Wednesday, August 29, 2012

ಅರಳುತ್ತದೆ ಹೂ ಇಲ್ಲಿ


ಅರಳುತ್ತದೆ ಹೂ ಇಲ್ಲಿ
ಅರಳಿ ಚೂರುಪಾರಾಗಲು
ಹೃದಯ ಒಟ್ಟಾಗುತ್ತದೆ ಇಲ್ಲಿ
ಒಟ್ಟಾಗಿ ಅಗಲಲು

ನಾಳೆ ಇರುವುದೋ ಇಲ್ಲವೋ
ಋತು ಈ ಪ್ರೀತಿಯ
ನಾಳೆ ನಿಲ್ಲುವುದೋ ಇಲ್ಲವೋ
ಪಾಲಕಿ ಈ ವಸಂತದ
ನಾಲ್ಕು ಕ್ಷಣ ಇಂದಿನ
ಕಳೆಯೋಣ ಪ್ರೀತಿಯಲಿ
ಅರಳುತ್ತದೆ ಹೂ ಇಲ್ಲಿ....

ಸರೋವರದ ತುಟಿಯಲಿ
ಮುಗಿಲ ರಾಗವಿದೆ
ಹೂವಿನ ಎದೆಯಲಿ
ತಣ್ಣ ತಣ್ಣ ಜ್ವಾಲೆ ಇದೆ
ಹೃದಯದ ಕನ್ನಡಿಯಲಿ
ಈ ನೋಟ ಸ್ಥಾಪಿಸು ನೀನಿಲ್ಲಿ
ಅರಳುತ್ತದೆ ಹೂ ಇಲ್ಲಿ....

ತೃಷೆಯಲಿ ಹೃದಯ ಪ್ರಿಯೆ
ತೃಷೆಯಲಿ ಈ ರಾತ್ರಿ ಇದೆ
ತುಟಿಯಲಿ ಅಡಗಿದ
ಯಾವುದೇ ಸಿಹಿ ಮಾತಿದೆ
ಈ ಕ್ಷಣದಲಿ ಎಲ್ಲ ಖುಷಿ
ಹಂಚು ನೀನಿಲ್ಲಿ
ಅರಳುತ್ತದೆ ಹೂ ಇಲ್ಲಿ....

ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಎಸ್ .ಡಿ.ಬರ್ಮನ್

Khilate Hain Gul Yahaa, Khil Ke Bikhar Ne Ko
Milate Hain Dil Yahaa, Mil Ke Bichhadane Ko

Kal Rahe Naa Rahe, Mausam Ye Pyaar Kaa
Kal Ruke Naa Ruke, Dolaa Bahaar Kaa
Chaar Pal Mile Jo Aaj Pyaar Mein Gujaar Do

Zeelo Ke Hothhonpar Meghon Kaa Raag Hain
Fulon Ke Seene Mein Thhandee Thhandee Aag Hain
Dil Ke Aaeene Mein Ye Too Samaa Utaar Le

Pyaasaa Hain Dil Sanam Pyaasee Ye Raat Hain
Hothhon Mein Dabee Dabee Koee Meethhee Baat Hain
In Lamho Pe Aaj Too Har Khushee Nisaar De


www.youtube.com/watch?v=HBgKPyi1aXA

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...