!!ಹೇಗೆ ಹೇಳಲಿ
ಪ್ರೀತಿಯು ನನ್ನೊಂದಿಗೆ
ಆಟವಾಡಿತು ಏನೇನೆಂದು
ಹೀಗೆ ಲಜ್ಜಿಸಿತು ಭಾಗ್ಯ ನನ್ನಿಂದ
ಲಜ್ಜಿಸಿದೆ ನನ್ನಿಂದಲೇ ನಾನಿಂದು !!
!!ಹೂದೋಟವನ್ನು ಶರತ್ಕಾಲ ದೋಚುತ್ತದೆ
ದೋಚಿತು ನನ್ನನ್ನು ವಸಂತದ ಋತುವೇ
ಜನ ಸಾಯುವರು ಮೃತ್ಯು ಬಂದಾಗಲೇ
ಆದರೆ ನನ್ನನ್ನು ಕೊಂದಿತ್ತು ಪ್ರೀತಿಯೇ
ನನ್ನ ಈ ಅವಸ್ಥೆ ಇದೆ
ಪ್ರವಾಸದ ಮಧ್ಯದಲ್ಲಿ ಬಂದು
ಯಾರೋ ದೋಚಿ ಹೋಗುವಂತೆ !!
ಹೇಗೆ ಹೇಳಲಿ...
!!ನಿನಗೇನೂ ಗೊತ್ತು ಏನನ್ನು ಬಯಸಿದೆ ನಾನು
ಏನನ್ನು ತಂದೆ ನಾನು
ತುಂಡಾದ ಕನಸು
ಗಾಯಗೊಂಡ ಕವನ
ಸ್ವಲ್ಪ ಜ್ವಾಲೆ ಸ್ವಲ್ಪ ಇಬ್ಬನಿಯನ್ನು
ಅದೆಷ್ಟು ಪಡೆದೆ ನಾನು
ಹೇಳಿದರೆ ಹೇಳಲಾಗದು !!
ಹೇಗೆ ಹೇಳಲಿ...
!!ಹೀಗೆ ವಾದಿಸಿತು ಶಹನಾಯಿ ಮನೆಯಲಿ
ಈಗ ತನಕ ಮಲಗಲಾಗಲಿಲ್ಲ ನನಗೆ
ನನ್ನವರೆ ನನ್ನನ್ನು ಇಷ್ಟು ಸತಾಯಿಸಿದರು
ಅತ್ತರೂ ಅಳಲಾಗಲಿಲ್ಲ ನನಗೆ
ಈಗ ಹೀಗೆ ಮಾಡಿ ಗೆಳೆಯರೇ
ಪ್ರಜ್ಞೆ ಬರದಿರಲಿ ನನಗೆ !!
ಹೇಗೆ ಹೇಳಲಿ...
ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಸಚಿನ್ ದೇವ್ ಬರ್ಮನ್
ಚಿತ್ರ : ಶರ್ಮಿಲೀ
कैसे कहे हम प्यार ने हम को
क्या क्या खेल दिखाए
यूँ शरमाई किस्मत हम से
खुद से हम शरमाये
बागों को तो पतझड़ लुटे
लूटा हमे बहार ने
दुनियाँ मरती मौत से
लेकिन मारा हम को प्यार ने
अपना वो हाल है, बीच सफ़र में
जैसे कोई लूट जाए
तुम क्या जानो, क्या चाहा था
क्या लेकर आये हम
टूटे सपने, घायल नग्में
कुछ शोले कुछ शबनम
कितना कुछ हैं पाया हम ने
कहे तो कहा ना जाए
ऐसी बजी शहनाई घरमे
अब तक सो ना सके हम
अपनों ने हम को इतना सताया
रोये तो रोना सके हम
अब तो करो कुछ ऐसा यारो
होश ना हम को आये
No comments:
Post a Comment