Monday, June 25, 2012

ಮಳೆಯ ತುಂತುರು ಹನಿ

ಮಳೆಯ ತುಂತುರು ಹನಿ
ಅಡಗಿಸಿದೆ ನನ್ನ ಕಂಬನಿ
ಹೃದಯ ಅಳುತ್ತಲೇ ಇತ್ತು
ನಕ್ಕೆ ನಕ್ಕೆ ಹೀಗೆಯೇ ಸುಮ್ಮನೆ ನಕ್ಕೆ!

ನೆನಪಾಯಿತು ಅವಳ ಮಾತುಗಳು
ಚೂರಿಯಂತೆ ಹರಿತ ಕಟಾಕ್ಷಗಳು
ಪುನಃ ತುಂಬಿ ಬಂತು ಕಣ್ಣುಗಳು
ಒದ್ದೆ ಒದ್ದೆ ಕಂಗಳು ಎಲ್ಲ ಶರೀರವೂ ಒದ್ದೆ!

ಪ್ರೀತಿ ಅಂದರೆ ಹೀಗೆಯೇ
ಕೇವಲ ಸಿಹಿ ಮಾತುಗಳೇ
ನನ್ನ ಕ್ಷಣಿಕ ಕೋಪ ಅರ್ಥವಾಗುದಿಲ್ಲವೇ
ಬಿದ್ದೆ ಬಿದ್ದೆ ನಾಲಿಗೆಯ ನಿಯಂತ್ರಣವಿಲ್ಲದೆ  ಜಾರಿ ಬಿದ್ದೆ!

ನಿನ್ನ ಮುನಿಸು ಮುಗಿಸುವುದು ಹೇಗೆ
ಕ್ಷಮೆ ಎಂಬ ಪದ ನಿನ್ನ ಬಳಿ ಇಲ್ಲವೇ
ನನ್ನ ನಿವೇದನೆಕ್ಕೆ ಬೆಲೆ ಇಲ್ಲವೇ
ಸೋತೆ ಸೋತೆ ಕ್ಷಮೆ ಕೇಳಿ ಕೇಳಿ ನಾ ಸೋತೆ!

ಆಗಲಿ ಎಷ್ಟು ದಿವಸ ನೋಡುವ
ನಮ್ಮ ಬಂಧ ಎಷ್ಟು ದೃಡ ಎಂದು ನೋಡುವ
ಜೀವನದ ಈ ನೋವಿನ ಅಧ್ಯಾಯ ಸಹ ಓದುವ
ಕಲಿತೆ ಕಲಿತೆ ಜೀವನದ ಈ ಪಾಠವೂ ಕಲಿತೆ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...