Tuesday, January 22, 2013

ಸ್ನೇಹ


ಮಿತ್ರರೇ, ಇದು ನನ್ನ ೧೦೦೦ ನೇ ರಚನೆ. ನಾನು ನನ್ನ ಬ್ಲಾಗ್ "ಇನ್ನೊಂದು ಜೀವನ " ಪ್ರಾರಂಭಿಸಿ ೧೮ ತಿಂಗಳಾಯಿತು. ನನ್ನ ಬರಹದ ಈ ಪ್ರವಾಸ ಇಷ್ಟು ವೇಗವಾಗಿ ಸಾಗುವುದು ಎಂದು ನಾನು ತಿಳಿದಿರಲಿಲ್ಲ, ಇದೆಲ್ಲ ನನ್ನ ಓದುಗರ ಕೃಪೆ ಹಾಗು ಸ್ನೇಹ.
ಅದಕ್ಕಾಗಿ ನನ್ನ ಈ ೧೦೦೦ ನೇ ರಚನೆ "ಸ್ನೇಹ" ಸ್ನೇಹದ ಕುರಿತು ಒಂದು ಸಣ್ಣ ಕಥೆ ರೂಪ ನಿಮ್ಮ ಮುಂದೆ ಇಟ್ಟಿದ್ದೇನೆ.
ಸ್ನೇಹ
_______

ಬೇಕಂತಲೇ ನಾನು ಹೋಗಿದೆ ಅವನ ಬಳಿ, ನಾನು ಬರುವುದು ಅವನಿಗೆ
ಇಷ್ಟವಿಲ್ಲವೆಂದು ಗೊತ್ತಿದ್ದರೂ ಅವನಿಂದ ದೂರ ಇದ್ದು ಇನ್ನೂ ದೂರ ಆಗುವುದು ಬೇಡವೆಂದು.

ನನ್ನನ್ನು ಕಂಡು ಚಕಿತನಾದ, ಆದರೆ ಅವನ ಮುಖದಲಿ ಸ್ವಲ್ಪವೂ ಖುಷಿ ಕಾಣಲಿಲ್ಲ .
ನಾನೇನು ಅಷ್ಟು ಕೆಟ್ಟವನೇ, ನನ್ನನ್ನೇ ನಾನು ಕೇಳಿದೆ, ಕಣ್ಣೀರು ಹರಿಯಿತು ಬೇಗನೆ ಒರೆಸಿದೆ.

"ಹೇಗಿದ್ದಿ ನೀನು" ಎಂದು ಕೇಳಿದಾಗ ಅವನು ಎದ್ದು ಒಳಗೆ ಹೋದ ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ, ಕಾದು ಕಾದು ಸೋತ ನಂತರ ಬೇಸರ ಮನದಿಂದ ನಾನು ಹಿಂತಿರುಗಿದೆ.

ಆ ನಂತರ ತನ್ನ ತನ್ನ ಕಾರ್ಯ ಸಂಸಾರದಲ್ಲಿ ನಾವು ನಿರತರಾದೆವು, ಎಷ್ಟೋ ವರ್ಷ ಕಳೆದೋಯಿತು, ಊರಿಗೆ ಹೋದಾಗ ಪುನಃ ಅವನ ನೆನಪಾಯಿತು, ಈಗ ಅವನೂ ಮುದುಕನಾಗಿರಬೇಕು ಎಂದು ಎನಿಸಿ ಮನಸ್ಸಲ್ಲಿ ನಕ್ಕೆ.

ಕಾಲು ತನ್ನಿಂದತಾನೆ ಅವನ ಮನೆಯತ್ತ ನಡೆಯಿತು.

ಒಬ್ಬ ಯುವಕ ಮನೆ ಅಂಗಳದಲ್ಲಿ ಪತ್ರಿಕೆ ಓದುತ ಕುಳಿತ್ತಿದ್ದ.

ನನ್ನನ್ನು ಕಂಡು ಅವನು ಒಮ್ಮೆಲೇ ಸಂತಸದಿಂದ"ನೀವು ಆನಂದ್ ತಾನೇ "

"ಹೌದು ,ನಿನಗೆ ಹೇಗೆ ಗೊತ್ತು ?"

"ಬನ್ನಿ, ಗೊತ್ತಾಗುತ್ತದೆ " ಎಂದು ಹೇಳಿ ಒಳಗೆ ನಡೆದ.

ನನ್ನ ಕಣ್ಣು ಅವನನ್ನು ಹುಡುಕುತ್ತಿತ್ತು ,ಆದರೆ ಒಳಗೆ ಗೋಡೆಯಲ್ಲಿ ಅವನ ಫೋಟೋ ಮೇಲೆ ಹೂವಿನ ಮಾಲೆ ನೇತಾಡುತ್ತಿತ್ತು,  ನಾನು ಅಲ್ಲಿಯೇ ಜಡವಾದೆ.

ಹುಡುಗ ನನಗೆ ಬಂದು ಒಂದು ಪತ್ರ ಕೊಟ್ಟು  "ನಿಮ್ಮೊಟ್ಟಿಗೆ ತಂದೆಯವರ ಒಂದು ಚಿತ್ರ ಇದೆ, ಅದನ್ನು ತೋರಿಸಿ ಅವರು ಯಾವಗಲು ನಿಮ್ಮ ಬಗ್ಗೆ ನಮಗೆ ಹೇಳುತ್ತಿದ್ದರು ಹಾಗು ನಿಮ್ಮ ಬಾಲ್ಯದ ಘಟನೆ ಹೇಳಿ ಅವರು ತುಂಬಾ ಆನಂದ ಪಡುತ್ತಿದ್ದರು, ಕೆಲವು ವೇಳೆ ನಾನು ಅವರನ್ನು ಕೋಣೆಯಲ್ಲಿ ನಿಮ್ಮ ಚಿತ್ರ ನೋಡಿ ಅಳುವುದನ್ನು ಕಂಡಿದೆ.

ನನ್ನ ಹೃದಯ ರೋದನ ಮಾಡತೊಡಗಿತು, ಪತ್ರದಲ್ಲಿ ಬರೆದಿತ್ತು "ನೀನು ಬರುವೆಯೆಂದು   ಗೊತ್ತಿದೆ, ಕ್ಷಮಿಸು ನನ್ನನ್ನು" .

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...