Thursday, January 30, 2020

ವೃದ್ಧಾಶ್ರಮ ೧


"ಇಲ್ಲ ರಮೇಶ್, ಇದು ಸಾಧ್ಯನೇ ಇಲ್ಲ, ಅಮ್ಮನನ್ನು ನೋಡಲು ನನ್ನಿಂದ ಇನ್ನು ಸಾಧ್ಯವಾಗದು" ಎಂದು ರಮೇಶನ ತಂಗಿ ಸುನೀತಾ ಕೋಪದಿಂದ ನುಡಿದಳು.

ಮಾತಿನಿಂದ ಮಾತು ಬೆಳೆದು ಸುನೀತಾ ತನ್ನ ಮನಸ್ಸಲ್ಲಿದ್ದ ತೀರ್ಮಾನ ಹೇಳಿಯೇ ಬಿಟ್ಟಳು.

ಅವಳ ಮಾತು ಕೇಳಿ ರಮೇಶ ಸ್ತಬ್ಧನಾದ. 

ಅಂದು ಮುಂಜಾನೆ ಆರು ಗಂಟೆಗೆ ಸುನೀತಾ ಮತ್ತು ಅವಳ ಗಂಡ ಜತಿನ್ ರಮೇಶನ ಮನೆಗೆ ಬಂದಿದ್ದರು, ಕಳೆದ ಒಂದೂವರೆ ತಿಂಗಳಿನಿಂದ  ಅಮ್ಮ ಸುನೀತಾಳ  ಮನೆಯಲ್ಲಿ ಇರುತ್ತಿದ್ದರು. 

ರಮೇಶ ವಿದೇಶದಿಂದ ಆ ರಾತ್ರಿಗೆ ತಾನೇ ಬಂದದ್ದು, ಬಹುಶ ಇವರು ವಿದೇಶದಿಂದ ಬಂದ ನನ್ನನ್ನು ಸಿಗಲು ಬಂದಿರ ಬೇಕು ಎಂದು ಎನಿಸಿದ, ಆದರೆ ಮಾತು ಅಮ್ಮನ ಬಗ್ಗೆ ಇತ್ತು. 

------------------

ನಾಲ್ಕು ಐದು ವರುಷ ಜೀವನದಲ್ಲಿ ಕಷ್ಟ ಕಾಲವನ್ನು ಎದುರಿಸಿ ಹೇಗೋ ಮಾವನ ಸಹಾಯದಿಂದ ವಿದೇಶಕ್ಕೆ ಹೋದ ನಂತರ ರಮೇಶನ ಜೀವನಕ್ಕೆ ಒಂದು ಹೊಸ ತಿರುವು ಬಂದಿತ್ತು. ಕಷ್ಟ ಸಮಯದಲ್ಲಿ ಮುಂಬೈಯಲ್ಲಿದ ಸ್ವಂತ ಮನೆ ಮಾರಿದ ಕಾರಣ ಈಗ ಅವನ ಪತ್ನಿ ಹಾಗು ಮಗ ಬಾಡಿಗೆಯ ಮನೆಯಲ್ಲಿ ಇರುತ್ತಿದ್ದರು. ಈ ಸಲ ರಜೆಗೆ ಭಾರತಕ್ಕೆ ಬಂದು ನಂತರ ಹೋಗುವಾಗ ಬಾಡಿಗೆ ಮನೆ ಬಿಟ್ಟು ಪತ್ನಿ ಸುಮಾ ಮತ್ತು  ಐದು ವರುಷದ  ಮಗ ಆತೀಶನನ್ನು ಒಟ್ಟಿಗೆ ವಿದೇಶಕ್ಕೆ ಕರೆದುಕೊಂಡು ಹೋಗಬೇಕೆಂದು ಹಾಗು ಅಲ್ಲಿಯೇ ನೆಲೆಸಬೇಕೆಂದು ರಮೇಶ  ನಿಶ್ಚಯ ಮಾಡಿದ್ದ,  ಆ ಕಾರಣ ರಮೇಶ ಇಬ್ಬರ ವಿದೇಶದ ರೆಸಿಡೆನ್ಸ್ ವೀಸಾ ತೆಗೆದಿದ್ದ. 

ಈ ವಿಷಯದಲ್ಲಿ ಅವನು  ತಂಗಿ ಸುನೀತಾ ಜೊತೆ ಚರ್ಚೆ ಸಹ ಮಾಡಿದ್ದ ಹಾಗು ಅವಳು ರಮೇಶನಿಗೆ "ನೀನು ಊರಲ್ಲಿದ್ದ ಅಮ್ಮನ ಚಿಂತೆ ಮಾಡಬೇಡ, ಅವರನ್ನು ಮೂರು ತಿಂಗಳಿಗೊಮ್ಮೆ ಊರಿಗೆ ಹೋಗಿ ನಾನು ನೋಡಿಕೊಳ್ಳುತ್ತೇನೆ" ಎಂದು ತನ್ನ ಒಪ್ಪಿಗೆ ನೀಡಿದ್ದಳು. 

ಆದರೆ ದುರ್ದೈವದಿಂದ ಈ ಮಧ್ಯೆ ಊರಿನಲ್ಲಿದ್ದ ರಮೇಶನ ಅಮ್ಮನಿಗೆ ಬ್ಲಡ್ ಪ್ರೆಷರ್ ಏರಿ ಶರೀರದ ಒಂದು ಭಾಗದಲ್ಲಿ ಪಕ್ಷವಾತ ಆಯಿತು, ಅವರ ಅರ್ಧ ಅಂಗ ಕೆಲಸ ಮಾಡುವುದು ನಿಲ್ಲಿಸಿತು,ಅಕಸ್ಮಾತಾಗಿ ಆದ ಈ ಘಟನೆಯಿಂದ ಎಲ್ಲರಿಗೂ ಆಘಾತವಾಗಿತ್ತು. ಈ ಘಟನೆ ಆದಾಗ ರಮೇಶ ವಿದೇಶದಲ್ಲಿದ್ದ, ಕಂಪನಿಯ ಪ್ರಮುಖ ಪದದಲ್ಲಿದ್ದ ಕಾರಣ  ಅವನಿಗೆ ಎಲ್ಲ ಬಿಟ್ಟು ಹೀಗೆ ಅಕಸ್ಮಾತ್ ಭಾರತ ಹೋಗುವುದು ಸಹ ಸಾಧ್ಯವಾಗಿರಲಿಲ್ಲ. ಕಂಪನಿಯ ನಿಯಮದ ಪ್ರಕಾರ ಅವನ  ರಜೆ ಎರಡು ತಿಂಗಳ ನಂತರ ಡ್ಯೂ ಆಗುತ್ತಿತ್ತು ಹಾಗು ಅದೇ ಕಾರಣದಿಂದ ಅವನು ಪತ್ನಿ ಹಾಗು ಮಗನ ವೀಸಾ ತೆಗೆದಿಟ್ಟದ್ದ.  ಆದರೆ ಈ ತುರ್ತುಪರಿಸ್ಥತಿಯಲ್ಲಿ ಅವನಿಗೆ ಏನೂ ತೋಚದೆ ಅವನು ಪತ್ನಿ ಸುಮಾಳನ್ನು ಊರಿಗೆ ಹೋಗಲು ಹೇಳಿ  ಅಮ್ಮನನ್ನು ನೋಡಿಕೊಳ್ಳಲು ಹೇಳದ್ದ, ಅವನ ತಂಗಿ ಸುನೀತಾ  ಸಹ ಅಮ್ಮನ ಸುದ್ಧಿ ಕೇಳಿ ಊರಿಗೆ ಹೋಗಿದ್ದಳು. 

ಒಂದು ವಾರ ಆಸ್ಪತ್ರೆಯಲ್ಲಿದ್ದು ಅಲ್ಲಿಯ ಉಪಚಾರದ ನಂತರ ಅಮ್ಮನನ್ನು ಆಸ್ಪತ್ರೆಯಿಂದ ವೀಲ್ ಚೇರಲ್ಲಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಊರಿನ ಮನೆಯಲ್ಲಿ ಇನ್ನು ಅಮ್ಮನ ಚಾಕರಿ ಮಾಡುವುದು ಯಾರು? ಎಂಬ ಪ್ರಶ್ನೆ ನಿರ್ಮಾಣವಾಯಿತು. ಊರಲ್ಲಿ ಇದ್ದ ರಮೇಶನ ಇಬ್ಬರು ಚಿಕ್ನಮ್ಮನವರು ಅವರಿಂದ ಇದು ಸಾಧ್ಯವಾಗದು ಎಂದು ಮೊದಲೇ ತಿಳಿಸಿದರು, ಅವರ ಮಾತು ಸಹ ಸರಿಯಾಗಿತ್ತು, ಮೊದಲೇ ಊರಲ್ಲಿ ರಮೇಶನ ಒಂದು ಮಾವ ಸಹ ಪಕ್ಷವಾತ ಆಗಿ ಹಾಸಿಗೆ ಹಿಡಿದಿದ್ದರು ಹಾಗು ಅವರ ಚಾಕರಿಯ ಭಾರ ಸಹ ಚಿಕ್ಕಮ್ಮನವರ ಮೇಲೆ ಇತ್ತು, ಮೇಲಿಂದ ಚಿಕ್ಕಮ್ಮನವರಿಗೂ ಈಗ ವಯಸ್ಸಾದ ಕಾರಣ ಆ ಕಾಯಿಲೆ, ಈ ಕಾಯಿಲೆ ಎಂಬ ದಿನನಿತ್ಯದ ಗೋಳು, ಅವರು ಯಾವುದೇ ಪರಿಸ್ಥಿತಿಯಲ್ಲಿ ಈ  ಜವಾಬ್ದಾರಿ  ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. ಬಡ ಪರಿಸ್ಥಿತಿಯಲ್ಲಿದ್ದ ರಮೇಶನ ಅಣ್ಣ ದಿರೇಶ  ತನ್ನ ಸಂಸಾರದಲ್ಲಿ ಮಗ್ನನಾಗಿದ್ದ ಹಾಗು ಅವನಿಂದ ಅಮ್ಮನ ಚಾಕರಿ ಮಾಡುವ ಶಕ್ತಿ ಸಾಮರ್ಥ್ಯ ಇರಲಿಲ್ಲ.  

ಒಬ್ಬನೇ ವಿದೇಶದಲ್ಲಿದ್ದ ರಮೇಶ ತುಂಬಾ ಚಿಂತೆಯಲ್ಲಿದ್ದ  ಹಾಗು ಅಮ್ಮನ ಬಗ್ಗೆ ಯೋಚಿಸಿ ಅಳುತ್ತಿದ್ದ, ಅದರ ಮೇಲೆ ಪತ್ನಿ ಸುಮಾ ಹಾಗು ಮಗನ ಬಗ್ಗೆ ಯೋಚಿಸಿ ಅವನ ಚಿಂತೆ ಹೆಚ್ಚಾಗುತ್ತಿತ್ತು, ಅವರ ವೀಸಾ ಮಾಡಿ ಆಗಿದೆ ಇನ್ನು ಹೇಗೆ ಇಲ್ಲಿ ವಿದೇಶಕ್ಕೆ ಕರೆದುಕೊಂಡು  ಬರುವುದು? ಅಮ್ಮನನ್ನು ಯಾರು ನೋಡುವುದು? ನಾನು ಇಲ್ಲಿ ಕೆಲಸ ಬಿಟ್ಟು ಹೋಗುವ ಹಾಗೆ ಸಹ ಇಲ್ಲ. ಕೆಲಸ ಬಿಟ್ಟರೆ ಭಾರತದಲ್ಲಿ ಜೀವನೋಪಾಯಗೋಸ್ಕರ ಏನು ಮಾಡುವುದು? ಸ್ವಂತ ಮನೆ ಸಹ ಇಲ್ಲ, ಹಣ ಇಲ್ಲದೆ ಅಮ್ಮನ ಚಿಕೆತ್ಸೆಯ ಖರ್ಚು ಎಲ್ಲಿಂದ ತರುವುದು? ಎಂಬ ನೂರಾರು ಪ್ರಶ್ನೆ ಅವನನ್ನು ಕಾಡುತ್ತಿತ್ತು.  

ದುಃಖಿತ ರಮೇಶ  ತನ್ನ  ತಂಗಿ ಸುನೀತಾ ಜೊತೆ ಫೋನಲ್ಲಿ ಮಾತನಾಡಿ ನೀನು  ಈಗ ಅಮ್ಮನನ್ನು  ಮುಂಬೈಗೆ  ಕರೆದುಕೊಂಡು ಹೋಗು, ಅಮ್ಮನ ಚಿಕೆತ್ಸೆಗೆ ಹಾಗು ಅವರ ಎಲ್ಲ ಖರ್ಚು ನಾನು ನಿನಗೆ ಕಳುಹಿಸುತ್ತೇನೆ ಎಂದು ಅತ್ತು ಬೇಡಿದ, ಭಾವಪರವಶವಾಗಿ ಅವನ ಮಾತಿಗೆ ಅವಾಗ ತಂಗಿ ಸುನೀತಾ ಒಪ್ಪಿಗೆ ಸೂಚಿಸಿದಳು  ಹಾಗು  ಯಾವುದೇ  ಹಾದಿ ಇಲ್ಲದೆ ಸುನೀತಾ ಅಮ್ಮನನ್ನು ಮುಂಬೈಗೆ ಕರೆದುಕೊಂಡು ಬಂದಿದ್ದಳು ಹಾಗು ಅಲ್ಲಿ ಅಮ್ಮನ ಉಪಚಾರ ಮಾಡುತ್ತಿದ್ದಳು.

ಆದರೆ ಇಂದು ತಂಗಿ ಸುನೀತಾಳ ಮಾತು ಕೇಳಿ ರಮೇಶ ಪುನಃ ಜೀವನದ ವಿಚಿತ್ರ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿದ. 


(ಮುಂದುವರಿಯುತ್ತದೆ) 

by  ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ : ಗೂಗಲ್ 

Wednesday, January 29, 2020

ಇಂದು ನನ್ನ

ಇಂದು ನನ್ನ
ಸಂತೋಷಕ್ಕೆ ಮಿತಿಯೇ ಇಲ್ಲ
ಬರುತ್ತಿದ್ದಾನೆ
ವಿದೇಶದಿಂದ ನನ್ನ ನಲ್ಲ

ಹಾರುತ್ತಿದೆ
ಎತ್ತರದಲಿ
ನನ್ನ ಹೃದಯದ ಗಾಳಿಪಟ
ಬೀಸುತ್ತಿದೆ
ಹರ್ಷದ ತಂಗಾಳಿ
ನಿಲ್ಲಲಾರದು ನನ್ನಆನಂದದ  ಓಟ
ಪಾದಗಳು ನನ್ನ ನಿಯಂತ್ರಣದಲ್ಲಿಲ್ಲ

ಇಂದು ನನ್ನ
ಸಂತೋಷಕ್ಕೆ ಮಿತಿಯೇ ಇಲ್ಲ...

ಕಾದು ಕಾದು
ಕಂಗಳು ಸೋತುಹೋಗಿತ್ತು
ಇಂದು ಸಿಕ್ಕಿದೆ ಕಂಗಳಿಗೆ ಹೊಳಪು
ಏಕಾಂತ ಏಕಾಂತ
ಜೀವನ ನೀರಸವಾಗಿತ್ತು
ಇಂದು ಜೀವನದಲಿ ಹರಡಿದೆ ಹೊಸ ಕಂಪು
ಹೊಸ ಚೇತನದಿಂದ ತುಂಬಿದೆ ಮೈಯೆಲ್ಲ

ಇಂದು ನನ್ನ
ಸಂತೋಷಕ್ಕೆ ಮಿತಿಯೇ ಇಲ್ಲ...

by ಹರೀಶ್ ಶೆಟ್ಟಿ, ಶಿರ್ವ


ಚಿತ್ರ ಕೃಪೆ : ಗೂಗಲ್ 

Tuesday, January 28, 2020

ವ್ಯಾನಿಟಿ ಬ್ಯಾಗ್ ೬ (ಅಂತಿಮ ಭಾಗ)


ಇನ್ನು ಕೆಲವು ನಿಮಿಷ ಕಳೆದೋದ ನಂತರ ಮುಖ್ಯ ಪೊಲೀಸ್ ಅಧಿಕಾರಿ ಹಾಗು ಎಲ್ಲ ಪೊಲೀಸ್ ತಂಡ, ರಾಣೆ ಜೊತೆ ಹೋದ ಯುವತಿಯ ಹಾಗು ಪರಾರಿ ಆಗಲು ಪ್ರಯತ್ನಿಸಿದ ವ್ಯಕ್ತಿಯೊಟ್ಟಿಗೆ ಕ್ಯಾಬಿನ್ ನಿಂದ ಹೊರಗೆ ಬಂದರು, ಕಾನ್ಸ್ಟೇಬಲ್ ಗೈತೊಂಡೆ ಆ ವ್ಯಕ್ತಿಯನ್ನು ಈಗಲೂ ಹಿಡಿದಿದ್ದ.

ಹೊರಗೆ ಮುಖ್ಯ ದ್ವಾರದಲ್ಲಿ ವರದಿಗಾರರ ಗಲಾಟೆ ನೋಡಿ ಮುಖ್ಯ ಪೊಲೀಸ್ ಅಧಿಕಾರಿಯವರು ಸೆಕ್ಯುರಿಟಿಗೆ "ಅವರನ್ನು ಒಳಗೆ ಬಿಡಿ" ಎಂದು ಕೈ ಸನ್ನೆ ಮಾಡಿದರು. 

ವರದಿಗಾರರು ಒಳಗೆ ಬಂದ ಕೂಡಲೇ ಮುಖ್ಯ ಪೊಲೀಸ್ ಅಧಿಕಾರಿಯೊಂದಿಗೆ ಪ್ರಶ್ನೆ ಮಾಡಲು ಶುರು ಮಾಡಿದರು.

ಮುಖ್ಯ ಪೊಲೀಸ್ ಅಧಿಕಾರಿ "ನೋಡಿ ನಿಮ್ಮ ಎಲ್ಲ ಪ್ರಶ್ನೆಗಳ ಉತ್ತರ ನಿಮಗೆ ಸಿಗುತ್ತದೆ ಆದರೆ ಸ್ವಲ್ಪ ಶಾಂತತೆ ಇರಲಿ, ನಾನು ನಿಮಗೆ ಇಂದು ಬ್ಯಾಂಕಲ್ಲಿ ನಡೆದ ಯುವತಿಯ ಕೊಲೆಯ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತೇನೆ.

ಆದರೂ ವರದಿಗಾರರು ಅವರ ಸ್ವಭಾವದ ಪ್ರಕಾರ ಪ್ರಶ್ನೆ ಮಾಡುತ್ತಲೇ ಇದ್ದರು, ಇದರಿಂದ ಕೋಪಗೊಂಡು ಮುಖ್ಯ ಪೊಲೀಸ್ ಅಧಿಕಾರಿಯವರು "ನೋಡಿ ನೀವು ಹೀಗೆ ಗಲಾಟೆ ಮಾಡಿದ್ದಾರೆ ನಾನು ನಿಮಗೆ ಏನೂ ಮಾಹಿತಿ ನೀಡದೆ ಹೊರಟು ಹೋಗುತ್ತೇನೆ, ಸ್ವಲ್ಪ ಧೈರ್ಯ ಇರಲಿ". ಇದನ್ನು ಕೇಳಿ ವರದಿಗಾರರು ನಿಶ್ಯಬ್ದ ನಿಂತುಕೊಂಡರು.

ಪೊಲೀಸ್ ಮುಖ್ಯ ಅಧಿಕಾರಿಗಳು ವಿವರಣೆ ನೀಡಲು ಶುರು ಮಾಡಿದರು "ಇಂದು ಕೊಲೆಯಾದ ಯುವತಿಯ ಹೆಸರು ಶ್ರುತಿ ಪಟೇಲ್ ಅಂತ, ಇವಳು ಮೂಲತಃ  ಗುಜರಾತ್ ದವಳು,  ಇವಳು ಹಾಗು ಇವಳ ಮೂರು ಜತೆಗಾರರು ಒಟ್ಟಿಗೆ ಗುಜರಾತಲ್ಲಿ ಒಂದು ಬ್ಯಾಂಕ್ ಲೂಟಿ ಮಾಡಿ ಅಲ್ಲಿಂದ ಇಲ್ಲಿ ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಬಂದು ಇವಳು ಲೂಟಿ ಮಾಡಿದ ಹಣ ಇಲ್ಲಿ ಈ ಬ್ಯಾಂಕಲ್ಲಿ ಇವಳ ಒಂದು ಸಂಬಂಧಿಕರ ಲಾಕರಲ್ಲಿ ಇಟ್ಟಿದ್ದಳು, ಹಣದ ಪಾಲಿನ ವಿಷಯದಲ್ಲಿ ಇವರ ಮಧ್ಯೆ ಜಗಳವಾಗಿ ಇವಳು ತನ್ನ ಮೂವರು ಜತೆಗಾರರಲ್ಲಿ ಇಬ್ಬರನ್ನು ಕೊಂದು ಅಲ್ಲಿಂದ ಪರಾರಿಯಾದಳು, ಒಬ್ಬಾತ ಹೇಗೋ ತನ್ನ ಜೀವ ಉಳಿಸಿ ಅಲ್ಲಿಂದ ಓಡಿ ಹೋಗಿದ್ದ. ನಂತರ ಇವಳು ಈ ಬ್ಯಾಂಕ್ ಗೆ  ಲಾಕರಲ್ಲಿದ್ದ ಎಲ್ಲ  ಹಣ ತಾನೇ ಒಬ್ಬಳು ತೆಗೆದು ಓಡಿ ಹೋಗುವ ಎಂಬ  ಉದ್ದೇಶದಿಂದ ಬಂದಿದ್ದಳು. ಆದರೆ ಓಡಿ ಹೋಗಿದ್ದ ಜತೆಗಾರ  ಸೇಡು ತೀರಿಸಿಕೊಳ್ಳಲು ಇವಳನ್ನು ಹಿಂಬಾಲಿಸಿ ಇಲ್ಲಿಗೆ ಬಂದು  ಸೈಲೆನ್ಸರ್ ಇದ್ದ ಗನ್ ನಿಂದ ಇವಳನ್ನು ಶೂಟ್ ಮಾಡಿದ, ಯುವತಿಯ ಸ್ಥಳದಲ್ಲೇ  ಮೃತ್ಯು ಆಯಿತು. ಕೊಲೆ ಮಾಡಿದ ಜತೆಗಾರ ನಂತರ ಯುವತಿಯ ವ್ಯಾನಿಟಿ ಬ್ಯಾಗ್ ದೋಚಿ ಬ್ಯಾಂಕಿನ ಕಿಟಕಿಯಿಂದ  ಪರಾರಿಯಾಗುವಾಗ ನಮ್ಮ ಸಾಹಸಿ ಪೊಲೀಸ್ ತಂಡ ಇವನನ್ನು ಬಂಧಿಸಿದರು. ಈತನ ಹತ್ತಿರ ಒಂದು ಗನ್ ಹಾಗು ಯುವತಿಯ ವ್ಯಾನಿಟಿ ಬ್ಯಾಗ್ ಸಿಕ್ಕಿತ್ತು. ಈತನ ಹೆಸರು ಮನು ಶಾಹ ಅಂತ ಗೊತ್ತಾಯಿತು ಹಾಗು ಇವನು ಯುವತಿಯ  ವ್ಯಾನಿಟಿ  ಬ್ಯಾಗ್ ಲಾಕರಿನ ಕೀ ಗೋಸ್ಕರ ದೋಚಿದ್ದು,  ನಮ್ಮ ಸ್ವಲ್ಪ ಪ್ರಯತ್ನದಿಂದಲೇ ಇವನು ಎಲ್ಲ ಪ್ರಕರಣದ ಬಗ್ಗೆ ವಿವರವಾಗಿ ಹೇಳಿದ ಹಾಗು ಯುವತಿಯ ಕೊಲೆ ಮಾಡಿದನ್ನೂ ಒಪ್ಪಿಕೊಂಡ".

"ಈ ಮಧ್ಯೆ ನಮಗೆ ಇನ್ನೊಂದು ವ್ಯಾನಿಟಿ ಬ್ಯಾಗ್ ಸಿಕ್ಕಿತ್ತು, ಆ ವ್ಯಾನಿಟಿ ಬ್ಯಾಗ್ ನಿಂದ ನಾವು ಸ್ವಲ್ಪ ಗೊಂದಲದಲ್ಲಿ ಸಿಕ್ಕಿದೆವು ಆದರೆ ಈ ಯುವತಿ " ಎಂದು ಅವರು ಬಲವಂತವಾಗಿ ಬ್ಯಾಂಕ್ ಒಳಗೆ ಬರಲು ಪ್ರಯತ್ನಿಸುತ್ತಿದ್ದ ಯುವತಿಯನ್ನು ತೋರಿಸಿ ಮಾತು ಮುಂದುವರಿಸಿದರು "ಬಂದ ನಂತರ ನಮಗೆ ಈ ವ್ಯಾನಿಟಿ ಬ್ಯಾಗ್ ಇವರದ್ದು ಎಂದು ತಿಳಿಯಿತು,ಇವರ ಹೆಸರು ಸೌಮ್ಯ ಗೌಡ ಅಂತ, ಇವರ ಈ ಪ್ರಕರಣದಲ್ಲಿ ಯಾವುದೇ ಸಂಬಂಧ ಇಲ್ಲ, ಇವರು ಗಡಿಬಿಡಿಯಲ್ಲಿ ತನ್ನ ವ್ಯಾನಿಟಿ ಬ್ಯಾಗ್  ಬ್ಯಾಂಕಲ್ಲಿ  ಕುಳಿತಲ್ಲಿ ಮರೆತು ಹೋದದ್ದು, ಆದರೆ ರಾಣೆ ಹೇಳಿದ ಪ್ರಕಾರ ಇದು ಆ ಮೂಲೆಗೆ ಹೇಗೆ ಹೋಯಿತೆಂದು ಗೊತ್ತಾಗಲಿಲ್ಲ, ಆದರೆ  ಅದು ತಿಳಿಯುವ ಇನ್ನೇನು ಅವಶ್ಯಕತೆ ಉಳಿಯಲಿಲ್ಲ, ಇವರ ವ್ಯಾನಿಟಿ ಬ್ಯಾಗ್ ಇವರ ಕೈಗೊಪ್ಪಿಸಿದ್ದೇವೆ"  

ಈ ಮಾತು ಕೇಳಿ ನನಗೆ ನಾನು ವ್ಯಾನಿಟಿ ಬ್ಯಾಗ್ ಎತ್ತಿದ ಜಾಗ ನೆನಪಾಯಿತು, ಹೌದು ಅದರ ಬದಿಯಲ್ಲಿಯೇ ಕುಳಿತು ಕೊಳ್ಳಲು ಸೋಫಾ ಇತ್ತು, ಬಹುಶಃ ಅಲ್ಲಿಂದ ಅದು ಜಾರಿ ಕೆಳಗೆ ಬಿದ್ದಿರಬೇಕು. 

"ನಮ್ಮ ಒಂದು  ತಂಡ ಕೊಲೆಯಾದ ಯುವತಿ  ತನ್ನ ಎರಡು ಜತೆಗಾರರ ಕೊಲೆ  ಮಾಡಿದ ಜಾಗಕ್ಕೆ ಹೋಗಿ ಅಲ್ಲಿ ಬಿದ್ದಿದ ಎರಡು ಶವಗಳನ್ನು ಪೋಸ್ಟ್ ಮಾರ್ಟಮ್ ಗೆ ಕಳಿಸಿ ಅಲ್ಲಿಯ ಕೋಣೆಯನ್ನು ಸೀಲ್ ಮಾಡಿದ್ದಾರೆ, ಅವರಿಬ್ಬರ ಹೆಸರು ಜೋಗ ಸಿಂಗ್ ಮತ್ತು ಪ್ರದೀಪ್ ಕುಮಾರ್ ಎಂದು ಕೊಲೆಗಾರ ಮನು ಶಾಹನಿಂದ ತಿಳಿಯಿತು.  ನಮ್ಮ ಇನ್ನೊಂದು ತಂಡ ಕೊಲೆಯಾದ ಯುವತಿಯ ಸಂಬಂಧಿಕರ ಮನೆಗೆ ಹೋಗಿ ಅವನನ್ನು  ಬಂಧಿಸಿದ್ದಾರೆ, ಆತ ಈ ಯುವತಿಯ ಮಾವ ಹಾಗು ಅವನ ಹೆಸರು ಜತಿನ್ ಪಟೇಲ್ ಅಂತ".

"ಇಂದಿನ ಪ್ರಕರಣವನ್ನು ಪೂರ್ಣವಾಗಿ ಹಾಗು ವಿಸ್ತಾರವಾಗಿ ನಾನು  ನಿಮಗೆ ತಿಳಿಸಿದ್ದೇನೆ,  ಇಲ್ಲಿದ್ದ ಎಲ್ಲ ಜನರಿಗೂ ಹಾಗು ಬ್ಯಾಂಕಿನ ಸಿಬ್ಬಂದಿಯರಿಗೂ ಅವರು ನೀಡಿದ ಸಹಕಾರಕ್ಕೆ ಧನ್ಯವಾದಗಳು, ತಮ್ಮೆಲ್ಲರ ಸಹಕಾರದಿಂದಲೇ ಈ ಕೇಸ್ ಇಷ್ಟು ಬೇಗನೆ ಪರಿಹರಿಸಲು ಸಾಧ್ಯವಾಯಿತು, ತಾವೆಲ್ಲರೂ ಇನ್ನು ಇಲ್ಲಿಂದ ಹೋಗಬಹುದು, ಥಾಂಕ್ ಯು ವೆರಿ ಮಚ್" ಎಂದು ಹೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು ತನ್ನ ಮಾತು ಮುಗಿಸಿದರು. 

ಇಂದಿನ ರೋಮಾಂಚಕ ಅನುಭವ ಅನುಭವಿಸಿ ಅಲ್ಲಿದ್ದ ಎಲ್ಲ ಜನರು ತನ್ನ ಪಾಡಿಗೆ ಅಲ್ಲಿಂದ ಹೊರಟುಹೋದರು. 

ನಾನು ಸಹ ಒಂದು ಶಾಂತಿಯ ನಿಟ್ಟುಸಿರು ಬಿಟ್ಟೆ ಹಾಗು ಇನ್ನು ಮೇಲೆ ಯಾವುದೇ ಅಪರಿಚಿತ ವಸ್ತು ಮುಟ್ಟಬಾರದು ಮತ್ತು ಇತರರ ವಿಷಯದಲ್ಲಿ ನುಗ್ಗಬಾರದು ಎಂದು ಪ್ರತಿಜ್ಞೆ ಮಾಡಿದೆ.

(ಮುಗಿಯಿತು)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Monday, January 27, 2020

ವ್ಯಾನಿಟಿ ಬ್ಯಾಗ್ ೫


"ರಾಣೆ, ನೀವು ಈ ವ್ಯಾನಿಟಿ ಬ್ಯಾಗ್ ತೆರೆದು ಚೆಕ್ ಮಾಡಿದ್ದೀರಾ"? ಎಂದು ಸಬ್  ಇನ್ಸ್ಪೆಕ್ಟರ್ ಪಾಟೀಲ್ ಕಾನ್ಸ್ಟೇಬಲ್ ರಾಣೆಗೆ  ಕೇಳಿದರು.

ಕಾನ್ಸ್ಟೇಬಲ್ ರಾಣೆ "ಇಲ್ಲ ಸಾರ್, ನಾನು ತೆರೆದು ನೋಡಲಿಲ್ಲ".

ಪಾಟೀಲ್ ಆ ವ್ಯಾನಿಟಿ ಬ್ಯಾಗ್ ತೆರೆದು ನೋಡಿದರು, ಅದರಲ್ಲಿ ಏನು ವಿಶೇಷ ವಸ್ತು ಇರಲಿಲ್ಲ, ಕೆಲವು ರೂಪಾಯಿ, ಒಂದು ಕೀ  ಹಾಗು ಒಂದು ಡೆಬಿಟ್ ಕಾರ್ಡ್ ಇತ್ತು, ಡೆಬಿಟ್ ಕಾರ್ಡ್ ಮೇಲೆ "ಸೌಮ್ಯ ಗೌಡ" ಅಂತ ಹೆಸರಿತ್ತು. 

ಪಾಟೀಲ್ "ಸೌಮ್ಯ ಗೌಡ"? 

"ಒಂದು  ವೇಳೆ ಈ ಬ್ಯಾಗ್ ಕೊಲೆಯಾದ ಯುವತಿಯ ಆಗಿದ್ದರೆ, ಈ ಯುವತಿಯ ಹೆಸರು ಸೌಮ್ಯ ಗೌಡ ಎಂದಿರಬೇಕು" ಪಾಟೀಲ್ ರಾಣೆ ಹತ್ತಿರ ಹೇಳಿದರು.

ರಾಣೆ " ಹೌದು ಸಾರ್,  ಆದರೆ ಒಳಗೆ ಸಾಹೇಬರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ಪರಿಶೀಲಿಸಿ ನೋಡಿದ ನಂತರವೇ ಇದು ಖಚಿತಪಡಬಹುದು".

ಪಾಟೀಲ್ "ಹ್ಮ್ಮ್...ರಾಣೆ, ನೀವು ಇಲ್ಲಿಯ ಕಾರ್ಯ ಪೂರ್ಣಗೊಳಿಸಿ, ನಾನು ಸಾಹೇಬರಿಗೆ ಸಿಕ್ಕಿ ಬರುತ್ತೇನೆ".

ರಾಣೆ " ಓಕೆ, ಸಾರ್".

ಪಾಟೀಲ್ ವ್ಯಾನಿಟಿ ಬ್ಯಾಗ್ ಹಿಡಿದು ಮುಖ್ಯ ಪೊಲೀಸ್ ಅಧಿಕಾರಿಯಲ್ಲಿಗೆ ಹೋದರು.

ತುಂಬಾ ಸಮಯ ಕಳೆದೋಯಿತು, ಒಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ, ನಾನು ಮತ್ತು ಇತರ ಜನರು ಸೋತು ಕಂಗಾಲಾಗಿದ್ದರು. 

ಆಗ ಮುಖ್ಯ ದ್ವಾರದಲ್ಲಿ ಸೆಕ್ಯೂರಿಟಿ ಜೊತೆ ಒಂದು ಹೆಂಗಸು ಗಟ್ಟಿಧ್ವನಿಯಲ್ಲಿ ವಾದ ಮಾಡುವುದು ಕೇಳಿ ಬಂತು, ಅದನ್ನು ಕೇಳಿ ರಾಣೆ ಸೆಕ್ಯೂರಿಟಿಗೆ  "ಏನಲ್ಲಿ"?

ಸೆಕ್ಯೂರಿಟಿ " ಸಾರ್ , ಈ ಹೆಂಗಸು ನೋಡಿ, ಒಳಗೆ ಬಿಡಬೇಕೆಂದು ಹಠ ಮಾಡುತ್ತಿದ್ದಾರೆ".

ರಾಣೆ ಮುಖ್ಯ ದ್ವಾರಕ್ಕೆ ಹೋಗಿ ಕೆಲವು ನಿಮಿಷ ಆ ಹೆಂಗಸು ಜೊತೆ ವಿಮರ್ಶೆ ಮಾಡಿ ನಂತರ ಆ ಹೆಂಗಸನ್ನು ಜೊತೆಯಲ್ಲಿ ಕರೆದುಕೊಂಡು ಒಳಗೆ ನೇರ ಮುಖ್ಯ ಪೊಲೀಸ್ ಅಧಿಕಾರಿಯ ತನಿಖೆ ನಡೆಯುತ್ತಿದ್ದ ಕ್ಯಾಬಿನ್ ಗೆ ಹೋದರು. 

ಇನ್ನು ಕೆಲವು ನಿಮಿಷ ಕಳೆದೋಯಿತು, ಮುಖ್ಯ ದ್ವಾರದಲ್ಲಿ ಮಾಧ್ಯಮ ಪ್ರಸಾರ ಹಾಗು ವರದಿಗಾರರ ಗುಂಪು ಒಳಗೆ ಬರಲು ಯತ್ನಿಸುತ್ತಿದ್ದರು, ಸೆಕ್ಯೂರಿಟಿ ಅವರನ್ನು ಸ್ವಲ್ಪ ಹೊತ್ತು ತಡೆಯಲು ವಿನಂತಿಸುತ್ತಿದ್ದರು.

ನನ್ನ ಕುತೂಹಲ ಪರಾಕಾಷ್ಠೆಯಲ್ಲಿತ್ತು,  ಯಾರಿರಬಹುದು  ಈ ಹೆಂಗಸು? ಯಾಕೆ ಒಳಗೆ ಬರಲು ಯತ್ನಿಸುತ್ತಿದ್ದಳು ??  ರಾಣೆ ಅವಳನ್ನು ಯಾಕೆ ಒಳಗೆ ಕರೆದುಕೊಂಡು ಹೋದರು???

ರಹಸ್ಯ ಗಾಢವಾಗುತ್ತ ಹೋಗುತ್ತಿತ್ತು.

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ,ಶಿರ್ವ
ಚಿತ್ರ ಕೃಪೆ : ಗೂಗಲ್

Sunday, January 26, 2020

ವ್ಯಾನಿಟಿ ಬ್ಯಾಗ್ ೪


ಸಬ್ ಇನ್ಸ್ಪೆಕ್ಟರ್ ಪಾಟೀಲ್ ಶವ ಪೋಸ್ಟ್ ಮಾರ್ಟಮ್ ಗೋಸ್ಕರ ಕಳಿಸುವ  ಸಿದ್ಧತೆಯಲ್ಲಿದ್ದಾಗ ಅಲ್ಲಿಗೊಬ್ಬ ಪೊಲೀಸ್ ಕಾನ್ಸ್ಟೇಬಲ್ ಬಂದು "ಸಾರ್, ಇದೊಂದು ವ್ಯಾನಿಟಿ ಬ್ಯಾಗ್ ಸಿಕ್ಕಿದೆ". 

ಯಾಕೋ ಪುನಃ ಒಂದು ಸಲ ನನ್ನಲ್ಲಿ  ಭಯ ಆವರಿಸಿತು.  

ಅವರ ಸಂಭಾಷಣೆ ನಡೆಯುತ್ತಿದಂತಲೇ ಬ್ಯಾಂಕಿನ ಆ ಕಡೆಯಿಂದ ಏನೋ  ಗಲಾಟೆ ಕೇಳಿ ಬಂತು ಹಾಗು ಎಲ್ಲರ ದೃಷ್ಟಿ ಆ ಕಡೆ ಹೋಯಿತು. 

ಮೂರು ನಾಲ್ಕು ಕಾನ್ಸ್ಟೇಬಲ್ ನವರು ಒಂದು ವ್ಯಕ್ತಿಯನ್ನು ಹಿಡಿದು ಬರುತ್ತಿದ್ದರು, ಆತ ತನ್ನನ್ನು ಬಿಡಿಸಲು ಪ್ರಯತ್ನಿಸುತ್ತಿದ್ದ. 

ಈ ಗಲಾಟೆ ಕೇಳಿ ಕ್ಯಾಬಿನ್ ಒಳಗೆ ಇದ್ದ ಮುಖ್ಯ ಪೊಲೀಸ್  ಅಧಿಕಾರಿಯವರು ಸಹ ಹೊರಗೆ ಬಂದು "ಏನದು ಗಲಾಟೆ, ಗೈತೊಂಡೆ ಏನಾಯಿತು". 

ಆ ವ್ಯಕ್ತಿಯುನ್ನು ಹಿಡಿದ ಮೂವರಲ್ಲಿ ಕಾನ್ಸ್ಟೇಬಲ್ ಗೈತೊಂಡೆ "ಸಾರ್, ಈತ ಕಣ್ಣು ತಪ್ಪಿಸಿ ಬ್ಯಾಂಕಿನ ಕಿಟಕಿಯಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದ, ಇವನನ್ನು ಹಿಡಿದಾಗ ಇವನ ಹತ್ತಿರ ಈ ಗನ್ ಹಾಗು ಈ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿದೆ" ಎಂದು ಕೈಯಲ್ಲಿದ್ದ ಗನ್ ಹಾಗು ವ್ಯಾನಿಟಿ ಬ್ಯಾಗ್ ಎತ್ತಿ ತೋರಿಸಿದ.  

ನಾನು ಇದನ್ನು ನೋಡಿ ಆಶ್ಚರ್ಯಪಟ್ಟೆ "ಅರೆ, ಇದೇನು ಗೊಂದಲ!!ಎರೆಡೆರಡು ವ್ಯಾನಿಟಿ ಬ್ಯಾಗ್!!". 

ಕಾನ್ಸ್ಟೇಬಲ್ ಗೈತೊಂಡೆನ ಮಾತು ಕೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು "ಓಕೆ, ಅವನನ್ನು ಕ್ಯಾಬಿನ್ ಒಳಗೆ ಕರೆದುಕೊಂಡು ಬನ್ನಿ" ಎಂದು ಹೇಳಿದರು

ಮೂವರು ಕಾನ್ಸ್ಟೇಬಲ್ ನವರು ಆ ವ್ಯಕ್ತಿಯನ್ನು ಕ್ಯಾಬಿನ್ ಒಳಗೆ ಕರೆದುಕೊಂಡು ಹೋದರು. 


ಅವರು ಕ್ಯಾಬಿನ್ ಒಳಗೆ ಹೋದ ನಂತರ ಇಲ್ಲಿ ಸಬ್ ಇನ್ಸ್ಪೆಕ್ಟರ್ ಪಾಟೀಲ್ ಕಾನ್ಸ್ಟೇಬಲ್ ಜೊತೆ  "ರಾಣೆ, ಇದು ನಿಮಗೆ ಎಲ್ಲಿ ಸಿಕ್ಕಿದ್ದು"?

ಕಾನ್ಸ್ಟೇಬಲ್ ರಾಣೆ ನಾನು ವ್ಯಾನಿಟಿ ಬ್ಯಾಗ್ ಬಿಸಾಕಿದ ಸ್ಥಾನ ತೋರಿಸಿ "ಸಾರ್, ನಾನು ಆ  ಕಡೆಯಿಂದ ಬರುವಾಗ ಅಲ್ಲಿ ಮೂಲೆಯಲ್ಲಿ ಬಿದ್ದಿತ್ತು, ನಾನು ಎತ್ತಿಕೊಂಡು ಸೆಕ್ಯೂರಿಟಿಗೆ ತೋರಿಸಿ ವಿಚಾರಿಸಿದಾಗ ಅವನು ಈ ಕೊಲೆಯಾದ ಯುವತಿ ಬ್ಯಾಂಕ್ ಪ್ರವೇಶ ಮಾಡುವಾಗ ಈ  ವ್ಯಾನಿಟಿ ಬ್ಯಾಗ್ ಅವಳ ಹತ್ತಿರ ಇತ್ತು ಎಂದು ಹೇಳಿದನು"

ಪಾಟೀಲ್ "ಆದರೆ ರಾಣೆ, ಗೈತೊಂಡೆ ತೋರಿಸಿದ ವ್ಯಾನಿಟಿ ಬ್ಯಾಗ್ ಸಹ ಇದೆ ತರಹ ಇತ್ತು, ಇದೇನು ವಿಷಯ"?

ರಾಣೆ " ಅದೇ ಸಾರ್, ನನಗೂ ಆಶ್ಚರ್ಯವಾಯಿತು,ವಿಚಿತ್ರ ಏನೆಂದರೆ ಸಾರ್ ನಾನು ಅವಾಗ ಆ ಕಡೆ ಹೋಗುವಾಗ ಈ ವ್ಯಾನಿಟಿ ಬ್ಯಾಗ್ ಅಲ್ಲಿ ಇರಲಿಲ್ಲ  ". 

ಇದನ್ನು ಕೇಳಿ ನನ್ನ ಉಸಿರು ನಿಲ್ಲಿದಂತಾಯಿತು, ಇನ್ನು ಇವರು ಇದರ ಬಗ್ಗೆ ತನಿಖೆ ಮಾಡಿದರೆ ನಾನು ಸಿಕ್ಕಿಬೀಳುವೆನೋ, ಯಾರಾದರೂ ನನ್ನನ್ನು ನೋಡಿರಬೇಕಾ?  ಎಂಬ ಹೆದರಿಕೆ ಶುರುವಾಯಿತು , ಅಯ್ಯೋ.   

ಆದರೆ ಇದೇನು ಪ್ರಕಾರ? ಒಂದೇ ರೀತಿ ಹೋಲುವ ಎರಡು ವ್ಯಾನಿಟಿ ಬ್ಯಾಗ್?? ಇದೇನು ರಹಸ್ಯ ???

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Saturday, January 25, 2020

ವ್ಯಾನಿಟಿ ಬ್ಯಾಗ್ ೩


"ಸರ್, ಒಂದು ಕೆಟ್ಟ ಸುದ್ದಿ, ಇಂದು ಬೆಳಿಗ್ಗೆಯಿಂದ ಈ ಏರಿಯದಲ್ಲಿ ವಿದ್ಯುತ್ ಪ್ರವಾಹ ಇಲ್ಲ, ಅದಕ್ಕೆ ಬ್ಯಾಂಕಲ್ಲಿ ಜನರೇಟರ್ ಮೂಲಕ ವಿದ್ಯುತ್ ನಡೆಯುತ್ತಿತ್ತು, ಇಲ್ಲಿ ಎರಡು ಜನರೇಟರ್ ಇದೆ ಸರ್, ಒಂದು ವಿದ್ಯುತ್ ಗೋಸ್ಕರ ಇನ್ನೊಂದು ಸಿಸಿಟಿವಿಗೋಸ್ಕರ,  ಸರ್ ಸಿಸಿಟಿವಿಗೆ ಜೋಡಿಸಿದ ಜನರೇಟರಿನ ಡೀಸೆಲ್ ಮುಗಿದ ಕಾರಣ ಅದು ಇಂದು ಕೆಲಸ ಮಾಡುತ್ತಿರಲಿಲ್ಲ, ಆಫ್ ಮೋಡಲ್ಲಿತ್ತು, ಅದರ ಕಾರಣ ಅದರಲ್ಲಿ ಇಂದಿನ ಯಾವುದೇ ಫೂಟೇಜ್ ರೆಕಾರ್ಡ್ ಆಗಲಿಲ್ಲ, ಬ್ಯಾಂಕ್ ಅಧಿಕಾರಿಗಳಿಗೆ ಸಹ ಈಗ ತಾನೇ ಡೀಸೆಲ್ ಮುಗಿದ ವಿಷಯ ತಿಳಿದದ್ದು". 

ಇದನ್ನು ಕೇಳುತ್ತಲೇ  ನನ್ನ ಜೀವದಲ್ಲಿ ಜೀವ ಬಂದಂತಾಯಿತು, ನಾನು ನೆಮ್ಮದಿಯ ಉಸಿರು ಬಿಟ್ಟೆ, ಆದರೆ ಈಗಲೂ ಪರಿಸ್ಥಿತಿ ಪೂರ್ಣವಾಗಿ ನನ್ನ ಪರವಾಗಿ  ಇರಲಿಲ್ಲ, ಒತ್ತಡ  ಈಗಲೂ ಇತ್ತು. 

ಪಾಟೀಲ್ ರವರ ಮಾತು ಕೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು "ಒಹ್!! ಬ್ಯಾಂಕ್ ಅಧಿಕಾರಿಗಳಿಗೆ ಈ ಕಡೆ ಗಮನ ಇಡಬೇಕಿತ್ತು, ಸಿಸಿಟಿವಿಯ ಮಹತ್ವ ಅವರಿಗೆ ತಿಳಿದಿರಬೇಕು, ಇಂಥ ಘಟನೆ ನಡೆದಾಗಲೇ ಅದರ ಪ್ರಾಮುಖ್ಯತೆ ತಿಳಿಯುವುದು". 
ಎನಿವೇಸ್..... "ನಾನು ಇಲ್ಲಿದ್ದ ಜನರ ಹಾಗು ಬ್ಯಾಂಕ್ ಸಿಬ್ಬಂದಿಯರ ಒಟ್ಟಿಗೆ ವಿಚಾರಣೆ ಮಾಡುತ್ತೇನೆ,  ನೀವು ಯುವತಿಯ ಶವ ಪೋಸ್ಟ್ ಮಾರ್ಟಮ್ ಗೆ ಕಳಿಸಿ, ಶವದ ಬಳಿ ಯಾವುದೇ ವಸ್ತು ಹಾಗು ಪುರಾವೆ ಏನು ಸಿಗಲಿಲ್ಲ, ಇನ್ನು ಇಲ್ಲಿದ್ದ ಜನರ ಸ್ಕ್ಯಾನಿಂಗ್ ಆದ ನಂತರವೇ ಕೊಲೆಗಾರನ ಸುಳಿವು ಸಿಗಬಹುದು".  

ಪಾಟೀಲ್ " ಓಕೆ ಸರ್, ನಮ್ಮ ಟೀಮ್ ಸಹ ಇಡೀ ಬ್ಯಾಂಕ್ ಸ್ಕ್ಯಾನ್ ಮಾಡುತ್ತಿದ್ದಾರೆ, ಹೋಪ್ ಸಮ್ ಔಟ್ಕಮ್ ವಿಲ್ ಕಮ್".

ಮುಖ್ಯ ಪೊಲೀಸ್ ಅಧಿಕಾರಿಯವರು "ಡೆಫಿನೇಟೆಲಿ, ಲೆಟ್ಸ್ ಹೋಪ್ ಫಾರ್ ದ ಬೆಸ್ಟ್". 

ಸಿಸಿಟಿವಿ ಆಫ್ ಇದೆ ಎಂಬ ವಿಷಯ ತಿಳಿದ ನಂತರ ಈಗ ನನಗೆ ಹೇಗೆ ಸಹ ಬೇಗನೆ ಆ ವ್ಯಾನಿಟಿ ಬ್ಯಾಗ್ ನಿಂದ  ಮುಕ್ತಿ ಪಡೆಯಬೇಕು ಎಂಬ ವಿಚಾರ ಬಂತು, ನಾನು ಮೆಲ್ಲನೆ ಎಲ್ಲರ ಕಣ್ಣು ತಪ್ಪಿಸಿ ನನ್ನ ಬ್ಯಾಗಲ್ಲಿದ್ದ ವ್ಯಾನಿಟಿ ಬ್ಯಾಗ್ ತೆಗೆದು ಅಲ್ಲಿಯೇ ಒಂದು ಮೂಲೆಗೆ ಸಾಗಿಸಿದೆ.

ಒಮ್ಮೆ ಹೃದಯ ಜೋರಿಂದ ಬಡಿಯಲಾರಂಭಿಸಿತು, ಆದರೆ ನಂತರ ಏನೋ ಭಾರ ಇಳಿದಂತೆ ಬಾಸವಾಯಿತು, ನಾನು ಪುನಃ ಬಂದು ಜನರ ಸಾಲಿಗೆ ಸೇರಿದೆ. 

ಯಾಕೋ ಈಗ ನನಗೆ ನಾನು ತುಂಬಾ ಹಗುರ ಹಗುರವಾಗಿದ್ದೇನೆ ಎಂಬ ಅನುಭವ ಆಗುತ್ತಿತ್ತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್

Thursday, January 23, 2020

ವ್ಯಾನಿಟಿ ಬ್ಯಾಗ್ ೨



ಬ್ಯಾಂಕ್ ಮುಖ್ಯ ದ್ವಾರ  ಮೊದಲೇ ಬ್ಯಾಂಕ್ ಸೆಕ್ಯೂರಿಟಿ ಸೀಲ್ ಮಾಡಿದ್ದರು. ಪೊಲೀಸರು ಬಂದ ನಂತರ ಅವರು ಎಲ್ಲರಿಗೂ "ಯಾರು ಹೊರಗೆ ಹೋಗುವ ಹಾಗೆ ಇಲ್ಲ, ನಮ್ಮ ತನಿಖೆ ಮುಗಿದ ನಂತರವೇ ನಿಮ್ಮನ್ನು ಹೊರ ಬಿಡಲಾಗುವುದು" ಎಂದು ಎಚ್ಚರಿಕೆ ನೀಡಿದರು, ಜನರೆಲ್ಲ ಆತಂಕದಲ್ಲಿದ್ದರು, ಎಲ್ಲರ ಮನಸ್ಸಲ್ಲಿ ಒಂದೇ ಪ್ರಶ್ನೆ ಇದು ಹೇಗೆ ಆಯಿತೆಂದು?

ಪೊಲೀಸರ ತಂಡ ತನಿಖೆ ಮಾಡಲು ಅಲ್ಲಲ್ಲಿ ಹರಡಿದರು, ಪೊಲೀಸ್ ಮುಖ್ಯ ಅಧಿಕಾರಿ ತುಂಬಾ ಸೂಕ್ಷ್ಮ ರೀತಿಯಿಂದ ಯುವತಿಯ ಶವದ ಅಧ್ಯಯನ ಮಾಡುತ್ತಿದ್ದರು, ಅವರು ಸಬ್ ಇನ್ಸ್ಪೆಕ್ಟರ್ ಜೊತೆ " ಪಾಟೀಲ್, ಯಾರೋ ತುಂಬಾ ಸಮೀಪದಿಂದ ಸೈಲೆನ್ಸರ್ ಇದ್ದ ಗನ್ ನಿಂದ  ಯುವತಿಗೆ ಶೂಟ್ ಮಾಡಿರಬೇಕು ಹಾಗು ಶೂಟರ್ ಈಗಲೂ ಇಲ್ಲೇ ಬ್ಯಾಂಕಲ್ಲಿ ಇರಬೇಕು,ಯಾಕೆಂದರೆ ಬ್ಯಾಂಕ್ ಸೆಕ್ಯೂರಿಟಿ ಪ್ರಕಾರ ಪ್ರಕರಣ ಆದ  ಕೂಡಲೇ ಅವನು ಬ್ಯಾಂಕ್ ಮುಖ್ಯ ದ್ವಾರ  ಸೀಲ್ ಮಾಡಿದ್ದಾನೆ ".

ಪಾಟೀಲ್  "ಹೌದು ಸರ್, ನಾನು ಮ್ಯಾನೇಜರ್ ಹತ್ತಿರ ಸಿಸಿಟಿವಿ ಫೂಟೇಜ್ ತೋರಿಸಿಲಿಕ್ಕೆ ಹೇಳಿದ್ದೇನೆ, ಅದರಿಂದ ನಮಗೆ ಏನಾದರು ಕೊಲೆಗಾರನ ಸುಳಿವು ಸಿಗಬಹುದು ".

ಇದನ್ನು ಕೇಳಿ ನನಗೆ ಬೆವರು ಹರಿಯಲಾರಂಭಿಸಿತು, "ಏನು ಮಾಡಲಿ ಈಗ ವ್ಯಾನಿಟಿ ಬ್ಯಾಗನ್ನು ಮೆಲ್ಲನೆ ಎಲ್ಲಿಯಾದರೂ ಇಡಬೇಕೆಂದರೆ, ಅದು ಈಗ ಸಾಧ್ಯವಿಲ್ಲ, ಎಲ್ಲ ಕಡೆ ಪೊಲೀಸರು ಇದ್ದಾರೆ, ಅದರ ಮೇಲೆ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಇದೆ, ಅಯ್ಯೋ, ಎಲ್ಲಿ ಸಿಕ್ಕಿ ಬಿದ್ದೆ".   

ನನ್ನ ಮನಸ್ಸು ಪುನಃ ನನ್ನ ಮೇಲೆ ಕಿರುಚಿತು "ಹೇ  ಮೂರ್ಖ ,ನಿನ್ನ ಅವಸ್ಥೆ ನೋಡಿ ಯಾರು ಸಹ ನಿನ್ನ ಮೇಲೆ ಸಂಶಯ ಮಾಡಬಹುದು, ಸ್ವಲ ನಿನ್ನನ್ನು ಸಮಾಧಾನ ಮಾಡಿಸಿಕೊಳ್ಳು".

ನಾನು ಮುಖದಲ್ಲಿ ಮೂಡಿದ ಬೆವರನ್ನು ಒರೆಸಿ ಸ್ವಲ ತನ್ನನ್ನು ಸುಧಾರಿಸಿಕೊಂಡೆ ಹಾಗು  ಮೆಲ್ಲನೆ ವ್ಯಾನಿಟಿ ಬ್ಯಾಗ್ ನನ್ನ ಬ್ಯಾಗಿಗೆ ಸಾಗಿಸಿದೆ, "ನೋಡುವ ಏನಾಗುತ್ತದೆ, ಹೇಗೋ ತಪ್ಪು ಮಾಡಿ ಆಗಿದೆ, ಇನ್ನು ಅದನ್ನು ಎದುರಿಸಲೇ ಬೇಕು".

ಆಗ ಒಮ್ಮೆಲೇ ನನಗೆ ವಿಚಾರ ಬಂತು "ಯಾಕೆ ನಾನು ನೇರ ಹೋಗಿ ಬ್ಯಾಗನ್ನು  ಪೊಲೀಸರಿಗೆ ಕೊಡಬಾರದು? ಹೆಚ್ಚೆಚ್ಚು ಏನಾಗಬಹುದು? ಅವರು ಕೆಲವು ಪ್ರಶ್ನೆ ಕೇಳಬಹುದು ಅಷ್ಟೇ, ನಾನೇನು ಕೊಲೆಗಾರ ಅಲ್ಲ, ನನ್ನ ತಪ್ಪು ಕೇವಲ ಬ್ಯಾಗ್ ಎತ್ತು ತಂದದ್ದು, ಆದರೆ ಪುನಃ ಇನ್ನೊಂದು ವಿಚಾರ ಬಂತು " ಬ್ಯಾಗಲ್ಲಿ ಏನಿದೆ ಯಾರಿಗೆ ಗೊತ್ತು, ಏನಾದರು ಸಂಶಯಪ್ರದ ವಸ್ತು ಇದ್ದರೆ  ಪೊಲೀಸರು ನನ್ನನ್ನು ಬಿಡಲಿಕ್ಕಿಲ್ಲ, ನಂತರ ಸುಮ್ಮನೆ ಕೋರ್ಟ್ ಕಚೇರಿ ".

ಆಗ ಒಬ್ಬ ಪೊಲೀಸರು ಬ್ಯಾಂಕಲ್ಲಿ ಇದ್ದ ಎಲ್ಲ ಗ್ರಾಹಕರನ್ನು ಹಾಗು ಬ್ಯಾಂಕ್ ಸಿಬ್ಬಂದಿಯರನ್ನು ಸಾಲಾಗಿ ನಿಲ್ಲಬೇಕು ಹಾಗು ಪೊಲೀಸ್ ಮುಖ್ಯ ಅಧಿಕಾರಿಯವರು  ನಿಮ್ಮಿಂದ ಒಬ್ಬೊಬ್ಬರನ್ನು ಕರೆದು ತನಿಖೆ ಮಾಡುತ್ತಾರೆಂದು ಹೇಳಿದರು, ಇದನ್ನು ಕೇಳಿ ನನ್ನ ಶರೀರದಲ್ಲಿ ಪುನಃ ಗಾಬರಿಯ ಸಂಚಾರವಾಯಿತು.

ಆದರೆ ಆಗ ತಾನೇ ಸಬ್ ಇನ್ಸ್ಪೆಕ್ಟರ್ ಪಾಟೀಲ್ ನವರು  ಪೊಲೀಸ್ ಮುಖ್ಯ ಅಧಿಕಾರಿಗೆ ಹೇಳಿದ ಮಾತಿನಿಂದ ನನ್ನಲ್ಲಿ ಆಶ್ಚರ್ಯ ಹಾಗು ನೆಮ್ಮದಿ ಮೂಡಿತು.

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Wednesday, January 22, 2020

ವ್ಯಾನಿಟಿ ಬ್ಯಾಗ್ ೧


ಸಂಜೆ ಬ್ಯಾಂಕ್ ಕ್ಲೋಸ್ ಆಗುವ ಸಮಯ, ಅಂದು ಬ್ಯಾಂಕಲ್ಲಿ ಸ್ವಲ್ಪ ಹೆಚ್ಚು ಜನರು, ಎಲ್ಲ ಕೌಂಟರಲ್ಲಿ  ಜನರ ಸಾಲು.  ನಾನು ಈ ಬ್ಯಾಂಕಲ್ಲಿ ಸೇಲ್ಸ್ ಲ್ಲಿ ಸ್ವಲ್ಪ ದಿನ ಮುಂಚೆ ಜಾಯಿನ್ ಆದದ್ದು, ನನ್ನ ಕಾರ್ಯ ಹೊರಗೆ ಹೋಗಿ ಹೊಸ ಅಕೌಂಟ್ ತರುವುದು, ಬ್ಯಾಂಕ್ ಒಳಗೆ ಗ್ರಾಹಕರೊಂದಿಗೆ ನನ್ನ ನೇರ ಸಂಪರ್ಕ ಇರಲಿಲ್ಲ. ನಾನು ಹೊರಗೆ ಹೋಗಿ ಆಗ ತಾನೇ ಬಂದಿದೆ ,ಅದಕ್ಕೆ ನಾನು ನನ್ನ ಡೆಸ್ಕ್ ಲ್ಲಿ ನನ್ನ ಉಳಿದ ಕಾರ್ಯ ಮಾಡುತ್ತಿದ್ದೆ. 

ಕಾರ್ಯ ಮಾಡುತ್ತಿದಂತೆ ನನ್ನ ಧ್ಯಾನ ಪದೇ ಪದೇ ಆ ಯುವತಿಯ ಮೇಲೆ ಹೋಗುತ್ತಿತ್ತು. ಅವಳ ಮನಸ್ಸಲೇನಿತ್ತು ಗೋತ್ತಿಲ್ಲ, ಆದರೆ ಅವಳ ನಡವಳಿಕೆ ಸ್ವಲ್ಪ ವಿಚಿತ್ರವಾಗಿತ್ತು. 

ನನಗೇನಾಗಬೇಕೆಂದು ತಿಳಿದು ನಾನು ನನ್ನ ಕೆಲಸದಲ್ಲಿ ಮಗ್ನನಾದೆ. 
ಆದರೆ ಯಾಕೋ ಅವಳಿಗೆ ಕೇಳಿಯೇ ಬಿಡೋಣ ಎಂದು ಎದ್ದು ಅವಳತ್ತ ಹೋದೆ . 

"ಮೇಡಂ, ಮೇ ಆಯ್ ಹೆಲ್ಪ್ ಯು?

ನನ್ನಿಂದ ಹಠಾತ್ತಾಗಿ ಬಂದ ಪ್ರಶ್ನೆಯಿಂದ ಅವಳು ಸ್ವಲ್ಪ ಭಯದಿಂದಲೇ 
"ನೋ, ಥ್ಯಾಂಕ್ಸ್ ". 

"ಏನು ಮೇಡಂ, ನೀವು ಸ್ವಲ್ಪ ಕಳವಳದಲ್ಲಿದ್ದಾಗೆ ಕಾಣುತ್ತದೆ ?"

ಅವಳು ಸ್ವಲ್ಪ ಕೋಪದಿಂದಲೇ "ಹೂ ಆರ್ ಯು ಟು ಆಸ್ಕ್ ಮಿ ಸಚ್ ಕ್ವೆಶ್ಚನ್ ,ನನ್ ಓಫ್ ಯುವರ್ ಬಿಸ್ನೆಸ್,  ಮೈಂಡ್ ಯುವರ್ ಓನ್ ಬಿಸ್ನೆಸ್". 

ಅವಳ ಮಾತು ಕೇಳಿ ನನ್ನ ಮನಸ್ಸೇ ನನಗೆ ಬೈಯಲು ಶುರುಮಾಡಿತು,
"ಹೋಗು, ಇನ್ನು ಹೋಗು ಬೇರೆಯವರ ಸಹಾಯ ಮಾಡಲು, ಸುಮ್ಮನೆ ತನ್ನ ಕೆಲಸ ಬಿಟ್ಟು ಬೇರೆಯವರ ಹಿಂದೆ ಓಡುವುದು ". 

ನಾನು ತೆಪ್ಪಗೆ ಪುನಃ ನನ್ನ ಡೆಸ್ಕ್ ಗೆ ಬಂದು ಕುಳಿತುಕೊಂಡೆ. 
"ಛೆ, ಎಂತಹ ಮನಷ್ಯರು, ಅಷ್ಟು ಸೌಮ್ಯವಾಗಿ ಸಹಾಯ ಮಾಡಬೇಕೇ ಎಂದು ಕೇಳಿದೆ, ಆದರೆ ಅವರದ್ದು ಬೇರೇನೇ". 

ಸ್ವಲ್ಪ ಸಮಯದ ನಂತರ  ಜೋರಾಗಿ ಕಿರುಚುವ ಧ್ವನಿ ಕೇಳಿತು, ನನಗ್ಯಾಕೋ ಇದು ಅವಳದ್ದೇ ಸ್ವರ ಎಂದು ಆ ಕಡೆ ನೋಡಿದೆ.  ಅಲ್ಲಿಯ ಧೃಶ್ಯ ನೋಡಿ ನನ್ನ ಕಣ್ಣು ಅಗಲವಾಯಿತು, ಅಲ್ಲಿ ಅವಳು ನೆಲದಲ್ಲಿ ಬಿದ್ದಿದಳು, ಅವಳ ತಲೆಯಿಂದ ರಕ್ತ ಸುರಿಯುತ್ತಿತ್ತು, ಯಾರೋ ಅವಳಿಗೆ ಶೂಟ್ ಮಾಡಿರಬೇಕು ಎಂದು ತಿಳಿದು ಬರುತ್ತಿತ್ತು, ನಾನು ಆ ಕಡೆ ಓಡಿ ಹೋದೆ. 

ಅವಳು ಸತ್ತು ಹೋಗಿದ್ದಳು, ಅವಳ ಶವದ ಸುತ್ತ ಮುತ್ತ ಜನರು ಒಟ್ಟಾಗಿದ್ದರು,  ಎಲ್ಲರು ಅವಳ ಬಗ್ಗೆ ವಿಧ ವಿಧವಾದ ಮಾತನ್ನು ಹೇಳು,ಕೇಳುತ್ತಿದ್ದರು. ಜನರ ಗಲಾಟೆಯ ಮಧ್ಯೆ ನನಗೆ ಒಂದು ಮೂಲೆಯಲ್ಲಿ ಅವಳ ಕೈಯಲ್ಲಿದ್ದ ಕೆಂಪು ವ್ಯಾನಿಟಿ ಬ್ಯಾಗ್ ಕಂಡು ಬಂತು, ಯಾರದ್ದು ಧ್ಯಾನ ಅದರ ಮೇಲೆ ಇರಲಿಲ್ಲ,  ಉತ್ಸುಕನಾಗಿ ನಾನು ಮೂಲೆಗೆ ಹೋಗಿ ಅವಳ ವ್ಯಾನಿಟಿ ಬ್ಯಾಗ್ ಎತ್ತುಕೊಂಡು ಮೆಲ್ಲನೆ ನನ್ನ ಡೆಸ್ಕ್ ಗೆ ಬಂದೆ. 

ನನ್ನ ಹೃದಯ ಡಬ ಡಬ ಅಂತ ಜೋರಾಗಿ ಬಡಿಯಲಾರಂಭಿಸಿತು. ಆಗ ಜನರ ಗಲಾಟೆಯಿಂದ ಪೊಲೀಸ್ ನವರು ಬಂದ  ಸುದ್ದಿ ತಿಳಿಯಿತು. ನಾನು ಗಾಬರಿಯಾದೆ "ಅರೆ ಇದು ನಾನು ಏನು ಮಾಡಿದೆ, ಯಾಕೆ ಅವಳ ಬ್ಯಾಗ್ ತಂದೆ, ಇನ್ನು ಪೊಲೀಸ್ ನವರು ಸಿಸಿಟಿವ್ ಚೆಕ್ ಮಾಡಿದರೆ  ನಾನು ಬ್ಯಾಗ್ ಎತ್ತು ತರುವುದು ಸಹ ಅವರು ನೋಡಬಹುದು". 

"ಏನು ಮಾಡಲಿ, ಹೋಗಿ ಅಲ್ಲಿಯೇ  ಇಡೋಣ, ಅಯ್ಯೋ ಅದು ಸಾಧ್ಯನೇ ಇಲ್ಲ...  ಸಿಸಿಟಿವಿಯಲ್ಲಿ ಎಲ್ಲ ರೆಕಾರ್ಡ್ ಆಗುತ್ತದೆ, "ಛೆ" ಏನು ಮಾಡಿ ಬಿಟ್ಟೆ, ಏನಿರಬೇಕು ಆ ವ್ಯಾನಿಟಿ ಬ್ಯಾಗ್ ಲ್ಲಿ" ,"ಅಯ್ಯೋ" ನನ್ನ ಮನಸ್ಸು ಪುನಃ ನನಗೆ ಬೈಯಲು ಶುರು ಮಾಡಿತು "ಯಾಕೆ ಬೇಡದ್ದು ಕೆಲಸ ಮಾಡುವೆಯೆಂದು ಅರ್ಥವಾಗುದಿಲ್ಲ, ನೀನೇನು ಮೂರ್ಖನ? ಇಷ್ಟೊಂದು ಅರ್ಥವಾಗುವುದಿಲ್ಲವೇ ? ಇನ್ನು ಜೈಲು ನಿನಗೆ ಗತಿ". 

ನಾನು ತಲೆ ಹಿಡಿದು ಕುಳಿತುಕೊಂಡೆ.

ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ 

Tuesday, January 21, 2020

ಅಮ್ಮ ಹಕ್ಕಿ



ಅಮ್ಮ ಹಕ್ಕಿ
ದಿನ ನಿತ್ಯ
ಆಹಾರ ಹುಡಕುತ
ಅಲ್ಲಿ ಇಲ್ಲಿ
ಹಾರುತ್ತಿತ್ತು

ಪರಿಸರದ
ಸೌಂದರ್ಯ ಮರೆತು
ಮರಿಗಳ ನೆನಪಿನಲಿ
ಕಳವಳದಲ್ಲಿರುತ್ತಿತ್ತು

ದೂರ ಹೋಗದೆ
ಹಣ್ಣು, ಧಾನ್ಯ,
ತಿನಸಿನ ಹುಡುಕಾಟದಲ್ಲಿ
ಸುತ್ತ ಮುತ್ತ
ಅಲೆಯುತ್ತಿತ್ತು

ಪದೇ ಪದೇ
ಮರಳಿ ಗೂಡಿಗೆ ಬಂದು
ಮರಿಗಳನ್ನು ನೋಡಿ ಕೊಳ್ಳಲು
ಬರುತ್ತಿತ್ತು

ಅಮ್ಮ ಹಕ್ಕಿಯನ್ನು 
ನೋಡಿ ಗೂಡಲಿ
ಮುದ್ದು ಪುಟ್ಟ ಮರಿಗಳು
ಹರ್ಷದಿಂದ ಚಿಲಿಪಿಲಿಯೆಂದು
ಕೂಗಲಾರಂಭಿಸುತ್ತಿತ್ತು

ಗೂಡಿಗೆ ಬಂದು
ಸಿಕ್ಕ ಆಹಾರ
ಮರಿಗಳಿಗೆ ತಿನಿಸಿ
ಪುನಃ  ಹುಡುಕಾಟಕ್ಕೆ ಹೊರಡುತ್ತಿತ್ತು

ಕೆಲವೊಮ್ಮೆ
ಅಮ್ಮ ಹಕ್ಕಿ
ಹಾರಿ ಹಾರಿ
ಸೋತು ಬಂದು
ಮರದ ಕೊಂಬೆಯಲಿ ಕುಳಿತುಕೊಳ್ಳುತ್ತಿತ್ತು

ಸಂಜೆ ಆದಂತೆ
ಸಿಕ್ಕಿದ ಆಹಾರ
ಕೊಕ್ಕಿನಲ್ಲಿ 
ಹಿಡಿದು ಪುನಃ ಗೂಡಿಗೆ
ಸೇರಿಕೊಳ್ಳುತ್ತಿತ್ತು

ಮರಿಗಳ ಮೈಮೇಲೆ
ರೆಕ್ಕೆ ಪುಕ್ಕಗಳು
ಮೂಡುತ್ತಿದ್ದಂತೆ
ಟೊಂಗೆಯಿಂದ ಟೊಂಗೆಗೆ
ಹಾರಲು ಅಮ್ಮ ಹಕ್ಕಿ
ಪಾಠ ಕಲಿಸುತ್ತಿತ್ತು

ಹಾರಲು ಸಿದ್ಧವಾಗಿ
ಎಲ್ಲ ಮರಿ ಹಕ್ಕಿಗಳು
ತನ್ನ ತನ್ನ
ಜೀವನೋಪಾಯ
ಸ್ವತಃ ಹುಡುಕುತ್ತಿತ್ತು

ಅಮ್ಮ ಎಂಬ ಜೀವಿಯ
ಈ ವಿಶೇಷ ತ್ಯಾಗ ಭಾವ
ಕಂಡು ದೇವರ
ಮುಖದಲ್ಲೂ
ಹರ್ಷ ಮೂಡುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Monday, January 20, 2020

ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ


ಇಲ್ಲ ಅಂಥ  ಪವಿತ್ರ ನಯನ ಎಲ್ಲಿಯೂ
ಇಲ್ಲ ಅಂಥ ಪ್ರಕಾಶಮಯ ಚಹರೆ ಎಲ್ಲಿಯೂ
ಎಲ್ಲಿಯೂ ಅಂಥ ಹೃದಯದ ಮಾತಿಲ್ಲ
ಇಲ್ಲ ಅಂಥ ಉನ್ಮುಖ ಯೌವನ ಎಲ್ಲಿಯೂ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ.....

ಇಲ್ಲ ನಗು ಒಲುಮೆಯ ಎಲ್ಲಿಯೂ
ಇಲ್ಲ ಸುವಾಸನೆ ಮೋಹಕ ಎಲ್ಲಿಯೂ
ಅಂತಹ ವರ್ಣಮಯ ಲಕ್ಷಣ ನೋಡಿಲ್ಲ
ಇಲ್ಲ ಅಂಥ ಮುಗ್ಧ ಪ್ರೀತಿ ಎಲ್ಲಿಯೂ
ನೀನೆಗಿದ್ದಿಯೋ ಹಾಗೆಯೇ ಇರು ....
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ಮಳೆಗಾಲದ ನೆನೆದ ಹಸಿರು ಸೌಂದರ್ಯ ನೀನು
ಚಳಿಗಾಲದಲ್ಲಿ ಕೆನ್ನೆಯಲಿ ಬರುವ ಕೆಂಪಗೆ ನೀನು
ರಾತ್ರಿಯ ನೆಮ್ಮದಿ....
ರಾತ್ರಿಯ ನೆಮ್ಮದಿಯೂ , ಮುಂಜಾನೆಯ ಬೇಡಿಕೆಯೂ ನೀನು
ಅನುರಾಗದ ಬಂಧನದಲಿ ಕಾಪಾಡುವೆ ನಿನ್ನನ್ನು 

ಎಲ್ಲೋ ಬೆಂಕಿಯಂತೆ ಉರಿಯುವೆ
ಮಳೆಯ ನೀರಿನಂತಾಗುವೆ ಎಲ್ಲಿಯೋ
ಕೆಲವೊಮ್ಮೆ ಮನಸ್ಸಿನ ಅರಿಯುವೆ
ಕೆಲವೊಮ್ಮೆ ನಿನ್ನದೇ  ಗುಂಗಿನಲ್ಲಿರುವೆ ಎಲ್ಲಿಯೋ
ನೀನೆಗಿದ್ದಿಯೋ ಹಾಗೆಯೇ ಇರು....
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ನನ್ನ ಭಾಗ್ಯದಲಿ, ಬೆಂಬಲದ ಮಾತಿನಲಿ
ಸುಖ ದುಃಖದ ಎಲ್ಲ ಅನುಗ್ರಹದಲಿ
ಜೊತೆಯಲಿ ನಿನ್ನನ್ನೇ  ಇಡಲಿರುವೆ....
ಜೊತೆಯಲಿ ನಿನ್ನನ್ನೇ  ಇಡಲಿರುವೆ,
ನಿನಗೆ  ಜೊತೆಯಲ್ಲಿರಲಿದೆ
ನನ್ನ ಜಗದಲಿ, ನನ್ನ ಮನಸ್ಸಲಿ

ನಿನ್ನ ರೂಪ ಸಿಗುವುದು ಎಲ್ಲೋ
ಅದನ್ನು ತೋರಿಸಲಿದೆ ಎಲ್ಲರಿಗೂ 
ನಿನಗೆ ತಿಳಿದಿದೆ ಪ್ರಾಣ ಹೋದರೂ
ನನಗೆ ಬರುತ್ತದೆ ನಿಭಾಯಿಸಲು
ಅದೇ ಮಾಡುವೆ ಏನು ಹೇಳಿದ್ದೇನೋ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ  : ಇರ್ಷಾದ್  ಕಾಮಿಲ್ 
ಹಾಡಿದವರು : ರಾಹತ್  ಫತೇಹ್  ಅಲಿ  ಖಾನ್ 
ಸಂಗೀತ : ವಿಶಾಲ್  ಶೇಖರ್,
ಚಿತ್ರ : ಸುಲ್ತಾನ್

ना वो अँखियाँ रूहानी कहीं
ना वो चेहरा नूरानी कहीं
कहीं दिल वाले बातें भी ना
ना वो सजरी जवानी कहीं
जग घूमेया थारे जैसा न कोई
जग घूमेया थारे जैसा न कोई
न तो हँसना रूमानी कहीं
न तो खुश्बू सुहानी कहीं
ना वो रंगली अदाएँ देखी
ना वो प्यारी सी नादानी कहीं
जैसी तू है वैसी रहना
जग घूमेया थारे जैसा न कोई
जग घूमेया थारे जैसा न कोई
जग घूमेया थारे जैसा न कोई
जग घूमेया थारे जैसा न कोई
बारिशों के मौसमों की, भीगी हरियाली तू
सर्दियों में गालों पे जो, आती है वो लाली तू
रातों का सुकूँ
रातों का सुकूँ भी है, सुबह की अज़ान है
चाहतों की चादरों में, मैंने है संभाली तू
कहीं आग जैसी जलती है
बने बरखा का पाणी कहीं
कभी मन जाणा चुपके से
यूँ ही अपनी चलाणी कहीं
जैसी तू है वैसी रहना
जग घूमेया थारे जैसा न कोई
जग घूमेया थारे जैसा न कोई
अपने नसीबो में या, हौंसले की बातों में
सुखों और दुखों वाली, सारी सौगातों में
संग तुझे रखणा है, तूने संग रहणा
मेरी दुनिया में भी, मेरे जज़्बातों में
तेरी मिलती निशानी कहीं
जो है सबको दिखानी कहीं
तू तो जाणती है मर के भी
मुझे आती है निभाणी कहीं
वही करना जो है कहणा
जग घूमेया थारे...


ಚಿತ್ರ ಕೃಪೆ : ಗೂಗಲ್
ವಿಡಿಯೋ ಕೊಂಡಿ : ಯು ಟ್ಯೂಬ್


Saturday, January 18, 2020

ನಯನ


ಚಿತ್ರ ಕೃಪೆ : ಗೂಗಲ್
ವಿಡಿಯೋ ಕೊಂಡಿ : ಯು ಟ್ಯೂಬ್ 


ಸುಳ್ಳು ಜಗತ್ತು, ಅಲ್ಪಾವಧಿ ಆಶ್ರಯ
ಸತ್ಯ ನೋವು ನನ್ನ
ನನ್ನೊಲವೆ,  ಮೃಗತೃಷ್ಣಯಂತೆ ಪ್ರೀತಿಯ
ಸಂಬಂಧ ನಿನ್ನ ನನ್ನ

ನಯನ.... ಜೊತೆಯಲ್ಲಿ ಸ್ವಪ್ನ ನೋಡುತ್ತಿದ್ದ ನಯನ
ಅಗಲಿ ಇಂದು ಅಳುತ್ತಿದೆ ಹೀಗೆ
ನಯನ.... ಜೊತೆಯಲ್ಲಿ ರಾತ್ರಿ ಎಚ್ಚರವಿರುತ್ತಿದ ನಯನ
ಮುಂಜಾನೆ ಕಣ್ರೆಪ್ಪೆ ಮುಚ್ಚುತ್ತಿದೆ ಹೀಗೆ 

ಪ್ರತ್ಯೇಕವಾಯಿತು ಹೆಜ್ಜೆಗಳು,
ವಚನ ನೀಡಿದರವರು
ಜೊತೆಯಲ್ಲಿಯೇ  ನಡೆಯುವ ನಾವು ಯಾವಾಗಲು,
ಈಗ ಹಂಚಿಕೊಳ್ಳುತ್ತಿದೆ ದುಃಖವನ್ನು ನೆನೆದ ನಯನ

ಜೊತೆಯಲ್ಲಿ ಸ್ವಪ್ನ ನೋಡುತ್ತಿದ್ದ ನಯನ
ಅಗಲಿ ಇಂದು ಅಳುತ್ತಿದೆ ಹೀಗೆ

ಉಸಿರು ಅಚ್ಚರಿಯಲ್ಲಿದೆ,
ಮನಸ್ಸು ಅತೃಪ್ತಿಗೊಂಡಿದೆ,
ವ್ಯಥೆಯಲ್ಲಿ ಈ ನನ್ನ ಜೀವನ ಯಾಕಿದೆ,
ಯಾಕೆ ನಿರಾಸೆಯಿಂದ ಆಸೆ ಸೋತು ಹೋಗಿದೆ,
ಯಾಕೆ ಹೃದಯದಲ್ಲಿ ಪ್ರಶ್ನೆಗಳ ಅಲೆಗಳು ಏರುತ್ತಿದೆ

ನಯನ... ಆಕಾಶದ ತಾರೆಯಾಗಿದ್ದ ನಯನ
ಗೃಹಣದಲ್ಲಿ ತುಂಡಾಗುತ್ತಿದೆ ಹೀಗೆ
ನಯನ... ಬಿಸಿಲನ್ನು ಹೀರುತ್ತಿದ್ದ ನಯನ
ನಿಂತು ನೆರಳನ್ನು ಹುಡುಕುತ್ತಿದೆ  ಹೀಗೆ

ಪ್ರತ್ಯೇಕವಾಯಿತು ಹೆಜ್ಜೆಗಳು
ವಚನ ನೀಡಿದವರು
ಜೊತೆಯಲ್ಲಿ ನಡೆಯುವ ಯಾವಾಗಲು
ಈಗ ಹಂಚಿಕೊಳ್ಳುತ್ತಿದೆ ದುಃಖವನ್ನು ನೆನೆದ ನಯನ

ಜೊತೆಯಲ್ಲಿ ಸ್ವಪ್ನ ನೋಡುತ್ತಿದ್ದ ನಯನ
ಅಗಲಿ ಇಂದು ಅಳುತ್ತಿದೆ ಹೀಗೆ

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಅಮಿತಾಭ್ ಭಟ್ಟಾಚಾರ್ಯ
ಹಾಡಿದವರು : ಅರಿಜಿತ್ ಸಿಂಗ್
ಸಂಗೀತ : ಪ್ರೀತಮ್
ಚಿತ್ರ : ದಂಗಲ್

Jhootha jag rain basera
Saancha dard mera
Mrig-trishna sa moh piya
Naata mera tera

Naina.. jo saanjhe khwab dekhte the
Naina.. bichad ke aaj ro diye hain yun
Naina.. jo milke raat jaagte the
Naina.. sehar mein palken meechte hain yun

Juda huve kadam
Jinhone li thi ye kasam
Milke chalenge hardum
Ab baant’te hain ye gham
Bheege naina.. jo khidkhiyon se jhankte the
Naina.. ghutan mein band ho gaye hai yun

Saans hairaan hai
Mann pareshaan hai
Ho rahi si kyun ruaansa ye meri jaan hai

Kyun nirasha se hai
Aas haari huyi
Kyun sawaalon ka utha sa
Dil mein toofaan hai

Naina.. thhe aasmaan ke sitaare
Naina.. grahan mein aaj toot’te hain yun
Naina.. kabhi jo dhoop senkte thhe
Naina.. thehar ke chhaaon dhoondhte hain yun

Juda huye kadam
Jinhone li thi ye kasam
Milke chalenge hardum
Ab baant’te hain ye gham
Bheege naina.. jo sanjhe khwab dekhte the
Naina.. bichhad ke aaj ro diye hain yun

https://www.youtube.com/watch?v=phhtPnUlAUs


Wednesday, January 15, 2020

ವಿಚ್ಛೇದನ

ಸ್ಮರಿಸುತ್ತಿದ್ದೆ
ಪುನಃ ಆ ದಿವಸಗಳನ್ನು
ಮನಸ್ಸನ್ನು ಸೋತ
ಆ ಕ್ಷಣಗಳನ್ನು,
ಪರಸ್ಪರ ಭಾವನೆಗಳು
ಸ್ಪಂದಿಸಿದನ್ನು,
ನದಿ ತೀರದಲಿ
ಕೈಯಲ್ಲಿ ಕೈ ಹಿಡಿದು
ನಡೆದಾಡುತ ಕಂಡ
ಆ ಒಂದು ಕನಸ್ಸನ್ನು,
ಮದುವೆಯ ಗೌಜಿಯಲಿ
ಡೋಲು ಶಹನಾಯಿಗಳ ಸ್ವರವನ್ನು,
ರಮಣೀಯ ಸ್ಥಳದಲಿ
ಹಿಮದ ಪರ್ವತದಲಿ
ಎರಡು ಹೃದಯ
ಕರಗಿ ಒಂದಾದುದನ್ನು,
ಮನೆ ಅಂಗಳದಲಿ
ಓಡಾಡುತ್ತಿರುವ
ಪುಟ್ಟ ಮಗುವನ್ನು,

ನ್ಯಾಯಾಧೀಶರ
ಆರ್ಡರ್ ಆರ್ಡರ್
ಎಂಬ ಧ್ವನಿ ಕೇಳಿ
ಪ್ರಸ್ತುತ ಸನ್ನಿವೇಶ
ಅರಿವಿಗೆ ಬಂತು
ಕೋರ್ಟಿನ ಆ ಕಡೆ
ಅವಳಿದ್ದಳು
ಈ ಕಡೆ ನಾನಿದ್ದೆ

by ಹರೀಶ್ ಶೆಟ್ಟಿ, ಶಿರ್ವ 

Tuesday, January 14, 2020

ಕ್ಷಣಕ್ಕಾಗಿ ನಿಲ್ಲು ನೀ


ಚಿತ್ರ ಕೃಪೆ : ಗೂಗಲ್ 
ವಿಡಿಯೋ ಕೊಂಡಿ : ಯು ಟ್ಯೂಬ್
ಕ್ಷಣಕ್ಕಾಗಿ ನಿಲ್ಲು ನೀ
ಹೃದಯ ಸಾವರಿಸಿಕೊಳ್ಳಲಿ
ಹೇಗೆ ನಿನ್ನನ್ನು ನಿಲ್ಲಿಸಲಿ...
ನನ್ನಲ್ಲಿ ಬರುವ
ಪ್ರತಿ ದುಃಖ ಮಾಯವಾಗಲಿ
ಕಣ್ಣಲ್ಲಿ ನಿನ್ನನ್ನು ತುಂಬಿಸಿಕೊಳ್ಳುವೆ
ನುಡಿಯದೆ ನಿನ್ನಿಂದ ಮಾತಾಡುವೆ
ಒಂದು ವೇಳೆ ಜೊತೆಯಲಿ ನೀನಿದ್ದರೆ

ಹರಿಯುತ್ತಿರುವೆ
ನದಿಯಂತೆ ನಿನ್ನ ಜಗದಲಿ
ನನ್ನ ಜಗವಿರುವುದು
ನಿನ್ನ ಪ್ರೀತಿಯಲಿ
ನಾನು ಬೆರೆಯುವೆ
ನಿನ್ನ ಸ್ವಭಾವದಲ್ಲಿ
ಒಂದು ವೇಳೆ ಜೊತೆಯಲಿ ನೀನಿದ್ದರೆ

ನಿನ್ನ ನಯನದಲಿ
ನನ್ನ ಕನಸ್ಸು
ನಿನ್ನ ಕನಸಲ್ಲಿದೆ ಮುನಿಸು
ನನಗನಿಸುತ್ತದೆ
ಹೃದಯದ ಮಾತುಗಳೆಲ್ಲ
ಪದಗಳ ವಂಚನೆ ಅಷ್ಟೇ
ನೀನೊಟ್ಟಿಗಿರಲಿ ಇರದಿರಲಿ
ಅಂತರ ಏನಿಲ್ಲ
ನಿರ್ದಯಿಯಾಗಿತ್ತು ಈ  ಜೀವನ,
ನಿರ್ದಯಿಯಾಗಿದೆ
ಒಂದು ವೇಳೆ ಜೊತೆಯಲಿ ನೀನಿದ್ದರೆ

ಕಣ್ರೆಪ್ಪೆ ತೆರೆದಂತೆಲೇ
ಈ ದಿನ ಕಳೆದೋಗುವುದು
ಕೂತುಕೊಂಡಲ್ಲೇ ಓಡಾಡುತ್ತಿರುವೆ
ನನ್ನಲ್ಲಿ ಬರುವ
ಪ್ರತಿ ದುಃಖ ಮಾಯವಾಗಲಿ
ಕಣ್ಣಲ್ಲಿ ನಿನ್ನನ್ನು ತುಂಬಿಸಿಕೊಳ್ಳುವೆ
ನುಡಿಯದೆ ನಿನ್ನಿಂದ ಮಾತಾಡುವೆ
ಒಂದು ವೇಳೆ ಜೊತೆಯಲಿ ನೀನಿದ್ದರೆ

ನಿನ್ನ ನಯನದಲಿ
ನನ್ನ ಕನಸ್ಸು
ನಿನ್ನ ಕನಸಲ್ಲಿದೆ ಮುನಿಸು
ನನಗನಿಸುತ್ತದೆ
ಹೃದಯದ ಮಾತುಗಳೆಲ್ಲ
ಪದಗಳ ವಂಚನೆ ಅಷ್ಟೇ
ನೀನೊಟ್ಟಿಗಿರಲಿ ಇರದಿರಲಿ
ಅಂತರ ಏನಿಲ್ಲ
ನಿರ್ದಯಿಯಾಗಿತ್ತು ಈ  ಜೀವನ,
ನಿರ್ದಯಿಯಾಗಿದೆ
ಒಂದು ವೇಳೆ ಜೊತೆಯಲಿ ನೀನಿದ್ದರೆ

ಹೃದಯ, ಹೃದಯ ಸಾವರಿಸಿಕೊಳ್ಳಲಿ
ಹೇಗೆ ನಿನ್ನನ್ನು ನಿಲ್ಲಿಸಲಿ
ನನ್ನಲ್ಲಿ ಬರುವ
ಪ್ರತಿ ದುಃಖ ಮಾಯವಾಗಲಿ

ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಮೂಲ : ಇರ್ಷಾದ್ ಕಾಮಿಲ್ 
ಹಾಡಿದವರು : ಅಲ್ಕಾ ಯಾಗ್ನಿಕ್, ಅರಿಜಿತ್ ಸಿಂಗ್ 
ಸಂಗೀತ : ಎ ಆರ್ ರೆಹಮಾನ್
ಚಿತ್ರ : ತಮಾಷಾ 

पल भर ठेहर जाओ
दिल ये संभल जाए
कैसे तुम्हें रोका करूँ
मेरी तरफ आता, हर ग़म फिसल जाए
आँखों में तुमको भरूँ
बिन बोले बातें तुमसे करूँ
गर तुम साथ हो
अगर तुम साथ हो
अगर तुम साथ हो

बेहती रेहती नेहर नदियाँ सी
तेरी दुनिया में, मेरी दुनिया है
तेरी चाहतों में, मैं ढल जाती हूँ
तेरी आदतों में
गर तुम साथ हो

तेरी नज़रों में है तेरे सपने
तेरे सपनों में है नाराज़ी
मुझे लगता है के बातें दिल की
होती लफ़्ज़ों की धोखेबाज़ी
तुम साथ हो, या ना हो, क्या फर्क है?
बेदर्द थी ज़िन्दगी, बेदर्द है

अगर तुम साथ हो
अगर तुम साथ हो

पलकें झपकते ये, दिन ये निकल जाए
बैठी-बैठी भागी फिरूँ
मेरी तरफ आता, हर ग़म फिसल जाए
आँखों में तुमको भरूँ
बिन बोले बातें तुमसे करूँ
गर तुम साथ हो


तेरी नज़रों में है तेरे सपने
तेरे सपनों में है नाराज़ी
मुझे लगता है के बातें दिल की
होती लफ़्ज़ों की धोखेबाज़ी
तुम साथ हो, या ना हो, क्या फर्क है
बेदर्द थी ज़िन्दगी, बेदर्द है
अगर तुम साथ हो

दिल ये संभल जाए
अगर तुम साथ हो
हर ग़म फिसल जाए
अगर तुम साथ हो
दिन ये निकल जाए
अगर तुम साथ हो
हर ग़म फिसल जाए
https://www.youtube.com/watch?v=sK7riqg2mr4  

Thursday, January 9, 2020

ಹೃದಯದ ಮಾತನ್ನು

ಚಿತ್ರ ಕೃಪೆ : ಗೂಗಲ್ 
ವಿಡಿಯೋ ಕೊಂಡಿ : ಯು ಟ್ಯೂಬ್

ನಾಜೂಕು ಬಂಧನ ಬಂಧನದಲ್ಲಿ ನನ್ನನ್ನು ಕಟ್ಟಿಕೊಳ್ಳು
ನನ್ನನ್ನು ಕಟ್ಟಿಕೊಳ್ಳು
ನಿಜ ಗೆಳೆತನ ಗೆಳೆತನದಲ್ಲಿರುವುದಿಲ್ಲ ಅಂತರ ತಿಳಿದುಕೊಳ್ಳು
ಅಂತರ ತಿಳಿದುಕೊಳ್ಳು
ಈ ಕೋಪ ನಿನ್ನ ಕೇವಲ ಸುಳ್ಳು ಸುಳ್ಳು
ನನ್ನೊಲವೆ ಕೇಳು ನೀ ನನ್ನ
ಹೃದಯದ ಮಾತನ್ನು
ಆಡುವ ನಾವು
ಜೊತೆಯಲಿ  ಕಣ್ಣಲ್ಲಿ ಕಣ್ಣು ಬೆರೆಸಿ
ಹೃದಯದ ಮಾತನ್ನು
ಆಡುವ ನಾವು ಪ್ರತಿದಿನ ನಿಜ ಪ್ರೀತಿ ನಿಭಾಯಿಸಿ
ಸತಾಯಿಸುವೆ ನನ್ನನ್ಯಾಕೆ
ತೋರಿಸುವೆ ನನಗ್ಯಾಕೆ
ಹೀಗೆ ಸುಳ್ಳು ಸುಳ್ಳು ಮುನಿಸಿ, ಅಯ್ಯೋ
ಹೃದಯದ ಮಾತನ್ನು
ಆಡುವ ನಾವು....

ನಿನ್ನನ್ನು ಎಲ್ಲರಿಂದ  ಅಡಗಿಸಿಟ್ಟೆ
ಸಿಂಗರಿಸಿ  ನನ್ನ ಕಣ್ಣಲ್ಲಿ
ನೀನು ನನ್ನ ನಂಬಿಕೆ
ಇಡು ನನ್ನನ್ನು ಮಾಡಿ ನಿನ್ನಲ್ಲಿ
ನಾನು ನಿನ್ನ , ನಾನು ಕೇವಲ ನಿನ್ನ ಒಲವೇ
ಅಂತರ ಎಂದೂ ಬಾರದಿರಲಿ
ನಾನು ಜೀವನ ನಿನ್ನ
ನೀನು ಜೀವನ ನನ್ನ
ಹೇಳು ನೀನೇನು ಸಾಬೀತಿಸುವೆ ಹೀಗೆ ನಾಟಕ ಮಾಡಿ
ಹೃದಯದ ಮಾತನ್ನು
ಆಡುವ ನಾವು....

ಈ ರಾತ್ರಿ ಕಪ್ಪು,ಕಪ್ಪು, ಕಪ್ಪಾದರೆ
ಶ್ಯಾಮಲ ನನ್ನ ಹೃದಯ ತಾರೆ
ನನ್ನ ಜೊತೆಗಾರ್ತಿ,  ಜೊತೆಗಾರ್ತಿ,  ಜೊತೆಗಾರ್ತಿಯೇ
ಒಂದುವೇಳೆ ನೀನು ನನ್ನನ್ನು ಆಲಂಗಿಸದಿದ್ದರೆ
ನನ್ನ ಗಗನ ಈ ವಾತಾವರಣದ ಕೇಳುವುದಿಲ್ಲ
ಯಾವುದೇ ಕನಸು ಪೂರ್ಣ ನನಸಾಗುವುದಿಲ್ಲ
ಹೃದಯದ ಮಾತನ್ನು
ಆಡುವ ನಾವು....
ಗೊತ್ತಿದೆ ಯಾಕೆ
ನೀ ಅಡಗಿ ನೋಡುವೆ  ನನಗೆ
ನನ್ನ ಹೆಸರಲ್ಲಿ ನಿನ್ನ ಹೆಸರು ಸೇರಿಸಿ
ಹೃದಯದ ಮಾತನ್ನು
ಆಡುವ ನಾವು....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಇರ್ಷಾದ್ ಕಾಮಿಲ್
ಹಾಡಿದವರು : ಅತಿಫ್ ಅಸ್ಲಾಂ
ಚಿತ್ರ : ಟೈಗರ್ ಝಿ೦ದ  ಹೈ

Kacchi doriyon, doriyon, doriyon se
Mainu tu baandh le
Pakki yaariyon, yaariyon, yaariyon mein
Honde na faasley
Eh naraazgi kaagzi saari teri
Mere sohneya sunn le meri

Dil diyan gallan
Karaange naal naal beh ke
Akh naale akh nu milaa ke
Dil diyan gallan haaye
Karaange roz roz beh ke
Sacchiyan mohabbataan nibha ke

Sataaye mainu kyun
Dikhaaye mainu kyun
Aiven jhuthi mutthi russ ke rusaake
Dil diyan gallan haaye
Karaange naal naal beh ke
Akh naale akh nu mila ke

Tenu lakhan ton chhupa ke rakhaan
Akkhaan te sajaa ke tu ae meri wafaa
Rakh apna bana ke
Main tere layi aan
Tere layi aan yaaran
Naa paavin kade dooriyan
[x2]

Main jeena haan tera...
Main jeena haan tera
Tu jeena hai mera
Dass lena ki nakhra dikha ke

Dil diyan gallan
Karaange naal naal beh ke
Akh naale akh nu mila ke
Dil diyan gallan...

Raatan kaaliyan, kaaliyan, kaaliyan ne
Mere dil saanwle
Mere haaniyan, haaniyan, haaniyan je
Lagge tu na gale

Mera aasmaan mausamaan di na sune
Koi khwaab na poora bune
Dil diyan gallan
Karange naal naal beh ke
Akh naale akh nu mila ke

Pataa hai mainu kyun chupa ke dekhe tu
Mere naam se naam mila ke
Dil diyan gallan
Karange naal naal beh ke
Akh naale akh nu mila ke
Dil diyan gallan...

https://www.youtube.com/watch?v=SAcpESN_Fk4

Wednesday, January 8, 2020

ಗೋಡೆಗಳೊಂದಿಗೆ ಭೇಟಿ ಮಾಡಿ ಅಳಲು

ಗೋಡೆಗಳೊಂದಿಗೆ ಭೇಟಿ ಮಾಡಿ ಅಳಲು
ಇಷ್ಟಾವಾಗುತ್ತದೆ
ಮರುಳಾಗುವೆನೋ ಏನೋ ನಾನು
ಹಾಗೆ ಅನಿಸುತ್ತದೆ
ಗೋಡೆಗಳೊಂದಿಗೆ...

ಜಗದೆಲ್ಲ ನೆನಪು
ನನಗೆ ಸಿಗಲು ಬರುತ್ತದೆ
ಸಂಜೆ ಆದಂತೆ
ಈ ಏಕಾಂತ ಮನೆಯಲಿ
ಜಾತ್ರೆ ಕೂಡಿ ಬರುತ್ತದೆ 
ಮರುಳಾಗುವೆನೋ....

ಎಷ್ಟು ದಿನದ ದಾಹದಿಂದ
ತಳಮಳಿಸುತ್ತಿದ್ದರೋ
ಗೆಳೆಯರೇ ಯೋಚಿಸಿ
ಇಬ್ಬನಿಯ ಹನಿ ಸಹ ಅವರಿಗೆ
ಕಡಲಾಗಿ ಕಂಡು ಬರುತ್ತದೆ
ಮರುಳಾಗುವೆನೋ....

ಯಾರಿಗೆ ಕಲ್ಲು ಹೊಡೆಯಲಿ
ಯಾರು ಪರಕೀಯರು
ಗಾಜಿನ ಅರಮನೆಯಲಿ
ಪ್ರತಿಯೊಂದು ಚಹರೆ
ನಮ್ಮವೆರೆಂದು ಕಂಡು ಬರುತ್ತದೆ
ಮರುಳಾಗುವೆನೋ....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಕೈಸರ್ ಉಲ್ ಜಾಫ್ರಿ
ಹಾಡಿದವರು : ಪಂಕಜ್ ಉಧಾಸ್

दीवारों से मिलकर रोना
अच्छा लगता है
हम भी पागल हो जाएंगे
ऐसा लगता है
दीवारों से मिलकर रोना
अच्छा लगता है
हम भी पागल हो जाएंगे
ऐसा लगता है
दीवारों से

दुनिया भर की यादें

हमसे मिलने आती हैं
दुनिया भर की यादें
हमसे मिलने आती हैं
शाम ढले इस सूने घर में
मेला लगता है
शाम ढले इस सूने घर में
मेला लगता है
हम भी पागल हो जाएंगे
ऐसा लगता है
दीवारों से

कितने दिनों के प्यासे

होंगे यारों सोचो तोह
कितने दिनों के प्यासे
होंगे यारों सोचो तोह
शभनम का कतरा भी जिनको
दरिया लगता है
शभनम का कतरा भी जिनको
रिया लगता है
हम भी पागल हो जाएंगे
ऐसा लगता है
दीवारों से

किसको कैसर पत्थर मरू

कौन पराया है
किसको कैसर पत्थर मरू
कौन पराया है
शीश महल में एक एक चेहरा
अपना लगता है
शीश महल में एक एक चेहरा
अपना लगता है
हम भी पागल हो जाएंगे
ऐसा लगता है

दीवारों से मिलकर रोना

अच्छा लगता है
हम भी पागल हो जाएंगे
ऐसा लगता है
दीवारों से

ಘಜಲ್ ಕೊಂಡಿ : YOU TUBE
https://www.youtube.com/watch?v=nGuHxXOKATE

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...