ಹೀಗೆ ಮುನಿಸಿಕೊಂಡು ಎಲ್ಲಿಗೆ ಹೋಗುವಿರಿ ನೀವು,
ಎಲ್ಲಿಗೂ ಹೋದರು ನನ್ನನ್ನು ಕಾಣುವಿರಿ ನೀವು,
ಹೀಗೆ ಮುನಿಸಿಕೊಂಡು....
ಕಣ್ಣಿಂದ ಮರೆಯಾಗಿ ತೋರಿಸಿದರೆ ನೋಡುವೆ,
ಯೋಚನೆಯಲ್ಲಿ ನೀವು ಬರದಿದ್ದರೆ ನಂಬುವೆ,
ಅಯ್ಯೋ ಲಕ್ಷ ಪರದೆಯ ಹಿಂದೆ ಅಡಗಿ ಕೊಂಡರೂ ನೀವು,
ನನ್ನನ್ನು ಕಾಣುವಿರಿ ನೀವು,
ನನ್ನನ್ನು ಕಾಣುವಿರಿ ನೀವು,
ಹೀಗೆ ಮುನಿಸಿಕೊಂಡು....
ಹೃದಯದಲ್ಲಿಯ ಮಾತನ್ನು ತುಟಿಗೆ ತರುವುದೂ ಕಷ್ಟ,
ಆದರೆ ಅದನ್ನು ಹೃದಯದಲ್ಲಿ ಬಚ್ಚಿಡುವುದೂ ಕಷ್ಟ,
ಕಣ್ಣ ಭಾಷೆಯಿಂದ ಅರಥೈಸಿ ನೀವು,
ಅರ್ಥೈಸಿ ಸ್ವಲ್ಪ ಗಮನಿಸಿ ನೀವು,
ಹೀಗೆ ಮುನಿಸಿಕೊಂಡು....
ಇದೆಂಥ ಅಮಲು, ಇದೆಂಥ ಪ್ರಭಾವ,
ಹತೋಟಿಯಲಿಲ್ಲ ಹೃದಯ, ನಿಯಂತ್ರಣದಲಿಲ್ಲ ನಯನ,
ಸ್ವಲ್ಪ ಪ್ರಜ್ಞೆ ಬಂದಾಗ, ಹೋಗಿರಿ ನೀವು,
ನಿಲ್ಲಿಕೊಂಡಿರಿ ನೀವು,
ನಿಲ್ಲಿಕೊಂಡಿರಿ ನೀವು,
ಹೀಗೆ ಮುನಿಸಿಕೊಂಡು....
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಮೂಲ : ಹಸ್ರತ್ ಜೈಪುರಿ
ಹಾಡಿದವರು: ಲತಾ ಮಂಗೇಶ್ಕರ್
ಸಂಗೀತ: ಶಂಕರ್ ಜೈಕಿಶನ್
ಚಿತ್ರ:ಆರ್ಜೂ
लता : अजी रूठ कर अब कहाँ जाइयेगा
(रफ़ी: अजी हमसे बचकर कहाँ जाइयेगा
जहाँ जाइयेगा हमें पाइयेगा
निगाहों में छुपकर दिखाओ तो जा
ख़यालों में भी तुम न आओ तो जानें
अजी लाख परदे में छुप जाइये
नज़र आइयेगा नज़र आइयेगा
जो दिल में हैं होठों पे लाना भी मुश्कि
मगर उसको दिल में छुपाना भी मुश्कि
नज़र की ज़ुबाँ को समझ जाइये
समझ कर ज़रा गौर फ़रमाइये
ये कैसा नशा हैं ये कैसा असर हैं
न काबू में दिल हैं न बस में जिगर
ज़रा होश आ ले फिर जाइयेगा
ठहर जाइयेगा ठहर जाइयेगा
No comments:
Post a Comment