ಇನ್ನು ಕೆಲವು ನಿಮಿಷ ಕಳೆದೋದ ನಂತರ ಮುಖ್ಯ ಪೊಲೀಸ್ ಅಧಿಕಾರಿ ಹಾಗು ಎಲ್ಲ ಪೊಲೀಸ್ ತಂಡ, ರಾಣೆ ಜೊತೆ ಹೋದ ಯುವತಿಯ ಹಾಗು ಪರಾರಿ ಆಗಲು ಪ್ರಯತ್ನಿಸಿದ ವ್ಯಕ್ತಿಯೊಟ್ಟಿಗೆ ಕ್ಯಾಬಿನ್ ನಿಂದ ಹೊರಗೆ ಬಂದರು, ಕಾನ್ಸ್ಟೇಬಲ್ ಗೈತೊಂಡೆ ಆ ವ್ಯಕ್ತಿಯನ್ನು ಈಗಲೂ ಹಿಡಿದಿದ್ದ.
ಹೊರಗೆ ಮುಖ್ಯ ದ್ವಾರದಲ್ಲಿ ವರದಿಗಾರರ ಗಲಾಟೆ ನೋಡಿ ಮುಖ್ಯ ಪೊಲೀಸ್ ಅಧಿಕಾರಿಯವರು ಸೆಕ್ಯುರಿಟಿಗೆ "ಅವರನ್ನು ಒಳಗೆ ಬಿಡಿ" ಎಂದು ಕೈ ಸನ್ನೆ ಮಾಡಿದರು.
ವರದಿಗಾರರು ಒಳಗೆ ಬಂದ ಕೂಡಲೇ ಮುಖ್ಯ ಪೊಲೀಸ್ ಅಧಿಕಾರಿಯೊಂದಿಗೆ ಪ್ರಶ್ನೆ ಮಾಡಲು ಶುರು ಮಾಡಿದರು.
ಮುಖ್ಯ ಪೊಲೀಸ್ ಅಧಿಕಾರಿ "ನೋಡಿ ನಿಮ್ಮ ಎಲ್ಲ ಪ್ರಶ್ನೆಗಳ ಉತ್ತರ ನಿಮಗೆ ಸಿಗುತ್ತದೆ ಆದರೆ ಸ್ವಲ್ಪ ಶಾಂತತೆ ಇರಲಿ, ನಾನು ನಿಮಗೆ ಇಂದು ಬ್ಯಾಂಕಲ್ಲಿ ನಡೆದ ಯುವತಿಯ ಕೊಲೆಯ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತೇನೆ.
ಆದರೂ ವರದಿಗಾರರು ಅವರ ಸ್ವಭಾವದ ಪ್ರಕಾರ ಪ್ರಶ್ನೆ ಮಾಡುತ್ತಲೇ ಇದ್ದರು, ಇದರಿಂದ ಕೋಪಗೊಂಡು ಮುಖ್ಯ ಪೊಲೀಸ್ ಅಧಿಕಾರಿಯವರು "ನೋಡಿ ನೀವು ಹೀಗೆ ಗಲಾಟೆ ಮಾಡಿದ್ದಾರೆ ನಾನು ನಿಮಗೆ ಏನೂ ಮಾಹಿತಿ ನೀಡದೆ ಹೊರಟು ಹೋಗುತ್ತೇನೆ, ಸ್ವಲ್ಪ ಧೈರ್ಯ ಇರಲಿ". ಇದನ್ನು ಕೇಳಿ ವರದಿಗಾರರು ನಿಶ್ಯಬ್ದ ನಿಂತುಕೊಂಡರು.
ಪೊಲೀಸ್ ಮುಖ್ಯ ಅಧಿಕಾರಿಗಳು ವಿವರಣೆ ನೀಡಲು ಶುರು ಮಾಡಿದರು "ಇಂದು ಕೊಲೆಯಾದ ಯುವತಿಯ ಹೆಸರು ಶ್ರುತಿ ಪಟೇಲ್ ಅಂತ, ಇವಳು ಮೂಲತಃ ಗುಜರಾತ್ ದವಳು, ಇವಳು ಹಾಗು ಇವಳ ಮೂರು ಜತೆಗಾರರು ಒಟ್ಟಿಗೆ ಗುಜರಾತಲ್ಲಿ ಒಂದು ಬ್ಯಾಂಕ್ ಲೂಟಿ ಮಾಡಿ ಅಲ್ಲಿಂದ ಇಲ್ಲಿ ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಬಂದು ಇವಳು ಲೂಟಿ ಮಾಡಿದ ಹಣ ಇಲ್ಲಿ ಈ ಬ್ಯಾಂಕಲ್ಲಿ ಇವಳ ಒಂದು ಸಂಬಂಧಿಕರ ಲಾಕರಲ್ಲಿ ಇಟ್ಟಿದ್ದಳು, ಹಣದ ಪಾಲಿನ ವಿಷಯದಲ್ಲಿ ಇವರ ಮಧ್ಯೆ ಜಗಳವಾಗಿ ಇವಳು ತನ್ನ ಮೂವರು ಜತೆಗಾರರಲ್ಲಿ ಇಬ್ಬರನ್ನು ಕೊಂದು ಅಲ್ಲಿಂದ ಪರಾರಿಯಾದಳು, ಒಬ್ಬಾತ ಹೇಗೋ ತನ್ನ ಜೀವ ಉಳಿಸಿ ಅಲ್ಲಿಂದ ಓಡಿ ಹೋಗಿದ್ದ. ನಂತರ ಇವಳು ಈ ಬ್ಯಾಂಕ್ ಗೆ ಲಾಕರಲ್ಲಿದ್ದ ಎಲ್ಲ ಹಣ ತಾನೇ ಒಬ್ಬಳು ತೆಗೆದು ಓಡಿ ಹೋಗುವ ಎಂಬ ಉದ್ದೇಶದಿಂದ ಬಂದಿದ್ದಳು. ಆದರೆ ಓಡಿ ಹೋಗಿದ್ದ ಜತೆಗಾರ ಸೇಡು ತೀರಿಸಿಕೊಳ್ಳಲು ಇವಳನ್ನು ಹಿಂಬಾಲಿಸಿ ಇಲ್ಲಿಗೆ ಬಂದು ಸೈಲೆನ್ಸರ್ ಇದ್ದ ಗನ್ ನಿಂದ ಇವಳನ್ನು ಶೂಟ್ ಮಾಡಿದ, ಯುವತಿಯ ಸ್ಥಳದಲ್ಲೇ ಮೃತ್ಯು ಆಯಿತು. ಕೊಲೆ ಮಾಡಿದ ಜತೆಗಾರ ನಂತರ ಯುವತಿಯ ವ್ಯಾನಿಟಿ ಬ್ಯಾಗ್ ದೋಚಿ ಬ್ಯಾಂಕಿನ ಕಿಟಕಿಯಿಂದ ಪರಾರಿಯಾಗುವಾಗ ನಮ್ಮ ಸಾಹಸಿ ಪೊಲೀಸ್ ತಂಡ ಇವನನ್ನು ಬಂಧಿಸಿದರು. ಈತನ ಹತ್ತಿರ ಒಂದು ಗನ್ ಹಾಗು ಯುವತಿಯ ವ್ಯಾನಿಟಿ ಬ್ಯಾಗ್ ಸಿಕ್ಕಿತ್ತು. ಈತನ ಹೆಸರು ಮನು ಶಾಹ ಅಂತ ಗೊತ್ತಾಯಿತು ಹಾಗು ಇವನು ಯುವತಿಯ ವ್ಯಾನಿಟಿ ಬ್ಯಾಗ್ ಲಾಕರಿನ ಕೀ ಗೋಸ್ಕರ ದೋಚಿದ್ದು, ನಮ್ಮ ಸ್ವಲ್ಪ ಪ್ರಯತ್ನದಿಂದಲೇ ಇವನು ಎಲ್ಲ ಪ್ರಕರಣದ ಬಗ್ಗೆ ವಿವರವಾಗಿ ಹೇಳಿದ ಹಾಗು ಯುವತಿಯ ಕೊಲೆ ಮಾಡಿದನ್ನೂ ಒಪ್ಪಿಕೊಂಡ".
"ಈ ಮಧ್ಯೆ ನಮಗೆ ಇನ್ನೊಂದು ವ್ಯಾನಿಟಿ ಬ್ಯಾಗ್ ಸಿಕ್ಕಿತ್ತು, ಆ ವ್ಯಾನಿಟಿ ಬ್ಯಾಗ್ ನಿಂದ ನಾವು ಸ್ವಲ್ಪ ಗೊಂದಲದಲ್ಲಿ ಸಿಕ್ಕಿದೆವು ಆದರೆ ಈ ಯುವತಿ " ಎಂದು ಅವರು ಬಲವಂತವಾಗಿ ಬ್ಯಾಂಕ್ ಒಳಗೆ ಬರಲು ಪ್ರಯತ್ನಿಸುತ್ತಿದ್ದ ಯುವತಿಯನ್ನು ತೋರಿಸಿ ಮಾತು ಮುಂದುವರಿಸಿದರು "ಬಂದ ನಂತರ ನಮಗೆ ಈ ವ್ಯಾನಿಟಿ ಬ್ಯಾಗ್ ಇವರದ್ದು ಎಂದು ತಿಳಿಯಿತು,ಇವರ ಹೆಸರು ಸೌಮ್ಯ ಗೌಡ ಅಂತ, ಇವರ ಈ ಪ್ರಕರಣದಲ್ಲಿ ಯಾವುದೇ ಸಂಬಂಧ ಇಲ್ಲ, ಇವರು ಗಡಿಬಿಡಿಯಲ್ಲಿ ತನ್ನ ವ್ಯಾನಿಟಿ ಬ್ಯಾಗ್ ಬ್ಯಾಂಕಲ್ಲಿ ಕುಳಿತಲ್ಲಿ ಮರೆತು ಹೋದದ್ದು, ಆದರೆ ರಾಣೆ ಹೇಳಿದ ಪ್ರಕಾರ ಇದು ಆ ಮೂಲೆಗೆ ಹೇಗೆ ಹೋಯಿತೆಂದು ಗೊತ್ತಾಗಲಿಲ್ಲ, ಆದರೆ ಅದು ತಿಳಿಯುವ ಇನ್ನೇನು ಅವಶ್ಯಕತೆ ಉಳಿಯಲಿಲ್ಲ, ಇವರ ವ್ಯಾನಿಟಿ ಬ್ಯಾಗ್ ಇವರ ಕೈಗೊಪ್ಪಿಸಿದ್ದೇವೆ"
ಈ ಮಾತು ಕೇಳಿ ನನಗೆ ನಾನು ವ್ಯಾನಿಟಿ ಬ್ಯಾಗ್ ಎತ್ತಿದ ಜಾಗ ನೆನಪಾಯಿತು, ಹೌದು ಅದರ ಬದಿಯಲ್ಲಿಯೇ ಕುಳಿತು ಕೊಳ್ಳಲು ಸೋಫಾ ಇತ್ತು, ಬಹುಶಃ ಅಲ್ಲಿಂದ ಅದು ಜಾರಿ ಕೆಳಗೆ ಬಿದ್ದಿರಬೇಕು.
"ನಮ್ಮ ಒಂದು ತಂಡ ಕೊಲೆಯಾದ ಯುವತಿ ತನ್ನ ಎರಡು ಜತೆಗಾರರ ಕೊಲೆ ಮಾಡಿದ ಜಾಗಕ್ಕೆ ಹೋಗಿ ಅಲ್ಲಿ ಬಿದ್ದಿದ ಎರಡು ಶವಗಳನ್ನು ಪೋಸ್ಟ್ ಮಾರ್ಟಮ್ ಗೆ ಕಳಿಸಿ ಅಲ್ಲಿಯ ಕೋಣೆಯನ್ನು ಸೀಲ್ ಮಾಡಿದ್ದಾರೆ, ಅವರಿಬ್ಬರ ಹೆಸರು ಜೋಗ ಸಿಂಗ್ ಮತ್ತು ಪ್ರದೀಪ್ ಕುಮಾರ್ ಎಂದು ಕೊಲೆಗಾರ ಮನು ಶಾಹನಿಂದ ತಿಳಿಯಿತು. ನಮ್ಮ ಇನ್ನೊಂದು ತಂಡ ಕೊಲೆಯಾದ ಯುವತಿಯ ಸಂಬಂಧಿಕರ ಮನೆಗೆ ಹೋಗಿ ಅವನನ್ನು ಬಂಧಿಸಿದ್ದಾರೆ, ಆತ ಈ ಯುವತಿಯ ಮಾವ ಹಾಗು ಅವನ ಹೆಸರು ಜತಿನ್ ಪಟೇಲ್ ಅಂತ".
"ಇಂದಿನ ಪ್ರಕರಣವನ್ನು ಪೂರ್ಣವಾಗಿ ಹಾಗು ವಿಸ್ತಾರವಾಗಿ ನಾನು ನಿಮಗೆ ತಿಳಿಸಿದ್ದೇನೆ, ಇಲ್ಲಿದ್ದ ಎಲ್ಲ ಜನರಿಗೂ ಹಾಗು ಬ್ಯಾಂಕಿನ ಸಿಬ್ಬಂದಿಯರಿಗೂ ಅವರು ನೀಡಿದ ಸಹಕಾರಕ್ಕೆ ಧನ್ಯವಾದಗಳು, ತಮ್ಮೆಲ್ಲರ ಸಹಕಾರದಿಂದಲೇ ಈ ಕೇಸ್ ಇಷ್ಟು ಬೇಗನೆ ಪರಿಹರಿಸಲು ಸಾಧ್ಯವಾಯಿತು, ತಾವೆಲ್ಲರೂ ಇನ್ನು ಇಲ್ಲಿಂದ ಹೋಗಬಹುದು, ಥಾಂಕ್ ಯು ವೆರಿ ಮಚ್" ಎಂದು ಹೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು ತನ್ನ ಮಾತು ಮುಗಿಸಿದರು.
ಇಂದಿನ ರೋಮಾಂಚಕ ಅನುಭವ ಅನುಭವಿಸಿ ಅಲ್ಲಿದ್ದ ಎಲ್ಲ ಜನರು ತನ್ನ ಪಾಡಿಗೆ ಅಲ್ಲಿಂದ ಹೊರಟುಹೋದರು.
ನಾನು ಸಹ ಒಂದು ಶಾಂತಿಯ ನಿಟ್ಟುಸಿರು ಬಿಟ್ಟೆ ಹಾಗು ಇನ್ನು ಮೇಲೆ ಯಾವುದೇ ಅಪರಿಚಿತ ವಸ್ತು ಮುಟ್ಟಬಾರದು ಮತ್ತು ಇತರರ ವಿಷಯದಲ್ಲಿ ನುಗ್ಗಬಾರದು ಎಂದು ಪ್ರತಿಜ್ಞೆ ಮಾಡಿದೆ.
by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್
No comments:
Post a Comment