ಗೆಳತಿ
ನೆನಪಿದೆಯೇ
ಅಂದು ನೀ ನನ್ನಲ್ಲಿ
ಎಸೆದ ಪ್ರಥಮ ಪತ್ರ
ಆ ದಿನ ನನ್ನ ಮನಸ್ಸಿನಲ್ಲಿ
ಎಷ್ಟೊಂದು
ಭಾವಗಳು ಹುಟ್ಟಿತ್ತು !
ನಾನಂದು
ಏಳನೇ ಅಂಬರದಲ್ಲಿ
ವಿಹರಿಸುತ್ತಿದ್ದೆ
ನಿನ್ನ ಆ ಕಿರು ನಗೆ
ನನ್ನ ಹೃದಯವನ್ನು
ನಿನ್ನ ಹೃದಯದ
ಎಷ್ಟು ಹತ್ತಿರ ತಂದಿತ್ತು !
ನಮ್ಮ
ಆ ಪ್ರೇಮದ ಹೂದೋಟದಲಿ
ನಾವು ದಿನ ಪ್ರತಿದಿನ
ಸುಂದರ ಕನಸ
ಪುಷ್ಪಗಳನ್ನು ಅರಳಿಸಿ
ಅಂದು ನಮ್ಮ ಜೀವನ
ಆನಂದದಿಂದ ನಲಿಯುತ್ತಿತ್ತು !
ಆದರೆ
ಜೀವನ ಅಷ್ಟು
ಸರಳವಿಲ್ಲವೆಂದು
ನಮಗೆ ತಿಳಿದದ್ದು
ನೀ ನಿನ್ನ ಪರಿವಾರ ಸಮೇತ
ಪರದೇಶಕ್ಕೆ ಸ್ಥಳಾಂತರವಾದಾಗ
ಅಂದು ನಮ್ಮಿಬ್ಬರ ಜಗತ್ತೇ ಮುಗಿದಿತ್ತು !
ನಿಮ್ಮ
ಗಾಡಿಯ ಹಿಂದೆ ಹಿಂದೆ
ನಾ ಎಷ್ಟೋ
ದೂರ ತನಕ
ಓಡಿ ಓಡಿ ಕಡೆಗೆ
ಸುಸ್ತಾಗಿ ಬಿದ್ದರೂ
ಕಣ್ಣು ನಿಮ್ಮ ಗಾಡಿಯನ್ನೆ ಹಿಂಬಾಲಿಸುತ್ತಿತ್ತು !
ಇಂದೂ
ನನಗೆ ನಿನ್ನ
ಕಣ್ಣೀರು ತುಂಬಿದ ಮುಖ
ನಿನ್ನ ಬೀಸುವ ಕೈ ನೆನಪಾದಾಗ
ಹೃದಯದಲ್ಲಿ ಕಂಪನ ಉಂಟಾಗುತ್ತದೆ
ಆದರೆ ಇಂದು ನಮ್ಮ ಜೀವನ ಬದಲಾಗಿದೆ
ಸೋತಿದೆ ಅತ್ತು ಅತ್ತು !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment