ಓ ಹೂವಿನ ರಾಣಿಯೇ,
ವಸಂತದ ಚೆಲುವೆಯೇ,
ನಿನ್ನ ನಗುವುದು ಅದ್ಭುತವಾಗಿದೆ,
ಹೃದಯವಿಲ್ಲ ಸ್ಥಿರದಲಿ,
ನಾನಿಲ್ಲ ಸ್ಥಿರದಲಿ,
ಕಣ್ಣಿಂದ ಕಣ್ಣು ಸೇರಿಸಿದ್ದು ಅದ್ಭುತವಾಗಿದೆ,
ಓ ಹೂವಿನ.....
ನಿನ್ನ ಅಧರ ಏನು,
ಗುಲಾಬಿ ಕಮಲ,
ಈ ಎಲೆಗಳೆರಡೂ,
ಪ್ರೀತಿಯ ಒಂದು ಕವನ,
ಆ ಕೋಮಲ ತುಟಿಯಿಂದ ಒಲವಿನ ಮಾತು,
ನನ್ನಿಂದ ನುಡಿಯುವುದು ಅದ್ಭುತವಾಗಿದೆ,
ಓ ಹೂವಿನ....
ಕೆಲವೊಮ್ಮೆ ನಿರ್ಲಿಪ್ತ ಭೇಟಿ,
ಕೆಲವೊಮ್ಮೆ ಹಿಂಜರಿಕೆ ನಿನ್ನ,
ಕೆಲವೊಮ್ಮೆ ದಾರಿ ತಪ್ಪಿ
ಮುನಿಸುವುದು ನಿನ್ನ,
ಈ ನಿನ್ನ ಕಣ್ರೆಪ್ಪೆ ತೆರೆದು ಮುಚ್ಚುವುದು,
ಮುಚ್ಚಿ ತೆರೆಯುವುದು ಅದ್ಭುತವಾಗಿದೆ,
ಓ ಹೂವಿನ....
ಪರಿಸರದಲ್ಲಿ ತಂಪು,
ತುಂಬಿದ ಯೌವನ,
ನಿನ್ನ ಕೇಶದ
ಅಯ್ಯೋ ಈ ಧಾರಾಳತನ,
ಪ್ರತಿಯೊಂದು ಸುರಳಿಯಲ್ಲಿ ಮಾದಕತೆಯ ಸಂಚ,
ಮತ್ತೇರಿಸುವ ನಿನ್ನ ನಡಿಕೆ ಅದ್ಭುತವಾಗಿದೆ,
ಓ ಹೂವಿನ....
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಮೂಲ : ಹಸ್ರತ್ ಜೈಪುರಿ
ಸಂಗೀತ :ಶಂಕರ್ ಜೈಕಿಶನ್
ಚಿತ್ರ : ಆರ್ಜುऐ फूलों की रानी बहारों की मलिका
तेरा मुस्कुराना गज़ब हो गया
न दिल होश में है न हम होश में हैं
नज़र का मिलाना गज़ब हो
तेरे होंठ क्या हैं गुलाबी कंवल हैं
ये दो पत्तियां प्यार की इक गज़ल
वो नाज़ुक लबों से मुहब्बत की बातें
हमीं को सुनाना गज़ब हो ग
कभी खुल के मिलना कभी खुद झिझक
कभी रास्तों पे बहकना मचलना
ये पलकों की चिलमन उठाकर गिरा
गिराकर उठाना गज़ब हो गया
फ़िज़ाओं में ठंडक घटा भर जवानी
तेरे गेसुओं की बड़ी मेहरबानी
हर इक पेंच में सैकड़ों मैकदे हैं
तेरा लड़खड़ाना गज़ब हो गया
No comments:
Post a Comment