Saturday, January 25, 2020

ವ್ಯಾನಿಟಿ ಬ್ಯಾಗ್ ೩


"ಸರ್, ಒಂದು ಕೆಟ್ಟ ಸುದ್ದಿ, ಇಂದು ಬೆಳಿಗ್ಗೆಯಿಂದ ಈ ಏರಿಯದಲ್ಲಿ ವಿದ್ಯುತ್ ಪ್ರವಾಹ ಇಲ್ಲ, ಅದಕ್ಕೆ ಬ್ಯಾಂಕಲ್ಲಿ ಜನರೇಟರ್ ಮೂಲಕ ವಿದ್ಯುತ್ ನಡೆಯುತ್ತಿತ್ತು, ಇಲ್ಲಿ ಎರಡು ಜನರೇಟರ್ ಇದೆ ಸರ್, ಒಂದು ವಿದ್ಯುತ್ ಗೋಸ್ಕರ ಇನ್ನೊಂದು ಸಿಸಿಟಿವಿಗೋಸ್ಕರ,  ಸರ್ ಸಿಸಿಟಿವಿಗೆ ಜೋಡಿಸಿದ ಜನರೇಟರಿನ ಡೀಸೆಲ್ ಮುಗಿದ ಕಾರಣ ಅದು ಇಂದು ಕೆಲಸ ಮಾಡುತ್ತಿರಲಿಲ್ಲ, ಆಫ್ ಮೋಡಲ್ಲಿತ್ತು, ಅದರ ಕಾರಣ ಅದರಲ್ಲಿ ಇಂದಿನ ಯಾವುದೇ ಫೂಟೇಜ್ ರೆಕಾರ್ಡ್ ಆಗಲಿಲ್ಲ, ಬ್ಯಾಂಕ್ ಅಧಿಕಾರಿಗಳಿಗೆ ಸಹ ಈಗ ತಾನೇ ಡೀಸೆಲ್ ಮುಗಿದ ವಿಷಯ ತಿಳಿದದ್ದು". 

ಇದನ್ನು ಕೇಳುತ್ತಲೇ  ನನ್ನ ಜೀವದಲ್ಲಿ ಜೀವ ಬಂದಂತಾಯಿತು, ನಾನು ನೆಮ್ಮದಿಯ ಉಸಿರು ಬಿಟ್ಟೆ, ಆದರೆ ಈಗಲೂ ಪರಿಸ್ಥಿತಿ ಪೂರ್ಣವಾಗಿ ನನ್ನ ಪರವಾಗಿ  ಇರಲಿಲ್ಲ, ಒತ್ತಡ  ಈಗಲೂ ಇತ್ತು. 

ಪಾಟೀಲ್ ರವರ ಮಾತು ಕೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು "ಒಹ್!! ಬ್ಯಾಂಕ್ ಅಧಿಕಾರಿಗಳಿಗೆ ಈ ಕಡೆ ಗಮನ ಇಡಬೇಕಿತ್ತು, ಸಿಸಿಟಿವಿಯ ಮಹತ್ವ ಅವರಿಗೆ ತಿಳಿದಿರಬೇಕು, ಇಂಥ ಘಟನೆ ನಡೆದಾಗಲೇ ಅದರ ಪ್ರಾಮುಖ್ಯತೆ ತಿಳಿಯುವುದು". 
ಎನಿವೇಸ್..... "ನಾನು ಇಲ್ಲಿದ್ದ ಜನರ ಹಾಗು ಬ್ಯಾಂಕ್ ಸಿಬ್ಬಂದಿಯರ ಒಟ್ಟಿಗೆ ವಿಚಾರಣೆ ಮಾಡುತ್ತೇನೆ,  ನೀವು ಯುವತಿಯ ಶವ ಪೋಸ್ಟ್ ಮಾರ್ಟಮ್ ಗೆ ಕಳಿಸಿ, ಶವದ ಬಳಿ ಯಾವುದೇ ವಸ್ತು ಹಾಗು ಪುರಾವೆ ಏನು ಸಿಗಲಿಲ್ಲ, ಇನ್ನು ಇಲ್ಲಿದ್ದ ಜನರ ಸ್ಕ್ಯಾನಿಂಗ್ ಆದ ನಂತರವೇ ಕೊಲೆಗಾರನ ಸುಳಿವು ಸಿಗಬಹುದು".  

ಪಾಟೀಲ್ " ಓಕೆ ಸರ್, ನಮ್ಮ ಟೀಮ್ ಸಹ ಇಡೀ ಬ್ಯಾಂಕ್ ಸ್ಕ್ಯಾನ್ ಮಾಡುತ್ತಿದ್ದಾರೆ, ಹೋಪ್ ಸಮ್ ಔಟ್ಕಮ್ ವಿಲ್ ಕಮ್".

ಮುಖ್ಯ ಪೊಲೀಸ್ ಅಧಿಕಾರಿಯವರು "ಡೆಫಿನೇಟೆಲಿ, ಲೆಟ್ಸ್ ಹೋಪ್ ಫಾರ್ ದ ಬೆಸ್ಟ್". 

ಸಿಸಿಟಿವಿ ಆಫ್ ಇದೆ ಎಂಬ ವಿಷಯ ತಿಳಿದ ನಂತರ ಈಗ ನನಗೆ ಹೇಗೆ ಸಹ ಬೇಗನೆ ಆ ವ್ಯಾನಿಟಿ ಬ್ಯಾಗ್ ನಿಂದ  ಮುಕ್ತಿ ಪಡೆಯಬೇಕು ಎಂಬ ವಿಚಾರ ಬಂತು, ನಾನು ಮೆಲ್ಲನೆ ಎಲ್ಲರ ಕಣ್ಣು ತಪ್ಪಿಸಿ ನನ್ನ ಬ್ಯಾಗಲ್ಲಿದ್ದ ವ್ಯಾನಿಟಿ ಬ್ಯಾಗ್ ತೆಗೆದು ಅಲ್ಲಿಯೇ ಒಂದು ಮೂಲೆಗೆ ಸಾಗಿಸಿದೆ.

ಒಮ್ಮೆ ಹೃದಯ ಜೋರಿಂದ ಬಡಿಯಲಾರಂಭಿಸಿತು, ಆದರೆ ನಂತರ ಏನೋ ಭಾರ ಇಳಿದಂತೆ ಬಾಸವಾಯಿತು, ನಾನು ಪುನಃ ಬಂದು ಜನರ ಸಾಲಿಗೆ ಸೇರಿದೆ. 

ಯಾಕೋ ಈಗ ನನಗೆ ನಾನು ತುಂಬಾ ಹಗುರ ಹಗುರವಾಗಿದ್ದೇನೆ ಎಂಬ ಅನುಭವ ಆಗುತ್ತಿತ್ತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...