Thursday, June 28, 2012

ನಾನೊಂದು ಒಣಗಿದ ಮರ

ನಾನೊಂದು ಒಣಗಿದ ಮರ
ಒಬ್ಬಂಟಿ ಈ ಬಂಜರ ಭೂಮಿಯಲಿ
ಒಂದು ಕಾಲ ಇತ್ತು
ನನ್ನದು ಸಹ
ಆಗ ಈ ಭೂಮಿ
ಫಲಿತವಾಗಿತ್ತು!

ನನ್ನ ಎಲೆ ಹೂ
ತುಂಬಿದ ರೆಂಬೆಯಿಂದ
ತಂಗಾಳಿ ಬೀಸಿದಾಗ
ಜನರು ತಂಪಾಗಿ
ತನ್ನ ಆಯಾಸ
ಮರೆಯುತ್ತಿದ್ದರು!

ದೇಶ ವಿದೇಶದಿಂದ
ಹಕ್ಕಿಗಳು ಬಂದು
ನನ್ನ ಆಶ್ರಯ ಪಡೆದು
ನನ್ನಲಿ ಗೂಡು ಕಟ್ಟಿ
ತನ್ನ ಸಂಸಾರದೊಂದಿಗೆ
ಸುಖವಾಗಿರುತ್ತಿದ್ದರು!

ಮಕ್ಕಳು ನನ್ನ
ಕೊಂಬೆಯಲಿ
ಉಯ್ಯಾಲೆ ಕಟ್ಟಿ
ಜೋಕಾಲಿ ಆಡುತ
ನನ್ನ ಫಲದ ರುಚಿ
ಸವಿಯುತ್ತಿದ್ದರು!

ಪ್ರೇಮಿ ಜೋಡಿಗಳು
ನನ್ನ ನೆರಳಲ್ಲಿ ಕುಳಿತು
ಪ್ರೀತಿ ಮಾತನೆಲ್ಲ ನುಡಿದು
ತಮ್ಮ ಎಲ್ಲ
ಸುಖ ಸ್ವಪ್ನಗಳನ್ನು 
ನನ್ನಲ್ಲಿ ಹಂಚುತ್ತಿದ್ದರು!

ಈಗ ನಾನು ಏಕಾಂಗಿ
ಬಿಸಿಲ ತಾಪದಿಂದ ಸುಡುತ್ತಿದ್ದೇನೆ
ಸುಳಿಯುವುದಿಲ್ಲ ನನ್ನ ಹತ್ತಿರ ಹಕ್ಕಿಗಳು
ಬರಲು ಹಿಂಜರಿಯುತ್ತಾರೆ ನನ್ನ ಬಳಿ ಮಕ್ಕಳು
ಪ್ರೇಮಿಯರು ನನ್ನಿಂದ ದೂರ ದೂರ
ಈ ಭೂಮಿಗೆ ಈಗ ನಾನೊಂದು ಭಾರ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...