Sunday, January 13, 2013

ಒಹ್ ನನ್ನ ದೇಶದ ಜನರೇ


ಒಹ್ ನನ್ನ ದೇಶದ ಜನರೇ
ನೀವೆಲ್ಲ ತುಂಬಾ ಘೋಷಣೆ ಮಾಡಿ
ಇದು ಶುಭ ದಿನ ನಮ್ಮೆಲ್ಲರ
ಹಾರಿಸಿ ದ್ವಜ ತ್ರಿವರ್ಣ ಸುಂದರ
ಆದರೆ ಮರೆಯಬೇಡಿ ಸೀಮೆಯಲಿ
ಪ್ರಾಣ ತ್ಯಜಿಸಿದ ವೀರರನ್ನು
ಸ್ವಲ್ಪ ಸ್ಮರಿಸಿ ಅವರನ್ನೂ
ಸ್ವಲ್ಪ ಸ್ಮರಿಸಿ ಅವರನ್ನೂ
ಹಿಂತಿರುಗಿ ಮನೆಗೆ ಬರದವರನ್ನು
ಹಿಂತಿರುಗಿ ಮನೆಗೆ ಬರದವರನ್ನು !

ಒಹ್ ನನ್ನ ದೇಶದ ಜನರೇ
ಸ್ವಲ್ಪ ಕಣ್ಣಲ್ಲಿ ಕಣ್ಣೀರು ತುಂಬಿಸಿ
ಆ ಹುತಾತ್ಮರಾದವರ ತ್ಯಾಗವನ್ನು
ಸ್ವಲ್ಪ ನೀವು ಸ್ಮರಿಸಿ!

ಗಾಯಗೊಂಡಾಗ ಹಿಮಾಲಯ
ಅಪಾಯದಲ್ಲಿರುವಾಗ ಸ್ವಾತಂತ್ರ
ಕೊನೆ ಉಸಿರು ತನಕ ಹೋರಾಡಿದರವರು
ಮತ್ತೆ ತನ್ನ ಶವ ಹಾಸಿದರು
ಮಾತೃಭೂಮಿಯಲಿ ತಲೆಯನ್ನಿಟ್ಟು
ಮಲಗಿದರು ಅಮರ ಯೋಧ ಸಾಹಸಿ
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ದೇಶದಲ್ಲಿದ್ದಾಗ ದೀಪಾವಳಿ
ಅವರು ಆಡುತ್ತಿದ್ದರು ಹೋಳಿ
ನಾವು ಮನೆಯಲ್ಲಿ ಕುಳಿತ್ತಿದ್ದಾಗ
ಅವರು ಎದುರಿಸುತ್ತಿದ್ದರು ಗುಂಡಿನ ಗೋಲಿ
ಧನ್ಯ ಸಿಪಾಯಿರು ನಮ್ಮ
ಧನ್ಯ ಅವರ ಯೌವನ ಸಾಹಸಿ
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ಒಬ್ಬ ಸಿಖ್ ಆದರೆ ಒಬ್ಬ ಮರಾಠಿ
ಒಬ್ಬ ಸಿಖ್ ಆದರೆ ಒಬ್ಬ ಮರಾಠಿ
ಒಬ್ಬ ಗೂರ್ಖಾ ಆದರೆ ಮತ್ತೊಬ್ಬ ಮದರಾಸಿ
ಒಬ್ಬ ಗೂರ್ಖಾ ಆದರೆ ಮತ್ತೊಬ್ಬ ಮದರಾಸಿ
ಗಡಿಯಲ್ಲಿ ಸಾಯುವವನು
ಗಡಿಯಲ್ಲಿ ಸಾಯುವವನು
ಪ್ರತಿ ವೀರನಾಗಿದ್ದ ಭಾರತವಾಸಿ
ಯಾವ ರಕ್ತ ಬಿತ್ತು ಪರ್ವತದಲ್ಲಿ
ಆ ರಕ್ತವಾಗಿತ್ತು ಭಾರತೀಯ ಪ್ರತಿ
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ನಿರ್ಲಕ್ಷಿಸಿ ರಕ್ತರಂಜಿತ ದೇಹವನ್ನು  
ಎತ್ತಿಕೊಂಡು ತನ್ನ ತುಪಾಕಿಯನ್ನು 
ಒಬ್ಬೊಬ್ಬರೇ ಕೊಂದರು ಹತ್ತತ್ತು ಜನರನ್ನು 
ಮತ್ತೆ ಬಿದ್ದರು ಕಳೆದು ಪ್ರಜ್ಞೆಯನ್ನು 
ಕಡೆಯ ಸಮಯ ಬಂದಾಗ 
ಕಡೆಯ ಸಮಯ ಬಂದಾಗ 
ಹೇಳಿ ಹೋದರು ಈಗ ಸಾಯುತ್ತಿದ್ದೇವೆ  
ಖುಷಿಯಲ್ಲಿರಿ ದೇಶದ ಪ್ರಿಯರೆ 
ಖುಷಿಯಲ್ಲಿರಿ ದೇಶದ ಪ್ರಿಯರೆ 
ಈಗ ನಾವು ಪ್ರಯಾಣ ಮಾಡುತ್ತಿದ್ದೇವೆ  
ಈಗ ನಾವು ಪ್ರಯಾಣ ಮಾಡುತ್ತಿದ್ದೇವೆ 
ಎಂತಹ ಜನರಾಗಿದ್ದರು ಅವರು ಸ್ವಾಭಿಮಾನಿ 
ಎಂಥ ಜನರಾಗಿದ್ದರು ಅವರು ದುಸ್ಸಾಹಸಿ 
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ನೀವು ಮರೆಯದಿರಿ ಅವರನ್ನು ಎಂದು 
ಹೇಳಿದೆ ಈ ಕಥೆಯನ್ನು ಬಿಡಿಸಿ 
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!


ಜೈ ಭಾರತ ಜೈ ಭಾರತ ಸೇನೆ 
ಜೈ  ಭಾರತ ಜೈ  ಭಾರತ ಸೇನೆ 
ಜೈ  ಭಾರತ ಜೈ  ಭಾರತ  ಜೈ  ಭಾರತ

ಮೂಲ :ಕವಿ ಪ್ರದೀಪ್ 
ಅನುವಾದ :ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು :ಲತಾ ಮಂಗೇಶ್ಕರ್ 
ಸಂಗೀತ : ಸಿ .ರಾಮಚಂದ್ರ 

Ae mere vatan ke logon
Tum khoob laga lo naara
Ye shubh din hai ham sab ka
Lehera lo tiranga pyaara
Par mat bhoolo seema par
Eeeron ne hai praan ganvae
Kuch yaad unhein bhi kar lo
Kuch yaad unhein bhi kar lo
Jo laut ke ghar na aaye
Jo laut ke ghar na aaye


Ae mere vatan ke logon
Zara aankh mein bhar lo paani
Jo shaheed hue hain unki
Zara yaad karo qurbaani

Ae mere vatan ke logon
Zara aankh mein bhar lo paani
Jo shaheed hue hain unki
Zara yaad karo qurbaani

Tum bhool na jaao unko
Is liye kahi ye kahaani
Jo shaheed hue hain unki
Zara yaad karo qurbaani


Jab ghayal hua himaalaya
Khatre mein padi aazadi
Jab tak thi saans lade woh
Jab tak thi saans lade woh
Phir apni laash bichha di

Sangeen pe dhar kar maatha
So gaye amar balidaani
Jo shaheed hue hain unki
Zara yaad karo qurbaani

Jab desh mein thi diwali
Woh khel rahe the holi
Jab ham baithe the gharon mein
Woh jhel rahe the goli
The dhanya javaan woh aapane
Thi dhanya woh unki javaani
Jo shaheed

Koi sikh koi jaat maraatha
Koi sikh koi jaat maraatha
Koi gurakha koi madaraasi
Koi gurakha koi madaraasi
Sarhad pe marane vaala
Sarhad pe marane vaala
Har veer tha bhaaratvaasi
Jo khoon gira parvat par
Woh khoon tha hindustaani
Jo shaheed hue hain unki
Zara yaad karo qurbaani


Thi khoon se lath-path kaaya
Phir bhi bandook uthaake
Dus dus ko ek ne maara
Phir gir gaye hosh ganva ke

Jab ant samay aaya to
Jab ant samay aaya to
Keh gaye ke ab marate hain
Khush rahana desh ke pyaaron
Khush rahana desh ke pyaaron
Ab hum to safar karate hain
Ab hum to safar karate hain

Kya log the woh deewane
Kya log the woh abhimaani
Jo shaheed hue hain unki
Zara yaad karo qurbaani

Tum bhool na jaao unko
Is liye kahi ye kahaani
Jo shaheed hue hain unki
zara yaad karo qurbaani

Jay hind jay hind ki sena
Jay hind jay hind ki sena
Jay hind jay hind jay hind




No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...