Sunday, January 6, 2013

ನಿರ್ಲಜ್ಜ

ತಿಂದು ತಿಂದು ಕೊಬ್ಬಿದ ಜೀವ
ತಿಂದು ಅಲೆಯುವುದೊಂದೇ ಗೊತ್ತು 
ಯಾವುದೇ ಕಾರ್ಯ ಮಾಡಲು ಇಲ್ಲ ಆಸಕ್ತಿ 
ಮನೆಯ ಯಾವುದೇ ವಿಷಯದಲ್ಲಿ ಇಲ್ಲ ರುಚಿ 
ಮನೆಯಲ್ಲಿದ್ದು ಮನೆಯವರ ಇಲ್ಲ ಗೋಚರ !

ಸಂಬಂಧಿಕರು ನೀಡಿದ ಹಣವೆಲ್ಲ ನಿನ್ನ ಮೋಜಿಗೆ 
ಅವರು ಮನೆಗೆ ತಂದದೆಲ್ಲ ನಿನ್ನ ಹೊಟ್ಟೆಯ ಪಾಲಿಗೆ 
ನಾಚಿಗೆ ಮರ್ಯಾದೆ ಎಂಬ ಶಬ್ದದ ಅರ್ಥ ನಿನಗಿಲ್ಲ ಗೊತ್ತು 
ತಿನ್ನು ತಿನ್ನು ತಿನ್ನುವೆ ಮೂರು ಹೊತ್ತು 
ಹಗಲು ಇರುಳು ತಿನ್ನುವುದು ಕೇವಲ ನಿನಗೆ ಗೊತ್ತು !

ಊರಲ್ಲಿದ್ದು ಊರವರ ಪರಿಚಯ ನಿನಗಿಲ್ಲ 
ಊರವರ ಯಾವುದೇ ಔತಣ ತಿನ್ನದೆ ನೀನು ಬಿಡುವುದಿಲ್ಲ 
ಆದರೆ ಊರವರ ದುಖದಲ್ಲಿ ನೀನಿಲ್ಲ 
ಅವರ ಯಾವುದೇ ಜರೂರಿ ತಾಪತ್ರಯದಲ್ಲಿ ನೀನಿಲ್ಲ 
ಲಜ್ಜೆಗೆಟ್ಟ ನಿನ್ನ ಈ ಬದುಕು ಯಾವುದೇ ಉಪಯೋಗದ ಅಲ್ಲ !

ನೀನೆ ಬಿಡಿಸಿರುವೆ ನಿನ್ನ ವ್ಯಕ್ತಿತ್ವದ ಚಿತ್ರ 
ತಪ್ಪು ಸರಿಯ ಗಣನೆ ಇಲ್ಲ ನಿನ್ನತ್ರ 
ಹೃದಯ ನಿನ್ನ ಯಾರು ತಂಗಲಾರದ ಖಾಲಿ ಸತ್ರ 
ಜೀವನ ನಿನ್ನದೊಂದು ಯಾವುದೇ ಲಿಪಿ ಇಲ್ಲದ ಖಾಲಿ ಪತ್ರ 
ಆದರೂ ಅದ್ಭುತ ಇರಬೇಕೆನ್ನುವೆ ನಿನ್ನ ಆತ್ಮ ಚರಿತ್ರ !

ಯಾಕೆ ಬೇಕು ನಿನಗೆ ಈ ಬದುಕು ಹಾಳು 
ಸ್ವಜನರ ವೇದನೆಗೆ ಮಿಡಿಯದ ನಿನ್ನ ಈ ಹೃದಯ ಪೊಳ್ಳು 
ನೀನು ಕಲಿತದ್ದೆಲ್ಲ ನೀರಿಗೆ ಹೋಮ
ತಿಂದು ಜಿಗಿಯುವ ನೀನೊಂದು ಸೋಮಾರಿ ಕೋಣ 
ಜನರು ಉಗುಳುವ ಹಾಗೆ ನಿನ್ನದೊಂದು ಈ ಜೀವನ !

ತನ್ನವರ ಬಗ್ಗೆ ಕಾಳಜಿ ಇಲ್ಲದ ಹಲ್ಕಾ 
ನೀನೊಂದು ಮನುಷ್ಯನಲ್ಲ ನೀನು ನಪುಂಸಕ 
ನಿನಗಿಲ್ಲ ಯಾರು ಆಪ್ತ ಯಾರು ಸಖ 
ನಿನ್ನ ಈ ಜೀವನಕ್ಕೆ ಇಲ್ಲ ಅರ್ಥ 
ನಿನ್ನ ಬದುಕು ಬರಿ ವ್ಯರ್ಥ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...