Saturday, December 26, 2020

ಮೊಗದಿಂದ ಸ್ವಲ್ಪ ಮುಖಪರದೆ ಸರಿಸು


Photo: Google

ಹಾಡಿನ ಕೊಂಡಿ: https://youtu.be/MTwtrF243kY


ನಿನ್ನ ಮೊಗವನ್ನು ಕಣ್ತುಂಬ ನೋಡಲು ಕೊಡು, 

ಈ ಸುಂದರ ಅಪರಾಧ ಮಾಡಲು ಕೊಡು, 

ಮುಖಪರದೆ ತೆರೆ ನನ್ನೊಲವೆ, 

ಇಂದು ಹೃದಯ ನಾಶ ಮಾಡಲು ಕೊಡು 


ಮೊಗದಿಂದ ಸ್ವಲ್ಪ ಮುಖಪರದೆ  ಸರಿಸು, 

ನನ್ನ ರಾಣಿಯೇ... 

ಸೊಗಸು ಮತ್ತೊಮ್ಮೆ ತೋರಿಸು, 

ನನ್ನ ರಾಣಿಯೇ....

-

ಈ ಅಮೃತಶಿಲೆಯಂತ ಕೈಗಳು, 

ಸುಹಾಸಿತ ದೇಹ ನಿನ್ನ, 

ಹೃದಯಕ್ಕೆ ಎದುರಾಗಿದೆ ಪ್ರೀತಿಯ ಉದ್ಯಾನ, 

ನನ್ನ ಸಹ ಹೃದಯದ ಹೂ ಅರಳಿಸು, 

ನನ್ನ ರಾಣಿಯೇ....

-

ಓ ರೂಪಸಿ ನಿನ್ನ ಪ್ರತಿಬಿಂಬ ನೋಡಿ ಈ ಕನ್ನಡಿಯಲಿ, 

ಅಮಲಲ್ಲಿದ್ದೇನೆ ನಿನ್ನ ಸೋಗಿನ ದಾರಿಯಲಿ, 

ಸಾಧ್ಯವಿದ್ದರೆ ಪ್ರಜ್ಞೆಯಲ್ಲಿ ತರಿಸು, 

ನನ್ನ ರಾಣಿಯೇ....

-

ಜೊತೆಗಾರ್ತಿಯಾಗಿ ಸಿಕ್ಕಿರುವೆ ನೀನು ನನಗೆ ಈ ಜೀವನದಲಿ, 

ಚಂದಿರ ಸಿಗುವಂತೆ ಈ ಮೌನ ರಾತ್ರಿಯಲಿ, 

ಹೋಗುವೆ ಈಗ ಎಲ್ಲಿ ಹೇಳು, 

ನನ್ನ ರಾಣಿಯೇ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ: ಶಂಕರ್ ಜೈಕಿಶನ್ 

ಹಾಡಿದವರು: ಮುಹಮ್ಮದ್ ರಫಿ 

ಚಿತ್ರ : ಮೇರೇ ಹುಜೂರ್


अपने रुख़ पर निगाह करने दो

खूबसूरत गुनाह करने दो

रुख़ से परदा हटाओ जान-ए-ह

आज दिल को तबाह करने दो


रुख़ से ज़रा नकाब उठा दो, मेरे हु

जलवा फिर एक बार दिखा दो, मेरे हुजू


वो मरमरी से हाथ, वो महका हुआ ब

टकराया मेरे दिल से, मोहब्बत का एक चम

मेरे भी दिल का फूल खिला दो, मेरे हुजू

रुख़ से ज़रा नकाब..


हुस्न-ओ-जमाल आपका शीशे में देख

मदहोश हो चुका हूँ मैं, जलवों की राह प

गर हो सके तो होश में ला दो, मेरे हुजू

रुख़ से ज़रा नकाब..


तुम हमसफ़र मिले हो मुझे इस हयात में

मिल जाए जैसे चाँद कोई सूनी रात 

जाओगे तुम कहाँ ये बता दो, मेरे हुजू

रुख़ से ज़रा नक़ाब...रमें.ररकर.रनदनरजूरया




No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...