ್ಲಿ ಹೇಗೆ"?

ಸುಮಾ "ಮತ್ತೇನು ಮಾಡುವುದು, ಹೇಗೂ ಅಮ್ಮನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕಲ್ಲ".

ರಮೇಶ "ಓ.ಕೆ.. ಕೆ".

ತುಂಬಾ ಪ್ರಯತ್ನದ ನಂತರ ಅಮ್ಮನನ್ನು ಆ ಬಂಡಿಯ ಮೇಲೆ ಕೂರಿಸಲಾಯಿತು ಹಾಗು ಅದೇ ಬಂಡಿಯಲ್ಲಿ ಸಾಮಾನು ಸಹ ಇಟ್ಟಾಯಿತು. ರಮೇಶ ಬಂಡಿಯಲ್ಲಿ ಕೂತಿದ ಅಮ್ಮನನ್ನು ಹಿಡಿದಿಟ್ಟಿದ್ದ ಹಾಗು ಸುಮಾ ನಿದ್ದೆಯಲ್ಲಿದ್ದ ಆತೀಶನನ್ನು ಎತ್ತಿ ಹಿಡಿದುಕೊಂಡಳು.

ಕೂಲಿ ನಿಧಾನವಾಗಿ ಬಂಡಿ ತಳ್ಳಿಕೊಂಡು ಹೋದ, ಆದರೂ ಅಮ್ಮ ಅಲ್ಲಾಡುತ್ತಿದ್ದರು, ರಮೇಶ ಬೀಳಬಾರದೆಂದು ಅವರನ್ನು ಹಿಡಿದಿಟ್ಟಿದ್ದ, ಹೇಗೋ ಅವರು ರಿಕ್ಷಾ ಸ್ಟಾಂಡ್ ತನಕ ಮುಟ್ಟಿದರು. 

ಅಲ್ಲಿ ನಿಂತಿದ್ದ ಜನರೆಲ್ಲಾ ಆಶ್ಚರ್ಯದಿಂದ ಅವರನ್ನು ನೋಡಲಾರಂಭಿಸಿದರು, ರಿಕ್ಷಾದವರು "ರಿಕ್ಷಾ ಬೇಕಾ, ರಿಕ್ಷಾ ಬೇಕಾ" ಎಂದು ಹಿಂದೆ ಬಿದ್ದರು, ರಮೇಶ ಅವರಿಗೆ "ಇಲ್ಲ ರಿಕ್ಷಾದಲ್ಲಿ ಇವರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಕಾರ್ ಬೇಕು" ಎಂದ. ಆಗ ಒಬ್ಬಾತ "ಸಾರ್, ನನ್ನ ಹತ್ತಿರ ಕಾರ್ ಇದೆ, ಈಗ ತರುತ್ತೇನೆ" ಎಂದ.

ರಮೇಶ್ ಸಮಯದ ಅವಶ್ಯಕತೆ ಅರಿತು ಏನೂ ಚರ್ಚೆ ಮಾಡದೆ  ಅವನಿಗೆ  "ಹ್ಮ್ಮ್" ಎಂದ.

ಆಗ ಸುಮಾ ರಮೇಶನಿಗೆ "ಕೇಳಿತಾ, ಇವರ ಒಂದು ಸಾವಿರ ಕೊಡಿ".

ರಮೇಶ  "ಯಾರದ್ದು"?

ಸುಮಾ "ಈ ಕೂಲಿಯ ಬಂಡಿಯ ಬಾಡಿಗೆ".

ಅದಕ್ಕೆ ರಮೇಶ "ಏನು, ಒಂದು ಸಾವಿರನ".

ಸುಮಾ ಮುಖ ಚಿಕ್ಕ ಮಾಡಿ "ಕೊಡಿ, ನಾನು ಒಪ್ಪಿಕೊಂಡಿದ್ದೇನೆ" ಎಂದಳು.

ರಮೇಶ ಆ ಕೂಲಿಗೆ "ಏನಣ್ಣ, ಇಷ್ಟೊಂದು ಹಣನ"?

ಕೂಲಿ " ನಾನು ಮೊದಲೇ ಹೇಳಿದ್ದೇನೆ ಸಾರ್" ಎಂದ.

ಉಪಾಯವಿಲ್ಲದೆ ರಮೇಶ ಅವನಿಗೆ ಒಂದು ಸಾವಿರ ರೂಪಾಯಿ ಕೊಟ್ಟ ಮತ್ತು ಕಾರ್ ಬರುವ ತನಕ ಕಾಯಲಿಕ್ಕೆ ಹೇಳಿದ.

ಸುಮಾ ರಮೇಶನಿಗೆ "ಕಾರ್ ಬಾಡಿಗೆ ಎಷ್ಟು ಕೇಳಿದ್ದೀರಾ?, ಇಲ್ಲಾದರೆ ಅವನು ಸಹ ಇವನಂತೆ ಬಾಯಿಗೆ ಬಂದ ಬಾಡಿಗೆ ಹೇಳಬಹುದು" 

ರಮೇಶ ಸೋತು ಹೋಗಿದ್ದ ಹಾಗೆ "ಇರಲಿ.....  ನೀನು ಮೊದಲು ಕೇಳಿ ಸಹ ಏನಾಯಿತು, ಕಡೆಗೆ ಒಂದು ಸಾವಿರ ಕೊಡಬೇಕಾಯಿತಲ್ಲ". 

ಸುಮಾ ಕೋಪದಿಂದ ರಮೇಶನನ್ನು ದುರುಗುಟ್ಟಿ ನೋಡಿದಳು, ಅದನ್ನು ನೋಡಿ  ರಮೇಶ ಆಚೆ ಈಚೆ ನೋಡಲಾರಂಭಿಸಿದ. 

ಕಾರ್ ಬಂದ ಕೂಡಲೇ ಎಲ್ಲರು ಸೇರಿ ಅಮ್ಮನನ್ನು ಬಂಡಿಯಿಂದ ಮೆಲ್ಲನೇ ಇಳಿಸಿ ಕಾರಲ್ಲಿ ಕೂರಿಸಿದರು, ನಂತರ ಸುಮಾ ಅತೀಶನೊಟ್ಟಿಗೆ ಅಮ್ಮನ ಬದಿಯಲ್ಲಿ ಕುಳಿತಳು,  ರಮೇಶ  ಕಾರಲ್ಲಿ ಸಾಮಾನು ಇಟ್ಟು ಸ್ವತಃ ಕುಳಿತ ನಂತರ ರಮೇಶ್ ಡ್ರೈವರ್ ನಿಗೆ ತನ್ನ ಹಳ್ಳಿಯ ಹೆಸರೇಳಿದ ಹಾಗು  ಕಾರ್ ರಮೇಶ ಹಳ್ಳಿಯ ಮನೆಯತ್ತ ಸಾಗಿತು.

ಜೀವನ ಅಂದರೆ ಹೀಗೆಯೇ ಸುಖ ದುಃಖ, ಕಷ್ಟ ನಷ್ಟ, ಹತಾಶೆ  ನಿರಾಶೆ, ನೋವು ನಲಿವು......., ಕತ್ತಲೆ ಕವಿದು ಬೆಳಕಾಗುತ ಬಂದಿತು, ಸೂರ್ಯ ಉದಯಿಸಿ ತನ್ನ ಬೆಳಕು ಹೊರಸೂಸುತ್ತಿದ್ದ, ಕಾರಿನ ರೇಡಿಯೋದಲ್ಲಿ ಹಿಂದಿ ಹಾಡು ಬರುತ್ತಿತ್ತು "ಯೇ  ಜೀವನ್ ಹೈ , ಇಸ್  ಜೀವನ್ ಕ ಯಹಿ ಹೈ.... ಯಹಿ ಹೈ ರಂಗ್ ರೂಪ್ , ಥೊಡೆ  ಘಮ್ ಹೈ.....  ಥೊಡೆ  ಖುಷಿಯಾ...... ಯಹಿ ಹೈ....  ಯಹಿ ಹೈ ಚಾವ್ ಧೂಪ್....... ".  

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

Saturday, February 15, 2020

ವೃದ್ಧಾಶ್ರಮ ೧೨


ಪ್ರಾತಃಕಾಲ ೪.೩೦ ಕ್ಕೆ  ಟ್ರೈನ್ ರಮೇಶನ ಊರು ದುರ್ಗಾಪುರಕ್ಕೆ ತಲುಪಿತು, ಸೂರ್ಯೋದಯ ಆಗಲು ಇನ್ನು ಸ್ವಲ್ಪ ಸಮಯ ಬಾಕಿ ಇತ್ತು, ರಾತ್ರಿಯ ಕತ್ತಲೆ ಇನ್ನೂ ಮುಸುಕು ಸರಿಸಿರಲಿಲ್ಲ.  

ಟ್ರೈನ್ ದುರ್ಗಾಪುರ ನಿಲ್ದಾಣದಲ್ಲಿ ಐದೇ ನಿಮಿಷ ನಿಲ್ಲುವ ಕಾರಣ ಎಲ್ಲರು ಗಡಿಬಿಡಿಯಿಂದ ಇಳಿಯುತ್ತಿದ್ದರು, ರಮೇಶ ಸಹ ಅವಸರ ಮಾಡಿ ತುಂಬಾ ಕಷ್ಟದಿಂದ ಅಮ್ಮನನ್ನು ಮೆಲ್ಲ ಮೆಲ್ಲನೇ  ಇಳಿಸಿದ, ಸುಮಾ ಅತೀಶನನ್ನು ಇಳಿಸಿ ಬೇಗ ಬೇಗ ಸಾಮಾನು ಇಳಿಸಿ ಕೆಳಗಿಟ್ಟಳು. 

ದುರ್ಗಾಪುರ ರೈಲ್ವೆ ನಿಲ್ದಾಣ ಚಿಕ್ಕ ನಿಲ್ದಾಣವಾಗಿದ್ದರಿಂದ ಬೆಳಿಗ್ಗೆಯ ಸಮಯ ಅಲ್ಲಿ ಹೆಚ್ಚು ಜನರಿರಲಿಲ್ಲ, ಎಲ್ಲರಿಂದ ನಂತರ  ಇಳಿದ ಕಾರಣ ಕೂಲಿಯವರು ಸಹ ಕಾಣುತ್ತಿರಲಿಲ್ಲ, ಬಹುಶಃ ಮೊದಲು ಇಳಿದವರೆಲ್ಲ ಕೂಲಿ ಮಾಡಿ ಅವಸರದಿಂದ  ಹೋಗಿಬಿಟ್ಟಿದ್ದರು.   

ರಮೇಶ ಅಮ್ಮನನ್ನು ಇಳಿಸಿ ಎರಡೇ ಹೆಜ್ಜೆ ಹಾಕಿರಬೇಕು ಅಮ್ಮ ಅಲ್ಲಿಯೇ ನಿಂತು ಬಿಟ್ಟರು, ಎಷ್ಟು ಪ್ರಯತ್ನ ಮಾಡಿದ್ದರೂ ಅವರಿಂದ ಮುಂದೆ ಹೆಜ್ಜೆ ಇಡಲಾಗಲಿಲ್ಲ, ಬಹುಶಃ ರಾತ್ರಿಯೆಲ್ಲ ರೈಲುಗಾಡಿಯ ಸೀಟಲ್ಲಿ ಮಲಗಿ ಅವರ ಜೀವ ಜಡವಾಗಿತ್ತು.  ರಮೇಶನಿಗೆ ಈಗ ಏನು ಮಾಡುವುದು,  ಹೇಗೆ ಇಲ್ಲಿಂದ ಹೋಗುವುದು ಎಂದು ಅರ್ಥನೇ ಆಗುತ್ತಿರಲಿಲ್ಲ. ಅಮ್ಮನನ್ನು ಹಿಡಿದು ನಿಂತ  ಚಿಂತಿತ  ರಮೇಶ ಸುಮಾಳಿಗೆ "ಸುಮಾ..... ನೀನು  ಸ್ಟೇಷನ್ ಮಾಸ್ಟರ್ ರೂಮಿಗೆ ಹೋಗಿ ಅವರ ಹತ್ತಿರ ವೀಲ್ ಚೇರ್ ಇದ್ದರೆ ಕೊಂಡು ಬಾ ಮತ್ತೆ ಅಲ್ಲಿ ಕೂಲಿ ಸಹ ಸಿಕ್ಕಿದರೆ ಅವನನ್ನು ಕರೆದುಕೊಂಡು ಬಾ" ಎಂದ. 

ಅವರು ಬಂದಿದ್ದ ಟ್ರೈನ್ ಹೊರಟಾಗಿತ್ತು, ಸ್ಟೇಷನಲ್ಲಿ ಅಲ್ಲಿ ಇಲ್ಲಿ ಒಂದೆರಡೇ ಜನ ಕಾಣುತ್ತಿದ್ದರು.  ಸುಮಾ ಅಲ್ಲಿದ್ದ ಒಂದು ಸೀಟಲ್ಲಿ ಆತೀಶನನ್ನು ಕುಳಿಸಿ, ಬ್ರಿಜ್ ಹತ್ತಿ ಬೇರೆ  ಪ್ಲಾಟ್ಫಾರ್ಮ್ ನಲ್ಲಿದ್ದ ಸ್ಟೇಷನ್ ಮಾಸ್ಟರ್ ರೂಮಿಗೆ ಹೋದಳು, ಅಲ್ಲಿ ಯಾರೂ ಇರಲಿಲ್ಲ, ಹೊರಗೆ ಬಂದು ಅವಳು ಆಚೆ ಈಚೆ ನೋಡುವಾಗ ಸ್ಟೇಷನ್ ಮಾಸ್ಟರ್ ಅಲ್ಲಿಂದ ಹೋಗುತ್ತಿದ್ದರು.

ಅವಳು ಅವರನ್ನು ನಿಲ್ಲಿಸಿ "ಸರ್, ಇಲ್ಲಿ ವೀಲ್ ಚೇರ್ ವ್ಯವಸ್ಥೆ ಇದೆಯಾ? ನಮ್ಮ ಅಮ್ಮನಿಗೆ ಪಕ್ಷವಾತ ಆಗಿದ್ದ ಕಾರಣ ಅವರಿಗೆ ಸರಿ ನಡೆಯಲಾಗುವುದಿಲ್ಲ, ಅದಕ್ಕೆ......."

ಅವಳ ಮಾತು ಕಡಿದು ಸ್ಟೇಷನ್ ಮಾಸ್ಟರ್ "ಇಲ್ಲಮ್ಮ, ನಾವು ಅರ್ಜಿ ಕೊಟ್ಟಿದ್ದೇವೆ, ಆದರೆ ಇನ್ನು ಸರಕಾರ ಅದರ ವ್ಯವಸ್ಥೆ ಏನು ಮಾಡಿ ಕೊಡಲಿಲ್ಲ , ಸಾರೀ".

ಸುಮಾ"ಒಹ್ !!!!, ಸರ್ ಇಲ್ಲಿ ಕೂಲಿಯವರು ಎಲ್ಲಿ ಸಿಗುತ್ತಾರೆ".

ಸ್ಟೇಷನ್ ಮಾಸ್ಟರ್ " ಕೂಲಿ ತುಂಬಾ ಇದ್ದಾರೆ, ನೀವು ಅಲ್ಲಿ ಟಿಕೆಟ್ ಕೌಂಟರ್ ಇದೆ ಅಲ್ಲಿಗೆ ಹೋಗಿ, ಅಲ್ಲಿ ಅವರ ಗುಂಪು ಇದೆ".

ಸುಮಾ ಅವರಿಗೆ "ಥ್ಯಾಂಕ್ಸ್ ಸರ್"ಎಂದು ಹೇಳಿ ಅಲ್ಲಿಂದ ಟಿಕೆಟ್ ಕೌಂಟರ್ ಬಂದಳು, ನಿಜವಾಗಿಯೂ ಅಲ್ಲಿ ತುಂಬಾ ಕೂಲಿಯವರು ಇದ್ದರು.

ಸುಮಾ ಆಚೆ ಈಚೆ ನೋಡುವಾಗ ಅವಳಿಗೆ ಅಲ್ಲಿ ಕೂಲಿಯವರು ಸಾಮಾನು ಹೊರೆಯುವ ಬಂಡಿ ಕಂಡು ಬಂತು, ಆಗ ಒಬ್ಬ ಕೂಲಿ ಅವಳಲ್ಲಿ ಬಂದು "ಹೇಳಿ ಮೇಡಂ".

ಅವಳು ಅವನಿಗೆ ಆ ಬಂಡಿ ತೋರಿಸಿ "ನೋಡಿ, ಈ ಬಂಡಿ ಸ್ವಲ್ಪ ಆ ಪ್ಲಾಟ್ಫಾರ್ಮ್ ಗೆ ತರಬಹುದ"?

ಅವನು "ಯಾಕೆ ಈ ಬಂಡಿ ಮೇಡಂ, ಇದು ಸಾಮಾನ್ಯ ಉಪಯೋಗಕ್ಕೆ ಅಲ್ಲ, ಈ ಬಂಡಿ ಕೇವಲ ಮಾಲು ಗಾಡಿಯಿಂದ ಬರುವ ಸಾಮಾನುಗೋಸ್ಕರ, ಇದಕ್ಕೆ ಸ್ಟೇಷನ ಮಾಸ್ಟರ್ ಪರ್ಮಿಷನ್ ಬೇಕು, ಆದರೆ ನೀವು ಚಿಂತಿಸಬೇಡಿ..... ನಾನಿದ್ದೇನಲ್ಲ ಎಲ್ಲ ಸಾಮಾನು ಎತ್ತಲಿಕ್ಕೆ, ಹೆಚ್ಚು ಸಾಮಾನಿದ್ದರೆ ಎರಡು ಕೂಲಿ ಮಾಡಿ".

ಸುಮಾ "ಹಾಗೇನಿಲ್ಲ, ನಮ್ಮ ಅಮ್ಮನಿಗೆ ನಡೆಯಲಿಕ್ಕೆ ಸರಿ  ಆಗುವುದಿಲ್ಲ, ಇಲ್ಲಿ ವೀಲ್ ಚೇರ್ ಸಹ ಇಲ್ಲ, ಅದಕ್ಕೆ ಅವರನ್ನು ಇದರಲ್ಲಿ ಕೂರಿಸಿ ರಿಕ್ಷಾ ಸ್ಟಾಂಡ್ ತನಕ ಬಿಟ್ಟರೆ.....".

ಕೂಲಿ "ಅದು ಆಗಲಿಕ್ಕಿಲ್ಲ ಮೇಡಂ, ಸ್ಟೇಷನ್ ಮಾಸ್ಟರ್ ನಮಗೆ ತಾಕಿದು ಮಾಡಿದ್ದಾರೆ, ಈ ಬಂಡಿ ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸಬಾರದೆಂದು".   

ಅದಕ್ಕೆ ಸುಮಾ "ನಾನು ಸ್ಟೇಷನ್ ಮಾಸ್ಟರ್ ಹತ್ತಿರ  ಹೋಗಿ ಪರ್ಮಿಷನ್ ತೆಕೊಳುತ್ತೇನೆ".

ಕೂಲಿ ಇವಳಿಂದ ಹಣ ಗಳಿಸುವ ಇದು ಒಳ್ಳೆ ಅವಕಾಶ ಎಂದು "ಬೇಡ ಮೇಡಂ, ಅವರೇನು ಪರ್ಮಿಷನ್ ಕೊಡಲಿಕ್ಕಿಲ್ಲ, ಮೇಲಿಂದ ಈ ಟ್ರೈನ್ ಹೋದ ನಂತರ ಅವರ ಡ್ಯೂಟಿ ಮುಗಿದು ಅವರು ಹೋಗಿ ಬಿಟ್ಟಿರಬಹುದು, ಬೇರೆ ಸ್ಟೇಷನ್ ಮಾಸ್ಟರ್ ನವರು ಬರುವುದಕ್ಕೆ ಇನ್ನೊಂದು ಗಂಟೆ  ಇದೆ,  ನೀವು  ಒಂದು ಸಾವಿರ ಕೊಟ್ಟರೆ ನಾನು ಇಂತದೊಂದು ಬೇರೆ ಬಂಡಿ ನನ್ನ ಜೊತೆಗಾರನತ್ತಿರ ಇದೆ, ನಿಮ್ಮ ಒಪ್ಪಿಗೆ ಇದ್ದರೆ ತರುತ್ತೇನೆ"

ಆಶ್ಚರ್ಯದಿಂದ ಸುಮಾ "ಒಂದು ಸಾವಿರನ!!!, ಸ್ಟೇಷನ್ ಮಾಸ್ಟರ್ ಈಗ ತಾನೇ ಇದ್ದರು, ಅವರೇ ನನ್ನನ್ನು ಇಲ್ಲಿ ಕಳಿಸಿದ್ದು, ಇಷ್ಟು ಬೇಗ ಹೋಗಿ ಆಯಿತಾ"? ಸುಮಾಳಿಗೆ ಕೂಲಿಯ ಹಕ್ಕಿನ ಹಣ ಕೊಡಲು ಯಾವುದೇ ಅಭ್ಯಂತರವಿರಲಿಲ್ಲ, ಆದರೆ ಈ ಕೂಲಿ ಹತ್ತು ಪಾಲು ಹೆಚ್ಚು ಹಣ ಕೇಳುವುದನ್ನು ನೋಡಿ ಅವಳಿಗೆ ಸ್ವಲ್ಪ ಕೋಪ ಸಹ ಬಂತು. 

ಈ ಜಗತ್ತಿನಲ್ಲಿ ವಿವಿಧ ವಿವಿಧ  ತರಹದ ಜನರಿದ್ದಾರೆ, ಅಲ್ಲಿ ಮುಂಬೈಯಲ್ಲಿ ರಮೇಶನವರಿಗೆ ಸಿಕ್ಕಿದ್ದ ಕೂಲಿ ಎಷ್ಟು ಪಾವನ ಹೃದಯದವನಾಗಿದ್ದ, ಆದರೆ ಇಲ್ಲಿ ಈ ಕೂಲಿ ಅವನಿಂದ ವಿಪರೀತ ಜನರ ಅಸಹಾಯಕತೆಯ ಲಾಭ ತೆಗೊಂಡು ಅವರಿಂದ ಹಣ ದೋಚುವ  ಕಪಟನಾಗಿದ್ದ, ಜನರ  ಅಸಹಾಯಕತೆಯ ಲಾಭವನ್ನು ಪಡೆದುಕೊಳ್ಳುವುದು ನಿಜಕ್ಕೂ ಬಹಳ ದೊಡ್ಡ ತಪ್ಪು ಹಾಗು ಇದು ನೈತಿಕತೆಗೆ ವಿರುದ್ಧವಾಗಿದೆ, ಯಾರಿಗೂ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಮಾಡಬೇಡಿ, ಆದರೆ  ಅವರ ಅಸಹಾಯಕತೆಯಿಂದ  ನಿಮ್ಮ ಸೌಲಭ್ಯ  ಪಡೆದುಕೊಳ್ಳಬೇಡಿ. 

ಕೂಲಿ "ಈ ಟ್ರೈನ್ ತೆರಳಿದ ನಂತರವೇ ಸ್ಟೇಷನ ಮಾಸ್ಟರ್  ಹೋಗಿ ಬಿಡುತ್ತಾರೆ ಮೇಡಂ, ಬೇರೆ ಸ್ಟೇಷನ ಮಾಸ್ಟರ್ ಡ್ಯೂಟಿಗೆ ಬರುವ ತನಕ ಏನಾದರು ತುರ್ತುಪರಿಸ್ಥತಿ ಒದಗಿದರೆ ಇಲ್ಲಿಯ ಟಿಕೆಟ್ ಕೌಂಟರಲ್ಲಿದ್ದವರು ನೋಡಿಕೊಳ್ಳುತ್ತಾರೆ, ಆದರೆ ಬೆಳಿಗ್ಗೆ ಹಾಗೇನು ಪರಿಸ್ಥಿತಿ ಒದಗುವುದಿಲ್ಲ ಮತ್ತೆ ಈ ಬಂಡಿ ತರುವುದರಲ್ಲಿ  ನನಗೇನು ಸಿಗುದಿಲ್ಲ ಮೇಡಂ, ನೀವು ಕಷ್ಟದಲ್ಲಿದ್ದೀರಿ ಎಂದು ಹೇಳಿದೆ ಅಷ್ಟೇ, ಆದರೆ ನನ್ನ ಜೊತೆಗಾರನಿಗೆ  ಬಂಡಿಯ ಹಣ ಕೊಡಬೇಕಲ್ಲ, ಬೇಕಾದರೆ ಹೇಳಿ ಬಂಡಿ ತರುತ್ತೇನೆ, ಇಲ್ಲಾದರೆ ನನಗೇನು".

ಅವನ ಮಾತು ಕೇಳಿ ಸುಮಾ "ಆದರೆ ಇಷ್ಟು ಹಣ, ಕೇವಲ ಅಲ್ಲಿಂದ ರಿಕ್ಷಾ ಸ್ಟಾಂಡ್ ತನಕ ಹೋಗಲು, ಇಷ್ಟು ಹಣ  ನಮ್ಮ ಹಳ್ಳಿಗೆ ಹೋಗಲು ಸಹ ಆಗುವುದಿಲ್ಲ, ನಾನು ಟಿಕೆಟ್ ಕೌಂಟರಲ್ಲಿ ಹೋಗಿ ಕೇಳಿ ನೋಡಲೇ"?

ಕೂಲಿ ಹಣ ಗಳಿಸುವ ಅವಸರ ಹೋಗುವುದನ್ನು ನೋಡಿ  "ನೋಡಿ ಮೇಡಂ, ಸುಮ್ಮನೆ  ಟೈಮ್ ವೇಸ್ಟ್ ಆಗುತ್ತದೆ, ಮತ್ತೆ ನನ್ನ ಜೊತೆಗಾರ ಹೋದರೆ ಬಂಡಿ ಸಹ ಸಿಗಲಿಕ್ಕಿಲ್ಲ, ಬೇಕಾದರೆ ಹೇಳಿ, ಇಲ್ಲಾದರೆ ನಾನು ಹೊರಟೆ".

ಸುಮಾ ಏನೂ ತೋಚದೆ ದಿಕ್ಕಿಲ್ಲದೆ "ಓ.ಕೆ, ನೀವು ಆ ಬಂಡಿ ತನ್ನಿ".

ಕೂಲಿ "ಈಗ ಬರುತ್ತೇನೆ ಮೇಡಂ" ಎಂದು ಕೆಲವು ನಿಮಿಷದಲ್ಲಿ ಎಲ್ಲಿಂದಲೋ ನಾಲ್ಕು ಚಕ್ರದ ಸಾಮಾನು ಹೊರೆಯುವ ಬಂಡಿ ತಂದ "ಬನ್ನಿ ಮೇಡಂ ಹೋಗುವ, ಎಲ್ಲಿಗೆ ಹೋಗಬೇಕು"  ಎಂದು ಕೇಳಿದ,  ಸುಮಾ ದಾರಿ ತೋರಿಸಲು ಮುಂದೆ ನಡೆದಳು,  ಅವನು ಸುಮಾಳ ಹಿಂದೆ ಹಿಂದೆ ಬಂಡಿ ಎಳೆಯುತ್ತ ಹೋದ.

ಅಲ್ಲಿ ರಮೇಶ ಎಷ್ಟು ಪ್ರಯತ್ನ ಮಾಡಿದರೂ ಅವನಿಂದ ಅಮ್ಮನನ್ನು ಒಂದು ಹೆಜ್ಜೆ ಸಹ ಸರಿಸಲಾಗಲಿಲ್ಲ, ಮೇಲಿಂದ ಸುಮಾ ಎಲ್ಲಿಗೆ ಹೋದಳು ಎಂಬ ಚಿಂತೆಯಲ್ಲಿಯೂ ಇದ್ದ, ಆತೀಶ ಕೂತುಕೊಂಡಲ್ಲಿಯೇ ಮಲಗಿದ್ದ, ಆಚೆ ಈಚೆ ಹೋಗುವರು ಅವನು ಅಮ್ಮನನ್ನು ಹಿಡಿದು ನಿಂತಿದ್ದನ್ನು ಕೇವಲ ಆಶ್ಚರ್ಯದಿಂದ ನೋಡಿ  ಅವರ ಪಾಡಿಗೆ ಹೋಗುತ್ತಿದ್ದರು, ಯಾರಿಗೂ ಅವನ ಸಹಾಯ ಮಾಡಬೇಕೆಂಬ ವಿಚಾರ ಬರಲಿಲ್ಲ, ರಮೇಶನಿಗೆ  ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ, ಅವನನ್ನು ನೋಡಿ ಅಮ್ಮನ ಕಣ್ಣೀರು ಹರಿಯುತ್ತಿತ್ತು, ಅಮ್ಮನ ಅಸಹಾಯಕತೆ ನೋಡಿ ಅವನ ಕಣ್ಣಿನಿಂದಲೂ ಕಣ್ಣೀರು ಹರಿಯಲಾರಂಭಿಸಿತು.

ಸ್ವಲ್ಪ ಹೊತ್ತಲ್ಲಿ ಅವನಿಗೆ ಸುಮಾ ಬರುವುದು  ಹಾಗು ಅವಳ ಹಿಂದೆ ಒಬ್ಬ ಕೂಲಿ ನಾಲ್ಕು ಚಕ್ರದ ಬಂಡಿ ತಳ್ಳಿ ಬರುವುದು ಕಂಡು ಬಂತು.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 11, 2020

ವೃದ್ಧಾಶ್ರಮ ೧೧


ರಮೇಶನ ಅಣ್ಣ ದಿರೇಶ   ಊರಲ್ಲಿಯೇ  ಒಂದು ಹೋಟೆಲಲ್ಲಿ ಕೆಲಸ ಮಾಡುತ್ತಿದ್ದ ಹಾಗು ಹೋಟೆಲ್  ಮನೆಯಿಂದ  ದೂರ ಇದ್ದ ಕಾರಣ ಅವನು ಹೊಟೇಲಲ್ಲಿಯೇ  ಇರುತ್ತಿದ್ದ, ಅವನ ಹೆಂಡತಿ ಮತ್ತು ಎರಡು ಮಕ್ಕಳು ಕುಂದಾಪುರದಲ್ಲಿ  ಅವಳ ಊರ ಮನೆಯಲ್ಲಿರುತ್ತಿದ್ದರು, ಅವರ ಖರ್ಚಿಗೆಲ್ಲ ಅವನು ಹಣ ಕಳಿಹಿಸುತ್ತಿದ್ದ ಹಾಗು ಯಾವಾಗಲೊಮ್ಮೆ ಅಲ್ಲಿ ಹೋಗಿ ಒಂದು ವಾರ ಇದ್ದು ಬರುತ್ತಿದ್ದ. ಅಮ್ಮ ಊರಲ್ಲಿರುವಾಗ ಅವನು ವಾರಕೊಮ್ಮೆ ಮನೆಗೆ ಬರುತ್ತಿದ್ದ ಆದರೆ ಅಮ್ಮ ಮುಂಬೈ ಹೋದ ನಂತರ  ಯಾವಾಗಲೊಮ್ಮೆ ಮನೆಗೆ  ಬಂದು  ಎರಡು ಮೂರು ದಿನ ಇದ್ದು ಹೋಗುತ್ತಿದ್ದ. ಅವನು ಎಲ್ಲಿಯೂ ಒಂದು ಸ್ಥಾನದಲ್ಲಿ ಹೆಚ್ಚು ಸಮಯ ಕೆಲಸ ಮಾಡುತ್ತಿರಲಿಲ್ಲ, ಸತತ ಕೆಲಸ ಬದಲಾಯಿಸುತ್ತಿರುತ್ತಿದ್ದ, ಸಂಬಳ ಸಹ ಅಷ್ಟೇನೂ ಇರಲಿಲ್ಲ ಅದಕ್ಕೆ  ಯಾವಾಗ ನೋಡಿದರು ಅವನು ಹಣದ ಬಿಕ್ಕಟ್ಟಿನಲ್ಲಿರುತ್ತಿದ್ದ. ಮೂರು ನಾಲ್ಕು ತಿಂಗಳಿಗೊಮ್ಮೆ ಅವನು ಹಣಕ್ಕಾಗಿ ರಮೇಶನ ಹಿಂದೆ  ಬೀಳುತ್ತಿದ್ದ ಹಾಗು ಹೇಗಾದರೂ ಅವನಿಂದ ಹಣ ಪಡೆಯುತ್ತಿದ್ದ ಹಾಗು ಇದು ಅವನ ರೂಢಿ ಆಗಿ ಹೋಗಿತ್ತು, ರಮೇಶ ಅವನಿಗೆ ಹಣ ಕೊಟ್ಟು ಕೊಟ್ಟು ಸೋತುಹೋಗಿದ, ಆದರೆ ಉಪಕಾರಬುದ್ಧಿಯುಳ್ಳ ರಮೇಶ ದಯೆ, ದಾಕ್ಷಿಣ್ಯಯಿಂದ ಅವನಿಗೆ ಅಂತು ಇಂತು ಹಣ ಕೊಟ್ಟು ಸಹಾಯ ಮಾಡುತ್ತಿದ್ದ. 

ಟ್ರೈನಲ್ಲಿ ಸುಮಾ ರಮೇಶನಿಗೆ "ಕೇಳಿತ, ಅಮ್ಮನನ್ನು ನೋಡಲು ಹೋಮ್ ನರ್ಸ್ ಬೇಕಲ್ಲವೇ"?

ರಮೇಶ "ಒಹ್!! ಹೌದು ನಾನು ಮರೆತೇ ಹೋಗಿದೆ" ಎಂದು ಅವನು ಅವನ ಅಣ್ಣ ದಿರೇಶನಿಗೆ ಮೊಬೈಲ್ನಿಂದ ಫೋನ್ ಮಾಡಿದ.

ಅಲ್ಲಿಂದ ದಿರೇಶ್ " ಹಲೋ"

ರಮೇಶ "ಎಲ್ಲಿದ್ದೀಯಾ"?

ದಿರೇಶ "ಇಲ್ಲೇ,... ಹೋಟೆಲಲ್ಲಿ ಹೇಳು".

ರಮೇಶ "ಅಮ್ಮನನ್ನು ಊರಿಗೆ ಕರೆದುಕೊಂಡು ಬರತ್ತಾ ಇದ್ದೇನೆ".

ದಿರೇಶ "ಹೌದ, ಯಾವಾಗ? ಹೇಗಿದ್ದಾರೆ ಅಮ್ಮ ಈಗ, ನೀನು ಯಾವಾಗ ಬಂದೆ"? ತನ್ನನೆ ಜಗತ್ತಲ್ಲಿರುವ ದಿರೇಶ ಅವನದ್ದೇ ಗುಂಗಿನಲ್ಲಿ ಕೆಲವು ಪ್ರಶ್ನೆ ಕೇಳಿದ.

ರಮೇಶ "ನಾನು ಬಂದು ಕೆಲವು  ದಿನ ಆಯಿತು, ಈಗ ನಾವು ಟ್ರೈನಲ್ಲಿ ಇದ್ದೇವೆ, ಅಮ್ಮನನ್ನು ಕರೆದುಕೊಂಡು ಬರತ್ತಾ ಇದ್ದೇವೆ, ನೀನೊಂದು ಕೆಲಸ ಮಾಡು, ಅಮ್ಮಗೋಸ್ಕರ ಒಂದು ಹೋಮ್ ನರ್ಸ್ ಹುಡುಕು, ನಾಳೆ ನಾವು ಊರಿಗೆ ತಲುಪುತ್ತೇವೆ".

ಅದಕ್ಕೆ ದಿರೇಶ "ಇಲ್ಲಿ ಒಂದು ಊರಿನಲ್ಲಿ ಒಂದು ಆಯುರ್ವೇದಿಕ್ ಆಸ್ಪತ್ರೆ ಇದೆಯಂತೆ, ತುಂಬಾ ಫೇಮಸ್, ಅಲ್ಲಿ ಅಮ್ಮನ ಹಾಗೆ ಕಾಯಿಲೆದವರೇ ಇರುವುದು, ಅಲ್ಲಿ ಕೆಲವು ಪಕ್ಷವಾತ ಆದ ರೋಗಿಗಳು ಕೆಲವು ದಿನ ಅಲ್ಲಿ ಚಿಕೆತ್ಸೆ ಪಡೆದು ಈಗ ಓಡ್ತಾ ಇದ್ದರಂತೆ" ದೊಡ್ಡ ದೊಡ್ಡ ಮಾತಾಡುವುದರಲ್ಲಿ ನಿಸ್ಸಿಮ ದಿರೇಶ  ರಮೇಶನಿಗೆ ಹೇಳಿದ.

ರಮೇಶ " ಯಾವ ಆಸ್ಪತ್ರೆ "?

ದಿರೇಶ "ಇಲ್ಲೇ ಸಮೀಪ ಇದೆ, ನೀವು ಬಂದ ನಂತರ ಅಮ್ಮನನ್ನು ಅಲ್ಲಿಗೆ ಕರೆದುಕೊಂಡು ಹೋಗುವ ಮತ್ತೆ ಅಲ್ಲಿಂದಲೇ ಹೋಮ್ ನರ್ಸ್ ನ ವ್ಯವಸ್ಥೆ ಮಾಡುವ".

ರಮೇಶ "ಓ. ಕೆ , ಆದರೆ ನೀನು ಬೇರೆ ಕಡೆ ಸಹ ಹೇಳಿ ಇಡು".

ದಿರೇಶ "ಅದೆಲ್ಲ ನೀನು ಟೆನ್ಶನ್ ಮಾಡಬೇಡ, ಅದರ ವ್ಯವಸ್ಥೆ ನಾನು ಮಾಡುತ್ತೇನೆ, ಆದರೆ ಅವರಿಗೆ ಸಂಬಳ ಎಷ್ಟು ಹೇಳುವುದು"?

ರಮೇಶ "ಸಂಬಳ.....ನೋಡು........ಎಷ್ಟು ಕೇಳುತ್ತಾರೆ, ಮತ್ತೆ ಅಲ್ಲಿ ನಮ್ಮ ಹಳ್ಳಿಯ ಮನೆಗೆ ಬರಬೇಕಾಗುತ್ತದೆಯಲ್ಲ , ಸ್ವಲ್ಪ ಹೆಚ್ಚು ಕೇಳಬಹುದು, ಕೇಳಿ ನೋಡು".
  
ದಿರೇಶ "ಓ. ಕೆ, ನಾನು ಎಲ್ಲ ವಿವರವಾಗಿ ಕೇಳಿ ನಾಳೆ ಮನೆಗೆ ಬರುತ್ತೇನೆ"

ರಮೇಶ "ಓ. ಕೆ, ಬೈ".

ದಿರೇಶ "ಓ.ಕೆ" ಎಂದು ಫೋನ್ ಇಟ್ಟ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

Monday, February 10, 2020

ವೃದ್ಧಾಶ್ರಮ ೧೦

ಮಾರನೇ ದಿನ ಬೆಳಿಗ್ಗೆ ಊರಿಗೆ ಹೊರಡಲು ಸುಮಾ ಮತ್ತು ರಮೇಶ ಅಮ್ಮನ ಸ್ನಾನ ಮುಗಿಸಿ ಅವರಿಗೆ ಡೈಪರ್ ಧರಿಸಲು ಹೋದಾಗ ಅಮ್ಮ ಆಶ್ಚರ್ಯದಿಂದ "ಇದೇನು"? 

ರಮೇಶ "ಅಮ್ಮ ಪ್ರಯಾಣ ಮಾಡುವಾಗ ನಿಮಗೆ ಮಲ ಮೂತ್ರ ಬಂದರೆ, ಅಲ್ಲಿ ಟ್ರೈನಲ್ಲಿ ನಿಮಗೆ ಬೆಡ್ ಪ್ಯಾನ್ ಕೊಡಲು ಸಾಧ್ಯವಿಲ್ಲವಲ್ಲ, ಅದಕ್ಕೆ ಈ ಡೈಪರ್  ಧರಿಸಿದರೆ ನಿಮಗೆ ಟೆನ್ಶನ್ ಫ್ರೀ ಇರಬಹುದು".

ಅದಕ್ಕೆ ಅಮ್ಮ "ಶಿ ... ಅದಕ್ಕೆ ಮಾಡಿ ನಂತರ ಆ ಕೊಳಕಲ್ಲಿ ಕೂತು ಕೊಳ್ಳುವುದು ಹೇಗೆ, ನನ್ನಿಂದ ಆಗದು" ಎಂದು ತೊದಲುತ್ತಾ ಹೇಳಿದರು.

ರಮೇಶ "ಅರೆ...... ಅಮ್ಮ, ಏನಾಗುವುಲ್ಲ ನಾಳೆ ಬೆಳಿಗ್ಗೆ ತನಕ ಅಷ್ಟೇ, ಊರ ಮನೆ ಮುಟ್ಟಿದ ನಂತರ ತೆಗೆದು ಬಿಡುತ್ತೇವೆ, ಆ ತನಕ ಪ್ಲೀಸ್ ಧರಿಸಿ"  ಎಂದು ಅಮ್ಮನನ್ನು ಒತ್ತಾಯಿಸಿದ.

ರಮೇಶ ಮತ್ತು ಸುಮಾಳ ಒತ್ತಾಯಕ್ಕೆ ಅಮ್ಮನಿಗೆ  ತುಂಬಾ ಕಷ್ಟದಿಂದ ಆ ಡೈಪರ್ ಧರಿಸಲಾಯಿತು.

ಅಮ್ಮನಿಗೆ ರೆಡಿ ಮಾಡಿಸಿದ  ನಂತರ ಸುಮಾ ಅತೀಶನನ್ನು ಸ್ನಾನ ಮಾಡಿಸಿ ರೆಡಿ ಮಾಡಿದಳು ಹಾಗು ಸ್ವತಃ ಸ್ನಾನ ಮಾಡಲು ಹೋದಳು.

ರಮೇಶ ಸಾಮಾನಿನ ಬ್ಯಾಗ್ ಎಲ್ಲ ಸಿದ್ಧ ಮಾಡಿದ ಹಾಗು ಸ್ವತಃ ತಯಾರಾದ.

ಎಲ್ಲರು ತಯಾರಾದ ನಂತರ ಅಮ್ಮನನ್ನು ತುಂಬಾ ಕಷ್ಟದಿಂದ ಲಿಫ್ಟ್ ನಿಂದ  ಗ್ರೌಂಡ್ ಫ್ಲೋರ್ ತನಕ ಕರೆದು ಕೊಂಡು ಬಂದರು, ರಮೇಶ ಮೊದಲೇ ಕಾರ್ ಹೇಳಿ ಇಟ್ಟಿದ, ಅಮ್ಮನನ್ನು ಕಾರಲ್ಲಿ ಕೂರಿಸಲು ಸಹ ರಮೇಶ ಮತ್ತು ಸುಮಾಳಿಗೆ ತುಂಬಾ ಕಷ್ಟವಾಯಿತು, ಹೇಗೋ ಎಲ್ಲ ನಿಭಾಯಿಸಿ ಕಾರ್ ರೈಲ್ವೆ ಸ್ಟೇಷನ್ ಗೆ ಹೊರಡಿತು. 

ಸ್ಟೇಷನ್ ತಲುಪಿದ ನಂತರ ಅಮ್ಮನನ್ನು ಕಾರಿನಿಂದ  ಇಳಿಸಿ ಒಬ್ಬ ಕೂಲಿಯ ಸಹಾಯದಿಂದ ಅಮ್ಮನನ್ನು ಪ್ಲಾಟ್ಫಾರ್ಮ್ ಕರೆದು ಕೊಂಡು ಬರುವ ತನಕ ರಮೇಶ ಮತ್ತು ಸುಮಾಳಿಗೆ ಸಾಕು ಸಾಕಾಯಿತು.

ಊರಿಗೆ ಹೋಗುವ ಟ್ರೈನ್ ಬಂದು ನಿಲ್ಲಿದ ಕ್ಷಣ ಜನರೆಲ್ಲಾ ಗಡಿಬಿಡಿಯಿಂದ ಟ್ರೈನ್ ಹತ್ತಲು ಶುರು ಮಾಡಿದರು, ಎಲ್ಲರೂ ಊರಿಗೆ ಹೋಗುವವರು ಸ್ವಾಭಾವಿಕವಾಗಿ ಅವರತ್ತಿರ ಸಾಮಾನು ಸಹ ತುಂಬಾ ಇತ್ತು. ರಮೇಶ ಮತ್ತು ಸುಮಾ ಎಲ್ಲರು ಹತ್ತುವ ತನಕ ಕಾದು ನಂತರ ನಿಧಾನವಾಗಿ ಅಮ್ಮನನ್ನು ಹತ್ತಿಸಿ ಅವರಿಗೆ ರಮೇಶ್ ಮೀಸಲಾತಿ ಮಾಡಿದ ಸೀಟಲ್ಲಿ ಕೂರಿಸಿದ. 

ಈ ಎಲ್ಲ ಪ್ರಕ್ರಿಯೆಯಲ್ಲಿ ಆ ಕೂಲಿ ಅವರ ತುಂಬಾ ಸಹಾಯ ಮಾಡಿದ ಹಾಗು ಅವರ ಸಾಮಾನುಗಳನ್ನು ಸರಿಯಾಗಿ ತಂದು ಇಟ್ಟಿದ. ರಮೇಶ ಮತ್ತು ಸುಮಾಳಿಗೆ ಆ ಸಮಯ ಆ ಕೂಲಿ ದೇವರಂತೆ ಕಂಡು ಬಂದ ಹಾಗು ಖುಷಿಯಿಂದ ರಮೇಶ ಅವನಿಗೆ ೫೦೦ ರೂಪಾಯಿ ಕೊಟ್ಟು ಅವನಿಗೆ ಧನ್ಯವಾದ ಸಲ್ಲಿಸಿದ. 

ನಮ್ಮ ಕಷ್ಟದಲ್ಲಿ ಅಕಸ್ಮಾತ್ ಯಾರಾದರೂ ನಮಗೆ  ಸಹಾಯ ಮಾಡಲು ಬಂದಾಗ, ಆ ಕ್ಷಣದಲ್ಲಿ ನಾವು ಅವರಲ್ಲಿ ದೇವರನ್ನು ನೋಡುತ್ತೇವೆ ಹಾಗು  ತೊಂದರೆಯಲ್ಲಿರುವ ವ್ಯಕ್ತಿಗೆ ನಾವು ಸಹಾಯ ಮಾಡಿದಾಗಲೆಲ್ಲಾ, ಆ ವ್ಯಕ್ತಿಗೆ ನಾವು ಆ ಕ್ಷಣದಲ್ಲಿ ಆತನ ದೇವರಾಗುತ್ತೇವೆ ಹಾಗೆಯೇ  ನಮ್ಮ ಪ್ರತಿ ಸೌಹಾರ್ದತೆ ತೋರಿಸುವ ವ್ಯಕ್ತಿಯಲ್ಲಿ ನಮಗೆ ದೇವರು ಕಂಡು ಬರುತ್ತಾನೆ, ಬಹುಶಃ ಅದಕ್ಕೆ ಪ್ರೀತಿ ದೇವರ ಮತ್ತೊಂದು ರೂಪ ಎಂದು ಹೇಳಲಾಗುತ್ತದೆ.

ಕೂಲಿ ಹೋದ ನಂತರ ಎಲ್ಲರು ತನ್ನ ತನ್ನ ಸೀಟಲ್ಲಿ ಕುಳಿತುಕೊಂಡರು. 

ಅಮ್ಮ ಪಡುತ್ತಿರುವ ಕಷ್ಟ ಹಾಗು ಅಮ್ಮನಿಗೋಸ್ಕರ ರಮೇಶ ಪಡುತ್ತಿರುವ ಕಷ್ಟ ನೋಡಿ ಯಾಕೋ ಕಿಟಕಿಯ ಬದಿಯಲ್ಲಿ ಕುಳಿತ ಸುಮಾಳ ಕಣ್ಣಿಂದ ಕಣ್ಣೀರು ಹರಿದು ಬಿತ್ತು, ಎದುರು ಸೀಟಲ್ಲಿ ಸುಖದಿಂದ ಮಲಗಿದ ಅಮ್ಮನನ್ನು ನೋಡಿ ರಮೇಶ ಒಂದು ಶಾಂತಿಯ ನಿಟ್ಟುಸಿರು ಬಿಟ್ಟ. 

ಕೆಲವೇ ನಿಮಿಷದ ನಂತರ ಟ್ರೈನ್ ಊರಿಗೆ ಹೊರಟಿತು.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Sunday, February 9, 2020

ವೃದ್ಧಾಶ್ರಮ ೯

ಅಮ್ಮನ  ಮಲ ಮೂತ್ರಕ್ಕೆಲ್ಲ ಹಾಸಿಗೆಯಲ್ಲಿಯೇ ಬೆಡ್ ಪ್ಯಾನ್  ಕೊಡಬೇಕಾಗುತ್ತಿತ್ತು, ರಮೇಶ ಮತ್ತು ಸುಮಾ ಎಷ್ಟು ಪ್ರಯತ್ನ ಮಾಡಿದ್ದರು ಶೌಚಾಲಯ ಹೋಗುವಷ್ಟು ಅವರ ಶರೀರ ಜಡವಾಗುತ್ತಿತ್ತು, ನಿಂತಲ್ಲಿಯೇ  ನಿಲ್ಲುತ್ತಿದ್ದರು ಹಾಗು ಉದ್ದ ದಪ್ಪ ಇದ್ದ ಅಮ್ಮನ ಭಾರ ಅವರಿಂದ ನಿಯಂತ್ರಿಸಲಾಗುತ್ತಿರಲಿಲ್ಲ. ಅಮ್ಮ ಮಲ ಮೂತ್ರಕ್ಕೆ ಹಾಸಿಗೆಯಿಂದಲೇ ಕರೆಯುತ್ತಿದ್ದರು, ನಂತರ  ರಮೇಶ ಅಲ್ಲದೆ  ಸುಮಾ  ಅವರಿಗೆ ಬೆಡ್ ಪ್ಯಾನ್ ಇಟ್ಟು ಮಲ ಮೂತ್ರ ಮಾಡಿಸಿ ಸ್ವಚ್ಛ ಮಾಡುತ್ತಿದ್ದರು.  

ಒಳ್ಳೆ ಸೌಖ್ಯ ಇದ್ದವರು ಅಮ್ಮ ಈಗ ಹೇಗೆ ವೇದನೆಯಿಂದ ಹೊರಳಾಡುತ್ತಿದ್ದಾರೆ, ಅಮ್ಮನನ್ನು  ಈಗ ಈ ಸ್ಥಿತಿಯಲ್ಲಿ ನೋಡಿ ರಮೇಶನಿಗೆ ದುಃಖ ಉಕ್ಕಿ ಬರುತಿತ್ತು, ಜನ್ಮ ನೀಡಿ ಸಾಕಿದ ಅಮ್ಮನಿಗೆ ಇಂದು ಹೀಗೆ  ನರಳುವುದನ್ನು  ನೋಡಿ ಅವನ ಕಣ್ಣೀರು ನಿಲ್ಲುತ್ತಿರಲಿಲ್ಲ, ಒಂದೊಂದು ಸಲ ಅವನಿಗೆ ವಿದೇಶದ ಕೆಲಸ ಬಿಟ್ಟು ಬಿಡಬೇಕೆಂದು ಅನಿಸುತ್ತಿತ್ತು, ಆದರೆ ಮುಂದಿನ ಭವಿಷ್ಯದ ಬಗ್ಗೆ ವಿಚಾರ ಮಾಡುವಾಗ ಅವನ ತೀರ್ಮಾನ ಬದಲಾಗುತ್ತಿತ್ತು, ರಮೇಶ ಈಗ ತಾನೇ ಸ್ವಲ್ಪ ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡಿದ್ದ, ಅಷ್ಟೇನು ಹಣಕಾಸಿನ ಉಳಿತಾಯ ಸಹ ಇರಲಿಲ್ಲ ಅವನ ಹತ್ತಿರ, ಸ್ವತಃ ಮನೆ ಸಹ ಇರಲಿಲ್ಲ, ಇದೆಲ್ಲ ಯೋಚಿಸಿದಾಗ ಅವನಿಗೆ ವಿದೇಶದ  ಕೆಲಸ ಅವನ ಮುಂದಿನ ಜೀವನಕ್ಕೆ ಎಷ್ಟು ಮಹತ್ವಪೂರ್ಣವೆಂದು ತಿಳಿಯುತ್ತಿತ್ತು, ಈಗ ಅಸಹಾಯಕನಾದ ಅವನಿಗೆ ಅಮ್ಮನನ್ನು ಊರಿಗೆ ಕರೆದೆಕೊಂಡು ಹೋಗದೆ ಇತರ ಯಾವುದೇ ದಾರಿ ಕಾಣುತ್ತಿರಲಿಲ್ಲ. 

ಮಾನವ ಜೀವನವನ್ನು ಸೃಷ್ಟಿಸಲು ದೇವರು ಮಹಿಳೆಯನ್ನು ಸೃಷ್ಟಿಸಿದನು, ಮಹಿಳೆ ತನ್ನ ಶಕ್ತಿಯನ್ನು ಜೀವವನ್ನು ಸೃಷ್ಟಿಸಲು ಬಳಸಿದಾಗ ಅವಳನ್ನು ತಾಯಿ ಎಂದು ಕರೆಯಲಾಯಿತು, ಈ ಜಗತ್ತಿನಲ್ಲಿ ಅತ್ಯಂತ ಪವಿತ್ರ ಮತ್ತು ಸಹಾನುಭೂತಿಯ ಅಸ್ತಿತ್ವ ಅಂದರೆ ತಾಯಿಯೇ. 

ಈಗ ಟ್ರೈನ್ನಲ್ಲಿ ಪ್ರಯಾಣ ಮಾಡುವಾಗ ಅಮ್ಮನ ಮಲ ಮೂತ್ರಕ್ಕೆ ಏನು ಮಾಡುವುದೆಂದು ಸುಮಾಳಿಗೆ ಅರ್ಥವಾಗುತ್ತಿರಲಿಲ್ಲ, ಆಗ ಅಕಸ್ಮಾತ್ ಅವಳಿಗೆ ಮಕ್ಕಳು ಉಪಯೋಗಿಸುವ ಡೈಪರ್ ಬಗ್ಗೆ ಹೊಳೆಯಿತು.

ಸುಮಾ ರಮೇಶನನ್ನು ಕರೆದು "ಕೇಳಿತಾ, ಈಗ ಟ್ರೈನಲ್ಲಿ ಪ್ರಯಾಣ ಮಾಡುವಾಗ ಅಮ್ಮನ ಮಲ ಮೂತ್ರಕ್ಕೆ ಸಮಸ್ಯೆ ಆಗುತ್ತದೆ, ಅದಕ್ಕೆ ನಾನೇನು ಹೇಳುವುದು ನೀವು ಮೆಡಿಕಲ್ ಹೋಗಿ ಹಿರಿಯರು ಬಳಸುವ ಡೈಪರ್ ಸಿಗುತ್ತದೆಯೇ ನೋಡಿ, ಸಿಕ್ಕಿದರೆ ಒಂದು ಪ್ಯಾಕೆಟ್ ತೆಗೆದುಕೊಂಡು ಬನ್ನಿ, ಇದು ಸಿಕ್ಕಿದರೆ ಅಮ್ಮನಿಗೆ ಪ್ರಯಾಣಿಸುವಾಗ ಮಲ ಮೂತ್ರದ ಸಮಸ್ಯೆ ಆಗುವುದಿಲ್ಲ. 

ರಮೇಶ "ವಾವ್, ಇದು ಒಳ್ಳೆ ಐಡಿಯಾ, ಡೈಪರ್ ಸಿಕ್ಕಿದರೆ ನಮಗೆ ಅಮ್ಮನ ಮಲಮೂತ್ರದ ಟೆನ್ಶನ್ ಇರುವುದಿಲ್ಲ, ನಾನು ಈಗ ಮೆಡಿಕಲ್ ಹೋಗಿ ಬರುತ್ತೇನೆ" ಎಂದು ರಮೇಶ ಮೆಡಿಕಲ್ ಹೋಗಲು ಸಿದ್ಧನಾದ.

ಮಾರ್ಕೆಟಲ್ಲಿ ತುಂಬಾ ಸಮಯ ಅಲೆದ ನಂತರ ಹಾಗು ಕೆಲವು ಮೆಡಿಕಲಲ್ಲಿ ವಿಚಾರಿಸಿದ ನಂತರ ಅವನಿಗೆ ಒಂದು ಮೆಡಿಕಲಲ್ಲಿ ಹಿರಿಯರು ಬಳಸುವ ದೊಡ್ಡ ಡೈಪರ್ ಪ್ಯಾಕೆಟ್ ಸಿಕ್ಕಿತು, ಕೂಡಲೇ ಅವನು ಅದನ್ನು ಖರೀದಿ ಮಾಡಿಕೊಂಡು ಬಂದ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Saturday, February 8, 2020

ವೃದ್ಧಾಶ್ರಮ ೮

ಆಶಾ ಚಿಕ್ಕಮ್ಮನಿಗೆ ಫೋನ್ ಮಾಡಿದ ನಂತರ ಚಿಂತಿತನಾದ ರಮೇಶ ಸುಮಾಳ ಬಳಿ ಬಂದು ಅವಳಿಗೆ ಎಲ್ಲ ಮಾತು ತಿಳಿಸಿದ. 

ಈ ಕಳವಳದಲ್ಲಿ ರಮೇಶ  "ನರ್ಸ್ ಇಟ್ಟ ಮೇಲೆ ಅವರಿಗೇನು ಅಷ್ಟು ಕಷ್ಟ ಯಾರಿಗೊತ್ತು?  ನನಗನಿಸುವುದಿಲ್ಲ ನರ್ಸ್ ಇಟ್ಟ ಮೇಲೆ ಅವರಿಗೆ ಅಮ್ಮನ ಕೆಲಸ ಮಾಡಬೇಕಾಗಬಹುದೆಂದು, ಕೇವಲ ಅಡುಗೆ, ಅದರಲ್ಲಿಯೂ ಏನಷ್ಟು? ಬಹುಶಃ ಅಮ್ಮ ಊರಿಗೆ ಬರುಹುದೇ ಅವರಿಗೆ ಇಷ್ಟವಿಲ್ಲ ಕಾಣುತ್ತದೆ, ಈಗ ವಿಜಯ ಮಾಮ ಇಲ್ಲವೇ ಅಲ್ಲಿ, ವಿಜಯ ಮಾಮ ಇಡೀ ದಿನ ಎಷ್ಟು ಬೊಬ್ಬೆ ಹಾಕುತ್ತಿರುತ್ತಾರೆ,  ಎಷ್ಟು ಅವರಿಗೆ ಉಪದ್ರ ಕೊಡುತ್ತಾರೆ, ಆದರೂ ಅವರ ಎಲ್ಲ ಕೆಲಸ ಮಾಡುತ್ತಾರೆ, ಅಮ್ಮ ಅಂದರೆ ಅಷ್ಟೇನು ಸಸಾರ, ನಮ್ಮ ಪ್ರಾಬ್ಲಮ್ ಇದೆಯೆಂದು ನಾವು ಹೇಳುವುದಲ್ಲವೇ, ಇಲ್ಲಾದರೆ ಯಾರು ಅವರಿಗೆ ಕಷ್ಟ ಕೊಡುತ್ತಾರೆ, ಸ್ವಲ್ಪ ಸಹ ಕರುಣೆ ಇಲ್ಲವೇ" ಎಂದು ಸುಮಾಳೊಂದಿಗೆ ಗೊಣಗಿದ.

ರಮೇಶನ ಮಾತು ಕೇಳಿ ಸುಮಾ "ನೀವು ಶಾಂತವಾಗಿರಿ, ವಿಜಯ ಮಾಮ ಮೊದಲಿನಿಂದ ಅವರೊಟ್ಟಿಗೆ ಇದ್ದವರು, ಆದರಿಂದ  ಅವರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ,  ಮೇಲಿಂದ ಅವರತ್ತಿರ ಅವರನ್ನು ನೋಡಿಕೊಳ್ಳದೆ ಬೇರೆ ಉಪಾಯ ಸಹ ಇಲ್ಲ, ವಿಜಯ ಮಾಮನ ಹೆಂಡತಿ ಮಕ್ಕಳು ಅವರಿಂದ ದೂರವಾಗಿದ್ದಾರೆ, ಅವರನ್ನು ನೋಡಲು ಸಹ ಬರುವುದಿಲ್ಲ, ಅಮ್ಮ ಅಂದರೆ ಹೇಗೆ, ಮದುವೆ ಆದ ನಂತರ ಮುಂಬೈಯಲ್ಲಿ ಇದ್ದವರು, ಅಮ್ಮನ ಮೇಲೆ ಅವರಿಗೆ ಅಷ್ಟೇನೂ ಅಟ್ಯಾಚ್ಮೆಂಟ್ ಸಹ ಇಲ್ಲದಿರಬಹುದು, ಮೇಲಿಂದ  ಅವರ ಮಕ್ಕಳಿರುವಾಗ ನಾವು ಯಾಕೆ ಮಾಡಬೇಕು ಎಂಬ ವಿಚಾರ ಸಹ  ಅವರ ಮನಸ್ಸಲ್ಲಿರಬೇಕು, ಈಗ ಅವರಿಗೆ ಏನೂ ಹೇಳುವುದು ಸರಿಯಲ್ಲ, ಅವರ ಮನಸ್ಥಿತಿಯ ಮೇಲೆ ನಮ್ಮ ನಿಯಂತ್ರಣವಿಲ್ಲ, ನೀವು ಹೆಚ್ಚು ವಿಚಾರ ಮಾಡಬೇಡಿ,  ಊರಿನ ಟ್ರೈನ್ ಟಿಕೆಟ್ ಮಾಡಿ ಬಿಡಿ, ಬಸ್ಸಲ್ಲಿ ಅಮ್ಮನಿಗೆ ಆಗಲಿಕ್ಕಿಲ್ಲ ಮೇಲಿಂದ ಬಸ್ಸಲ್ಲಿ ಅವರನ್ನು ಕರೆದುಕೊಂಡೋಗುವುದು ಸಹ ತುಂಬಾ ಕಷ್ಟ, ಅದಕ್ಕೆ ಟ್ರೈನ್ ಟಿಕೆಟ್ ಮಾಡಿ,  ಹೆಚ್ಚು ವಿಚಾರ ಮಾಡಿ ಸಹ ಪ್ರಯೋಜನವಿಲ್ಲ,  ದೇವರು ಒಳ್ಳೆಯದ್ದೇ ಮಾಡುತ್ತಾರೆ ".

ಸುಮಾಳ ಇಷ್ಟೆಲ್ಲ ಮಾತು ಕೇಳಿ ಸಹ  ಈಗಲೂ ಸ್ವಲ್ಪ ಸಂದಿಗ್ಧತೆದಲ್ಲಿದ್ದ ರಮೇಶ, ಆದರೆ ಅದೇ ಸಮಯದಲ್ಲಿ ಅವನ ಮನಸ್ಸಲ್ಲಿ ಕೆಲವು ದಾರ್ಶನಿಕ ವಿಚಾರಗಳು ಬಂತು.

ಜೀವನದ ಸಂಕಷ್ಟಗಳು ನಮ್ಮನ್ನು ಇನ್ನು ಸಶಕ್ತ ಮಾಡುತ್ತವೆ, ಒಂದು ವೇಳೆ ಜೀವನದಲ್ಲಿ ಕೇವಲ ಸುಖ ಇದ್ದರೆ ಜೀವನ ಸಹ ನೀರಸವಾಗುವುದು, ಆದ್ದರಿಂದ ವ್ಯಕ್ತಿಗೆ ಬಂದ ಕಷ್ಟಗಳನ್ನು  ಧೈರ್ಯದಿಂದ ಸ್ವೀಕರಿಸಿ ಅದನ್ನು ಎದುರಿಸಬೇಕು. ಒಂದು  ವೇಳೆ  ಜೀವನದಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೆ,  ಜೀವನದ  ಲೌಕಿಕತೆಯನ್ನು  ಸಹ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಈ ಕಠಿಣ ಸಮಯದಲ್ಲಿಯೇ ಯಾರು ನಮ್ಮವರು ಯಾರು ಪರಕೀಯರು ಎಂದು ನಮಗೆ ತಿಳಿಯುವುದು.

ಈಯೆಲ್ಲ ಉತ್ತಮ ವಿಚಾರದಿಂದ ರಮೇಶನ ಮನಸ್ಸಲ್ಲಿ ಒಂದು ಹೊಸ ಭರವಸೆಯ  ನಿರ್ಮಾಣವಾಯಿತು ಹಾಗು ಮನಸ್ಸು ಗಟ್ಟಿ ಮಾಡಿ  ರಮೇಶ ಊರಿಗೆ ಹೋಗಲು ಎಲ್ಲರದ್ದು ತತ್ಕಾಲಲ್ಲಿ ಆನ್ಲೈನ್ ಟ್ರೈನ್ ಟಿಕೆಟ್ ಬುಕ್ ಮಾಡಿದ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ. ಶಿರ್ವ
ಚಿತ್ರ ಕೃಪೆ : ಗೂಗಲ್

Thursday, February 6, 2020

ವೃದ್ಧಾಶ್ರಮ ೭


ರಮೇಶ ಊರಿಗೆ ಆಶಾ ಚಿಕ್ಕಮ್ಮನವರಿಗೆ ಫೋನ್ ಮಾಡಿದ. 

ಸುಖ ಕಷ್ಟ, ಅಮ್ಮನ ಬಗ್ಗೆ ಹಾಗು ಸುನೀತಾಳ ನಿರ್ಧಾರದ ಬಗ್ಗೆ ಮಾತಾಡಿದ ನಂತರ ರಮೇಶ ಅಮ್ಮನನ್ನು ಊರಿಗೆ ಕರೆದುಕೊಂಡು ಬರುವ ವಿಷಯ ಅವರಿಗೆ ತಿಳಿಸಿದ, ಅದನ್ನು ಕೇಳಿ ಆಶಾ ಚಿಕ್ಕಮ್ಮ ರಮೇಶನ ಮೇಲೆ ಸಿಡಿದು ಬಿದ್ದರು "ಇಲ್ಲಿ ಕರೆದುಕೊಂಡು ಬಂದರೆ ಅವರನ್ನು ನೋಡುವುದು ಯಾರು? ಮೊದಲೇ ಇಲ್ಲಿ ವಿಜಯನ ಕೆಲಸದಿಂದ ನಮಗೆ ಪುರುಸತ್ತಿಲ್ಲ, ಇನ್ನು ಅವರನ್ನು ಇಲ್ಲಿ ಬಿಟ್ಟರೆ ನಾನೇನು ಸಾಯುವುದ? ಇವರೆಲ್ಲರ ಚಾಕರಿ ಮಾಡುವುದೇ ನನ್ನ ಕೆಲಸನ? ನಮಗೆ ಬೇರೆ ಕೆಲಸವಿಲ್ಲವ?  ಊಷಕ್ಕನವರು ಕೇವಲ ಹೊರಗಿನ ಕೆಲಸದಲ್ಲಿರುತ್ತಾರೆ, ನಾನು ಅಡುಗೆ ಮಾಡುವುದ? ಮನೆಯ ಕೆಲಸ ಮಾಡುವುದ? ಇವರ ಚಾಕರಿ ಮಾಡುವುದ ?, ನೋಡು ರಮೇಶ ನಿನಗೆ ಮೊದಲೇ ಹೇಳಿದ್ದೇವೆ ಇಲ್ಲಿ ಅವರನ್ನು ನೋಡಲು ಸಾಧ್ಯವಿಲ್ಲವೆಂದು ". 

ಇದನೆಲ್ಲ ಕೇಳಿ ರಮೇಶ "ಅಲ್ಲ ಚಿಕ್ಕಮ್ಮ..... ನೀವು ಅವರದ್ದು ಚಾಕರಿ ಮಾಡುವುದು ಬೇಡ, ನಾನು ನಿಮಗೆ ಹೇಳುವುದು ಸಹ ಇಲ್ಲ ಅವರದ್ದು ಚಾಕರಿ ಮಾಡಲಿಕ್ಕೆ, ಅದಕ್ಕಾಗಿ ನಾನು ಹೋಮ್  ನರ್ಸ್ ಇಡುತ್ತೇನೆ, ಅವಳೆಲ್ಲ ಅವರ ಕೆಲಸ ಮಾಡುತ್ತಲೇ,  ಕೇವಲ ಅವರ ಊಟ ತಿಂಡಿಯ ಸಮಸ್ಯೆ, ಅದು ನೀವೇನು ಅಡುಗೆ ಮಾಡುತ್ತಿರೋ ಅದೇ ಅವರಿಗೆ ಬಡಿಸಿ ಅಷ್ಟೇ, ಅವರ ಖರ್ಚು ಎಲ್ಲ ಪ್ರತಿ ತಿಂಗಳು ನಾನು ಕಳುಹಿಸುತ್ತೇನೆ". 

ಆಶಾ ಚಿಕ್ಕಮ್ಮ "ನರ್ಸ್ ಇದ್ದರು ನಮಗೆ ಆಗುವುದು ಕೆಲಸ ಆಗುತ್ತದೆ, ಹೇಳುವುದು ಸುಲಭ, ಆದರೆ ಮಾಡುವುದು ಅಷ್ಟು ಸುಲಭವಿಲ್ಲ, ಅಷ್ಟು ಸುಲಭವಾಗಿದ್ದರೆ ಸ್ವತಃ ಮಗಳಾಗಿ ಸುನೀತಾ ಯಾಕೆ ಅವಳಿಂದ ಆಗುವುದಿಲ್ಲ ಅಂತ ಹೇಳುತ್ತಾಳೆ ". 

ರಮೇಶ ಶಾಂತಿಯಿಂದ "ಚಿಕ್ಕಮ್ಮ ಪ್ಲೀಸ್ ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ, ನಾನು ಇವರ ವಿದೇಶದ ವೀಸಾ ಸಹ ಮಾಡಿ ಆಗಿದೆ, ಆತೀಶನ ಸ್ಕೂಲಲ್ಲಿ ಅಡ್ಮಿಶನ್ ಸಹ ಆಗಿದೆ, ಇಷ್ಟೊಂದು ಉಪಕಾರ ಮಾಡಿ ಪ್ಲೀಸ್, ಊರಿಗೆ ಕರೆದುಕೊಂಡು ಬರುವುದಲ್ಲದೆ ಬೇರೆ ನನ್ನ ಹತ್ತಿರ ಬೇರೆ ಯಾವುದೇ ಉಪಾಯವಿಲ್ಲಈಗ ". 

"ಇಲ್ಲಿ ಕರೆದುಕೊಂಡು ಬರುವುದು ಬೇಡ ಅಂತ ನಾನೇನು  ಹೇಳಲಿಲ್ಲ,  ಇದೇನು ನನ್ನ ಒಬ್ಬಳ ಮನೆ ಅಲ್ಲ, ಇದು ಎಲ್ಲರ ಮನೆ, ಆದರೆ ನೀನೆ ಯೋಚಿಸು ನಾವು ಏನಂತ ಮಾಡುವುದು, ಇಲ್ಲಿ ಎಲ್ಲರು ನೆಂಟರ ಹಾಗೆ ಊರಿಗೆ ಬಂದೊಗುತ್ತಾರೆ, ಯಾರೂ ಒಂದು ಕೆಲಸ ಸಹ ಮಾಡುವುದಿಲ್ಲ, ಮಾಡುವುದು ಬಿಡು ಸ್ವಲ್ಪ ಸಹಾಯಕ್ಕೂ ಬರುವುದಿಲ್ಲ, ಕೆಲಸವೆಲ್ಲ ನಮಗೆ ಆಗುತ್ತದೆ, ಅವರದೆಲ್ಲ ಚಾಕರಿ ಮಾಡುವದೇ ನಮ್ಮ ಕೆಲಸವಾಯಿತು, ನಮ್ಮ ಜೀವನ ಹೀಗೆಯೇ ಕಳೆದೋಯ್ತು, ಈ ಎಲ್ಲ ಕಾಟದಿಂದ ಎಲ್ಲಿಗೆ ಬರಲಿಕ್ಕಿಲ್ಲ, ಹೋಗಲಿಕ್ಕಿಲ್ಲ, ನಮ್ಮ ಜೀವನ ಜಿಗುಪ್ಸೆಯಿಂದ ತುಂಬಿ ಹೋಗಿದೆ" ಎಂದು  ಆಶಾ ಚಿಕ್ಕಮ್ಮ ತನ್ನ ಮನಸ್ಸಲ್ಲಿದ್ದ ಎಲ್ಲ ಮಾತನ್ನು ರಮೇಶನ ಮೇಲೆ ಉಗಿದು ಬಿಟ್ಟರು.  

ಯಾವುದೇ ಸಂಬಂಧದಲ್ಲಿ ಪ್ರೀತಿ ಇರುವುದು ತುಂಬಾ ಅವಶ್ಯಕ, ಪ್ರೀತಿ ಇಲ್ಲದೆ ಯಾವುದೇ  ಸಂಬಂಧ ಕೇವಲ ಒಂದು ಭಾರವಾಗಿ ಉಳಿಯುತ್ತದೆ  ಹಾಗು ಇಡೀ ಜೀವನ ನಾವು ಒಂದು ಪ್ರಾಣಿಯಂತೆ ಆ ಹೊರೆಯನ್ನು ಹೊತ್ತುಕೊಂಡಿರುತ್ತೇವೆ. ಪಾರಿವಾರಿಕ  ಜೀವನದಲ್ಲಿ ಅವರವರ ಸಂಸಾರ ಪ್ರತ್ಯೇಕವಾದಂತೆ ಪ್ರಸ್ತುತ ಸಂಬಂಧಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ, ಹಳೆಯ ಸಂಬಂಧವೆಲ್ಲ ವ್ಯಾವಹಾರಿಕವಾಗಿ ಉಳಿಯುತ್ತದೆ, ಇದರಿಲ್ಲಿ ಯಾರೂ ವಿಪರೀತ ಇಲ್ಲ, ಇದು ಎಲ್ಲರ ಜೀವನದ ಸತ್ಯ. 

ಆಶಾ ಚಿಕ್ಕಮನ ಮನಸ್ಸ ವ್ಯಥೆ ಕೇಳಿ ರಮೇಶ "ಚಿಕ್ಕಮ್ಮ ನಿಮ್ಮ ಮಾತು ನನಗೆ  ಅರ್ಥವಾಗುತ್ತದೆ, ಆದರೆ ಈಗ ನನ್ನತ್ತಿರ ಬೇರೆ ಯಾವುದೇ ದಾರಿ ಇಲ್ಲ, ಈ ಸಮಯ ನೀವು ನನ್ನ ಸಹಾಯ ಮಾಡಲೇ ಬೇಕು, ಪ್ಲೀಸ್" ಎಂದು ಅಕ್ಷರಶಃ ಬೇಡಿದ. 

ಮನಸ್ಸ ಭಾರವೆಲ್ಲ ಉಗಿದ ನಂತರ ಸ್ವಲ್ಪ ಹಗುರವಾಗಿ ಸಮಾಧಾನದಿಂದ ಆಶಾ ಚಿಕ್ಕಮ್ಮ "ನಾನು ಇಷ್ಟೆಲ್ಲಾ ಹೇಳಿದೆಯೆಂದು ಬೇಸರಿಸಬೇಡ, ನನ್ನ ಗೊತ್ತಿದೆಯಲ್ಲ ನಿನಗೆ, ಕೋಪ ಬಂದಾಗ ಎಲ್ಲ ಹೇಳಿ ಬಿಡುತ್ತೇನೆ, ನೋಡು ನಿನಗೆ ಸರಿ ಕಂಡದ್ದು ಮಾಡು, ನಾನೇನು  ಹೇಳಲಿ" ಎಂದು ಹೇಳಿ ಫೋನ್ ಇಟ್ಟು ಬಿಟ್ಟರು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Wednesday, February 5, 2020

ವೃದ್ಧಾಶ್ರಮ ೬


ಬೆಳಿಗ್ಗೆ ಅಮ್ಮನಿಗೆ ಫಿಸಿಯೋಥೆರಪಿ ಕೊಡಲು ಡಾಕ್ಟರ್ ಬಂದಿದ್ದರು ಹಾಗು ಕೆಲವು ಸಮಯ ಅಮ್ಮನಿಂದ ಕೈ ಕಾಲಿನ  ವ್ಯಾಯಾಮ ಮಾಡಿಸಿ ಸ್ವಲ್ಪ ಕೈ ಹಿಡಿದು ನಡೆಸಿದರು, ಅಮ್ಮ ಈ ಎಲ್ಲ ಪ್ರಕ್ರಿಯೆ ಆಸಕ್ತಿಯಿಲ್ಲದೆ ಮಾಡುತ್ತಿದ್ದರು.

ಡಾಕ್ಟರ್ ತನ್ನ ಕೆಲಸ ಮುಗಿಸಿದ ನಂತರ ರಮೇಶನಿಗೆ "ನೋಡಿ ಇವರನ್ನು ದಿನಾಲೂ ಕೆಳಗೆ ಕರೆದುಕೊಂಡೋಗಿ ಹಾಗು ಇವರನ್ನು ನಡೆಸಿ, ಸ್ವಲ್ಪ ಶರೀರಕ್ಕೆ ವ್ಯಾಯಾಮ ಬೇಕೇ ಬೇಕು ಇಲ್ಲದಿದ್ದರೆ ಶರೀರ ಜಡವಾಗುತ್ತದೆ, ಸೊ ಪ್ಲೀಸ್ ಟೇಕ್ ಕೇರ್ ಒಫ್ ಹರ್".

ರಮೇಶ "ಓ.ಕೆ  ಸರ್, ಡಾಕ್ಟ್ರೇ ನಾವು ಇವರನ್ನು ಊರಿಗೆ ಕರೆದುಕೊಂಡು  ಹೋಗುವ ವಿಚಾರ ಮಾಡಿದ್ದೇವೆ, ಅವರ ಈಗಿನ ಸ್ಥಿತಿಯಲ್ಲಿ ಅವರನ್ನು ಕರೆದುಕೊಂಡು ಹೋಗಬಹುದ"? 

ಡಾಕ್ಟರ್ "ಸೀ..... ಬಿಕೌಸ್ ಒಫ್ ಪ್ಯಾರಾಲಿಸಿಸ್ ಹರ್ ಹಾಫ್ ಬಾಡಿ ಇಸ್ ಸ್ಟಿಲ್ ನಾಟ್ ಫಂಕ್ಶನಿಂಗ್ ವೆಲ್, ಬಟ್ ನೌ ಐ ಫೈಂಡ್ ಲಿಟಲ್ ಬಿಟ್ ಮೂವ್ಮೆಂಟ್  ಇನ್ ಹರ್ ಆಫ್ಫೆಕ್ಟ್ದ್ ಸೈಡ್ , ಕೈ ಹಿಡಿದು ಅವರನ್ನು ದಿನನಿತ್ಯ ನಡೆಸಿದರೆ ಸುಧಾರಣೆಯ ಚಾನ್ಸಸ್ ಹೆಚ್ಚಿದೆ, ನನ್ನ ಪ್ರಕಾರ ಊರಿಗೆ ಕರೆದುಕೊಂಡು ಹೋಗುವುದೇ ಒಳ್ಳೆಯದ್ದು ಯಾಕೆಂದರೆ ಹಿಯರ್ ಇನ್ ಸಚ್ ಆ ಸ್ಮಾಲ್ ಹೌಸ್ ಅವರಿಗೆ ಕಷ್ಟ ಆಗಬಹುದು, ಊರಿನಲ್ಲಿ ದೊಡ್ಡ ದೊಡ್ಡ ಮನೆ ಇರುತ್ತದೆ, ಹೋಪ್ ನಿಮ್ಮ ಮನೆ ಸಹ ದೊಡ್ಡದಿರಬೇಕು, ಸೊ ಶಿ ಕ್ಯಾನ್ ಫೀಲ್ ಕಾಂಫೊರ್ಟ್ ಓವರ್ ದೇಯರ್, ಬಟ್ ಯು ಹ್ಯಾವ್ ಟು ಬಿ ವೆರಿ ಕೇರ್ಫುಲ್ ವಾಯ್ಲ್ ಟ್ರಾವೆಲ್ಲಿಂಗ್, ಡೆಫಿನೇಟಲಿ ನಿಮಗೆ ಕಷ್ಟ ಆಗಬಹುದು, ಬಿಕೌಸ್ ಇಟ್ಸ್ ನಾಟ್ ಈಜಿ ಟಾಸ್ಕ್ ಫಾರ್ ಯು".

ರಮೇಶ "ಥಾಂಕ್ ಯು ಡಾಕ್ಟರ್, ಕಷ್ಟ ಏನಿಲ್ಲ ಸರ್, ಎನಿಥಿಂಗ್ ಫಾರ್ ಮದರ್,ಐ ವಿಲ್ ಮ್ಯಾನೇಜ್" ಎಂದು ರಮೇಶ್ ಅವರ ಫೀಸ್ ಕೊಟ್ಟ.

ಡಾಕ್ಟರ್ "ಥ್ಯಾಂಕ್ಸ್, ವೆಲ್ ಟೇಕ್ ಕೇರ್, ಐ ಟೇಕ್ ಆ ಲೀವ್ ನೌ" ಎಂದು ಡಾಕ್ಟರ್ ಅಲ್ಲಿಂದ ತೆರಳಿದರು. 

ಡಾಕ್ಟರ್ ಹೋದ ನಂತರ ರಮೇಶ "ನೋಡಿದೀರಾ ಅಮ್ಮ ಡಾಕ್ಟರ್ ಏನು ಹೇಳುತ್ತಾರೆ ಸರಿ ನಡೆಯಬೇಕೆಂದು, ನೀವು ಹಾಸಿಗೆಯಿಂದ ಏಳಲಿಕ್ಕೆ ಕೇಳುವುದಿಲ್ಲ".

ಅಮ್ಮ "ಅವನಿಗೇನು, ಹೇಳುವುದು ಅವನ ಕೆಲಸ, ನನಗೇಷ್ಟು ಕಷ್ಟ ಆಗುತ್ತದೆ ಅವನಿಗೇನು ಗೊತ್ತು".

ರಮೇಶ "ಆದರೂ ಸ್ವಲ್ಪ ಸ್ವಲ್ಪ ಕುಳಿತುಕೊಂಡಲ್ಲಿಯೇ ಕೈ ಕಾಲಿನ ವ್ಯಾಯಾಮ ಮಾಡಬೇಕಮ್ಮ, ಸ್ವಲ್ಪ ಸ್ವಲ್ಪ ನಡೆದರೆ ನಿಮಗೆ ಸಹ ಒಳ್ಳೆಯದಲ್ಲವೇ ".

ಅಮ್ಮ "ಇದೆಲ್ಲ ಬಿಡು, ಟಿಕೆಟ್ ಮಾಡಿದ್ದೀಯಾ"? 

ರಮೇಶ "ಮಾಡುತ್ತೇನೆ, ಮೊದಲು ಊರಿಗೆ ಒಂದು ಫೋನ್ ಮಾಡುತ್ತೇನೆ".

ಅಮ್ಮ ಕೋಪದಿಂದ" ಫೋನ್ ಮಾಡುವ ಅಗತ್ಯವಿಲ್ಲ, ನೀನು ಟಿಕೆಟ್ ಮಾಡು" ಅಮ್ಮನ ಧ್ಯಾನ ಈಗಲೂ ಊರಿನಲ್ಲಿಯೇ ಇತ್ತು, ಪುನಃ ಅದೇ ಹಠ ಮಾಡಲು ಶುರು ಮಾಡಿದರು. 

ವಯಸ್ಸಾದ ನಂತರ ಜನರು ಮಕ್ಕಳಂತೆಯೇ ಹಠ ಮಾಡುತ್ತಾರೆ, ಭಾವನಾತ್ಮಕವಾಗಿ ಅವರಿಗೆ ಹೆಚ್ಚು ಗಮನ, ಆರೈಕೆಯ ಅಗತ್ಯ ಇರುತ್ತದೆ, ಮನಸ್ಸಲ್ಲಿ ಹಲವು ವಿಚಾರ ಬರುತ್ತಿರುತ್ತದೆ, ಬೇಗ ಆತಂಕಕ್ಕೊಳಾಗುತ್ತಾರೆ, ಮನಸ್ಸಲ್ಲಿ ಅಸಮಾಧಾನ ಹೆಚ್ಚಾಗುತ್ತದೆ, ಅವರ ಮೆದುಳು ನಿಧಾನವಾಗಿ ಕಾರ್ಯ ಮಾಡುತ್ತದೆ, ಆದ್ದರಿಂದ ಅವರು ಪುಟ್ಟ ಮಕ್ಕಳಂತೆಯೇ ವರ್ತಿಸುತ್ತಾರೆ.  

ರಮೇಶ ಅಮ್ಮನಿಗೆ "ಓ.ಕೆ, ಓ.ಕೆ  ಮಾಡುತ್ತೇನೆ, ನೀವು ಆರಾಮ್ ಮಾಡಿ" ಎಂದು ಹೇಳಿ ರಮೇಶ ಅಮ್ಮನ ಕೋಣೆಯಿಂದ ಹೊರಗೆ ಬಂದ.


(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Tuesday, February 4, 2020

ವೃದ್ಧಾಶ್ರಮ ೫


ರಮೇಶ ಕುಳಿತ್ತಲ್ಲಿಯೇ ಅವನ ಕಣ್ಣ ಮುಂದೆ ಗತಕಾಲದಲ್ಲಿ ಅವನ ಜೀವನದಲ್ಲಿ ನಡೆದ ಎಲ್ಲ ಘಟನೆಗಳು ಅವನ ಸುತ್ತಮುತ್ತ ತಿರುಗಲಾರಂಭಿಸಿತು.

ಬಾಲ್ಯದ ಜೀವನ, ಅಣ್ಣ ಸೋಮೇಶ ಹಾಗು ದಿರೇಶನ ಯೌವನದಲ್ಲಿಯೇ ಕೆಟ್ಟ ಚಟ ಹಾಗು ಕೆಟ್ಟ ಸಂಗಡಕ್ಕೆ ಶರಣಾದದ್ದು, ಅವರ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸೋಮೇಶನ ಅಸಡ್ಡೆ ವ್ಯವಹಾರ,  ಅವರ ಬೇಜವಾಬ್ದಾರಿತನ, ಮನೆಯ ಪ್ರತಿ ಅವರ ನಿರಾಸಕ್ತಿ, ತಂದೆ ಅವರ ಮೇಲೆ ವಿಶ್ವಾಸ ಇಟ್ಟು ತನ್ನ ಎಲ್ಲ ಉಳಿತಾಯ ಅವರಿಗೆ ನೀಡಿದ್ದು, ಅವರ ವ್ಯಾಪಾರದಲ್ಲಿ ನಷ್ಟ, ಅವರ ಮದುವೆ, ಸೋಮೇಶನ ಮಗ ಅರ್ಜುನನ ಜನ್ಮ,  ದಿರೇಶನ ಮಕ್ಕಳ ಜನ್ಮ, ಮದುವೆ  ಆದ ನಂತರ ಸಹ ಅವರ ಬೇಜವಾಬ್ದಾರಿತನ, ಕಷ್ಟ ಸಮಯದಲ್ಲಿ ಮನೆಯ ಎಲ್ಲ ಭಾರ ಅವನ ಮೇಲೆ ಬಿದ್ದದ್ದು,  ತಂಗಿ ಸುನೀತಾಳ ಅಂತರ ಜಾತಿ ವಿವಾಹ, ಅವನ  ಪ್ರಥಮ ವಿದೇಶ ಪ್ರವಾಸ, ಅವನ ಸುಮಾ ಜೊತೆ ಮದುವೆ,  ತಂದೆಯ  ಮೃತ್ಯು, ವಿದೇಶದ ಕೆಲಸ ಕಳೆದು ಭಾರತದಲ್ಲಿ ಕೆಲವು ಸಮಯ ಕೆಲಸಕ್ಕಾಗಿ ಅಲೆದ್ದದ್ದು, ಅವನ ಮಗ ಅತೀಶನ ಜನ್ಮ, ಸೋಮೇಶನ ಹಾಗು ಅವನ ಹೆಂಡತಿಯ ಆಕಸ್ಮಾತ್ ಮರಣ, ಅಮ್ಮನ ಅರ್ಜುನನ ಪ್ರತಿ ಅಪಾರ ಪ್ರೀತಿ, ಮುಂಬೈಯ ಮನೆ ಮಾರಿದ ನಂತರ ಅಮ್ಮ ಅರ್ಜುನನ ಜೊತೆ ಕಾಯಂ ಊರಿಗೆ ಹೋದದ್ದು, ಮುಂಬೈಯಲ್ಲಿ ಅವನು ನಾಲ್ಕೈದು ವರುಷ ಜೀವನದಲ್ಲಿ ಅಪಾರ ಕಷ್ಟಗಳನ್ನು ಎದುರಿಸಿ ಪುನಃ ಅವನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದು ಹಾಗು ಜೀವನದಲ್ಲಿ ಒದಗಿದ ಎಲ್ಲ ಕಷ್ಟ ಸುಖಗಳು ಚಲನಚಿತ್ರದ ಹಾಗೆ ರಮೇಶನ ಕಣ್ಣ ಮುಂದೆ ಹಾದು ಹೋಯಿತು.

"ಕೇಳಿತಾ, ನಿಮ್ಮನ್ನು ಅಮ್ಮ ಕರೆಯುತ್ತಿದ್ದಾರೆ" ಪತ್ನಿ ಸುಮಾಳ ಸ್ವರ ಕೇಳಿ ರಮೇಶನ ಧ್ಯಾನ ಮುರಿಯಿತು.

ರಮೇಶ ಎದ್ದು ಅಮ್ಮನ ಕೋಣೆಗೆ ಹೋದ.

ರಮೇಶ "ಏನಮ್ಮ, ಟಾಯ್ಲೆಟ್ ಹೋಗಲಿಕ್ಕಿದೆಯಾ"?

ಅಮ್ಮ "ಇಲ್ಲ, ನೀನು ಊರಿನ ಟಿಕೆಟ್ ತೆಗೆದಿಯ"?

ರಮೇಶ " ಇಲ್ಲಮ್ಮ, ನಾನು ಆಶಾ ಚಿಕ್ಕಮ್ಮನಿಗೆ ಫೋನ್ ಮಾಡುತ್ತೇನೆ"?

ಅಮ್ಮ ಕೋಪದಿಂದ "ಫೋನ್ ಏನು ಮಾಡುವುದು, ನೀನು ಟಿಕೆಟ್ ತೆಗೆ, ನನಗೆ ಅರ್ಜುನನ ನೆನಪು ಬರುತ್ತಾ ಇದೆ, ಪಾಪ ಹೇಗಿದ್ದಾನೆ ಯಾರಿಗೊತ್ತು".

ರಮೇಶ "ನೀವು ಅರ್ಜುನನ ಟೆನ್ಶನ್ ತೆಕೊಳ್ಳುವುದು ಬೇಡ, ಅವನನ್ನು ಆಶಾ ಚಿಕ್ಕಮ್ಮ ಸ್ವಂತ ಮಗನ ಹಾಗೆ ನೋಡುತ್ತಿದ್ದಾರೆ".

ಎಂಟು ವರ್ಷದ ಅರ್ಜುನ ರಮೇಶನ ತೀರಿ ಹೋದ ಅಣ್ಣ ಸೋಮೇಶನ ಮಗ, ಸೋಮೇಶ ಹಾಗು ಅವನ ಹೆಂಡತಿ ತೀರಿ ಹೋದ ನಂತರ ಅವನನ್ನು ಅಮ್ಮನೇ ನೋಡುತ್ತಿದ್ದರು, ಅಮ್ಮನ ಅವನಲ್ಲಿ  ಜೀವ ಅಡಗಿತ್ತು, ಅರ್ಜುನನನ್ನು ಊರಿನ ಮನೆಯಲ್ಲಿ ಎಲ್ಲರು ಪ್ರೀತಿಸುತ್ತಿದ್ದರು, ಅಮ್ಮನಿಗೆ ಪಕ್ಷವಾತ ಆದ ನಂತರ ಆಶಾ ಚಿಕ್ಕಮ್ಮ ಅಂತು ಅವನನ್ನು ಸ್ವಂತ ಮಗನ ಹಾಗೆ ನೋಡುತ್ತಿದ್ದರು, ಅರ್ಜುನನ ಅಪ್ಪ ಅಮ್ಮ ತೀರಿ ಹೋದ ನಂತರ ಅರ್ಜುನನ ಎಲ್ಲ ಖರ್ಚಿನ ಜವಾಬ್ಧಾರಿ ರಮೇಶ ವಹಿಸಿಕೊಂಡಿದ್ದ ಹಾಗು ರಮೇಶ ಅವನನ್ನು ತುಂಬಾ ಪ್ರೀತಿಯಿಂದ ನೋಡುಕೊಳ್ಳುತ್ತಿದ್ದ, ಅವನು ಊರಲ್ಲಿಯೇ ಶಾಲೆಗೆ ಹೋಗುತ್ತಿದ್ದ.

ಅವರ ಸಂಭಾಷಣೆಯ ಮಧ್ಯೆ ಸುಮಾ "ಅಮ್ಮ ಅರ್ಜುನ ಅಲ್ಲಿ ಮನೆಯಲ್ಲಿ ಆರಾಮದಲ್ಲಿದ್ದಾನೆ, ನೀವು ಸುಮ್ಮನೆ ಚಿಂತಿಸುತ್ತಿದ್ದೀರಿ, ಅಲ್ಲಿ ಅವನನ್ನು ಎಲ್ಲ ತುಂಬಾ ಪ್ರೀತಿಸುತ್ತಾರೆ". 

ಇದೆಲ್ಲ ಅಮ್ಮನಿಗೆ ತಿಳಿದಿತ್ತು, ಆದರೂ ಅರ್ಜುನನ ಪ್ರತಿ ಅವರ ಅಜ್ಜಿ ಅಕ್ಕರೆ ಅವರಲ್ಲಿ ಚಿಂತೆ ಹುಟ್ಟಿಸುತ್ತಿತ್ತು. 

ಸುಮಾಳ ಮಾತು ಕೇಳಿ ಅಮ್ಮ "ಅದೆಲ್ಲ ಇರಲಿ, ನೀವು  ನನ್ನನ್ನು ಊರಿಗೆ ಕರೆದುಕೊಂಡೋಗಿ".

"ಆಯಿತು.....  ಇವರು ಟಿಕೆಟ್ ಮಾಡುತ್ತಾರೆ, ಆದರೆ ಮೊದಲು ನಿಮ್ಮ ಫಿಸಿಯೋಥೆರಪಿ ಚಿಕೆತ್ಸೆ ಮಾಡುತ್ತಿದ್ದ ಡಾಕ್ಟರ್ ಹತ್ತಿರ ಕೇಳಬೇಕಲ್ಲ, ಸುನೀತಕ್ಕ ಡಾಕ್ಟರ್ ನ ಫೋನ್ ನಂಬರ್ ಕೊಟ್ಟಿದ್ದರು,   ನಾನು ಡಾಕ್ಟರ್ ಗೆ ಫೋನ್ ಮಾಡಿ ನಾಳೆಯ ಅಪ್ಪೋಯಿಂಟ್ಮೆಂಟ್ ತೆಗೆದುಕೊಂಡಿದ್ದೇನೆ, ನಾಳೆ ಅವರು ನಿಮ್ಮ ಟ್ರೀಟ್ಮೆಂಟ್ ಮಾಡಲು ಬಂದಾಗ ಅವರಿಗೆ ಕೇಳೋಣ ನೀವು ಪ್ರಯಾಣ ಮಾಡಬಹುದ ಎಂದು, ಅವರು ಮಾಡಬಹುದು ಎಂದು  ಹೇಳಿದ್ದಾರೆ ಇವರು ಟಿಕೆಟ್ ಮಾಡುತ್ತಾರೆ, ಈಗ ನೀವು ಆರಾಮದಿಂದ ಮಲಗಿರಿ" ಎಂದು ಹೇಳಿ  ಸುಮಾ ಅವರ ಹಾಸಿಗೆ ಸರಿ ಮಾಡಿ ಅವರನ್ನು ನಿಧಾನವಾಗಿ ಮಲಗಿಸಿದಳು.

ಹೊರಗೆ ಬಂದು ರಮೇಶ  ಸುಮಾಳಿಗೆ "ಏನು ಮಾಡುವುದು, ಅಮ್ಮ ಹಠ ಮಾಡುತ್ತಿದ್ದಾರೆ".

ಸುಮಾ "ನಾಳೆ ಡಾಕ್ಟರ್ ಹತ್ತಿರ ಕೇಳಿ  ನಂತರ  ಊರಿಗೆ ಫೋನ್ ಮಾಡಿ, ಹೇಗೋ  ಬರುವ ವಾರ ಊರಲ್ಲಿ ದೇವರ ಕೆಲಸ ಇದೆ, ಅದಕ್ಕೆ ಎಲ್ಲ ಕುಟುಂಬ ಬರುತ್ತಾರೆ, ನಾವು ಸಹ ಅಮ್ಮನನ್ನು ಕರೆದುಕೊಂಡು ಹೋಗುವ".

ರಮೇಶ "ಓ ಕೆ " ಎಂದು ನಿಟ್ಟುಸಿರು ಬಿಟ್ಟ, ಆದರೆ ಅವನ ಮನಸ್ಸು ಈಗಲೂ ಕಳವಳದಲ್ಲಿತ್ತು. 

(ಮುಂದುವರಿಯುತ್ತದೆ)

by  ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Monday, February 3, 2020

ವೃದ್ಧಾಶ್ರಮ ೪


ಮಾರನೆ ದಿನ ರಮೇಶನಿಗೆ ಮುಂಬೈಯಲ್ಲಿದ್ದ ಅವನ ಇನ್ನೊಂದು ಚಿಕ್ಕಮ್ಮ ಊರ್ವಶಿಯವರ  ಕಾಲ್ ಬಂತು. 

ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸುತ್ತಾ ರಮೇಶನಿಂದ ಮನೆಯಲ್ಲಿ ನಡೆದ ಸುನೀತಾನ ಹಾಗು ಎಲ್ಲ ವಿಷಯ ತಿಳಿದುಕೊಂಡು ರಮೇಶನ ವ್ಯಥೆ ಕೇಳಿ ಅವರು"ನೀನು ಇನ್ನೇನು ನಿರ್ಧರಿಸಿದ್ದಿ"?

ರಮೇಶ  "ಊರಿಗೆ ಆಶಾ ಮತ್ತು ಉಷಾ ಚಿಕ್ಕಮ್ಮನವರಿಗೆ ಫೋನ್ ಮಾಡುತ್ತೇನೆ, ನನ್ನಲ್ಲಿ ಇನ್ನೇನು ಬೇರೆ ದಾರಿ ಉಳಿದಿಲ್ಲ"

ಊರ್ವಶಿ ಚಿಕ್ಕಮ್ಮ "ಅಯ್ಯೋ ಅಲ್ಲಿ ಅವರು ಹೇಗೆ ಇವರನ್ನು ನೋಡುವುದು, ಮೊದಲೇ ಅಲ್ಲಿ ವಿಜಯನ ಕೆಲಸ ತುಂಬಾ ಆಗುತ್ತದೆ".
  
ರಮೇಶ "ನನಗೂ ಅದು ತಿಳಿದಿದೆ, ನಾನು ಅಮ್ಮಗೋಸ್ಕರ ಹೋಮ್ ನರ್ಸ್ ಇಡುತ್ತೇನೆ, ಅಮ್ಮನ ಎಲ್ಲ ಕೆಲಸ ಅವಳು ನೋಡಿಕೊಳ್ಳುತ್ತಾಳೆ, ಚಿಕ್ಕಮ್ಮನವರಿಗೆ ಅಮ್ಮನ ಕೆಲಸ ಮಾಡಬೇಕಂತಿಲ್ಲ,  ಕೇವಲ ನೋಡ್ಕೊಂಡಿದ್ದಾರೆ ಸಾಕು,  ಇನ್ನು ಹೊಟ್ಟೆಗೆ ಅವರು ತಿಂದದ್ದು ಇವರು ಸಹ ತಿನ್ನುತ್ತಾರೆ, ಊರಿಗೆ ಫೋನ್ ಮಾಡಿ ಕೇಳಿ ನೋಡುತ್ತೇನೆ...ನೋಡುವ....  ದೇವರಿದ್ದಾರೆ".

ಅದಕ್ಕೆ ಅವರು "ಕೇಳಿ ನೋಡು, ಆದರೆ ಅವರು ಒಪ್ಪುತ್ತಾರೆಯೆಂದು ನನಗನಿಸುವುದಿಲ್ಲ".

ಊರ್ವಶಿ ಚಿಕ್ಕಮ್ಮನ ಫೋನ್ ಬಂದ ನಂತರ ರಮೇಶನ ಚಿಂತೆ ಹೆಚ್ಚಾಯಿತು, ಅವನ ಧೈರ್ಯ ಕುಗ್ಗುತ್ತಾ ಹೋಯಿತು.

ಕಾಲ್ ಮುಗಿದ ನಂತರ ಸುಮಾ ಮೌನವಾಗಿ ಕುಳಿತ ರಮೇಶನಿಗೆ "ಏನು ಹೇಳುತ್ತಿದ್ದರು ಊರ್ವಶಿ ಚಿಕ್ಕಮ್ಮ".

ರಮೇಶ "ಏನಿಲ್ಲ, ಅವರಿಗೆ ಸಹ ಅಮ್ಮ ಊರಿಗೆ ಹೋಗುವುದು ಇಷ್ಟವಿಲ್ಲ ಕಾಣುತ್ತದೆ"

ಸುಮಾ "ಯಾಕೆ ನಿಮಗೆ ಹಾಗೆ ಅನಿಸುತ್ತದೆ".

ರಮೇಶ "ಇದೆಲ್ಲ ಸಹಜವಲ್ಲವೇ,  ಮಕ್ಕಳಿರುವಾಗ ಎಲ್ಲರಿಗೆ ಹಾಗೆಯೇ ಅನಿಸುತ್ತದೆ, ಪಾಲಕರ ಜವಾಬ್ದಾರಿ ಮಕ್ಕಳದ್ದು, ಮಕ್ಕಳ ಸಮಸ್ಯೆಯಿಂದ ಇತರರಿಗೆ ಏನು ಬಿದ್ದು ಹೋಗಿದೆ"

ಸುಮಾ "ಹ್ಮ್ಮ್, ಹೌದು ಇದೂ ಸರಿಯೇ, ಹಾಗಾದರೆ ಏನು ಡಿಸೈಡ್ ಮಾಡಿದಿರಿ, ಊರಿಗೆ ಫೋನ್ ಮಾಡುದಿಲ್ಲವೇ"?

ರಮೇಶ ಏನು ಉತ್ತರಿಸಲಿಲ್ಲ.

ರಮೇಶ ಉತ್ತರಿಸದಿದ್ದನ್ನು ಕಂಡು ಸುಮಾ ಸ್ವಲ್ಪ ಕೋಪದಿಂದ  "ಮಕ್ಕಳದ್ದು ಜವಾಬ್ಧಾರಿ ಹೌದು, ಆದರೆ ಎಲ್ಲ ಮಕ್ಕಳು ಒಟ್ಟಿಗೆ ಅದನ್ನು ನಿರ್ವಹಿಸ ಬೇಕಲ್ಲ, ಹೀಗೆ ನಿಮ್ಮ ತಂಗಿ ಒಮ್ಮೆಲೇ ಬಂದು ಹೀಗೆ ಹೇಳಿದರೆ ಹೇಗೆ, ಅವರಿಗೆ ಇನ್ನು ಅಮ್ಮ ಬೇಡವೇ ? ಅಮ್ಮ ಅವರನ್ನು ಸಾಕಲಿಲ್ಲವೇ ಮತ್ತೆ ಯಾಕೆ ಆವಾಗ ಅವರು ಒಪ್ಪಿಕೊಂಡದ್ದು ಹಾಗು ಊರಿನಿಂದ ಕರೆದುಕೊಂಡು ಬಂದು ಅವರ ಮನೆಯಲ್ಲಿ ಇಟ್ಟದ್ದು, ನಿಮ್ಮ ಅಣ್ಣನಿಗೂ ಯಾವುದೇ ಚಿಂತೆ ಇಲ್ಲ, ನೀವೊಬ್ಬರೇ ಜವಾಬ್ಧಾರಿ ನಿರ್ವಹಿಸಬೇಕು, ಯಾರಿಗೂ ನಿಮ್ಮ ಬಗ್ಗೆ ಯೋಚಿಸುವ ಶಕ್ತಿಯೇ ಇಲ್ಲ"

ರಮೇಶನಿಗೆ ಸುಮಾಳ ಭಾವನೆ ಅರ್ಥವಾಗುತ್ತಿತ್ತು, ರಮೇಶನ  ಕಷ್ಟ ಸಮಯದಲ್ಲಿ ಪಾಪ ಅವಳು ಎಷ್ಟು ನೊಂದುಕೊಂಡಿದ್ದಳು, ಆದರೆ  ಯಾವುದೇ ಪರಿಸ್ಥಿತಿಯಲ್ಲಿಯೂ ಒಂದು ಕ್ಷಣ ಸಹ ಅವಳು ರಮೇಶನ ಕೈ ಬಿಡಲಿಲ್ಲ, ಈಗ ಅವಳ ಜೀವನದಲ್ಲಿ ಸ್ವಲ್ಪ ಒಳ್ಳೆ ಸಮಯ ಬಂದಾಗ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಯಿತು, ಅವಳ ರೋಷ ಸಹಜವೇ ಆಗಿತ್ತು.  

ಸುಮಾಳ ರೋಷ ಹಾಗು ಅಮ್ಮನ ನೋವು ಈ ಎಲ್ಲ ಬಗ್ಗೆ ಯೋಚಿಸಿ ರಮೇಶನ ಕಣ್ಣು ತುಂಬಿ ಬಂತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Sunday, February 2, 2020

ವೃದ್ಧಾಶ್ರಮ ೩


ಸುನೀತಾ ಮತ್ತು ಜತಿನ್ ಹೋದ ನಂತರ ರಮೇಶ ಒಳಗೆ ಅಮ್ಮನತ್ತಿರ ಬಂದ, ಅಮ್ಮ ಈಗಲೂ ಅಳುತ್ತಿದ್ದರು, ರಮೇಶ "ಯಾಕೆ ನೀವು ಅಳುತ್ತಿದ್ದೀರಿ, ನಾವು ನಿಮ್ಮನ್ನು ಹೀಗೆಯೇ ಬಿಡುವುದಿಲ್ಲ".

ಹೊರಗೆ ರಮೇಶ ಹಾಗು ಸುನೀತಾಳ ಎಲ್ಲ ಸಂಭಾಷಣೆ ಕೇಳಿದ  ಅಮ್ಮನಿಗೆ ದುಃಖ ಉಕ್ಕಿ ಬರುತ್ತಿತ್ತು. 

ಅಮ್ಮ ಮಾತಾಡುವಾಗ ಸ್ವಲ್ಪ ಸ್ವಲ್ಪ ತೊದಲುತ್ತಿದ್ದರು, ಪಕ್ಷವಾತ ಆದ ನಂತರ ಅವರಿಗೆ ಸ್ಪಷ್ಟ ಮಾತನಾಡಲು ಆಗುತ್ತಿರಲಿಲ್ಲ. 

"ನನ್ನಿಂದ ನಿಮಗೆಲ್ಲ ಕಷ್ಟವಾಗುತ್ತಿದೆ"  ಎಂದು ತೊದಲುತ್ತಾ ಹೇಳಿ ಪುನಃ ಕಣ್ಣೀರು ಬಿಟ್ಟರು.  

ರಮೇಶ "ಹಾಗೇನಿಲ್ಲ, ನೀವು ಸೌಖ್ಯವಾಗುತ್ತೀರಿ, ಚಿಂತೆ ಬಿಟ್ಟು ಬಿಡಿ , ನಾನಿದೇನಲ್ಲ".

ಅಮ್ಮ "ಇಲ್ಲ, ನನಗೆ ಆದದ್ದು ಆಗಿಹೋಯಿತು ಇನ್ನು ನಿನ್ನ ಜೀವನ ಹಾಳಾಗುವುದು ಬೇಡ, ನನ್ನನ್ನು ಊರಿಗೆ ಕಳುಹಿಸು".

ರಮೇಶ "ಊರಲ್ಲಿ ಯಾರು ನೋಡುವುದು ನಿಮ್ಮನ್ನು? ಚಿಕ್ಕಮ್ಮನವರು ಆಗುವುದಿಲ್ಲವೆಂದು  ಹೇಳಿದ್ದಾರೆ".

ಅಮ್ಮ "ಯಾಕೆ ಆಗುವುದಿಲ್ಲ, ನನ್ನ ತಂಗಿಯರೂ ತಾನೇ, ಅವರು ಹಾಗೆಯೇ, ಬಿಡು ಅವರದ್ದು, ನಂತರ ಸರಿ ಹೋಗುತ್ತದೆ" ಎಂದು ಕೋಪದಿಂದ ತೊದಲುತ್ತಾ ಹೇಳಿದರು. 

ಒಡಹುಟ್ಟಿದವರ ಸಂಬಂಧ ಸ್ವಲ್ಪ ಭಾವನಾತ್ಮಕವಾಗಿರುತ್ತದೆ, ಸಹಜವಾಗಿ ಪ್ರೀತಿ ಕೋಪ ಉಕ್ಕಿ ಬರುತ್ತದೆ, ಆದರೆ ಸಮಯ ಕಳೆದಂತೆ ಅವರವರ ಪರಿವಾರ ಬೆಳೆದಾಗ ಕ್ರಮೇಣ  ಆ ಸಂಬಂಧಗಳೆಲ್ಲ ವ್ಯಾವಹಾರಿಕವಾಗಿ ಉಳಿಯುತ್ತದೆ, ಆದರೂ ಅಮ್ಮ ಬೆಳೆದ  ಕಾಲದವರಲ್ಲಿ  ಸಂಬಂಧದ ಬಗ್ಗೆ ಹೆಚ್ಚು ಮೌಲ್ಯ ಕಂಡು ಬರುತ್ತದೆ, ಇಂದಿನ ಆಧುನಿಕ ಯುಗದವರಿಗೆ ಅದರ ಮಹತ್ವ ತಿಳಿದಿಲ್ಲ. 

ಅಮ್ಮನ ತಂಗಿಯರ ಮೇಲೆ ಇದ್ದ ಭಾವನೆ ಅರಿತು  ರಮೇಶ " ಆದರೆ ಅಮ್ಮ, ಅಲ್ಲಿ ಮೊದಲೇ  ವಿಜಯ ಮಾವ ಹಾಸಿಗೆಯಲ್ಲಿ ಇದ್ದಾರೆ, ಇನ್ನು ನೀವು ಸಹ ಹೋದರೆ ಅವರಿಗೆ ಕಷ್ಟ ಆಗುವುದಿಲ್ಲವೇ"? ಎಂದು ಹೇಳಿದ. 

ಅಮ್ಮ "ಅವನನ್ನು ನೋಡುವವರು ನನ್ನನ್ನು ನೋಡುವುದಿಲ್ಲವೇ, ನಾನು ಅವರಿಗೆ ಕಷ್ಟ ಕೊಡಲ್ಲ, ಬಿದ್ದಿರುತ್ತೇನೆ ಒಂದು ಕೋಣೆಯಲ್ಲಿ,  ನೀನು ನನ್ನನ್ನು ಊರಿಗೆ ಕರೆದುಕೊಂಡೋಗು, ಅವರೇನು  ನನ್ನನ್ನು ಹೊರಗೆ ದೂಡುವುದಿಲ್ಲ ತಾನೇ ".

ರಮೇಶ ಮತ್ತು ಅಮ್ಮನ ಸಂಭಾಷಣೆ ಕೇಳುತ್ತಿದ್ದ ಸುಮಾ "ಅಲ್ಲ ನೀವು ಅಮ್ಮಗೋಸ್ಕರ ಹೋಮ್ ನರ್ಸ್ ಇಟ್ಟರೆ ಮತ್ತೆ ಚಿಕ್ಕಮ್ಮನವರಿಗೆ ಅಷ್ಟೇನೂ ಕೆಲಸವಿಲ್ಲವಲ್ಲ, ಅಮ್ಮನ ಚಾಕರಿಯೆಲ್ಲ ನರ್ಸ್ ಮಾಡಿದರೆ , ಕೇವಲ ಊಟದ್ದು ಸಮಸ್ಯೆ, ಆದರೆ ಅದೇನು ಸಮಸ್ಯೆನೇ ಅಲ್ಲ, ಹೇಗೂ ಅವರು ಅಡುಗೆ ಮಾಡಿದರಲ್ಲಿ ಸ್ವಲ್ಪ ಹೆಚ್ಚು ಮಾಡುತ್ತಾರೆ, ಮತ್ತೆ ಅಮ್ಮನ ಖರ್ಚು ಎಲ್ಲ ನೀವು ಕಳುಹಿಸುತ್ತೀರಿ ತಾನೇ".

ರಮೇಶ "ನಿಜ ಹೇಳಬೇಕೆಂದರೆ ನನಗೂ ಅದೇ ಸರಿಯೆಂದು ಅನಿಸುತ್ತದೆ, ಇಲ್ಲಿ ಮುಂಬೈಯಲ್ಲಿ ಒಂದು ಕೋಣೆಯ ಒಳಗೆ ಇವರ ಕಾಯಿಲೆ ಇನ್ನು ಹೆಚ್ಚಾಗಬಹುದು, ಅಲ್ಲಿ  ಊರಲ್ಲಿದ್ದರೆ ದೊಡ್ಡ ಮನೆಯಲ್ಲಿ ಅಮ್ಮ ಅಲ್ಲಿ ಇಲ್ಲಿ ನಡೆದಾಡಬಹುದು, ಸ್ವಲ್ಪ ವ್ಯಾಯಾಮ ಸಹ ಆಗುತ್ತದೆ, ಈ ಕಾಯಿಲೆಗೆ ಮುಖ್ಯ ವ್ಯಾಯಾಮ,  ಆದರೆ ಚಿಕ್ಕಮ್ಮನವರಿಗೆ  ಹೇಗೆ  ಹೇಳುವುದು ಅವರು ಮೊದಲೇ ನಮ್ಮಿಂದ ಆಗದೆಂದು ಹೇಳಿದ್ದಾರೆ".

ಸುಮಾ "ನೀವು ಸ್ವಲ್ಪ ವಿನಂತಿ ಮಾಡಿ ಅವರಿಂದ, ನಿಮ್ಮ ಚಿಕ್ಕಮ್ಮನವರು ತಾನೇ, ಮೇಲಿಂದ ನೀವು ಅಂದರೆ ಅವರಿಗೆ ಇಷ್ಟ, ಸ್ವಲ್ಪ ಕೇಳಿ ನೋಡಿ, ಇದು ನಮ್ಮ ಜೀವನದ ಪ್ರಶ್ನೆ, ನೀವು ವಿದೇಶದಲ್ಲಿ ನಮ್ಮ ವೀಸಾ ಹಾಗು ಆತೀಶನ ಅಲ್ಲಿಯ ಸ್ಕೂಲಲ್ಲಿ ಅಡ್ಮಿಶನ್ ಸಹ ಮಾಡಿ ಬಂದಿದ್ದೀರಿ,   ಇಲ್ಲದಿದ್ದರೆ ನಾನು ನಿಮಗೆ ಹೇಳುವುದಿಲ್ಲ ಕೇಳಲಿಕ್ಕೆ, ಅವರು ಇಲ್ಲವೆಂದು ಹೇಳುವುದಿಲ್ಲ ನೋಡಿ".

ಸುಮಾಳ ಮಾತು ಕೇಳಿ ರಮೇಶನಲ್ಲಿ ಸ್ವಲ್ಪ ವಿಶ್ವಾಸ ಮೂಡಿತು.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ ಶಿರ್ವ
ಚಿತ್ರ ಕೃಪೆ : ಗೂಗಲ್ 

Saturday, February 1, 2020

ವೃದ್ಧಾಶ್ರಮ ೨


ರಮೇಶ ಜತಿನ್ ಮತ್ತು ಸುನೀತಾಳಿಗೆ  "ಸೌಖ್ಯವಾಗಿದ್ದೀರಾ  ನೀವೆಲ್ಲ, ಏನು ವಿಶೇಷ"?

ಸುನೀತಾ ಅವನ ಮಾತಿಗೆ ಏನೂ ಉತ್ತರ ನೀಡದೆ ನೇರ "ರಮೇಶ್, ನನಗೆ ಇನ್ನು ಅಮ್ಮನನ್ನು ನೋಡಲು ಸಾಧ್ಯವಿಲ್ಲ, ಇನ್ನು ಮುಂದೆ  ನೀನೇ  ನೋಡು". 

ಅಕಸ್ಮಾತ ಸುನೀತಾ ಈ ತರಹ ಹೇಳಿದ್ದು ಕೇಳಿ ರಮೇಶನಿಗೆ ಅವಳಿಗೆ ಏನು ಹೇಳಬೇಕೆಂದು ಅರ್ಥವಾಗಲಿಲ್ಲ. 

ನಿನ್ನೆ ಸಂಜೆ ತಾನೇ ಸುನೀತಾ ಹಾಗು ಅವಳ ಗಂಡ ಜತಿನ್ ಅಮ್ಮನನ್ನು ರಮೇಶನ ಮನೆಗೆ ಬಿಟ್ಟು ಹೋಗಿದ್ದರು , ರಮೇಶ ಅವಳಿಗೆ ಮೊದಲೇ ಹೇಳಿದ್ದ ಅವನು  ಇವತ್ತು ರಾತ್ರಿ ಬರುತ್ತಾನೆಂದು ಹಾಗು ಅಮ್ಮನನ್ನು ಕರೆದುಕೊಂಡು ಬಾ, ಸ್ವಲ್ಪ ದಿವಸ ನಮ್ಮೊಟ್ಟಿಗೆ ಇರಲಿ ನಾವು ವಿದೇಶ ಹೋಗುವ ತನಕ ಎಂದು.  

ಅಮ್ಮ ಕೈ ಹಿಡಿದು ಸ್ವಲ್ಪ ಸ್ವಲ್ಪ ನಡೆಯುತ್ತಿದ್ದರು, ಆದರೆ ಒಂದು ಕೈ ಹಾಗು ಒಂದು ಕಾಲಲ್ಲಿ ಚಲನೆ ಇರಲಿಲ್ಲ, ರಮೇಶನನ್ನು ನೋಡಿ ಅಮ್ಮನಿಗೆ ಅಳುವುದೊಂದೇ ಕೆಲಸವಾಯಿತು, ಎಷ್ಟು ಸಮಾಧಾನ ಹೇಳಿದರೂ ಅವರು ಕಣ್ಣೇರು ಸುರಿಸುತ್ತಲೇ ಇದ್ದರು, ಈ ಪರಿಸ್ಥಿತಿಯಲ್ಲಿ ಅಮ್ಮನನ್ನು ನೋಡಿ ರಮೇಶನಿಗೆ ತುಂಬಾ ಬೇಸರವಾರಯಿತು. 

ಸುನೀತಾ ಹಾಗು ಅವಳ ಗಂಡ ಜತಿನ್ ನಿನ್ನೆ ಬಂದು ಇಂದು ಬೆಳಿಗ್ಗೆ ಇಷ್ಟು ಬೇಗ ಬಂದದ್ದು ಸುಮಾಳಿಗೆ ಸಹ ಸ್ವಲ್ಪ ವಿಚಿತ್ರವೆನಿಸಿತು, ಅವರ ದೇಹದ ಭಾಷೆ ಸಹ ಅವರು ಏನೋ ಅಗತ್ಯದ ಮಾತಾಡಲಿಕ್ಕೆ ಬಂದಿದ್ದಾರೆ ಎಂದು ಸೂಚಿಸುತ್ತಿತ್ತು. 

ಅವನು "ಯಾಕೆ ಸುನೀತಾ, ಏನಾಯಿತು"? 

ಸುನೀತಾ "ಅವರ ಚಾಕರಿ ಮಾಡುವುದು ಎಷ್ಟು ಕಷ್ಟ ಅಂತ ಗೊತ್ತಿದೆಯ ನಿನಗೆ?  ಅವರಿಗೆ ಎಲ್ಲದಕ್ಕೂ ಒಂದು ಜನ ಬೇಕು, ಶೌಚಾಲಯ, ಸ್ನಾನ ಎಲ್ಲ ನಾವೇ ಮಾಡಿಸಬೇಕು, ಅಷ್ಟೇನೂ ಸುಲಭ ಇಲ್ಲ, ಮೇಲಿಂದ ನನ್ನ ಮನೆಯಲ್ಲಿ ಇವರ ತಂದೆ, ಅಕ್ಕ ಅವರು ಸಹ ಇದ್ದಾರೆ, ಅವರಿಗೆ ಎಷ್ಟು ಅಡಚಣೆ ಆಗುತ್ತದೆ ನಿನಗೆ ಗೊತ್ತಾ, ಅವರು ನೇರ ಏನು ಹೇಳುವುದಿಲ್ಲ ಆದರೆ ಪರೋಕ್ಷವಾಗಿ ಏನಾದರೊಂದು ಹೇಳುತ್ತಿರುತ್ತಾರೆ ನನಗೆ,  ಮೇಲಿಂದ ಅಮ್ಮ ಸ್ವಲ್ಪ ಸಹ ಸಹಕಾರ ಮಾಡುವುದಿಲ್ಲ, ಜಡವಾಗಿದ್ದಾಗೆ ಮಾಡುತ್ತಾರೆ". 

ರಮೇಶ "ಪಕ್ಷವಾತ ಆಗಿದೆಯಲ್ಲ, ಅವರ ನೋವು ಅವರಿಗೆ ಗೊತ್ತು ಇಂತಹ ಪರಿಸ್ಥಿತಿಯಲ್ಲಿ ಇದೆಲ್ಲ ಆಗುವುದು ಸಾಮಾನ್ಯ, ಅಕಸ್ಮಾತ ಒದಗಿದ ಕಾಯಿಲೆಯಿಂದ ಅವರಿಗೆ ಆಘಾತವಾಗಿರಬೇಕು, ಸ್ವಲ್ಪ ದಿವಸ ನಂತರ ಅವರ ಮನಸ್ಥಿತಿ ಸರಿಯಾಗುತ್ತದೆ". 

ಸುನೀತಾ "ಹೇಳಲಿಕ್ಕೆ ಸುಲಭ, ನಿನಗೇನು...  ನಾವು ಮಾಡುತ್ತೇವೆ ನಮಗೆ ಗೊತ್ತು ಎಷ್ಟು ಕಷ್ಟ ಇದೆಯೆಂದು, ನಮ್ಮಿಂದ ಇನ್ನು ಸಾಧ್ಯವಿಲ್ಲ ರಮೇಶ್, ನಿನಗೆ ಅಷ್ಟು ಸುಲಭವೆನಿಸುತ್ತಿದ್ದರೆ ನೀನೇ ನೋಡಿಕೊಳ್ಳು".

ರಮೇಶ "ಹಾಗೆ ಹೇಳಬೇಡ ಸುನೀತಾ, ಸುಲಭವೇನಲ್ಲವೆಂದು ಗೊತ್ತು ನನಗೆ, ಆದರೆ ತಾಯಿಯನ್ನು ನೋಡುವುದು ನಮ್ಮ ಕರ್ತವ್ಯ ತಾನೇ, ನೀನಷ್ಟು ಟೆನ್ಶನ್ ಮಾಡಬೇಡ, ಅವರಿಗೋಸ್ಕರ ನಾನೆಲ್ಲ ವ್ಯವಸ್ಥೆ ಮಾಡುತ್ತೇನೆ, ಒಂದು ನರ್ಸ್ ಇಡುವ ಅವರನ್ನು ನೋಡಲು, ಅದರ ಎಲ್ಲ ಖರ್ಚು ನಾನು ಪ್ರತಿ ತಿಂಗಳು ನಿನಗೆ ಕಳುಹಿಸುತ್ತೇನೆ, ನೀನು ಪ್ಲೀಸ್ ಸ್ವಲ್ಪ ಸಹಕಾರ ಮಾಡು. ನಾನು ಸುಮಾ ಮತ್ತು ಆತೀಶನನ್ನು ಒಟ್ಟಿಗೆ ವಿದೇಶ ಕರೆದುಕೊಂಡು ಹೋಗಲು ವೀಸಾ ತೆಗೆದ್ದಿದ್ದೇನೆ, ವೀಸಾ ತೆಗೆಯುವ ಮುಂಚೆ ನಾನು ನಿನ್ನೊಂದಿಗೆ ಚರ್ಚೆ ಸಹ ಮಾಡಿದ್ದೆ ಹಾಗು ನಿನಗೆ ಕೇಳಿದೆ ಸಹ ಅಮ್ಮನ ಬಗ್ಗೆ, ನೀನು ಅವಾಗ ಒಪ್ಪಿಕೊಂಡಿದ್ದೆ, ಈಗ ಇದ್ದಕ್ಕಿದ್ದಂತೆ ನೀನು ಹೀಗೆ ನಿರ್ಣಯ ತೆಗೆದುಕೊಂಡರೆ, ನಾನೇನು ಮಾಡುವುದು ಹೇಳು, ಅಲ್ಲಿ ಕೆಲಸ ಬಿಟ್ಟರೆ ಇಲ್ಲಿ ಕೆಲಸ ಪುನಃ ಹುಡುಕಬೇಕು, ಇಲ್ಲಿ ಕೆಲಸ ಸಿಗುವುದು ಅಷ್ಟೇನೂ ಸುಲಭ ಇಲ್ಲ, ಮೇಲಿಂದ ನನಗೆ ಸ್ವಂತ ಮನೆ ಇಲ್ಲ, ಇದು ಬಾಡಿಗೆಯ ಮನೆ, ನನ್ನಲ್ಲಿ ಅಷ್ಟು ಹಣ ಉಳಿತಾಯ ಸಹ ಇಲ್ಲವೆಂದು ನಿನಗೆ ಗೊತ್ತು, ಇದೆಲ್ಲ ನಿನಗೆ ಎಲ್ಲ ತಿಳಿದಿದ್ದ ವಿಷಯ". 

ಸುನೀತಾ " ಅದೇನು ನನಗೆ ಗೊತ್ತಿಲ್ಲ, ಅವಾಗ ಅಮ್ಮ ಸರಿ ಇದ್ದರು, ಅವರ ಕೆಲಸ ಅವರು ಮಾಡುತ್ತಿದ್ದರು, ಕೇವಲ  ಎರಡು ಮೂರು ತಿಂಗಳಿಗೊಮ್ಮೆ ಅವರನ್ನು ಹೋಗಿ ನೋಡಲಿಕ್ಕಿತ್ತು, ಅದಕ್ಕೆ ನಾನು ಒಪ್ಪಿಕೊಂಡಿದ್ದೆ, ಆದರೆ ಈಗ ಹಾಗೇನಿಲ್ಲ ಅವರಿಗೆ ಎಲ್ಲದಕ್ಕೂ ಯಾರಾದರೂ ಅವರ ಹಿಂದೆ ಇರಬೇಕು, ನೀನು ಏನಾದರು ಮಾಡು, ನಿನ್ನ ಜವಾಬ್ದಾರಿ ನನ್ನ ಮೇಲೆ ಹೇರುವುದು ಬೇಡ, ನೀನೊಬ್ಬನೇ  ಹೋಗು ವಿದೇಶಕ್ಕೆ, ಸುಮಾಳಿಗೆ ಹೇಳು ಇಲ್ಲಿದ್ದು  ಅಮ್ಮನನ್ನು ನೋಡಲಿಕ್ಕೆ". 

ರಮೇಶ "ಇವಳು ಒಬ್ಬಳೇ ಹೇಗೆ ಅಮ್ಮನನ್ನು ನೋಡುವುದು, ಅದು ಇವಳಿಂದ ಸಾಧ್ಯವಾಗದು ಮತ್ತೆ ನಾವು ಮಕ್ಕಳು, ಜವಾಬ್ಧಾರಿ ನಮ್ಮದ್ದು, ನಿನಗೆ ನಾನು ಹೇಳಬಹುದು, ನಮ್ಮ ಅಮ್ಮನನ್ನು ನೋಡಲು ಇವಳಿಗೆ ನಾನು ಹೇಗೆ ಒತ್ತಾಯಿಸಲಿ, ನೀನೆ ಹೇಳು".

ಸುನೀತಾ ಕೋಪದಿಂದ "ಒಹ್ ಓ ... ಇವಳಿಂದ ಸಾಧ್ಯವಿಲ್ಲ ಮತ್ತೆ ನನ್ನಿಂದ ಹೇಗೆ ಸಾಧ್ಯ, ನೀನೇದರೂ ಮಾಡು ನನಗೇನು ಗೊತ್ತಿಲ್ಲ, ನನ್ನಿಂದ ಇನ್ನು ಸಾಧ್ಯವಿಲ್ಲ". 

ರಮೇಶ "ಸುನೀತಾ, ಪ್ಲೀಸ್....., ತುಂಬಾ ದಿವಸದ ನಂತರ ನನ್ನ ಜೀವನಕ್ಕೆ ಒಂದು ಹಾದಿ ಸಿಕ್ಕಿದೆ, ಅದನ್ನು ಹಾಳು  ಮಾಡಬೇಡ, ಪ್ಲೀಸ್ ". 

"ಇಲ್ಲ ರಮೇಶ್, ಇದು ಸಾಧ್ಯನೇ ಇಲ್ಲ, ಅಮ್ಮನನ್ನು ನೋಡಲು ನನ್ನಿಂದ ಇನ್ನು ಸಾಧ್ಯವಾಗದು" ಎಂದು ರಮೇಶನ ತಂಗಿ ಸುನೀತಾ ಕೋಪದಿಂದ ನುಡಿದಳು.

ಮಾತಿನಿಂದ ಮಾತು ಬೆಳೆದು ಸುನೀತಾ ತನ್ನ ಮನಸ್ಸಲ್ಲಿದ್ದ ತೀರ್ಮಾನ ಹೇಳಿಯೇ ಬಿಟ್ಟಳು.

ಅವಳ ಮಾತು ಕೇಳಿ ರಮೇಶ ಸ್ತಬ್ಧನಾದ.     

ಅವನಿಗೆ ಇನ್ನು ಸುನೀತಾಳಿಗೆ ಹೇಗೆ ಮನವರಿಕೆ ಮಾಡುವುದು ಎಂದು ಅರ್ಥವಾಗಲಿಲ್ಲ. 

ಅವರ ಸಂಭಾಷಣೆ ಕೇಳಿ ಒಳಗೆ ಕೋಣೆಯಿಂದ ಅಮ್ಮನ ಅಳುವ ಶಬ್ದ ಬರುತ್ತಿತ್ತು. 

ಅಮ್ಮನ ಅಳುವುದನ್ನು ಕೇಳಿ ನಿರ್ಲಕ್ಷಿಸಿ ಹೃದಯಹೀನರಂತೆ  ಸುನೀತಾ ಮತ್ತು ಜತಿನ್ ಹೊರಡಲು ಎದ್ದು ನಿಂತರು ಹಾಗು ಹೇಳದೆ ಕೇಳದೆ ಮನೆಯಿಂದ ತೆರಳಿದರು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...