Tuesday, August 21, 2012

ದೀಪ ಬೆಳಗುತ್ತದೆ

ದೀಪ ಬೆಳಗುತ್ತದೆ
ಹೂವು ಅರಳುತ್ತದೆ
ತುಂಬಾ ಕಷ್ಟದಿಂದ ಆದರೆ
ಜಗದಲ್ಲಿ ಗೆಳೆಯನೆಂಬ ಉಡುಗೊರೆ ಸಿಗುತ್ತದೆ
ದೀಪ ಬೆಳಗುತ್ತದೆ.....

ಯಾರದ್ದೋ ಗೆಳೆಯ ಅವನಿಂದ 
ಅಗಲಿ ಹೋದರೆ ಎಂದೂ
ಏನೂ ಕೇಳ ಬೇಡಿ ಗೆಳೆಯರೆ
ಹೃದಯದ ಅವಸ್ಥೆ
ಹಾಳಾಗುತ್ತದೆ ಅವನದ್ದು
ಹೃದಯದಲ್ಲಿ ನೆನಪ ಬಾಣ ಹೊಡೆದಂತಾಗುತ್ತದೆ 
ದೀಪ ಬೆಳಗುತ್ತದೆ.....

ಈ ಸೌಂದರ್ಯ ರೂಪದ
ಎಂದೂ ಹೆಮ್ಮೆ ಪಡಬೇಡ
ಜೀವವೂ ಕೇಳಿದರೆ ಗೆಳೆಯನಿಗೆ ನೀಡು
ಬೇಡ ಬೇಡ ಅವನನ್ನ ಮುನಿಸ ಬೇಡ
ಸೌಂದರ್ಯ ಇರದೂ ನಾಳೆ
ರೂಪ ಎಲ್ಲಿ ಶಾಶ್ವತವಾಗಿರುತ್ತದೆ
ದೀಪ ಬೆಳಗುತ್ತದೆ.....

ಸಂಪತ್ತು ಹಾಗು ಯೌವನ
ಒಂದು ದಿನ ಮರೆಯಾಗುತ್ತದೆ
ಸತ್ಯ ಹೇಳುತ್ತೇನೆ ಗೆಳೆಯರೆ
ವೈರಿ ಎಲ್ಲ ಪ್ರಪಂಚ ಆಗುತ್ತದೆ
ಜೀವನ ಪರ್ಯಂತ ಆದರೆ
ಗೆಳೆಯನ ಜೊತೆ ನಮ್ಮಲ್ಲಿರುತ್ತದೆ
ದೀಪ ಬೆಳಗುತ್ತದೆ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್.ಡಿ.ಬರ್ಮನ್

Diye Jalte Hain Phool Khilte Hain
Badi Mushkil Se Magar Duniya Mein Dost Milte Hain
Diye Jalte Hain

Jab Jis Waqt Kisika Yaar Judaa Hota Hai
Kuch Na Poochho Yaaron Dil Ka
Haal Bura Hota Hai
Dil Pe Yaadon Ke Jaise Teer Chalte Hain
Ahaha
Diye Jalte Hain

Iss Rang Roop Pe Dekho Hargiz Naaz Na Karna
Jaan Bhi Maange Yaar To De Dena
Naaraaz Na Karna
Rang Ud Jaate Hain Roop Dhalte Hain
Ahaha
Diye Jalte Hain

Daulat Aur Jawaani Ek Din Kho Jaati Hain
Sach Kehta Hoon Saari duniya dushman ho jaati Hai
Umr Bhar Dost Lekin Saath Chalte HainAhaha
Diye Jalte Hain
www.youtube.com/watch?v=4L0sSCpsap4

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...