Sunday, June 3, 2012

ಏಕಾಂಗಿ

ಕಷ್ಟದ ನೀರ
ಒಸರಿಂದ
ಅಶಕ್ತ  ಗಿಡ
ಇಂದು ಬಲಿಷ್ಠ ಮರವಾಗಿದೆ
ಫಲ ತುಂಬಿದ ಆದರೆ ಏಕಾಂಗಿ  !

ಸುಖದ ದುಃಖದ
ಸಣ್ಣ ಗುಡಿಸಲು
ಇಂದು ಭವ್ಯ ಬಂಗಲೆಯಾಗಿದೆ
ಸುಖ ಸೌಕರ್ಯದಿಂದ ಪರಿಪೂರ್ಣ
ಎಲ್ಲ ಸೌಲಭ್ಯ ಆದರೆ ಅಪೂರ್ಣ  !

ಬಾಲ್ಯ ಕಳೆದ
ಆ ಊರು
ಇಂದು ಅಪರಿಚಿತರ ಪಟ್ಟಣವಾಗಿದೆ
ಕಪಟ ಗೌರವ ಮರ್ಯಾದೆ
ಯಜಮಾನ ಪದವಿ ಆದರೆ ಊರ ನೆಂಟ!

ಬೇಸರ ಮನದ
ಚಿಂತೆ ಯಾರಿಗೆ
ಜೀವನ ಯಂತ್ರ ಚಲಿತವಾಗಿದೆ
ಹೃದಯ ಬಂಡೆ ಕಲ್ಲಾಗಿದೆ
ಸುಂದರ ಪ್ರತಿಮೆ ಆದರೆ ಭಾವನೆ ರಹಿತ !

ನನ್ನತನ
ಉಳಿಯಲಿಲ್ಲ ಈಗ
ಸ್ವಂತ ಬದುಕು ಅನ್ಯರ ವಶವಾಗಿದೆ
ಜೀವನ ಕೈಗೊಂಬೆಯಾಗಿದೆ
ನಾನು ನಾನೇ ಆದರೆ ನಾನಲ್ಲ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...