Thursday, January 23, 2020

ವ್ಯಾನಿಟಿ ಬ್ಯಾಗ್ ೨



ಬ್ಯಾಂಕ್ ಮುಖ್ಯ ದ್ವಾರ  ಮೊದಲೇ ಬ್ಯಾಂಕ್ ಸೆಕ್ಯೂರಿಟಿ ಸೀಲ್ ಮಾಡಿದ್ದರು. ಪೊಲೀಸರು ಬಂದ ನಂತರ ಅವರು ಎಲ್ಲರಿಗೂ "ಯಾರು ಹೊರಗೆ ಹೋಗುವ ಹಾಗೆ ಇಲ್ಲ, ನಮ್ಮ ತನಿಖೆ ಮುಗಿದ ನಂತರವೇ ನಿಮ್ಮನ್ನು ಹೊರ ಬಿಡಲಾಗುವುದು" ಎಂದು ಎಚ್ಚರಿಕೆ ನೀಡಿದರು, ಜನರೆಲ್ಲ ಆತಂಕದಲ್ಲಿದ್ದರು, ಎಲ್ಲರ ಮನಸ್ಸಲ್ಲಿ ಒಂದೇ ಪ್ರಶ್ನೆ ಇದು ಹೇಗೆ ಆಯಿತೆಂದು?

ಪೊಲೀಸರ ತಂಡ ತನಿಖೆ ಮಾಡಲು ಅಲ್ಲಲ್ಲಿ ಹರಡಿದರು, ಪೊಲೀಸ್ ಮುಖ್ಯ ಅಧಿಕಾರಿ ತುಂಬಾ ಸೂಕ್ಷ್ಮ ರೀತಿಯಿಂದ ಯುವತಿಯ ಶವದ ಅಧ್ಯಯನ ಮಾಡುತ್ತಿದ್ದರು, ಅವರು ಸಬ್ ಇನ್ಸ್ಪೆಕ್ಟರ್ ಜೊತೆ " ಪಾಟೀಲ್, ಯಾರೋ ತುಂಬಾ ಸಮೀಪದಿಂದ ಸೈಲೆನ್ಸರ್ ಇದ್ದ ಗನ್ ನಿಂದ  ಯುವತಿಗೆ ಶೂಟ್ ಮಾಡಿರಬೇಕು ಹಾಗು ಶೂಟರ್ ಈಗಲೂ ಇಲ್ಲೇ ಬ್ಯಾಂಕಲ್ಲಿ ಇರಬೇಕು,ಯಾಕೆಂದರೆ ಬ್ಯಾಂಕ್ ಸೆಕ್ಯೂರಿಟಿ ಪ್ರಕಾರ ಪ್ರಕರಣ ಆದ  ಕೂಡಲೇ ಅವನು ಬ್ಯಾಂಕ್ ಮುಖ್ಯ ದ್ವಾರ  ಸೀಲ್ ಮಾಡಿದ್ದಾನೆ ".

ಪಾಟೀಲ್  "ಹೌದು ಸರ್, ನಾನು ಮ್ಯಾನೇಜರ್ ಹತ್ತಿರ ಸಿಸಿಟಿವಿ ಫೂಟೇಜ್ ತೋರಿಸಿಲಿಕ್ಕೆ ಹೇಳಿದ್ದೇನೆ, ಅದರಿಂದ ನಮಗೆ ಏನಾದರು ಕೊಲೆಗಾರನ ಸುಳಿವು ಸಿಗಬಹುದು ".

ಇದನ್ನು ಕೇಳಿ ನನಗೆ ಬೆವರು ಹರಿಯಲಾರಂಭಿಸಿತು, "ಏನು ಮಾಡಲಿ ಈಗ ವ್ಯಾನಿಟಿ ಬ್ಯಾಗನ್ನು ಮೆಲ್ಲನೆ ಎಲ್ಲಿಯಾದರೂ ಇಡಬೇಕೆಂದರೆ, ಅದು ಈಗ ಸಾಧ್ಯವಿಲ್ಲ, ಎಲ್ಲ ಕಡೆ ಪೊಲೀಸರು ಇದ್ದಾರೆ, ಅದರ ಮೇಲೆ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಇದೆ, ಅಯ್ಯೋ, ಎಲ್ಲಿ ಸಿಕ್ಕಿ ಬಿದ್ದೆ".   

ನನ್ನ ಮನಸ್ಸು ಪುನಃ ನನ್ನ ಮೇಲೆ ಕಿರುಚಿತು "ಹೇ  ಮೂರ್ಖ ,ನಿನ್ನ ಅವಸ್ಥೆ ನೋಡಿ ಯಾರು ಸಹ ನಿನ್ನ ಮೇಲೆ ಸಂಶಯ ಮಾಡಬಹುದು, ಸ್ವಲ ನಿನ್ನನ್ನು ಸಮಾಧಾನ ಮಾಡಿಸಿಕೊಳ್ಳು".

ನಾನು ಮುಖದಲ್ಲಿ ಮೂಡಿದ ಬೆವರನ್ನು ಒರೆಸಿ ಸ್ವಲ ತನ್ನನ್ನು ಸುಧಾರಿಸಿಕೊಂಡೆ ಹಾಗು  ಮೆಲ್ಲನೆ ವ್ಯಾನಿಟಿ ಬ್ಯಾಗ್ ನನ್ನ ಬ್ಯಾಗಿಗೆ ಸಾಗಿಸಿದೆ, "ನೋಡುವ ಏನಾಗುತ್ತದೆ, ಹೇಗೋ ತಪ್ಪು ಮಾಡಿ ಆಗಿದೆ, ಇನ್ನು ಅದನ್ನು ಎದುರಿಸಲೇ ಬೇಕು".

ಆಗ ಒಮ್ಮೆಲೇ ನನಗೆ ವಿಚಾರ ಬಂತು "ಯಾಕೆ ನಾನು ನೇರ ಹೋಗಿ ಬ್ಯಾಗನ್ನು  ಪೊಲೀಸರಿಗೆ ಕೊಡಬಾರದು? ಹೆಚ್ಚೆಚ್ಚು ಏನಾಗಬಹುದು? ಅವರು ಕೆಲವು ಪ್ರಶ್ನೆ ಕೇಳಬಹುದು ಅಷ್ಟೇ, ನಾನೇನು ಕೊಲೆಗಾರ ಅಲ್ಲ, ನನ್ನ ತಪ್ಪು ಕೇವಲ ಬ್ಯಾಗ್ ಎತ್ತು ತಂದದ್ದು, ಆದರೆ ಪುನಃ ಇನ್ನೊಂದು ವಿಚಾರ ಬಂತು " ಬ್ಯಾಗಲ್ಲಿ ಏನಿದೆ ಯಾರಿಗೆ ಗೊತ್ತು, ಏನಾದರು ಸಂಶಯಪ್ರದ ವಸ್ತು ಇದ್ದರೆ  ಪೊಲೀಸರು ನನ್ನನ್ನು ಬಿಡಲಿಕ್ಕಿಲ್ಲ, ನಂತರ ಸುಮ್ಮನೆ ಕೋರ್ಟ್ ಕಚೇರಿ ".

ಆಗ ಒಬ್ಬ ಪೊಲೀಸರು ಬ್ಯಾಂಕಲ್ಲಿ ಇದ್ದ ಎಲ್ಲ ಗ್ರಾಹಕರನ್ನು ಹಾಗು ಬ್ಯಾಂಕ್ ಸಿಬ್ಬಂದಿಯರನ್ನು ಸಾಲಾಗಿ ನಿಲ್ಲಬೇಕು ಹಾಗು ಪೊಲೀಸ್ ಮುಖ್ಯ ಅಧಿಕಾರಿಯವರು  ನಿಮ್ಮಿಂದ ಒಬ್ಬೊಬ್ಬರನ್ನು ಕರೆದು ತನಿಖೆ ಮಾಡುತ್ತಾರೆಂದು ಹೇಳಿದರು, ಇದನ್ನು ಕೇಳಿ ನನ್ನ ಶರೀರದಲ್ಲಿ ಪುನಃ ಗಾಬರಿಯ ಸಂಚಾರವಾಯಿತು.

ಆದರೆ ಆಗ ತಾನೇ ಸಬ್ ಇನ್ಸ್ಪೆಕ್ಟರ್ ಪಾಟೀಲ್ ನವರು  ಪೊಲೀಸ್ ಮುಖ್ಯ ಅಧಿಕಾರಿಗೆ ಹೇಳಿದ ಮಾತಿನಿಂದ ನನ್ನಲ್ಲಿ ಆಶ್ಚರ್ಯ ಹಾಗು ನೆಮ್ಮದಿ ಮೂಡಿತು.

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...