Wednesday, January 22, 2020

ವ್ಯಾನಿಟಿ ಬ್ಯಾಗ್ ೧


ಸಂಜೆ ಬ್ಯಾಂಕ್ ಕ್ಲೋಸ್ ಆಗುವ ಸಮಯ, ಅಂದು ಬ್ಯಾಂಕಲ್ಲಿ ಸ್ವಲ್ಪ ಹೆಚ್ಚು ಜನರು, ಎಲ್ಲ ಕೌಂಟರಲ್ಲಿ  ಜನರ ಸಾಲು.  ನಾನು ಈ ಬ್ಯಾಂಕಲ್ಲಿ ಸೇಲ್ಸ್ ಲ್ಲಿ ಸ್ವಲ್ಪ ದಿನ ಮುಂಚೆ ಜಾಯಿನ್ ಆದದ್ದು, ನನ್ನ ಕಾರ್ಯ ಹೊರಗೆ ಹೋಗಿ ಹೊಸ ಅಕೌಂಟ್ ತರುವುದು, ಬ್ಯಾಂಕ್ ಒಳಗೆ ಗ್ರಾಹಕರೊಂದಿಗೆ ನನ್ನ ನೇರ ಸಂಪರ್ಕ ಇರಲಿಲ್ಲ. ನಾನು ಹೊರಗೆ ಹೋಗಿ ಆಗ ತಾನೇ ಬಂದಿದೆ ,ಅದಕ್ಕೆ ನಾನು ನನ್ನ ಡೆಸ್ಕ್ ಲ್ಲಿ ನನ್ನ ಉಳಿದ ಕಾರ್ಯ ಮಾಡುತ್ತಿದ್ದೆ. 

ಕಾರ್ಯ ಮಾಡುತ್ತಿದಂತೆ ನನ್ನ ಧ್ಯಾನ ಪದೇ ಪದೇ ಆ ಯುವತಿಯ ಮೇಲೆ ಹೋಗುತ್ತಿತ್ತು. ಅವಳ ಮನಸ್ಸಲೇನಿತ್ತು ಗೋತ್ತಿಲ್ಲ, ಆದರೆ ಅವಳ ನಡವಳಿಕೆ ಸ್ವಲ್ಪ ವಿಚಿತ್ರವಾಗಿತ್ತು. 

ನನಗೇನಾಗಬೇಕೆಂದು ತಿಳಿದು ನಾನು ನನ್ನ ಕೆಲಸದಲ್ಲಿ ಮಗ್ನನಾದೆ. 
ಆದರೆ ಯಾಕೋ ಅವಳಿಗೆ ಕೇಳಿಯೇ ಬಿಡೋಣ ಎಂದು ಎದ್ದು ಅವಳತ್ತ ಹೋದೆ . 

"ಮೇಡಂ, ಮೇ ಆಯ್ ಹೆಲ್ಪ್ ಯು?

ನನ್ನಿಂದ ಹಠಾತ್ತಾಗಿ ಬಂದ ಪ್ರಶ್ನೆಯಿಂದ ಅವಳು ಸ್ವಲ್ಪ ಭಯದಿಂದಲೇ 
"ನೋ, ಥ್ಯಾಂಕ್ಸ್ ". 

"ಏನು ಮೇಡಂ, ನೀವು ಸ್ವಲ್ಪ ಕಳವಳದಲ್ಲಿದ್ದಾಗೆ ಕಾಣುತ್ತದೆ ?"

ಅವಳು ಸ್ವಲ್ಪ ಕೋಪದಿಂದಲೇ "ಹೂ ಆರ್ ಯು ಟು ಆಸ್ಕ್ ಮಿ ಸಚ್ ಕ್ವೆಶ್ಚನ್ ,ನನ್ ಓಫ್ ಯುವರ್ ಬಿಸ್ನೆಸ್,  ಮೈಂಡ್ ಯುವರ್ ಓನ್ ಬಿಸ್ನೆಸ್". 

ಅವಳ ಮಾತು ಕೇಳಿ ನನ್ನ ಮನಸ್ಸೇ ನನಗೆ ಬೈಯಲು ಶುರುಮಾಡಿತು,
"ಹೋಗು, ಇನ್ನು ಹೋಗು ಬೇರೆಯವರ ಸಹಾಯ ಮಾಡಲು, ಸುಮ್ಮನೆ ತನ್ನ ಕೆಲಸ ಬಿಟ್ಟು ಬೇರೆಯವರ ಹಿಂದೆ ಓಡುವುದು ". 

ನಾನು ತೆಪ್ಪಗೆ ಪುನಃ ನನ್ನ ಡೆಸ್ಕ್ ಗೆ ಬಂದು ಕುಳಿತುಕೊಂಡೆ. 
"ಛೆ, ಎಂತಹ ಮನಷ್ಯರು, ಅಷ್ಟು ಸೌಮ್ಯವಾಗಿ ಸಹಾಯ ಮಾಡಬೇಕೇ ಎಂದು ಕೇಳಿದೆ, ಆದರೆ ಅವರದ್ದು ಬೇರೇನೇ". 

ಸ್ವಲ್ಪ ಸಮಯದ ನಂತರ  ಜೋರಾಗಿ ಕಿರುಚುವ ಧ್ವನಿ ಕೇಳಿತು, ನನಗ್ಯಾಕೋ ಇದು ಅವಳದ್ದೇ ಸ್ವರ ಎಂದು ಆ ಕಡೆ ನೋಡಿದೆ.  ಅಲ್ಲಿಯ ಧೃಶ್ಯ ನೋಡಿ ನನ್ನ ಕಣ್ಣು ಅಗಲವಾಯಿತು, ಅಲ್ಲಿ ಅವಳು ನೆಲದಲ್ಲಿ ಬಿದ್ದಿದಳು, ಅವಳ ತಲೆಯಿಂದ ರಕ್ತ ಸುರಿಯುತ್ತಿತ್ತು, ಯಾರೋ ಅವಳಿಗೆ ಶೂಟ್ ಮಾಡಿರಬೇಕು ಎಂದು ತಿಳಿದು ಬರುತ್ತಿತ್ತು, ನಾನು ಆ ಕಡೆ ಓಡಿ ಹೋದೆ. 

ಅವಳು ಸತ್ತು ಹೋಗಿದ್ದಳು, ಅವಳ ಶವದ ಸುತ್ತ ಮುತ್ತ ಜನರು ಒಟ್ಟಾಗಿದ್ದರು,  ಎಲ್ಲರು ಅವಳ ಬಗ್ಗೆ ವಿಧ ವಿಧವಾದ ಮಾತನ್ನು ಹೇಳು,ಕೇಳುತ್ತಿದ್ದರು. ಜನರ ಗಲಾಟೆಯ ಮಧ್ಯೆ ನನಗೆ ಒಂದು ಮೂಲೆಯಲ್ಲಿ ಅವಳ ಕೈಯಲ್ಲಿದ್ದ ಕೆಂಪು ವ್ಯಾನಿಟಿ ಬ್ಯಾಗ್ ಕಂಡು ಬಂತು, ಯಾರದ್ದು ಧ್ಯಾನ ಅದರ ಮೇಲೆ ಇರಲಿಲ್ಲ,  ಉತ್ಸುಕನಾಗಿ ನಾನು ಮೂಲೆಗೆ ಹೋಗಿ ಅವಳ ವ್ಯಾನಿಟಿ ಬ್ಯಾಗ್ ಎತ್ತುಕೊಂಡು ಮೆಲ್ಲನೆ ನನ್ನ ಡೆಸ್ಕ್ ಗೆ ಬಂದೆ. 

ನನ್ನ ಹೃದಯ ಡಬ ಡಬ ಅಂತ ಜೋರಾಗಿ ಬಡಿಯಲಾರಂಭಿಸಿತು. ಆಗ ಜನರ ಗಲಾಟೆಯಿಂದ ಪೊಲೀಸ್ ನವರು ಬಂದ  ಸುದ್ದಿ ತಿಳಿಯಿತು. ನಾನು ಗಾಬರಿಯಾದೆ "ಅರೆ ಇದು ನಾನು ಏನು ಮಾಡಿದೆ, ಯಾಕೆ ಅವಳ ಬ್ಯಾಗ್ ತಂದೆ, ಇನ್ನು ಪೊಲೀಸ್ ನವರು ಸಿಸಿಟಿವ್ ಚೆಕ್ ಮಾಡಿದರೆ  ನಾನು ಬ್ಯಾಗ್ ಎತ್ತು ತರುವುದು ಸಹ ಅವರು ನೋಡಬಹುದು". 

"ಏನು ಮಾಡಲಿ, ಹೋಗಿ ಅಲ್ಲಿಯೇ  ಇಡೋಣ, ಅಯ್ಯೋ ಅದು ಸಾಧ್ಯನೇ ಇಲ್ಲ...  ಸಿಸಿಟಿವಿಯಲ್ಲಿ ಎಲ್ಲ ರೆಕಾರ್ಡ್ ಆಗುತ್ತದೆ, "ಛೆ" ಏನು ಮಾಡಿ ಬಿಟ್ಟೆ, ಏನಿರಬೇಕು ಆ ವ್ಯಾನಿಟಿ ಬ್ಯಾಗ್ ಲ್ಲಿ" ,"ಅಯ್ಯೋ" ನನ್ನ ಮನಸ್ಸು ಪುನಃ ನನಗೆ ಬೈಯಲು ಶುರು ಮಾಡಿತು "ಯಾಕೆ ಬೇಡದ್ದು ಕೆಲಸ ಮಾಡುವೆಯೆಂದು ಅರ್ಥವಾಗುದಿಲ್ಲ, ನೀನೇನು ಮೂರ್ಖನ? ಇಷ್ಟೊಂದು ಅರ್ಥವಾಗುವುದಿಲ್ಲವೇ ? ಇನ್ನು ಜೈಲು ನಿನಗೆ ಗತಿ". 

ನಾನು ತಲೆ ಹಿಡಿದು ಕುಳಿತುಕೊಂಡೆ.

ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...