Wednesday, January 29, 2020

ಇಂದು ನನ್ನ

ಇಂದು ನನ್ನ
ಸಂತೋಷಕ್ಕೆ ಮಿತಿಯೇ ಇಲ್ಲ
ಬರುತ್ತಿದ್ದಾನೆ
ವಿದೇಶದಿಂದ ನನ್ನ ನಲ್ಲ

ಹಾರುತ್ತಿದೆ
ಎತ್ತರದಲಿ
ನನ್ನ ಹೃದಯದ ಗಾಳಿಪಟ
ಬೀಸುತ್ತಿದೆ
ಹರ್ಷದ ತಂಗಾಳಿ
ನಿಲ್ಲಲಾರದು ನನ್ನಆನಂದದ  ಓಟ
ಪಾದಗಳು ನನ್ನ ನಿಯಂತ್ರಣದಲ್ಲಿಲ್ಲ

ಇಂದು ನನ್ನ
ಸಂತೋಷಕ್ಕೆ ಮಿತಿಯೇ ಇಲ್ಲ...

ಕಾದು ಕಾದು
ಕಂಗಳು ಸೋತುಹೋಗಿತ್ತು
ಇಂದು ಸಿಕ್ಕಿದೆ ಕಂಗಳಿಗೆ ಹೊಳಪು
ಏಕಾಂತ ಏಕಾಂತ
ಜೀವನ ನೀರಸವಾಗಿತ್ತು
ಇಂದು ಜೀವನದಲಿ ಹರಡಿದೆ ಹೊಸ ಕಂಪು
ಹೊಸ ಚೇತನದಿಂದ ತುಂಬಿದೆ ಮೈಯೆಲ್ಲ

ಇಂದು ನನ್ನ
ಸಂತೋಷಕ್ಕೆ ಮಿತಿಯೇ ಇಲ್ಲ...

by ಹರೀಶ್ ಶೆಟ್ಟಿ, ಶಿರ್ವ


ಚಿತ್ರ ಕೃಪೆ : ಗೂಗಲ್ 

No comments:

Post a Comment

ಸಿದ್ಧಿದಾತ್ರಿ