Monday, January 21, 2013

ಮನುಜ ನಿನಗೆ ನೀನೆ ಸಾಟಿ


ಮನುಜ ನಿನಗೆ ನೀನೆ ಸಾಟಿ
ಜೀವನ ಸೋಲು ಗೆಲುವಿನ ಪೈಪೋಟಿ
ಯಾವ ಪಥದಲಿ ಹೋಗಲಿದೆಯೋ ನಿನಗೆ
ಅನುಸರಿಸಿ ಅದನ್ನೇ ವಿಜಯಿಯಾಗು ಅದನ್ನು ದಾಟಿ !

ಅಲ್ಲಲ್ಲಿ ಕಲ್ಲು ಮುಳ್ಳುಗಳಿದೆ ಅತಿಶಯವಾಗಿ
ರಕ್ತ ಸುರಿಯುವುದು ಗಾಯವಾಗಿ
ನಿಲ್ಲದಿರು ನೀ ನಿರಾಶೆಯಾಗಿ
ಪಡೆ ಗುರಿ ಶ್ರದ್ಧೆ ಧೈರ್ಯದಿಂದ ಮುಂದೆ ಸಾಗಿ !

ವ್ಯರ್ಥ ಕಳೆಯದಿರು ಈ ಯೌವನ
ಪ್ರಯಾಣ ಕಠಿಣವಾಗುವುದು ಬದುಕಿನ
ಹೂವಿನ ಶಯ್ಯೆ ಅಲ್ಲ ಈ ಜೀವನ
ನಿನ್ನ ಕೈಯಲ್ಲೇ ಇದೆ ನಿನ್ನ ಬೂತ ,ಭವಿಷ್ಯ ವರ್ತಮಾನ !

ಅಸೂಯೆ ಪಡದಿರು ಅನ್ಯರ ಗೆಲುವಿಗೆ
ಕುಗ್ಗದಿರು ನಿನ್ನ ಸೋಲಿಗೆ
ಸಾಧಿಸುವ ಛಲ ಇದ್ದರೆ ನಿನ್ನಲ್ಲಿ
ಖಂಡಿತ ಜಯ ಬರುವುದು ನಿನ್ನ ಪಾಲಿಗೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...