Photo: Google
ಹಾಡಿನ ಕೊಂಡಿ: https://youtu.be/pxuqYr9yOww
ರಫಿ:
ಹೃದಯ ಮತ್ತೊಮ್ಮೆ ನೆನಪಿಸಿದೆ,
ಮಿಂಚು ಹೊಡೆದಂತಾಗಿದೆ,
ಮತ್ತೊಮ್ಮೆ ನೋವು ಪ್ರೀತಿಯ ಉದ್ಭವಿಸಿದೆ,
ಹೃದಯ.....
-
ಅದೆಂಥ ದಿನಗಳಾಗಿತ್ತು,
ನನ್ನನ್ನು ಹೃದಯದಲ್ಲಿ ನೆಲೆಸಿದ್ದೆ ನೀನು,
ಮತ್ತೆ ನಗು ನಗುತ ನನ್ನನ್ನು ಅಪ್ಪಿಕೊಂಡಿದ್ದೆ ನೀನು,
ಆಟ ಆಟದಲ್ಲಿಯೇ ಯಾಕೆ ಪ್ರಾಣಕ್ಕೆ ಸಂಕಟ ಉಂಟಾಗಿದೆ,
ಮತ್ತೊಮ್ಮೆ ನೋವು.....
-
ಸುಮನ್ ಕಲ್ಯಾಣ್ ಪುರಿ:
ಹೇಗೆ ಹೇಳಲಿ ನಿನಗೆ ನಾನು ದೀಪದ ಭಾಗ್ಯ ಏನೆಂದು,
ಬೆಂಕಿಯ ತಾಪದಲಿ ಸುಡುವ ಹೊರತು ಪ್ರೀತಿ ಬೇರೇನಲ್ಲವೆಂದು,
ಇದು ಎಂದೂ ವಸಂತ ಬರದ ಭಾಗೀಚೆಯಾಗಿದೆ,
ಹೃದಯ.....
-
ಮುಕೇಶ್:
ನಾನು ಆ ಪತಂಗನಾಗಿದ್ದೇನೆ,
ದೀಪದ ಸುತ್ತಮುತ್ತಲೇ ಇರುವೆ,
ಸೌಂದರ್ಯದ ಬೆಂಕಿಯಲಿ ಮೌನವಾಗಿ ಸುಡುತ್ತಲೇ ಇರುವೆ,
ನೋವಾಗಿ ಅಯ್ಯೋ ಅಂದರೂ ಅದು ಪ್ರೀತಿಯ ಅಗೌರವವಾಗಿದೆ,
ಮತ್ತೊಮ್ಮೆ ನೋವು.....
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಮೂಲ : ಜಿ ಎಲ್ ರವಾಲ್
ಸಂಗೀತ: ಸೋನಿಕ್ ಒಮಿ
ಹಾಡಿದವರು: ಮುಹಮ್ಮದ್ ರಫಿ, ಸುಮನ್ ಕಲ್ಯಾಣ್ ಪುರಿ, ಮುಕೇಶ್
ಚಿತ್ರ: ದಿಲ್ ನೇ ಫಿರ್ ಯಾದ್ ಕೀಯ
-
दिल ने फिर याद किया बर्क़ सी लहराई है
फिर कोई चोट मुहब्बत की उभर आई है
दिल ने फिर याद किया ...
वो भी क्या दिन थे हमें दिल में बिठाया था कभी
और हँस हँस के गले तुम ने लगाया था कभी
खेल ही खेल में क्यों जान पे बन आई है
फिर कोई चोट मुहब्बत की ...
क्या बतायें तुम्हें हम शम्मा की क़िसमत क्या है
आग में ग़मे के जलने के सिवा मुहब्बत क्या है
ये वो गुलशन है कि जिस में न बहार आई है
दिल ने फिर याद किया ...
हम वो परवाने हैं जो शम्मा का दम भरते हैं
हुस्न की आग में खामोश जला करते हैं
आह भी निकले तो प्यार की रुसवाई है
फिर कोई चोट मुहब्बत की ...