Monday, January 27, 2020

ವ್ಯಾನಿಟಿ ಬ್ಯಾಗ್ ೫


"ರಾಣೆ, ನೀವು ಈ ವ್ಯಾನಿಟಿ ಬ್ಯಾಗ್ ತೆರೆದು ಚೆಕ್ ಮಾಡಿದ್ದೀರಾ"? ಎಂದು ಸಬ್  ಇನ್ಸ್ಪೆಕ್ಟರ್ ಪಾಟೀಲ್ ಕಾನ್ಸ್ಟೇಬಲ್ ರಾಣೆಗೆ  ಕೇಳಿದರು.

ಕಾನ್ಸ್ಟೇಬಲ್ ರಾಣೆ "ಇಲ್ಲ ಸಾರ್, ನಾನು ತೆರೆದು ನೋಡಲಿಲ್ಲ".

ಪಾಟೀಲ್ ಆ ವ್ಯಾನಿಟಿ ಬ್ಯಾಗ್ ತೆರೆದು ನೋಡಿದರು, ಅದರಲ್ಲಿ ಏನು ವಿಶೇಷ ವಸ್ತು ಇರಲಿಲ್ಲ, ಕೆಲವು ರೂಪಾಯಿ, ಒಂದು ಕೀ  ಹಾಗು ಒಂದು ಡೆಬಿಟ್ ಕಾರ್ಡ್ ಇತ್ತು, ಡೆಬಿಟ್ ಕಾರ್ಡ್ ಮೇಲೆ "ಸೌಮ್ಯ ಗೌಡ" ಅಂತ ಹೆಸರಿತ್ತು. 

ಪಾಟೀಲ್ "ಸೌಮ್ಯ ಗೌಡ"? 

"ಒಂದು  ವೇಳೆ ಈ ಬ್ಯಾಗ್ ಕೊಲೆಯಾದ ಯುವತಿಯ ಆಗಿದ್ದರೆ, ಈ ಯುವತಿಯ ಹೆಸರು ಸೌಮ್ಯ ಗೌಡ ಎಂದಿರಬೇಕು" ಪಾಟೀಲ್ ರಾಣೆ ಹತ್ತಿರ ಹೇಳಿದರು.

ರಾಣೆ " ಹೌದು ಸಾರ್,  ಆದರೆ ಒಳಗೆ ಸಾಹೇಬರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ಪರಿಶೀಲಿಸಿ ನೋಡಿದ ನಂತರವೇ ಇದು ಖಚಿತಪಡಬಹುದು".

ಪಾಟೀಲ್ "ಹ್ಮ್ಮ್...ರಾಣೆ, ನೀವು ಇಲ್ಲಿಯ ಕಾರ್ಯ ಪೂರ್ಣಗೊಳಿಸಿ, ನಾನು ಸಾಹೇಬರಿಗೆ ಸಿಕ್ಕಿ ಬರುತ್ತೇನೆ".

ರಾಣೆ " ಓಕೆ, ಸಾರ್".

ಪಾಟೀಲ್ ವ್ಯಾನಿಟಿ ಬ್ಯಾಗ್ ಹಿಡಿದು ಮುಖ್ಯ ಪೊಲೀಸ್ ಅಧಿಕಾರಿಯಲ್ಲಿಗೆ ಹೋದರು.

ತುಂಬಾ ಸಮಯ ಕಳೆದೋಯಿತು, ಒಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ, ನಾನು ಮತ್ತು ಇತರ ಜನರು ಸೋತು ಕಂಗಾಲಾಗಿದ್ದರು. 

ಆಗ ಮುಖ್ಯ ದ್ವಾರದಲ್ಲಿ ಸೆಕ್ಯೂರಿಟಿ ಜೊತೆ ಒಂದು ಹೆಂಗಸು ಗಟ್ಟಿಧ್ವನಿಯಲ್ಲಿ ವಾದ ಮಾಡುವುದು ಕೇಳಿ ಬಂತು, ಅದನ್ನು ಕೇಳಿ ರಾಣೆ ಸೆಕ್ಯೂರಿಟಿಗೆ  "ಏನಲ್ಲಿ"?

ಸೆಕ್ಯೂರಿಟಿ " ಸಾರ್ , ಈ ಹೆಂಗಸು ನೋಡಿ, ಒಳಗೆ ಬಿಡಬೇಕೆಂದು ಹಠ ಮಾಡುತ್ತಿದ್ದಾರೆ".

ರಾಣೆ ಮುಖ್ಯ ದ್ವಾರಕ್ಕೆ ಹೋಗಿ ಕೆಲವು ನಿಮಿಷ ಆ ಹೆಂಗಸು ಜೊತೆ ವಿಮರ್ಶೆ ಮಾಡಿ ನಂತರ ಆ ಹೆಂಗಸನ್ನು ಜೊತೆಯಲ್ಲಿ ಕರೆದುಕೊಂಡು ಒಳಗೆ ನೇರ ಮುಖ್ಯ ಪೊಲೀಸ್ ಅಧಿಕಾರಿಯ ತನಿಖೆ ನಡೆಯುತ್ತಿದ್ದ ಕ್ಯಾಬಿನ್ ಗೆ ಹೋದರು. 

ಇನ್ನು ಕೆಲವು ನಿಮಿಷ ಕಳೆದೋಯಿತು, ಮುಖ್ಯ ದ್ವಾರದಲ್ಲಿ ಮಾಧ್ಯಮ ಪ್ರಸಾರ ಹಾಗು ವರದಿಗಾರರ ಗುಂಪು ಒಳಗೆ ಬರಲು ಯತ್ನಿಸುತ್ತಿದ್ದರು, ಸೆಕ್ಯೂರಿಟಿ ಅವರನ್ನು ಸ್ವಲ್ಪ ಹೊತ್ತು ತಡೆಯಲು ವಿನಂತಿಸುತ್ತಿದ್ದರು.

ನನ್ನ ಕುತೂಹಲ ಪರಾಕಾಷ್ಠೆಯಲ್ಲಿತ್ತು,  ಯಾರಿರಬಹುದು  ಈ ಹೆಂಗಸು? ಯಾಕೆ ಒಳಗೆ ಬರಲು ಯತ್ನಿಸುತ್ತಿದ್ದಳು ??  ರಾಣೆ ಅವಳನ್ನು ಯಾಕೆ ಒಳಗೆ ಕರೆದುಕೊಂಡು ಹೋದರು???

ರಹಸ್ಯ ಗಾಢವಾಗುತ್ತ ಹೋಗುತ್ತಿತ್ತು.

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ,ಶಿರ್ವ
ಚಿತ್ರ ಕೃಪೆ : ಗೂಗಲ್

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...