Thursday, January 17, 2013

ತುಟಿಯಿಂದ ಸ್ಪರ್ಶಿಸು ನೀನು


!!ತುಟಿಯಿಂದ ಸ್ಪರ್ಶಿಸು ನೀನು
ನನ್ನ ಗೀತೆ ಅಮರಗೊಳಿಸು!!-೨
ನನ್ನಾಗು ಇನಿಯ ನೀನು
ನನ್ನ ಪ್ರೀತಿ ಅಮರಗೊಳಿಸು !

!!ವಯಸ್ಸಿನ ಸೀಮೆ ಇರದಿರಲಿ
ಇರದಿರಲಿ ಜನುಮದ ಬಂಧನ-೨
ಯಾರಾದರೂ ಪ್ರೀತಿ ಮಾಡುವಾಗ
ನೋಡುವರು ಕೇವಲ ಮನಸ್ಸನ್ನ
ಹೊಸ ರೂಢಿ ನಿರ್ಮಿಸಿ ನೀನು
ಈ ರೀತಿ ಅಮರಗೊಳಿಸು!!-೨

!!ಆಕಾಶದ ಖಾಲಿತನ
ನನ್ನ ಏಕಾಂತ ಮನದಲಿ-೨
ಗೆಜ್ಜೆಯ ಜಣಜಣಿಸುತ ನೀನು
ಬಾ ನನ್ನ ಜೀವನದಲಿ
ಉಸಿರು ಕೊಟ್ಟು ತನ್ನ
ಸಂಗೀತ ಅಮರಗೊಳಿಸು
ಸಂಗೀತ ಅಮರಗೊಳಿಸು
ನನ್ನ ಗೀತೆ ಅಮರಗೊಳಿಸು!!

!!ಜಗ ನನ್ನಿಂದ ದೋಚಿದರು
ನನಗೆ ಪ್ರಿಯವಾದುದನ್ನೆಲ್ಲ-೨
ಎಲ್ಲರೂ ಗೆಲ್ಲುತ್ತಿದ್ದರು ನನ್ನಿಂದ
ನಾನು ಯಾವಗಲೂ ಸೋತೆನಲ್ಲ
ನೀ ಸೋತು ಹೃದಯವನ್ನು
ನನ್ನ ಗೆಲುವನ್ನು ಅಮರಗೊಳಿಸು!!-೨
ತುಟಿಯಿಂದ ಸ್ಪರ್ಶಿಸು ನೀ
ನನ್ನ ಗೀತೆ ಅಮರಗೊಳಿಸು!!

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು /ಸಂಗೀತ :ಜಗಜಿತ್ ಸಿಂಗ್
ಚಿತ್ರ :ಪ್ರೇಮ್ ಗೀತ

Hm Mm Mm Mm, Hm Hm Hm Hm Hm Hm Hm
(Honton Se Chhoo Lo Tum
Mera Geet Amar Kar Do) - 2
Ban Jaao Meet Mere
Meri Preet Amar Kar Do
Honton Se Chhoo Lo Tum
Mera Geet Amar Kar Do
(Na Umr Ki Seema Ho
Na Janm Ka Ho Bandhan) - 2
Jab Pyaar Kare Koi
To Dekhe Keval Mann
(Nayi Reet Chalaakar Tum
Yeh Reet Amar Kar Do) - 2
(Aakaash Ka Soonapan
Mere Tanha Mann Mein) - 2
Paayal Chhankaati Tum
Aa Jaao Jeevan Mein
Saansein Dekar Apni
Sangeet Amar Kar Do
Sangeet Amar Kar Do
Mera Geet Amar Kar Do
(Jag Ne Chheena Mujhse
Mujhe Jo Bhi Laga Pyaara) - 2
Sab Jeeta Kiye Mujhse
Main Har Dam Hi Haara
(Tum Haarke Dil Apna
Meri Jeet Amar Kar Do) - 2
Honton Se Chhoo Lo Tum
Mera Geet Amar Kar Do
www.youtube.com/watch?v=Azx7sTwv24w

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...