ಒಂದು ಇವನದ್ದು ಒಂದು ಅವನದ್ದು
ಕೆಲವೇ ನಿಮಿಷ ಮೊದಲು ಅವನು
ನಕ್ಕಿದ ತನ್ನ ಹೆಂಡತಿ ಮಕ್ಕಳನ್ನು ಸ್ಮರಿಸಿ
ಕ್ಷಣ ಪೂರ್ವ ಅವನ
ಕಣ್ಣೀರು ಹರಿಯುತ್ತಿತ್ತು ಮನೆಯ ಪತ್ರ ಓದಿ
ಅನೈತಿಕ ಕಾರ್ಯ ಆ ಕಡೆಯಿಂದ
ಉತ್ತರ ನೀಡಿದರು ಒಸರಿದ ರಕ್ತದಿಂದ
ಇಬ್ಬರು ವೀರ ಸೈನಿಕರು
ಸಾವನ್ನು ಅಪ್ಪಿಕೊಂಡ ಅಮರರು
ಅಲ್ಲಿ ಇಲ್ಲಿ ಅವರ ಶಸ್ತ್ರ
ಇಂದು ಧ್ವಜ ಅವರ ವಸ್ತ್ರ
ಗಡಿಯಲ್ಲಿ ಎರಡು ಶವ
ಒಂದು ಇವನದ್ದು ಒಂದು ಅವನದ್ದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment