Wednesday, January 30, 2013

ಬದುಕು ಇನ್ನೆಷ್ಟು ಪರೀಕ್ಷೆ

ಬದುಕು ಇನ್ನೆಷ್ಟು ಪರೀಕ್ಷೆ 
ಕ್ಷಣ ಕ್ಷಣ ಅನುಭವಿಸುವೆ ಶಿಕ್ಷೆ !!

ಜೀವನ ಆಡುತ್ತಿದೆ ಆಟ ನಾಟಿಕೆ
ಪದೇ ಪದೇ ಕಲಿಸುತ್ತಿದೆ ಕಲಿಕೆ !! 

ಮುರಿಯುತ್ತಿದೆ ಎಲ್ಲ ಅಪೇಕ್ಷೆ 
ಬತ್ತಿ ಹೋಗಿವೆ ಕಣ್ಣುಗಳು ಮಾಡಿ ನಿರೀಕ್ಷೆ !! 

ದಿನ ನಿತ್ಯ ಕಣ್ಣೀರಿನ ಭಕ್ಷೆ !!
ಯಾವಾಗ ಸಿಗುವುದೋ ಸುಖದ ಭಿಕ್ಷೆ !!

ತಾಳಲಾಗುವುದಿಲ್ಲ ಈ ಉಪೇಕ್ಷೆ !!
ಮುಗಿಯುವುದು ಯಾವಾಗ ಈ ಪ್ರತೀಕ್ಷೆ !!

ಸುಂದರ ಜೀವನ ಮಡಕೆಯಲಿ ಇದು ಯಾವ ಶಾಪದ ಕುಳಿಕೆ
ಮಾಡಿ ಆಯಿತು ಎಲ್ಲ ಪಾಪದ ಅರಿಕೆ !!

ಬದುಕು ಇನ್ನೆಷ್ಟು ಪರೀಕ್ಷೆ
ಕ್ಷಣ ಕ್ಷಣ ಅನುಭವಿಸುವೆ ಶಿಕ್ಷೆ !!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...