ಗೆಲ್ಲುವೆ ಎಂದು
ಆದರೆ ಇದೇನು
ಅವನ ಹೆಸರು ಕರೆಯಲಿಲ್ಲ
ಹಲವರು ಬಂದು
ತನ್ನ ತನ್ನ ಬಹುಮಾನ
ಕೊಂಡು ಹೋದರು!
ಈಗ ಮನಸ್ಸಲ್ಲಿ
ತಳಮಳ ಚಿಂತೆ
ಷೇ... ಅಮ್ಮ ಅಪ್ಪನಿಗೆ
ಎಷ್ಟು ಬೇಜಾರಾಗಬಹುದು
ಸುಮ್ಮನೆ ಅವರಿಗೆ ಹೇಳಿದು
ನನಗೆ ಬಹುಮಾನ
ಸಿಗುತ್ತದೆ ಎಂದು!
ಕಣ್ಣಲ್ಲಿ ನೀರು
ಹತಾಷೆ ನಿರಾಶೆ
ಮೌನ
ಕಂಪಿಸುವ ಕಾಲುಗಳು
ಏನಾಯಿತು
ಯಾಕೆ ಸಿಗಲಿಲ್ಲ
ಅವರಿಂದ ಏನು ತಪ್ಪಾಯಿತೇ!
ಅವಾಗ ಒಮ್ಮೆಲೇ
ಅವನ ಹೆಸರು
ಕರೆಯಲಾಯಿತು
ಪ್ರಥಮ ಬಹುಮಾನ
ಅವನಿಗೆ ಎಂದು
ಆನಂದ ಬಾಷ್ಪ
ಕಣ್ಣ ಮುಂದೆ ತಂದೆ ತಾಯಿಯ
ಆನಂದಮಯ ನಗು ಮುಖ!
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment