Sunday, 21 September, 2014

ರಹಸ್ಯ

ಅದೆಲ್ಲಿಗೂ ಹೋದರೂ
ಅದ್ಯಾವುದೋ ಬೆಳಕು ಸನಿಹ ಇರುತ್ತದೆ
ಅಲ್ಲಿ ಇಲ್ಲಿ ಎಲ್ಲಿ ಅಲೆದರೂ
ಅದ್ಯಾವುದೋ ಒಂದು ಗಮ್ಯ ಕರೆಯುತ್ತದೆ
ಕಲ್ಲು ಮುಳ್ಳು ಪಾದಕ್ಕೆ ಚುಚ್ಚಿದರೂ
ಅದ್ಯಾವುದೋ ಹಸ್ತಗಳ ಸ್ಪರ್ಶದ ಅನುಭವ ಆಗುತ್ತದೆ
ಏನದು ಎಂದು ತಿಳಿಯಲಾಗುವುದಿಲ್ಲ
ತಿಳಿಯಬೇಕೆಂಬ ಇಚ್ಛೆ ಸಹ ಇಲ್ಲ
ಅಜ್ಞಾತವಾಗಿರಲಿ
ಗುಪ್ತವಾಗಿರಲಿ
ಎಂದೂ ತಿಳಿಯದಿರಲಿ ಈ ರಹಸ್ಯ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಇದೇ ಅನುಭವ ಕಾಯುತ್ತದೆ ನಮ್ಮನ್ನು ಕಡೆಯವರೆಗೂ...

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete