Wednesday, June 13, 2012

ನಾನು ಬುದ್ಧನಲ್ಲ

ನಾನು ಬುದ್ಧನಲ್ಲ
ಬುದ್ಧನಾಗುವ ಬಯಕೆಯು ಇಲ್ಲ
ಬುದ್ಧ ಮಹಾನ
ನಾನು ತುಚ್ಛ
ನನಗೆ ಈ ಪದವಿ ಬೇಡ !

ನನಗೆ ಸನ್ಯಾಸ ಬೇಡ
ಸಂಸಾರ ನನ್ನ ಕರ್ತವ್ಯ
ನಿಷ್ಠೆಯಿಂದ ಪಾಲಿಸುವೆ
ಸುಖವನ್ನು ಆನಂದಿಸುವೆ
ಕಷ್ಟಗಳನ್ನು ಧೈರ್ಯದಿಂದ ಎದುರಿಸುವೆ !

ಪ್ರವಚನೆ ಮಾಡಲಾರೆ
ಕೇಳಿದ ಓದಿದ ಯೋಚಿಸಿದ
ಹಿತ ವಚನ ನುಡಿಯುವೆ
ಸ್ವಲ್ಪ ಬರೆಯುವ ಆಸಕ್ತಿ
ಕಾವ್ಯ ಕವನಗಳನ್ನು ಸೃಷ್ಟಿಸುವೆ !

ನಾನು ಸಾಧಾರಣ ಮಾನವ
ತಪ್ಪು ಕೆಲಸ ಮಾಡಲು ಹಿಂಜರಿಯುವೆ
ನೆಮ್ಮದಿಯಿಂದ ಇರಲು ಬಯಸುವೆ
ನನ್ನ ಪುಟ್ಟ ಸಂಸಾರದಲ್ಲಿ ಶಾಂತಿ ಹುಡುಕುವೆ
ತೃಪ್ತಿಯಿಂದ ಜೀವನ ಕಳೆಯುವೆ !

ನಾನು ದೇವ ದೂತನಲ್ಲ
ಮನುಷ್ಯ ಜಾತಿ
ಆಸೆ ಆಕಾಂಕ್ಷೆ ತುಂಬಿದೆ ನನ್ನಲ್ಲಿ
ಮೋಹ ಮಾಯೆ ತ್ಯಜಿಸಲಾರೆ
ನಾನು ಬುದ್ಧ ಆಗಲಾರೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...