Monday, January 28, 2013

ಬೆಳಗಿನ ಜಾವ ನದಿ ತಟದಲಿ


!!ಬೆಳಗಿನ ಜಾವ ನದಿ ತಟದಲಿ
ನನ್ನಿಂದ ತುಂಟ ಶ್ಯಾಮ ಆಡುವನು ಚೆಲ್ಲಾಟ
ನನ್ನ ಸೆರಗು ಮಾಡ ತೊಡಗಿದೆ ಹಾರಾಟ
ನಾನೇನು ಮಾಡಲಿ
ಏನನು ಮಾಡಲಿ
ಅಯ್ಯೋ ರಾಮ
ಅಯ್ಯೋ  ಅಯ್ಯೋ !!
ಬೆಳಗಿನ ಜಾವದಲಿ ನದಿ ತಟದಲಿ ....

!!ಯಾರೂ ಸಖಿ ಗೆಳತಿಯರಿಲ್ಲ ಒಟ್ಟಿಗೆ
ನಾನೊಬ್ಬಳೆ
ಯಾರು ನೋಡಿದರೆ
ಅರಿಯುವರು
ನೀರು ತುಂಬಿಸುವ ನೆಪದಲಿ
ಮಡಕೆ ಹಿಡಿದು
ರಾಧೆ ಶ್ಯಾಮನಿಗೆ ಸಿಗಲು ಹೊರಡಿದ್ದಾಳೆ ಎಂದು
ಅಯ್ಯೋ !!
ಬೆಳಗಿನ ಜಾವ ನದಿ ತಟದಲಿ....

!!ಬಂದಿರುವುದು ತಂಗಾಳಿ ಮೋಹಕ
ನನ್ನ ಮೈಯನ್ನು ಸೋಕುತ
ಮೌನ ಮೌನ ಮೆಲ್ಲ ಮೆಲ್ಲ
ಕುಳಿತ್ತಿದ್ದಾನೆ ಎಲ್ಲೊ ಅಡಗಿ ಅವನು
ನೋಡಿ ನೋಡಿ ನಗುವನು
ನಿರ್ಲಜ್ಜನಿಗೆ 
ಹೌದು ಹೌದು
ನಿರ್ಲಜ್ಜನಿಗೆ ಲಜ್ಜೆಯೂ ಬಾರದು!!
ಬೆಳಗಿನ ಜಾವ ನದಿ ತಟದಲಿ ....

!!ಸಿಗದಾಗ ಹಾದಿಯಲಿ ನಾನು
ಅವಾಗ ಅವನು ಮನೆಗೆ ಬರುವನು
ಬೈಯುವೆ ನಾನು 
ಮುನಿಸುವೆ ನಾನು
ಕಿಡಕಿ ತೆರೆಯುವುದಿಲ್ಲ ನಾನು
ನಿದ್ದೆ ಬರುವಾಗ
ಅವನು ಸಣ್ಣ ಕಲ್ಲು ಎಸೆದು ಎಚ್ಚರಿಸುವನು!!
ಬೆಳಗಿನ ಜಾವ ನದಿ ತಟದಲಿ ....

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್
ಚಿತ್ರ :ಸತ್ಯಂ ಶಿವಂ ಸುಂದರಂ

bhor bhaye panghat pe
mohe natkhat shaam sataye) - 2
mori chunariya lipti jaye
main ka karoo hai raam hai haaii

koi sakhi.. saheli.. nahi
sang main akeli
koi dekhe toh yeh jaane
paniya bharne ke bahane ghagri uthaye
radha shaam se milne jaaye.. hai
bhor bhaye panghat pe

aaye pawan jhakora
toote ang ang mora
chori chori chupke chupke
baitha kahi pe woh chupke
dekhe muskaye
nirlaj ko ha ha
nirlaj ko laaj na aave
bhor bhaye panghat pe

main na milu.. dagar main
toh woh chala aaye.. ghar main
main du gali,main du chidki,
main na kholu khidki
neendiya jo aaye
toh woh kankar mar jagaye
bhor bhaye panghat pe
mohe natkhat shaam sataye
mori chunariya lipti jaye
main ka karoo hai raam hai haaii hai
bhor bhaye panghat pe
http://www.youtube.com/watch?v=QvfU-yAnYZ4

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...