Monday, August 13, 2012

ಅಸಾಧಾರಣ ಪ್ರೀತಿ

ನಿನ್ನೆ ಅವಳು
ನನ್ನ ಕನಸಲಿ ಬಂದಿದ್ದಳು
ಅವಳ ಮುಖದಲಿ
ಮೊದಲಿನ ಆ ತೇಜಸ್ಸು ಕಾಣಲಿಲ್ಲ
ತುಂಬಾ ದುಃಖದಲ್ಲಿ ಇದ್ದಂತೆ ಕಂಡಳು !

ನನ್ನನ್ನೆ ನೋಡುತ ನಿಂತಿದ್ದಳು
ಕಣ್ಣಿಂದ ಅಶ್ರು ಧಾರೆ ಸುರಿದು
ಅವಳ ಕಪಾಳದಲ್ಲಿ ಹರಿಯುತ್ತಿತ್ತು
ಹೃದಯದಲ್ಲಿ ಏನೋ ವೇದನೆ
ಇದ್ದಂತೆ ಬಾಸವಾಯಿತು !

ನಾನು ಮೌನವಾಗಿದ್ದೆ
ಅವಳಲ್ಲಿ ನೀನೇಕೆ ಹೀಗೆ ಎಂದು
ಕೇಳಲು ನನಗೆ ಧೈರ್ಯ ಆಗಲಿಲ್ಲ
ನನಗೆ ಗೊತ್ತಿತ್ತು ನನ್ನ ಈ ದೀನ ಅವಸ್ಥೆ ಕಂಡು
ಅವಳಿಗೆ ದುಃಖ ಉಕ್ಕಿ ಬಂದಿತೆಂದು !

ಮೆಲ್ಲನೆ ಹೇಳಿದೆ
ಬೇಸರಿಸ ಬೇಡ
ನಾನು ನನ್ನನ್ನು ಸಾವರಿಸುವೆ
ಅವಳು ಉತ್ತರಿಸಲಿಲ್ಲ
ನನ್ನನ್ನೆ ನೋಡುತ್ತಿದ್ದಳು !

ಕಡೆಗೆ ಕೇವಲ
ಎರಡೆ ಶಬ್ದ ನುಡಿದು
ನಡೆದಳು
ನೀನು ದುಃಖದಲ್ಲಿದ್ದರೆ
ನಾನು ಸುಖದಲ್ಲಿ ಇರಲಾರೆ ಎಂದು !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...