ಸಬ್ ಇನ್ಸ್ಪೆಕ್ಟರ್ ಪಾಟೀಲ್ ಶವ ಪೋಸ್ಟ್ ಮಾರ್ಟಮ್ ಗೋಸ್ಕರ ಕಳಿಸುವ ಸಿದ್ಧತೆಯಲ್ಲಿದ್ದಾಗ ಅಲ್ಲಿಗೊಬ್ಬ ಪೊಲೀಸ್ ಕಾನ್ಸ್ಟೇಬಲ್ ಬಂದು "ಸಾರ್, ಇದೊಂದು ವ್ಯಾನಿಟಿ ಬ್ಯಾಗ್ ಸಿಕ್ಕಿದೆ".
ಯಾಕೋ ಪುನಃ ಒಂದು ಸಲ ನನ್ನಲ್ಲಿ ಭಯ ಆವರಿಸಿತು.
ಅವರ ಸಂಭಾಷಣೆ ನಡೆಯುತ್ತಿದಂತಲೇ ಬ್ಯಾಂಕಿನ ಆ ಕಡೆಯಿಂದ ಏನೋ ಗಲಾಟೆ ಕೇಳಿ ಬಂತು ಹಾಗು ಎಲ್ಲರ ದೃಷ್ಟಿ ಆ ಕಡೆ ಹೋಯಿತು.
ಮೂರು ನಾಲ್ಕು ಕಾನ್ಸ್ಟೇಬಲ್ ನವರು ಒಂದು ವ್ಯಕ್ತಿಯನ್ನು ಹಿಡಿದು ಬರುತ್ತಿದ್ದರು, ಆತ ತನ್ನನ್ನು ಬಿಡಿಸಲು ಪ್ರಯತ್ನಿಸುತ್ತಿದ್ದ.
ಈ ಗಲಾಟೆ ಕೇಳಿ ಕ್ಯಾಬಿನ್ ಒಳಗೆ ಇದ್ದ ಮುಖ್ಯ ಪೊಲೀಸ್ ಅಧಿಕಾರಿಯವರು ಸಹ ಹೊರಗೆ ಬಂದು "ಏನದು ಗಲಾಟೆ, ಗೈತೊಂಡೆ ಏನಾಯಿತು".
ಆ ವ್ಯಕ್ತಿಯುನ್ನು ಹಿಡಿದ ಮೂವರಲ್ಲಿ ಕಾನ್ಸ್ಟೇಬಲ್ ಗೈತೊಂಡೆ "ಸಾರ್, ಈತ ಕಣ್ಣು ತಪ್ಪಿಸಿ ಬ್ಯಾಂಕಿನ ಕಿಟಕಿಯಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದ, ಇವನನ್ನು ಹಿಡಿದಾಗ ಇವನ ಹತ್ತಿರ ಈ ಗನ್ ಹಾಗು ಈ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿದೆ" ಎಂದು ಕೈಯಲ್ಲಿದ್ದ ಗನ್ ಹಾಗು ವ್ಯಾನಿಟಿ ಬ್ಯಾಗ್ ಎತ್ತಿ ತೋರಿಸಿದ.
ನಾನು ಇದನ್ನು ನೋಡಿ ಆಶ್ಚರ್ಯಪಟ್ಟೆ "ಅರೆ, ಇದೇನು ಗೊಂದಲ!!ಎರೆಡೆರಡು ವ್ಯಾನಿಟಿ ಬ್ಯಾಗ್!!".
ಕಾನ್ಸ್ಟೇಬಲ್ ಗೈತೊಂಡೆನ ಮಾತು ಕೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು "ಓಕೆ, ಅವನನ್ನು ಕ್ಯಾಬಿನ್ ಒಳಗೆ ಕರೆದುಕೊಂಡು ಬನ್ನಿ" ಎಂದು ಹೇಳಿದರು
ಮೂವರು ಕಾನ್ಸ್ಟೇಬಲ್ ನವರು ಆ ವ್ಯಕ್ತಿಯನ್ನು ಕ್ಯಾಬಿನ್ ಒಳಗೆ ಕರೆದುಕೊಂಡು ಹೋದರು.
ಅವರು ಕ್ಯಾಬಿನ್ ಒಳಗೆ ಹೋದ ನಂತರ ಇಲ್ಲಿ ಸಬ್ ಇನ್ಸ್ಪೆಕ್ಟರ್ ಪಾಟೀಲ್ ಕಾನ್ಸ್ಟೇಬಲ್ ಜೊತೆ "ರಾಣೆ, ಇದು ನಿಮಗೆ ಎಲ್ಲಿ ಸಿಕ್ಕಿದ್ದು"?
ಕಾನ್ಸ್ಟೇಬಲ್ ರಾಣೆ ನಾನು ವ್ಯಾನಿಟಿ ಬ್ಯಾಗ್ ಬಿಸಾಕಿದ ಸ್ಥಾನ ತೋರಿಸಿ "ಸಾರ್, ನಾನು ಆ ಕಡೆಯಿಂದ ಬರುವಾಗ ಅಲ್ಲಿ ಮೂಲೆಯಲ್ಲಿ ಬಿದ್ದಿತ್ತು, ನಾನು ಎತ್ತಿಕೊಂಡು ಸೆಕ್ಯೂರಿಟಿಗೆ ತೋರಿಸಿ ವಿಚಾರಿಸಿದಾಗ ಅವನು ಈ ಕೊಲೆಯಾದ ಯುವತಿ ಬ್ಯಾಂಕ್ ಪ್ರವೇಶ ಮಾಡುವಾಗ ಈ ವ್ಯಾನಿಟಿ ಬ್ಯಾಗ್ ಅವಳ ಹತ್ತಿರ ಇತ್ತು ಎಂದು ಹೇಳಿದನು"
ಪಾಟೀಲ್ "ಆದರೆ ರಾಣೆ, ಗೈತೊಂಡೆ ತೋರಿಸಿದ ವ್ಯಾನಿಟಿ ಬ್ಯಾಗ್ ಸಹ ಇದೆ ತರಹ ಇತ್ತು, ಇದೇನು ವಿಷಯ"?
ರಾಣೆ " ಅದೇ ಸಾರ್, ನನಗೂ ಆಶ್ಚರ್ಯವಾಯಿತು,ವಿಚಿತ್ರ ಏನೆಂದರೆ ಸಾರ್ ನಾನು ಅವಾಗ ಆ ಕಡೆ ಹೋಗುವಾಗ ಈ ವ್ಯಾನಿಟಿ ಬ್ಯಾಗ್ ಅಲ್ಲಿ ಇರಲಿಲ್ಲ ".
ಇದನ್ನು ಕೇಳಿ ನನ್ನ ಉಸಿರು ನಿಲ್ಲಿದಂತಾಯಿತು, ಇನ್ನು ಇವರು ಇದರ ಬಗ್ಗೆ ತನಿಖೆ ಮಾಡಿದರೆ ನಾನು ಸಿಕ್ಕಿಬೀಳುವೆನೋ, ಯಾರಾದರೂ ನನ್ನನ್ನು ನೋಡಿರಬೇಕಾ? ಎಂಬ ಹೆದರಿಕೆ ಶುರುವಾಯಿತು , ಅಯ್ಯೋ.
ಆದರೆ ಇದೇನು ಪ್ರಕಾರ? ಒಂದೇ ರೀತಿ ಹೋಲುವ ಎರಡು ವ್ಯಾನಿಟಿ ಬ್ಯಾಗ್?? ಇದೇನು ರಹಸ್ಯ ???
(ಮುಂದುವರಿಯುತ್ತದೆ)
by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್
No comments:
Post a Comment