Tuesday, January 21, 2020

ಅಮ್ಮ ಹಕ್ಕಿ



ಅಮ್ಮ ಹಕ್ಕಿ
ದಿನ ನಿತ್ಯ
ಆಹಾರ ಹುಡಕುತ
ಅಲ್ಲಿ ಇಲ್ಲಿ
ಹಾರುತ್ತಿತ್ತು

ಪರಿಸರದ
ಸೌಂದರ್ಯ ಮರೆತು
ಮರಿಗಳ ನೆನಪಿನಲಿ
ಕಳವಳದಲ್ಲಿರುತ್ತಿತ್ತು

ದೂರ ಹೋಗದೆ
ಹಣ್ಣು, ಧಾನ್ಯ,
ತಿನಸಿನ ಹುಡುಕಾಟದಲ್ಲಿ
ಸುತ್ತ ಮುತ್ತ
ಅಲೆಯುತ್ತಿತ್ತು

ಪದೇ ಪದೇ
ಮರಳಿ ಗೂಡಿಗೆ ಬಂದು
ಮರಿಗಳನ್ನು ನೋಡಿ ಕೊಳ್ಳಲು
ಬರುತ್ತಿತ್ತು

ಅಮ್ಮ ಹಕ್ಕಿಯನ್ನು 
ನೋಡಿ ಗೂಡಲಿ
ಮುದ್ದು ಪುಟ್ಟ ಮರಿಗಳು
ಹರ್ಷದಿಂದ ಚಿಲಿಪಿಲಿಯೆಂದು
ಕೂಗಲಾರಂಭಿಸುತ್ತಿತ್ತು

ಗೂಡಿಗೆ ಬಂದು
ಸಿಕ್ಕ ಆಹಾರ
ಮರಿಗಳಿಗೆ ತಿನಿಸಿ
ಪುನಃ  ಹುಡುಕಾಟಕ್ಕೆ ಹೊರಡುತ್ತಿತ್ತು

ಕೆಲವೊಮ್ಮೆ
ಅಮ್ಮ ಹಕ್ಕಿ
ಹಾರಿ ಹಾರಿ
ಸೋತು ಬಂದು
ಮರದ ಕೊಂಬೆಯಲಿ ಕುಳಿತುಕೊಳ್ಳುತ್ತಿತ್ತು

ಸಂಜೆ ಆದಂತೆ
ಸಿಕ್ಕಿದ ಆಹಾರ
ಕೊಕ್ಕಿನಲ್ಲಿ 
ಹಿಡಿದು ಪುನಃ ಗೂಡಿಗೆ
ಸೇರಿಕೊಳ್ಳುತ್ತಿತ್ತು

ಮರಿಗಳ ಮೈಮೇಲೆ
ರೆಕ್ಕೆ ಪುಕ್ಕಗಳು
ಮೂಡುತ್ತಿದ್ದಂತೆ
ಟೊಂಗೆಯಿಂದ ಟೊಂಗೆಗೆ
ಹಾರಲು ಅಮ್ಮ ಹಕ್ಕಿ
ಪಾಠ ಕಲಿಸುತ್ತಿತ್ತು

ಹಾರಲು ಸಿದ್ಧವಾಗಿ
ಎಲ್ಲ ಮರಿ ಹಕ್ಕಿಗಳು
ತನ್ನ ತನ್ನ
ಜೀವನೋಪಾಯ
ಸ್ವತಃ ಹುಡುಕುತ್ತಿತ್ತು

ಅಮ್ಮ ಎಂಬ ಜೀವಿಯ
ಈ ವಿಶೇಷ ತ್ಯಾಗ ಭಾವ
ಕಂಡು ದೇವರ
ಮುಖದಲ್ಲೂ
ಹರ್ಷ ಮೂಡುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...