Sunday, August 26, 2012

ನಾನೆಂದು ಹೇಳುವುದಿಲ್ಲ

ನಾನೆಂದು ಹೇಳುವುದಿಲ್ಲ
ಆದರೆ ಕತ್ತಲೆಯಿಂದ ಹೆದರುತ್ತೇನೆ ನಾನಮ್ಮ
ಹೀಗೆ ನಾನು ತೋರಿಸುವುದಿಲ್ಲ
ಆದರೆ ನಿನ್ನ ಕಾಳಜಿ ಮಾಡುತ್ತೇನೆ ನಾನಮ್ಮ
ನಿನಗೆಲ್ಲವೂ ಗೊತ್ತಿದೆ ಅಮ್ಮ 
ಹೌದಲ್ಲ ಅಮ್ಮ
ನಿನಗೆಲ್ಲವೂ ಗೊತ್ತಿದೆ
ನನ್ನ ಅಮ್ಮ

ಜನಸಂದಣಿಯಲ್ಲಿ ಬಿಡಬೇಡ
ಹೀಗೆ ನನಗೆ
ಮನೆಗೆ ಹಿಂತಿರುಗಿ
ಬರಲಾರೆ ನಾನು
ಕಳಿಸಬೇಡ ನನ್ನನ್ನು ಇಷ್ಟು ದೂರ
ನೆನಪು ಸಹ ಬರಲಾರದು ನನ್ನ ನಿನಗಮ್ಮ
ನಾನೇನು ಇಷ್ಟು ದುಷ್ಟನೇ ಅಮ್ಮ
ನಾನೇನು ಇಷ್ಟು ದುಷ್ಟನೇ
ನನ್ನ ಅಮ್ಮ

ಯಾವಾಗಲು ಅಪ್ಪ ನನ್ನನ್ನು
ಜೋರು ಜೋರಾಗಿ ತೂಗಾಡುವಾಗಮ್ಮ
ನನ್ನ ಕಣ್ಣು ನಿನ್ನನ್ನು ಹುಡುಕುವುದು
ಎನಿಸುವೆ ನೀ ಬಂದು ಹಿಡಿಯುವೆ ಅಮ್ಮ
ಅವರಿಂದ ನಾನಿದು ಹೇಳುವುದಿಲ್ಲ
ಆದರೆ ನಾನು ಭಯಭೀತನಾಗುತ್ತೇನೆ ಅಮ್ಮ
ಮುಖದಲಿ ತೋರಿಸುವುದಿಲ್ಲ
ಮನಸ್ಸಲ್ಲೇ ಹೆದರುತ್ತೇನೆ ನಾನಮ್ಮ
ನಿನಗೆಲ್ಲವೂ ಗೊತ್ತಿದೆ ಅಮ್ಮ 
ಹೌದಲ್ಲ ಅಮ್ಮ
ನಿನಗೆಲ್ಲವೂ ಗೊತ್ತಿದೆ
ನನ್ನ ಅಮ್ಮ

ಮೂಲ : ಪ್ರಸೂನ್ ಜೋಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಶಂಕರ್ ಮಹಾದೇವನ್
ಸಂಗೀತ : ಶಂಕರ್ ಎಹಸಾನ್ ಲಾಯ್
ಚಿತ್ರ: ತಾರೆ ಜಮೇನ್ ಪರ್ 

Main Kabhi Batlata Nahin
Par Andhere Se Darta Hoon Main Maa
Yun To Main, Dikhlata Nahin
Teri Parwaah Karta Hoon Main Maa
Tujhe Sab Hain Pata, Hain Na Maa
Tujhe Sab Hain Pata, Meri Maa

Bheed Mein Yun Na Chodo Mujhe
Ghar Laut Ke Bhi Aa Naa Paoon Maa
Bhej Na Itna Door Mujhko Tu
Yaad Bhi Tujhko Aa Naa Paoon Maa
Kya Itna Bura Hoon Main Maa
Kya Itna Bura Meri Maa

Jab Bhi Kabhi Papa Mujhe
Jo Zor Se Jhoola Jhulate Hain Maa
Meri Nazar Dhoondhe Tujhe
Sochu Yahi Tu Aa Ke Thaamegi Maa
Unse Main Yeh Kehta Nahin
Par Main Seham Jaata Hoon Maa
Chehre Pe Aana Deta Nahin
Dil Hi Dil Mein Ghabraata Hoon Maa
Tujhe Sab Hai Pata Hai Naa Maa
Tujhe Sab Hai Pata Meri Maa


www.youtube.com/watch?v=ixqfPn9GKVE

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...