ನನ್ನ ಕೆಲವು ವಸ್ತುಗಳು ನಿನ್ನಲ್ಲಿಯೇ ಉಳಿದಿದೆ-೨
ಓ ವರ್ಷ ಋತುವಿನ
ತೇವಗೊಂಡ ದಿನಗಳನ್ನು ಇಟ್ಟಿದ್ದೇನೆ
ಮತ್ತೆ ನನ್ನ ಒಂದು ಪತ್ರದಲಿ
ಮಡಚಿದ ರಾತ್ರಿ ಉಳಿದಿದೆ
ಆ ರಾತ್ರಿಯನ್ನು ಕರೆಯಿಸು
ನನ್ನ ಆ ವಸ್ತುಗಳನ್ನು ಹಿಂತಿರುಗಿಸು-೨
ನನ್ನ ಕೆಲವು ವಸ್ತುಗಳು ನಿನ್ನಲ್ಲಿಯೇ ಉಳಿದಿದೆ-೨
ಶಿಶಿರ ಇದೆ ಕೆಲವು
ಹೌದಲ್ಲವೇ ?
ಓ ಶಿಶಿರ ಋತುವಿನಲ್ಲಿ
ಕೆಲವು ಎಲೆಗಳು ಉದುರುವ ಧ್ವನಿ
ಕಿವಿಯಲಿ ಒಂದು ಸಲ ಧರಿಸಿ
ಹಿಂತಿರುಗಿ ಬಂದಿತು
ಶಿಶಿರದ ಆ ಶಾಖೆ
ಈ ತನಕ ಕಂಪಿಸುತ್ತಿದೆ
ಆ ಶಾಖೆಯನ್ನು ಬೀಳಿಸು
ನನ್ನ ಆ ವಸ್ತುಗಳನ್ನು ಹಿಂತಿರುಗಿಸು-೨
ಒಂದೇ ಒಂದು ಕೊಡೆಯಲಿ
ಅರ್ಧ ಅರ್ಧ ನೆನೆಯುವಾಗ-೨
ಅರ್ಧ ಒಣ ಅರ್ಧ ಒದ್ದೆ
ಒಣಗಿದಾಗ ನಾನು ತಂದಿದೆ
ಒದ್ದೆ ಮನಸ್ಸು ಬಹುಶಃ
ಹಾಸಿಗೆಯ ಬದಿಯಲಿ ಬಿದ್ದಿರಬಹುದು
ಅದನ್ನು ಕಳುಹಿಸು
ನನ್ನ ಆ ವಸ್ತುಗಳನ್ನು ಹಿಂತಿರುಗಿಸು-೨
ನೂರ ಹದಿನಾರು ಚಂದಿರ ರಾತ್ರಿ
ಒಂದು ನಿನ್ನ ಹೆಗಲ ಮಚ್ಚೆ-೨
ಒದ್ದೆ ಮೆಹಂದಿಯ ಸುವಾಸನೆ
ಸುಳ್ಳು ಸುಳ್ಳು ದೂರು ಕೆಲವು
ಸುಳ್ಳು ಸುಳ್ಳು ವಚನ
ಎಲ್ಲ ನೆನಪು ಮಾಡಿಸು
ಎಲ್ಲ ಕಳುಹಿಸು
ನನ್ನ ಆ ವಸ್ತುಗಳನ್ನು ಹಿಂತಿರುಗಿಸು-೨
ಒಂದು ಆಜ್ಞೆ ಕೊಡು ಕೇವಲ
ಯಾವಾಗ ಇದನ್ನೆಲ್ಲಾ ಬುರಿಯುವೆ
ನಾನೂ ಅಲ್ಲಿ ಮಲಗುವೆ
ನಾನೂ ಅಲ್ಲಿ ಮಲಗುವೆ
ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಆಶಾ ಭೋಂಸ್ಲೆ
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಇಜಾಜತ್
Mera Kuch Saamaan Tumhare Paas Pada Hai -2
O O O ! Saavan Ke Kuch Bheege Bheege Din Rakhe Hain
Aur Mere Ik Khat Main Lipti Raat Padi Hai
Vo Raat Bhulaa Do, Mera Vo Saamaan Lauta Do - 2
Mera Kuch Saamaan Tumhaare Paas Pada Hai - 2
Patjhad Hai Kcuh ... Hai Na ?
O ! Patjhas Main Kuch Patton Ke Girne Kee Aahat
Kaanon Main Ek Baar Pahan Ke Laut Aai Thee
Patajhad Kee Vo Saakh Abhi Tak Kaanp Rahi Hai
Vo Saakh Gira Do, Mera Vo Saamaan Lauta Do - 2
Ek Akeli Chhataree Main Jab Aadhe Aadhe Bheeg Rahe The - 2
Aadhe Sookhe Aadhe Geele, Sukha To Main Le Aaye Thee
Geela Man Shayad Bistar Ke Paas Pada Ho
Vo Bhijwa Do, Mera Vo Saamaan Lauta Do
Ek So Sola Chaand Ki Ratain Ek Tumhare Kaandhe Ka Til - 2
Geeli Mahendi Ki Khushbu, Jhoot Mooth Ke Shikwe Kuch
Jhooth Mooth Ke Wade Sab Yaad Karaa Do
Sab Bhijwa Do, Mera Vo Saamaan Lauta Do - 2
Ek Ijaazat De Do Bas, Jab Isako Dafanaaungee
Main Bhi Vaheen So Jaungee
Main Bhi Vaheen So Jaungee
No comments:
Post a Comment