Monday, January 20, 2020

ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ


ಇಲ್ಲ ಅಂಥ  ಪವಿತ್ರ ನಯನ ಎಲ್ಲಿಯೂ
ಇಲ್ಲ ಅಂಥ ಪ್ರಕಾಶಮಯ ಚಹರೆ ಎಲ್ಲಿಯೂ
ಎಲ್ಲಿಯೂ ಅಂಥ ಹೃದಯದ ಮಾತಿಲ್ಲ
ಇಲ್ಲ ಅಂಥ ಉನ್ಮುಖ ಯೌವನ ಎಲ್ಲಿಯೂ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ.....

ಇಲ್ಲ ನಗು ಒಲುಮೆಯ ಎಲ್ಲಿಯೂ
ಇಲ್ಲ ಸುವಾಸನೆ ಮೋಹಕ ಎಲ್ಲಿಯೂ
ಅಂತಹ ವರ್ಣಮಯ ಲಕ್ಷಣ ನೋಡಿಲ್ಲ
ಇಲ್ಲ ಅಂಥ ಮುಗ್ಧ ಪ್ರೀತಿ ಎಲ್ಲಿಯೂ
ನೀನೆಗಿದ್ದಿಯೋ ಹಾಗೆಯೇ ಇರು ....
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ಮಳೆಗಾಲದ ನೆನೆದ ಹಸಿರು ಸೌಂದರ್ಯ ನೀನು
ಚಳಿಗಾಲದಲ್ಲಿ ಕೆನ್ನೆಯಲಿ ಬರುವ ಕೆಂಪಗೆ ನೀನು
ರಾತ್ರಿಯ ನೆಮ್ಮದಿ....
ರಾತ್ರಿಯ ನೆಮ್ಮದಿಯೂ , ಮುಂಜಾನೆಯ ಬೇಡಿಕೆಯೂ ನೀನು
ಅನುರಾಗದ ಬಂಧನದಲಿ ಕಾಪಾಡುವೆ ನಿನ್ನನ್ನು 

ಎಲ್ಲೋ ಬೆಂಕಿಯಂತೆ ಉರಿಯುವೆ
ಮಳೆಯ ನೀರಿನಂತಾಗುವೆ ಎಲ್ಲಿಯೋ
ಕೆಲವೊಮ್ಮೆ ಮನಸ್ಸಿನ ಅರಿಯುವೆ
ಕೆಲವೊಮ್ಮೆ ನಿನ್ನದೇ  ಗುಂಗಿನಲ್ಲಿರುವೆ ಎಲ್ಲಿಯೋ
ನೀನೆಗಿದ್ದಿಯೋ ಹಾಗೆಯೇ ಇರು....
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ನನ್ನ ಭಾಗ್ಯದಲಿ, ಬೆಂಬಲದ ಮಾತಿನಲಿ
ಸುಖ ದುಃಖದ ಎಲ್ಲ ಅನುಗ್ರಹದಲಿ
ಜೊತೆಯಲಿ ನಿನ್ನನ್ನೇ  ಇಡಲಿರುವೆ....
ಜೊತೆಯಲಿ ನಿನ್ನನ್ನೇ  ಇಡಲಿರುವೆ,
ನಿನಗೆ  ಜೊತೆಯಲ್ಲಿರಲಿದೆ
ನನ್ನ ಜಗದಲಿ, ನನ್ನ ಮನಸ್ಸಲಿ

ನಿನ್ನ ರೂಪ ಸಿಗುವುದು ಎಲ್ಲೋ
ಅದನ್ನು ತೋರಿಸಲಿದೆ ಎಲ್ಲರಿಗೂ 
ನಿನಗೆ ತಿಳಿದಿದೆ ಪ್ರಾಣ ಹೋದರೂ
ನನಗೆ ಬರುತ್ತದೆ ನಿಭಾಯಿಸಲು
ಅದೇ ಮಾಡುವೆ ಏನು ಹೇಳಿದ್ದೇನೋ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ  : ಇರ್ಷಾದ್  ಕಾಮಿಲ್ 
ಹಾಡಿದವರು : ರಾಹತ್  ಫತೇಹ್  ಅಲಿ  ಖಾನ್ 
ಸಂಗೀತ : ವಿಶಾಲ್  ಶೇಖರ್,
ಚಿತ್ರ : ಸುಲ್ತಾನ್

ना वो अँखियाँ रूहानी कहीं
ना वो चेहरा नूरानी कहीं
कहीं दिल वाले बातें भी ना
ना वो सजरी जवानी कहीं
जग घूमेया थारे जैसा न कोई
जग घूमेया थारे जैसा न कोई
न तो हँसना रूमानी कहीं
न तो खुश्बू सुहानी कहीं
ना वो रंगली अदाएँ देखी
ना वो प्यारी सी नादानी कहीं
जैसी तू है वैसी रहना
जग घूमेया थारे जैसा न कोई
जग घूमेया थारे जैसा न कोई
जग घूमेया थारे जैसा न कोई
जग घूमेया थारे जैसा न कोई
बारिशों के मौसमों की, भीगी हरियाली तू
सर्दियों में गालों पे जो, आती है वो लाली तू
रातों का सुकूँ
रातों का सुकूँ भी है, सुबह की अज़ान है
चाहतों की चादरों में, मैंने है संभाली तू
कहीं आग जैसी जलती है
बने बरखा का पाणी कहीं
कभी मन जाणा चुपके से
यूँ ही अपनी चलाणी कहीं
जैसी तू है वैसी रहना
जग घूमेया थारे जैसा न कोई
जग घूमेया थारे जैसा न कोई
अपने नसीबो में या, हौंसले की बातों में
सुखों और दुखों वाली, सारी सौगातों में
संग तुझे रखणा है, तूने संग रहणा
मेरी दुनिया में भी, मेरे जज़्बातों में
तेरी मिलती निशानी कहीं
जो है सबको दिखानी कहीं
तू तो जाणती है मर के भी
मुझे आती है निभाणी कहीं
वही करना जो है कहणा
जग घूमेया थारे...


ಚಿತ್ರ ಕೃಪೆ : ಗೂಗಲ್
ವಿಡಿಯೋ ಕೊಂಡಿ : ಯು ಟ್ಯೂಬ್


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...