Thursday, August 23, 2012

ಎಲ್ಲೊ ದೂರ ದಿನ ಇಳಿದಾಗ


ಎಲ್ಲೊ ದೂರ
ದಿನ ಇಳಿದಾಗ
ಸಂಜೆಯ ಸೌಂದರ್ಯ
ತನ್ನ ಮೈಯ ಅಡಗಿಸಿ
ಮೆಲ್ಲನೆ ಬರುವುದು
ನನ್ನ ಯೋಚನೆಯ ಅಂಗಳದಲಿ
ಯಾರೋ ಬಂದು
ಕನಸಿನ ದೀಪ ಹಚ್ಚಿ ಹೋಗುವರು

ಎಲ್ಲೊ ಹೀಗೆಯೇ
ನನ್ನ ಉಸಿರು ಭಾರವಾದಾಗ
ಕುಳಿತು ಕುಳಿತು ಹೀಗೆಯೇ
ಕಣ್ಣು ತುಂಬಿ ಬಂದಾಗ
ಕೆಲವೊಮ್ಮೆ ಅಲ್ಲಾಡಿಸಿ 
ಪ್ರೀತಿಯಲಿ ಬಂದು
ಸ್ಪರ್ಶಿಸುವಳು ನನ್ನನ್ನು
ಆದರೆ ಮರೆಯಾಗುವಳು
ಮರೆಯಾಗುವಳು ...
ಎಲ್ಲೊ ದೂರ....

ಎಲ್ಲೊ ಒಟ್ಟಾಗುವುದಿಲ್ಲ
ಈ ಹೃದಯ ಮನಸ್ಸು
ಎಲ್ಲೊ ಕೂಡಿ ಬರುವುದು
ಜನುಮದ ಬಂಧನವೂ
ತುಂಬಾ ಗೊಂದಲ
ಶತ್ರು ಈ ನನ್ನ ಮನ
ನನ್ನದೆ ಆಗಿ
ಸಹಿಸುವುದು ಅನ್ಯರ ವೇದನೆಯನ್ನ
ಎಲ್ಲೊ ದೂರ....

ಹೃದಯ ನನ್ನ ಅರಿತಿದೆ
ನನ್ನವೆಲ್ಲ ರಹಸ್ಯವನ್ನ
ಆಯಿತು ಹೇಗೆ
ನನ್ನ ಕನಸು ಕಂಚನ
ಈ ಎಲ್ಲ ಕನಸು
ಇದೇ ಎಲ್ಲ ನನ್ನದು
ಇದರ ನೆರಳು ಸಹ ನನ್ನಿಂದ ಅಗಲದು
ನನ್ನಿಂದ ಅಗಲದು.....
ಎಲ್ಲೊ ದೂರ....

ಮೂಲ : ಗುಲ್ಜಾರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸಲೀಲ್ ಚೌಧರಿ

Kahin Door Jab Din Dhal Jaye
Sanjh Ki Dulhan Badan Churaye, Chupke Se Aaye
Mere Khayalon Ke Aangan Mein
Koi Sapnon Ke Deep Jalaye

Kabhi Yun Hi Jab Hui Bojhal Saansen
Bhar Aai Baithe Baithe Jab Yoon Hi Aankhen
Kabhi Machal Ke Pyaar Se Chal Ke
Chhuye Koi Mujhe Par Nazar Na Aaye
Nazar na aaye..
Kahin Door..

Kahin To Yeh Dil Kabhi Mil Nahin Paate
Kahin Pe Nikal Aaye Janmon Ke Naate
Ghani Thi Uljhan Bairi Apna Man
Apna Hi Hoke Sahe Dard Paraye
Kahin Door...

Dil Jaane Mere Saare Bhed Ye Gehre
Ho gaye Kaise Mere Sapne Sunehre
Yeh Mere Sapne Yehi To Hain Apne
Mujhse Juda Na Hoge Inke Yeh Saaye
Kahin Door..
www.youtube.com/watch?v=BmYT79bYIQw

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...