Thursday, August 30, 2012

ನೀನಿಲ್ಲ


ನೀನಿಲ್ಲ
ಈ ಜೀವನದಲ್ಲಿ ಬಣ್ಣವಿಲ್ಲ
ಬದುಕ ಬಂಡಿಯಲ್ಲಿ ಚಕ್ರವಿಲ್ಲ
ಕುಡಿಯಲು ಹೋಗುವೆ ಶರಾಬು
ಆದರೆ ಅದರಲ್ಲೂ ಅಮಲಿಲ್ಲ
ನಡೆಯುವೆ ಈ ಪಥದಲ್ಲಿ
ಆದರೆ ಅದರಲ್ಲೂ ನಿನ್ನ ಛಾಯೆ ನನ್ನ ನೆರಳಿಲ್ಲ
ಕಣ್ಣೀರ ಕುಡಿದು ಕಳೆಯುವೆ ಜೀವನ
ಆದರೆ ಅದರಲ್ಲೂ ನಿನ್ನ ಮರೆಯಲು ಶಕ್ತಿ ಇಲ್ಲ
by ಹರೀಶ್ ಶೆಟ್ಟಿ, ಶಿರ್ವ

ಖಾಲಿ ಕೈ

ಸುತ್ತ ಮುತ್ತ
ಅತ್ತ ಇತ್ತ
ಓಡುವರು ಎಲ್ಲರೂ
ಪಡೆಯಲು ಮೊತ್ತ
ಬಿಟ್ಟು ತನ್ನ ಊರು
ತೆರಳುವರು ಮುಂಬೈ ಕೋಲ್ಕತ್ತಾ
ಆದರೆ ನಿಜ ವಿಷಯ ನಿಮಗೆ ಗೊತ್ತ ?
ಜಗದಿಂದ ಹೋಗುವಾಗ ಇರುವುದು ಖಾಲಿ  ಕೈ
ಬಿಟ್ಟು ಹೋಗುವರು ಎಲ್ಲರೂ ಇಲ್ಲಿಯೇ ಎಲ್ಲ ಸೊತ್ತ
by ಹರೀಶ್ ಶೆಟ್ಟಿ, ಶಿರ್ವ

ಸ್ವಲ್ಪ ಇದೆ ಸ್ವಲ್ಪದ ಅಗತ್ಯವಿದೆ

ಕಿಶೋರ್ ಕುಮಾರ್...
ಸ್ವಲ್ಪ ಇದೆ 

ಸ್ವಲ್ಪದ ಅಗತ್ಯವಿದೆ
ಆದರೂ ಜೀವನ 

ಇಲ್ಲಿ ಸುಂದರವಾಗಿದೆ
ಸ್ವಲ್ಪ ಇದೆ......-೨

ಕಿಶೋರ್ ಕುಮಾರ್...
ಹಣ ಇರುವ ಆ ದಿನ
ಹೇಗಿರಬಹುದು ಆ ದಿನ
ಆ ದಿನ ಚಕ್ರ ತಿರುಗುವುದು
ಭಾಗ್ಯದ ಪಾದವನ್ನು ಚುಂಬಿಸುವುದು
ಹೇಳು ಹೀಗಾಗುವುದು
ಸ್ವಲ್ಪ ಇದೆ......-೨

ಲತಾ ಮಂಗೇಶ್ಕರ್....
ಕೇಳು ಕೇಳು ಕೇಳು 

ತಂಗಾಳಿ ಬೀಸುತಿದೆ


ಕಿಶೋರ್ ಕುಮಾರ್...
ನಿನ್ನ ಸೆರಗಿಂದ 

ಮುಗಿಲು ಹಾರುತಿದೆ
ಕೇಳು ಕೇಳು ಕೇಳು 

ಎಲ್ಲಿಗೆ ಹೋಗುವೆ


ಲತಾ ಮಂಗೇಶ್ಕರ್....
ನಾನು ಆಕಾಶವನ್ನು 

ಸ್ಪರ್ಶಿಸಲು ಹೋಗುವೆ
ಮುಗಿಲಲ್ಲಿ ಹಾರಲಿದೆ


ಲತಾ ಮಂಗೇಶ್ಕರ್ 
ಸ್ವಲ್ಪ ಇದೆ

ಕಿಶೋರ್ ಕುಮಾರ
ಸ್ವಲ್ಪದ 

ಲತಾ ಮಂಗೇಶ್ಕರ್.....ಅಗತ್ಯವಿದೆ -೩

ಲತಾ ಮಂಗೇಶ್ಕರ್....
ನಾನು ಕನಸು ಕಂಡಿದ್ದೇನೆ 

 ನನ್ನ ಒಲವನ್ನು ಕಂಡಿದ್ದೇನೆ-೨
ಯಾವಾಗ ರಾತ್ರಿಯ ಮುಖ ವಸ್ತ್ರ ಸರಿಯುವುದೋ 

ಹಗಲಿನ ಪಾಲಕಿ ನಡೆಯುವುದೋ
ಆವಾಗ ಕನಸು ಪೂರ್ಣವಾಗುವುದು
ಸ್ವಲ್ಪ ಇದೆ...

ಲತಾ ಮಂಗೇಶ್ಕರ್....
ಸಣ್ಣದು ನನ್ನ ಈ ಪ್ರಪಂಚ 

ನನ್ನ ಪೂರ್ಣ ಪ್ರಪಂಚ
ತನು ಮನದಿಂದ ಒಟ್ಟಿಗೆ ನಡೆಯುವೆವೂ
ಒಟ್ಟಿಗೆ ಇದ್ದೇವೆ ಒಟ್ಟಿಗೆ ಎಲ್ಲ ಇರುವೆವೂ
ಸ್ವಲ್ಪ ಇದೆ...

ಸ್ವಲ್ಪ ಇದೆ 

ಸ್ವಲ್ಪದ ಅಗತ್ಯವಿದೆ -೨
ಆದರೂ 
ಜೀವನ
ಇಲ್ಲಿ ಸುಂದರವಾಗಿದೆ
ಸ್ವಲ್ಪ ಇದೆ......-೨


ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್ /ಲತಾ ಮಂಗೇಶ್ಕರ್
ಸಂಗೀತ : ರಾಜೇಶ್ ರೋಶನ್
ಚಿತ್ರ ಖಟ್ಟ ಮೀಟ
kishore kumar
huuum huuu laalaalalaa
thoda hai thode ki jaroorat hai
zindagi phir bhi yahan khoobsurat hai
thoda hai thode ki (jaroorat hai)-2

kishor kumar
jis din paisa hoga vo din kaisa hoga
us din pahiye ghumenge aur kismat ke lab chumenge
bolo aeisa hoga
thoda hai thode ki jaroorat hai

lata
sun sun sun hawa chali saba chali
kishore
tera aanchal se ud ke ghata chali
sun sun sun kahan chali
lata
mein chune zara aasman chali
badal pe udna hoga
(lata-thoda hai)(kishore-thode ki)(lata-jaroorat hai)-3

lata hamne sapna dekha hai koi apna dekha hai-2
jab raat ka ghunghat utrega aur din ki doli gujaregi
tab sapna pura hoga
thoda hai thode ki jaroorat hai
zindagi phir bhi yahan khoobsurat hai
thoda hai thode ki jaroorat hai

lata
chotti si yeh duniya meri puri duniya hai
ang liye rang liye sang chalenge
sath hai hum sath hai sub sath rehenge
thoda hai (kishore-thode ki) jaroorat hai

chorus
(thoda hai thode ki jaroorat hai)-2
(zindagi phir vahan khoobsurat hai)
(thoda hai thode ki jaroorat hai)-2


www.youtube.com/watch?v=DRUDyv78j4I

Wednesday, August 29, 2012

ಅರಳುತ್ತದೆ ಹೂ ಇಲ್ಲಿ


ಅರಳುತ್ತದೆ ಹೂ ಇಲ್ಲಿ
ಅರಳಿ ಚೂರುಪಾರಾಗಲು
ಹೃದಯ ಒಟ್ಟಾಗುತ್ತದೆ ಇಲ್ಲಿ
ಒಟ್ಟಾಗಿ ಅಗಲಲು

ನಾಳೆ ಇರುವುದೋ ಇಲ್ಲವೋ
ಋತು ಈ ಪ್ರೀತಿಯ
ನಾಳೆ ನಿಲ್ಲುವುದೋ ಇಲ್ಲವೋ
ಪಾಲಕಿ ಈ ವಸಂತದ
ನಾಲ್ಕು ಕ್ಷಣ ಇಂದಿನ
ಕಳೆಯೋಣ ಪ್ರೀತಿಯಲಿ
ಅರಳುತ್ತದೆ ಹೂ ಇಲ್ಲಿ....

ಸರೋವರದ ತುಟಿಯಲಿ
ಮುಗಿಲ ರಾಗವಿದೆ
ಹೂವಿನ ಎದೆಯಲಿ
ತಣ್ಣ ತಣ್ಣ ಜ್ವಾಲೆ ಇದೆ
ಹೃದಯದ ಕನ್ನಡಿಯಲಿ
ಈ ನೋಟ ಸ್ಥಾಪಿಸು ನೀನಿಲ್ಲಿ
ಅರಳುತ್ತದೆ ಹೂ ಇಲ್ಲಿ....

ತೃಷೆಯಲಿ ಹೃದಯ ಪ್ರಿಯೆ
ತೃಷೆಯಲಿ ಈ ರಾತ್ರಿ ಇದೆ
ತುಟಿಯಲಿ ಅಡಗಿದ
ಯಾವುದೇ ಸಿಹಿ ಮಾತಿದೆ
ಈ ಕ್ಷಣದಲಿ ಎಲ್ಲ ಖುಷಿ
ಹಂಚು ನೀನಿಲ್ಲಿ
ಅರಳುತ್ತದೆ ಹೂ ಇಲ್ಲಿ....

ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಎಸ್ .ಡಿ.ಬರ್ಮನ್

Khilate Hain Gul Yahaa, Khil Ke Bikhar Ne Ko
Milate Hain Dil Yahaa, Mil Ke Bichhadane Ko

Kal Rahe Naa Rahe, Mausam Ye Pyaar Kaa
Kal Ruke Naa Ruke, Dolaa Bahaar Kaa
Chaar Pal Mile Jo Aaj Pyaar Mein Gujaar Do

Zeelo Ke Hothhonpar Meghon Kaa Raag Hain
Fulon Ke Seene Mein Thhandee Thhandee Aag Hain
Dil Ke Aaeene Mein Ye Too Samaa Utaar Le

Pyaasaa Hain Dil Sanam Pyaasee Ye Raat Hain
Hothhon Mein Dabee Dabee Koee Meethhee Baat Hain
In Lamho Pe Aaj Too Har Khushee Nisaar De


www.youtube.com/watch?v=HBgKPyi1aXA

Tuesday, August 28, 2012

ಈ ಸಂಜೆ ಆನಂದಮಯವಾಗಿದೆ

ಈ ಸಂಜೆ ಆನಂದಮಯವಾಗಿದೆ
ಮಾದಕತೆ ತುಂಬಿದೆ
ನಿನ್ನ ಸೆಳೆತ ನನ್ನನ್ನು ನಿನ್ನಲ್ಲಿಗೆ ಎಳೆಯುತ್ತಿದೆ

ದೂರ ಇರುವೆ ಏಕೆ
ಸನಿಹ  ಬರುವುದಿಲ್ಲ ಏಕೆ
ತುಟಿಯಲಿ ನಿನ್ನ
ದಾಹ ಕಾಣುವುದಿಲ್ಲ ಏಕೆ
ಹೀಗೆಯೇ ನಗು ನಗುತ್ತಲೇ ನೀನು
ವಿಷ ಕುಡಿಯುತ್ತಿದ್ದಂತೆ ಕಾಣುತ್ತಿದೆ
ಈ ಸಂಜೆ ಆನಂದಮಯವಾಗಿದೆ....

ಮಾತಾಡುವಾಗ ನನ್ನನ್ನು
ನಿಲ್ಲಿಸುವೆ ಏಕೆ
ನಿನ್ನ ಸಿಹಿ ನಯನ
ನನ್ನನ್ನು ತಡೆಯುವುದು ಏಕೆ
ನಿನ್ನ ಸರಳತೆ
ನಿನ್ನ ಲಜ್ಜೆ ನಿನ್ನಾಣೆ 
ನನ್ನ ತುಟಿ ಹೊಲಿಯುತ್ತಿದೆ
ಈ ಸಂಜೆ ಆನಂದಮಯವಾಗಿದೆ....

ಒಂದು ಮುನಿದ
ಭಾಗ್ಯದಂತೆ
ಮೌನ ನೀನು
ಒಂದು ಚಿತ್ರದಂತೆ
ನಿನ್ನ ನಯನ ಮಾತುಗಳಾಗಿ
ನನಗೆ ಸಂದೇಶ ನೀಡುತ್ತಿದೆ
ಈ ಸಂಜೆ ಆನಂದಮಯವಾಗಿದೆ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ .ಡಿ.ಬರ್ಮನ್
ಚಿತ್ರ : ಕಟಿ ಪತಂಗ್
Ye Shaam Mastaanee, Madahosh Kiye Jaaye
muze Dor Koee Khinche, Teree Or Liye Jaaye

door Rahatee Hain Too, Mere Paas Aatee Nahee
hothhon Pe Tere, Kabhee Pyaas Aatee Nahee
ayesaa Lage Jaisai Ke Too, Has Ke Jahar Koee Piye Jaaye

baat Jab Main Karu, Muze Rok Letee Hain Kyon
teree Mithhee Najar, Muze Tok Detee Hain Kyo
teree Hayaa, Teree Sharam Teree Kasam Mere Hothh Siye Jaaye

yek Ruthhee Huyee, Takadeer Jaise Koee
khaamosh Ayese Hain Too, Tasaweer Jaise Koee
teree Najar, Ban Ke Jubaan Lekin Tere Paigaam Diye Jaaye


www.youtube.com/watch?v=_sZg4EUB3IM

Monday, August 27, 2012

ಹಲವು ಬಾರಿ ನೋಡಿದೆ ಹೀಗೆಯೂ


ಹಲವು ಬಾರಿ ನೋಡಿದೆ ಹೀಗೆಯೂ
ಈ ಮನಸ್ಸ ಸೀಮಾ ರೇಖೆಯೂ
ಮನಸ್ಸು ತಾಳ್ಮೆ ಕಳೆದುಕೊಳ್ಳುತ್ತದೆ
ಅಜ್ಞಾತ ಹಾದಿಯ ಹಿಂದೆ
ಅಜ್ಞಾತ ಆಸೆಯ ಹಿಂದೆ
ಮನಸ್ಸುಓಡುತ್ತದೆ

ಹಾದಿಯಲಿ
ಈ ಹಾದಿಯಲಿ
ಜೀವನದ ಈ ಹಾದಿಯಲಿ
ಆ ಅರಳಿದ ಹೂವು 
ಹೂವು ನಗುವಾಗ
ಯಾವ ಹೂವನ್ನು ಕದ್ದು
ಇಡಲಿ ಸಿಂಗಾರಿಸಿ ಮನಸ್ಸಲ್ಲಿ
ಹಲವು ಬಾರಿ ನೋಡಿದೆ ಹೀಗೆಯೂ .....

ಗೊತ್ತಿಲ್ಲ
ನನಗೆ ಗೊತ್ತಿಲ್ಲ
ಈ ಗೊಂದಲ ಗೊತ್ತಿಲ್ಲ
ಪರಿಹರಿಸಲಿ ಹೇಗೆ
ಏನು ಅರ್ಥವಾಗುದಿಲ್ಲ
ಯಾರಿಗೆ ಸಂಗಾತಿ ಮಾಡಲಿ
ಯಾರ ಪ್ರೀತಿ ಮರೆಯಲಿ
ಹಲವು ಬಾರಿ ನೋಡಿದೆ ಹೀಗೆಯೂ .....

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸಲೀಲ್ ಚೌಧರಿ

kahin baar yu hi dekhaa hai
ye jo man ki simaa rekhaa hai
man todane lagataa hai
anjaani pyaas ke pichhe
anjaani aas ke pichhe
man daudne lagataa hai

raaho me, raaho me, jivan ki raaho me
jo khile hai phool phool muskuraake
kaun saa phool churaake, rakh lu man me sajaake
kahin baar yu hi dekhaa hai ...

jaanun na, jaanun na, ulajhan ye jaanun na
sulajhaau kaise kuchh samajh na paun
kisako mit banaa_un, kiski prit bhulaaun
kahin baar yu hi dekhaa hai ...
www.youtube.com/watch?v=3gYCkw8d8dA

Sunday, August 26, 2012

ಮೋಸ

ಗೆಳತಿ...
ಮೋಸ
ನಿನ್ನಿಂದ ನನಗಲ್ಲ
ನನ್ನಿಂದ ನಿನಗೆ
ನಿನ್ನ ಪ್ರೀತಿಯನ್ನು
ಕಾಪಾಡಲು ಅಸಮರ್ಥನಾದೆ
by ಹರೀಶ್ ಶೆಟ್ಟಿ, ಶಿರ್ವ

ನಾನೆಂದು ಹೇಳುವುದಿಲ್ಲ

ನಾನೆಂದು ಹೇಳುವುದಿಲ್ಲ
ಆದರೆ ಕತ್ತಲೆಯಿಂದ ಹೆದರುತ್ತೇನೆ ನಾನಮ್ಮ
ಹೀಗೆ ನಾನು ತೋರಿಸುವುದಿಲ್ಲ
ಆದರೆ ನಿನ್ನ ಕಾಳಜಿ ಮಾಡುತ್ತೇನೆ ನಾನಮ್ಮ
ನಿನಗೆಲ್ಲವೂ ಗೊತ್ತಿದೆ ಅಮ್ಮ 
ಹೌದಲ್ಲ ಅಮ್ಮ
ನಿನಗೆಲ್ಲವೂ ಗೊತ್ತಿದೆ
ನನ್ನ ಅಮ್ಮ

ಜನಸಂದಣಿಯಲ್ಲಿ ಬಿಡಬೇಡ
ಹೀಗೆ ನನಗೆ
ಮನೆಗೆ ಹಿಂತಿರುಗಿ
ಬರಲಾರೆ ನಾನು
ಕಳಿಸಬೇಡ ನನ್ನನ್ನು ಇಷ್ಟು ದೂರ
ನೆನಪು ಸಹ ಬರಲಾರದು ನನ್ನ ನಿನಗಮ್ಮ
ನಾನೇನು ಇಷ್ಟು ದುಷ್ಟನೇ ಅಮ್ಮ
ನಾನೇನು ಇಷ್ಟು ದುಷ್ಟನೇ
ನನ್ನ ಅಮ್ಮ

ಯಾವಾಗಲು ಅಪ್ಪ ನನ್ನನ್ನು
ಜೋರು ಜೋರಾಗಿ ತೂಗಾಡುವಾಗಮ್ಮ
ನನ್ನ ಕಣ್ಣು ನಿನ್ನನ್ನು ಹುಡುಕುವುದು
ಎನಿಸುವೆ ನೀ ಬಂದು ಹಿಡಿಯುವೆ ಅಮ್ಮ
ಅವರಿಂದ ನಾನಿದು ಹೇಳುವುದಿಲ್ಲ
ಆದರೆ ನಾನು ಭಯಭೀತನಾಗುತ್ತೇನೆ ಅಮ್ಮ
ಮುಖದಲಿ ತೋರಿಸುವುದಿಲ್ಲ
ಮನಸ್ಸಲ್ಲೇ ಹೆದರುತ್ತೇನೆ ನಾನಮ್ಮ
ನಿನಗೆಲ್ಲವೂ ಗೊತ್ತಿದೆ ಅಮ್ಮ 
ಹೌದಲ್ಲ ಅಮ್ಮ
ನಿನಗೆಲ್ಲವೂ ಗೊತ್ತಿದೆ
ನನ್ನ ಅಮ್ಮ

ಮೂಲ : ಪ್ರಸೂನ್ ಜೋಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಶಂಕರ್ ಮಹಾದೇವನ್
ಸಂಗೀತ : ಶಂಕರ್ ಎಹಸಾನ್ ಲಾಯ್
ಚಿತ್ರ: ತಾರೆ ಜಮೇನ್ ಪರ್ 

Main Kabhi Batlata Nahin
Par Andhere Se Darta Hoon Main Maa
Yun To Main, Dikhlata Nahin
Teri Parwaah Karta Hoon Main Maa
Tujhe Sab Hain Pata, Hain Na Maa
Tujhe Sab Hain Pata, Meri Maa

Bheed Mein Yun Na Chodo Mujhe
Ghar Laut Ke Bhi Aa Naa Paoon Maa
Bhej Na Itna Door Mujhko Tu
Yaad Bhi Tujhko Aa Naa Paoon Maa
Kya Itna Bura Hoon Main Maa
Kya Itna Bura Meri Maa

Jab Bhi Kabhi Papa Mujhe
Jo Zor Se Jhoola Jhulate Hain Maa
Meri Nazar Dhoondhe Tujhe
Sochu Yahi Tu Aa Ke Thaamegi Maa
Unse Main Yeh Kehta Nahin
Par Main Seham Jaata Hoon Maa
Chehre Pe Aana Deta Nahin
Dil Hi Dil Mein Ghabraata Hoon Maa
Tujhe Sab Hai Pata Hai Naa Maa
Tujhe Sab Hai Pata Meri Maa


www.youtube.com/watch?v=ixqfPn9GKVE

Saturday, August 25, 2012

ಸಾಕ್ಷರ

ಗೆಳತಿ...
ಕಲಿಸಿದೆ
ನನಗೆ ನೀನು
"ಪ್ರೀತಿ" ಎಂಬ
"ಎರಡಕ್ಷರ"
ಅದರಿಂದ
ನಾನಾದೆ ನಿಜವಾಗಿ
"ಸಾಕ್ಷರ"
by ಹರೀಶ್ ಶೆಟ್ಟಿ, ಶಿರ್ವ

ಅವಳು

ನನ್ನ ಜೀವನದ ಕಥೆ
ಕೇವಲ ಮೂರಕ್ಷರ
"ಅವಳು"
by ಹರೀಶ್ ಶೆಟ್ಟಿ, ಶಿರ್ವ

Friday, August 24, 2012

ನೆನಪ ಹೂವು

ನಗು

Thursday, August 23, 2012

ಎಲ್ಲೊ ದೂರ ದಿನ ಇಳಿದಾಗ


ಎಲ್ಲೊ ದೂರ
ದಿನ ಇಳಿದಾಗ
ಸಂಜೆಯ ಸೌಂದರ್ಯ
ತನ್ನ ಮೈಯ ಅಡಗಿಸಿ
ಮೆಲ್ಲನೆ ಬರುವುದು
ನನ್ನ ಯೋಚನೆಯ ಅಂಗಳದಲಿ
ಯಾರೋ ಬಂದು
ಕನಸಿನ ದೀಪ ಹಚ್ಚಿ ಹೋಗುವರು

ಎಲ್ಲೊ ಹೀಗೆಯೇ
ನನ್ನ ಉಸಿರು ಭಾರವಾದಾಗ
ಕುಳಿತು ಕುಳಿತು ಹೀಗೆಯೇ
ಕಣ್ಣು ತುಂಬಿ ಬಂದಾಗ
ಕೆಲವೊಮ್ಮೆ ಅಲ್ಲಾಡಿಸಿ 
ಪ್ರೀತಿಯಲಿ ಬಂದು
ಸ್ಪರ್ಶಿಸುವಳು ನನ್ನನ್ನು
ಆದರೆ ಮರೆಯಾಗುವಳು
ಮರೆಯಾಗುವಳು ...
ಎಲ್ಲೊ ದೂರ....

ಎಲ್ಲೊ ಒಟ್ಟಾಗುವುದಿಲ್ಲ
ಈ ಹೃದಯ ಮನಸ್ಸು
ಎಲ್ಲೊ ಕೂಡಿ ಬರುವುದು
ಜನುಮದ ಬಂಧನವೂ
ತುಂಬಾ ಗೊಂದಲ
ಶತ್ರು ಈ ನನ್ನ ಮನ
ನನ್ನದೆ ಆಗಿ
ಸಹಿಸುವುದು ಅನ್ಯರ ವೇದನೆಯನ್ನ
ಎಲ್ಲೊ ದೂರ....

ಹೃದಯ ನನ್ನ ಅರಿತಿದೆ
ನನ್ನವೆಲ್ಲ ರಹಸ್ಯವನ್ನ
ಆಯಿತು ಹೇಗೆ
ನನ್ನ ಕನಸು ಕಂಚನ
ಈ ಎಲ್ಲ ಕನಸು
ಇದೇ ಎಲ್ಲ ನನ್ನದು
ಇದರ ನೆರಳು ಸಹ ನನ್ನಿಂದ ಅಗಲದು
ನನ್ನಿಂದ ಅಗಲದು.....
ಎಲ್ಲೊ ದೂರ....

ಮೂಲ : ಗುಲ್ಜಾರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸಲೀಲ್ ಚೌಧರಿ

Kahin Door Jab Din Dhal Jaye
Sanjh Ki Dulhan Badan Churaye, Chupke Se Aaye
Mere Khayalon Ke Aangan Mein
Koi Sapnon Ke Deep Jalaye

Kabhi Yun Hi Jab Hui Bojhal Saansen
Bhar Aai Baithe Baithe Jab Yoon Hi Aankhen
Kabhi Machal Ke Pyaar Se Chal Ke
Chhuye Koi Mujhe Par Nazar Na Aaye
Nazar na aaye..
Kahin Door..

Kahin To Yeh Dil Kabhi Mil Nahin Paate
Kahin Pe Nikal Aaye Janmon Ke Naate
Ghani Thi Uljhan Bairi Apna Man
Apna Hi Hoke Sahe Dard Paraye
Kahin Door...

Dil Jaane Mere Saare Bhed Ye Gehre
Ho gaye Kaise Mere Sapne Sunehre
Yeh Mere Sapne Yehi To Hain Apne
Mujhse Juda Na Hoge Inke Yeh Saaye
Kahin Door..
www.youtube.com/watch?v=BmYT79bYIQw

Wednesday, August 22, 2012

ಅದೇಕೋ

ಅದೇಕೋ
ಆಗುತ್ತದೆ ಈ ಜೀವನದಲಿ
ಇದ್ದಕ್ಕಿದ್ದಂತೆ ಈ ಮನಸ್ಸು
ಯಾರೋ ಹೋದ ನಂತರ
ನೆನಪಿಸಿಕೊಳ್ಳುತ್ತಾರೆ ಅವರ
ಸಣ್ಣ ಸಣ್ಣ ಮಾತುಗಳ
ಅದೇಕೋ...

ಆ ಅಜ್ಞಾತ ಕ್ಷಣ
ಕಳೆದ ಆ ದಿನ
ಇಂದು ಅದು
ಬದಲಾಯಿಸಿ ಬಣ್ಣ
ಮನಸ್ಸಿನ ಕಣ ಕಣ
ಉಳಿಯಲಿಲ್ಲ ಸುಳ್ಳು
ಅದೇಕೋ ಆ ಅಜ್ಞಾತ ಕ್ಷಣ
ನೀನಿಲ್ಲದೆ ನನ್ನ ಕಣ್ಣಲ್ಲಿ
ಸುಳಿಯುತ್ತದೆ ಕನಸಿನ ಅಲೆಗಳು
ಅದೇಕೋ ...

ಅದೇ ಹಾದಿ
ಅದೇ ಆ ಪ್ರವಾಸ
ಇಲ್ಲ ನನ್ನೊಟ್ಟಿಗೆ ಈಗ
ನನ್ನ ಸಹಪ್ರವಾಸಿ
ಹುಡುಕುತ್ತಿದೆ ನಯನಗಳು
ಅದೇಕೋ ಅದೇ ಹಾದಿಗಳ
ಎಲ್ಲಿ ಹೋಯಿತು ಆ ಸಂಜೆ
ಮದ ಭರಿತ ಆ ನನ್ನ
ಆ ದಿನ ಹೋಯಿತು ನನ್ನ ಎಲ್ಲಿಗೆ
ಅದೇಕೋ ...

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಸಲೀಲ್ ಚೌಧರಿ

na Jaane Kyuun,
Hotaa Hai Ye Zindagi Ke Saath
Achaanak Ye Man
Kisi Ke Jaane Ke Baad,
Kare Phir Usaki Yaad
Chhoti Chhoti Si Baat,
na Jaane Kyuun

Vo Anjaan Pal
Dhal Gaye Kal, Aaj Vo
Rang Badal Badal,
Man Ko Machal Machal
Rahen, na Chal na Jaane Kyuun, Vo Anjaan Pal
Tere Binaa Mere nainon Me
Tuute Re Haay Re Sapanon Ke Mahal
na Jaane Kyuun, Hotaa Hai Ye Zindagi Ke Saath

Vahi Hai Dagar
Vahi Hai Safar, Hai nahin
Saath Mere Magar,
Ab Meraa Hamasafar
Dhuundhe nazar na Jaane Kyuun, Vahi Hai Dagar
Kahaan Gain Shaamen Madabhari
Vo Mere, Mere Vo Din Gaye Kidhar
na Jaane Kyuun, Hotaa Hai Ye Zindagi Ke Saath


www.youtube.com/watch?v=NC1yM-9Jwrk

ಶ್ರೀ.ನಟರಾಜು ಎಸ್.ಎಂ ರವರು ನನ್ನ ಬಗ್ಗೆ ಬರೆದ ಲೇಖನ

ಶ್ರೀ.ನಟರಾಜು ಎಸ್.ಎಂ ರವರು ನನ್ನ ಬಗ್ಗೆ ಬರೆದ ಲೇಖನ .


ಓದಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ.




http://smnattu.blogspot.com/2012/08/blog-post_10.html

ಜುಲೈ ೧೬,೨೦೧೨ ರಂದು "ಗಲ್ಫ್ ಕನ್ನಡಿಗ"ದಲ್ಲಿ ಪ್ರಕಟವಾದ ನನ್ನ ಅನುವಾದಿತ "ಕಬೀರ ದೋಹ" .

ಜುಲೈ ೧೬,೨೦೧೨   ರಂದು "ಗಲ್ಫ್ ಕನ್ನಡಿಗ"ದಲ್ಲಿ  ಪ್ರಕಟವಾದ ನನ್ನ ಅನುವಾದಿತ  "ಕಬೀರ ದೋಹ" .

ಓದಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ.





http://www.gulfkannadiga.com/news-69493.html

ಜೂನ್ ೨೪,೨೦೧೧ ರಂದು "ನಿಲುಮೆ"ಯಲ್ಲಿ ಪ್ರಕಟವಾದ ನನ್ನ ಕಥೆ "ಸರದಾರ್ ಅಂಕಲ್"

ಜೂನ್ ೨೪,೨೦೧೧  ರಂದು "ನಿಲುಮೆ"ಯಲ್ಲಿ  ಪ್ರಥಮವಾಗಿ ಪ್ರಕಟವಾದ ನನ್ನ ಕಥೆ

"ಸರದಾರ್ ಅಂಕಲ್"

ಓದಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ






http://nilume.net/2011/06/24/%E0%B2%B8%E0%B2%B0%E0%B2%A6%E0%B2%BE%E0%B2%B0%E0%B3%8D-%E0%B2%85%E0%B2%82%E0%B2%95%E0%B2%B2%E0%B3%8D/

"ನಿಲುಮೆ"ಯಲ್ಲಿ ಪ್ರಥಮವಾಗಿ ಪ್ರಕಟವಾದ ನನ್ನ ಕಥೆ "ಪಕ್ಯ"

"ನಿಲುಮೆ"ಯಲ್ಲಿ  ಪ್ರಥಮವಾಗಿ ಪ್ರಕಟವಾದ ನನ್ನ ಕಥೆ "ಪಕ್ಯ" . 
ಓದಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ.



http://nilume.net/2011/06/15/%E0%B2%AA%E0%B2%95%E0%B3%8D%E0%B2%AF/

Tuesday, August 21, 2012

ವಿರಹ ಗೀತೆ

ಗೆಳತಿ
ವಿರಹ ಗೀತೆ
ಹಾಡಿ ಹಾಡಿ
ಈಗ
ನನ್ನ ಕಂಠ ಹಾಗು ಕಣ್ಣಿಗೆ
ಬರ
by ಹರೀಶ್ ಶೆಟ್ಟಿ, ಶಿರ್ವ

ನಿನ್ನ ವಿನಃ

ಗೆಳತಿ
ನಿನ್ನ ವಿನಃ
ಒಂದು ಹನಿ ನೀರಿಗಾಗಿ
ಹಂಬಲಿಸುವ
ಈ ಒಣಗಿದ ಧರೆಯಂತೆ
ನನ್ನ ಅವಸ್ಥೆ
by ಹರೀಶ್ ಶೆಟ್ಟಿ, ಶಿರ್ವ

ದೀಪ ಬೆಳಗುತ್ತದೆ

ದೀಪ ಬೆಳಗುತ್ತದೆ
ಹೂವು ಅರಳುತ್ತದೆ
ತುಂಬಾ ಕಷ್ಟದಿಂದ ಆದರೆ
ಜಗದಲ್ಲಿ ಗೆಳೆಯನೆಂಬ ಉಡುಗೊರೆ ಸಿಗುತ್ತದೆ
ದೀಪ ಬೆಳಗುತ್ತದೆ.....

ಯಾರದ್ದೋ ಗೆಳೆಯ ಅವನಿಂದ 
ಅಗಲಿ ಹೋದರೆ ಎಂದೂ
ಏನೂ ಕೇಳ ಬೇಡಿ ಗೆಳೆಯರೆ
ಹೃದಯದ ಅವಸ್ಥೆ
ಹಾಳಾಗುತ್ತದೆ ಅವನದ್ದು
ಹೃದಯದಲ್ಲಿ ನೆನಪ ಬಾಣ ಹೊಡೆದಂತಾಗುತ್ತದೆ 
ದೀಪ ಬೆಳಗುತ್ತದೆ.....

ಈ ಸೌಂದರ್ಯ ರೂಪದ
ಎಂದೂ ಹೆಮ್ಮೆ ಪಡಬೇಡ
ಜೀವವೂ ಕೇಳಿದರೆ ಗೆಳೆಯನಿಗೆ ನೀಡು
ಬೇಡ ಬೇಡ ಅವನನ್ನ ಮುನಿಸ ಬೇಡ
ಸೌಂದರ್ಯ ಇರದೂ ನಾಳೆ
ರೂಪ ಎಲ್ಲಿ ಶಾಶ್ವತವಾಗಿರುತ್ತದೆ
ದೀಪ ಬೆಳಗುತ್ತದೆ.....

ಸಂಪತ್ತು ಹಾಗು ಯೌವನ
ಒಂದು ದಿನ ಮರೆಯಾಗುತ್ತದೆ
ಸತ್ಯ ಹೇಳುತ್ತೇನೆ ಗೆಳೆಯರೆ
ವೈರಿ ಎಲ್ಲ ಪ್ರಪಂಚ ಆಗುತ್ತದೆ
ಜೀವನ ಪರ್ಯಂತ ಆದರೆ
ಗೆಳೆಯನ ಜೊತೆ ನಮ್ಮಲ್ಲಿರುತ್ತದೆ
ದೀಪ ಬೆಳಗುತ್ತದೆ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್.ಡಿ.ಬರ್ಮನ್

Diye Jalte Hain Phool Khilte Hain
Badi Mushkil Se Magar Duniya Mein Dost Milte Hain
Diye Jalte Hain

Jab Jis Waqt Kisika Yaar Judaa Hota Hai
Kuch Na Poochho Yaaron Dil Ka
Haal Bura Hota Hai
Dil Pe Yaadon Ke Jaise Teer Chalte Hain
Ahaha
Diye Jalte Hain

Iss Rang Roop Pe Dekho Hargiz Naaz Na Karna
Jaan Bhi Maange Yaar To De Dena
Naaraaz Na Karna
Rang Ud Jaate Hain Roop Dhalte Hain
Ahaha
Diye Jalte Hain

Daulat Aur Jawaani Ek Din Kho Jaati Hain
Sach Kehta Hoon Saari duniya dushman ho jaati Hai
Umr Bhar Dost Lekin Saath Chalte HainAhaha
Diye Jalte Hain
www.youtube.com/watch?v=4L0sSCpsap4

Sunday, August 19, 2012

ಇನಿಯ ಇನಿಯ

ಯೇಸುದಾಸ್ :
ಇನಿಯ ಇನಿಯ ಬಾರೋ ಸನಿಹ
ಕಣ್ಣೆರಡು ನಿನ್ನ ಕದ್ದೋಯಿತು
ನೋಡು ನನ್ನ ಮನವ
ಇನಿಯ ಇನಿಯ ಇನಿಯ

ಆಶಾ ಭೋಸಲೆ :
ನನ್ನ ಎರಡು ಕಂಗಳು
ಕಳ್ಳ ಅಲ್ಲ ಪ್ರಿಯತಮ
ನಿನ್ನಿಂದಲೆ ಕಳೆದು ಹೋಗಿರಬೇಕು
ನೋಡು ನಿನ್ನ ಮನವ -೨
ಇನಿಯ ಇನಿಯ ಇನಿಯ 

ಯೇಸುದಾಸ್ :
ಅಳಿಸು ಹೃದಯದ ಈ ದೂರ
ಮನಸ್ಸಲಿ ಯಾಕಿದೆ ಈ ಭಾರ
ಹೃದಯ ಹೃದಯ ಒಂದಾಗಲಿ

ಆಶಾ ಭೋಸಲೆ :
ಈಗ ತಾನೇ ಆಗಿದೆ ಈ ಗೆಳೆತನ
ಈಗಿಂದಲೇ ಅವಸರತನ
ಸ್ವಲ್ಪ ಕಳೆದೋಗಲಿ ಇನ್ನೂ ಸ್ವಲ್ಪ ದಿನ  -೨

ಯೇಸುದಾಸ್:
ಇದು ಕೇಳಿ ಹೇಳಿ
ಕಳೆದೋಯಿತು ಎಷ್ಟೋ ಶ್ರಾವಣ
ಇನಿಯ ಇನಿಯ.....

ಆಶಾ ಭೋಸಲೆ :
ಜೊತೆ ಜೊತೆ ನೀನು ಬರುವೆ
ಹಿಂದೆ ಹಿಂದೆ ನನ್ನ ತಿರುಗುವೆ
ನಿನ್ನ  ಉದ್ದೇಶ ನನಗೆ ಗೊತ್ತು

ಯೇಸುದಾಸ್ :
ದೋಷ ಇದು ನಿನ್ನದು  
ದಿನ ನಿತ್ಯ ನನಗೆ ನೀನು   
ನೀಡುವೆ ಯಾಕೆ ಸುಳ್ಳು ಭರವಸೆ-೨

ಆಶಾ ಭೋಸಲೆ :
ನಿನಗೆ ಗೊತ್ತಿಲ್ಲ... ಹುಚ್ಚಪ್ಪ
ಹೇಗೆ ತೋರಿಸಲಿ ನಿನಗೆ 
ನನ್ನ ಹೃದಯದ ಭಾವಗಳನ್ನು
ಇನಿಯ ಇನಿಯ.....

ಯೇಸುದಾಸ್ :
ಛೇಡಿಸುವುದಿಲ್ಲ ಇನ್ನು ನಿನಗೆ
ಸ್ವಲ್ಪ ಹೇಳು ನೀನು ನನಗೆ
ಯಾವಾಗ ತನಕ ನನಗಿಡುವೆ ಚದಪಡಿಕೆಯಲಿ

ಆಶಾ ಭೋಸಲೆ :
ಹೀಗೆ ನೀನು ಹೆದರಬೇಡ
ಯಾವಗಲೋಮ್ಮೆ ಎಲ್ಲಾದರು
ಈ ಮೋಡಗಳು ಮಳೆ ಸುರಿಸಲಿದೆ -೨

ಯೇಸುದಾಸ್ :
ಏನು ಮಾಡುವೆ ಮಳೆ ಸುರಿಸಿ
ಬಾಡುವುದು ಅವಾಗ
ಈ ಎಲ್ಲ ಮನಸ್ಸ ಹೂವುಗಳು
ಇನಿಯ ಇನಿಯ .......

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್, ಆಶಾ ಭೋಸಲೆ
ಸಂಗೀತ : ಸಲೀಲ್ ಚೌಧರಿ

(Jaaneman jaaneman tere do nayan
Chori chori leke gaye dekho mera man
Jaaneman jaaneman jaaneman
Mere do nayan, chor nahi sajan
Tumse hi khoya hoga kahi tumhaara man
Jaaneman jaaneman jaaneman) -2

(Tod de dilo ki doori, aisi kya hai majboori
Dil dil se milne de
Jaa, abhi to huwi hai yaari, abhi se hi beqaraari
Din to zara dhhalne de) -2
Yahi sunte, samajhte, guzar gaye jaane kitne hi saawan
Jaaneman jaaneman...
Mere do nayan…

(Sang sang chale mere, maare aage peechhe phere
Samjhu main tere iraade
Doshh tera hai ye to, har din jab dekho
Karti ho jhoothhe waade) -2
Tu na jaane, diwaane, dikhaau tujhe kaise main ye dil ki lagan
Jaaneman jaaneman ...
La la ..., Mere do nayan…

(Chhedenge kabhi na tumhe, zara batlaado hame,
Kab tak ham tarsenge
Aise ghabhraao nahi, kabhi to kahi na kahi
Baadal ye barsenge) -2
Kya karenge baraske, ke jab murjhaayega ye saara chaman
Jaaneman jaaneman...
La la ..., Mere do nayan...
www.youtube.com/watch?v=ats8Y1yzgPI

Saturday, August 18, 2012

ಸುಗಂಧರಾಜ ಹೂವು ನಿನ್ನ


ಸುಗಂಧರಾಜ ಹೂವು ನಿನ್ನ
ಪರಿಮಳಿಸುತ್ತಿದೆ ನನ್ನ ಜೀವನದಲಿ
ಹೀಗೆಯೇ ಪರಿಮಳ ಬೀರುತ್ತಿರಲಿ
ಪ್ರೇಮ ಪ್ರಿಯತಮನ
ನನ್ನ ಅನುರಾಗ ಮನಸ್ಸಲಿ

ಅಧಿಕಾರ ಇದು ಪ್ರಿಯತಮನಯೆಂದು
ಪ್ರತಿ ಹೃದಯ ಮಿಡಿತದಲಿ
ನಂಬಿದ್ದೇನೆ ನಾನು
ಅವನ ಬಂಧದಲಿ ಬಂದ ಕ್ಷಣದಿಂದಲೇ
ಈ ಭೇದ ತಿಳಿದೇ ನಾನು
ಎಷ್ಟು ಸುಖವಿದೆ ಈ ಬಂಧನದಲ್ಲಿ.....
ಸುಗಂಧರಾಜ ಹೂವು ನಿನ್ನ ......

ಪ್ರತಿ ಕ್ಷಣ ನನ್ನ ಈ ಕಣ್ಣಲಿ
ಕೇವಲ ಕನಸು ಅವನದ್ದೆ
ಮನಸ್ಸು ನುಡಿಯುತ್ತದೆ
ನಾನು ಪ್ರೀತಿಯ ಬಣ್ಣ ಮುಗಿಲಾಗಿ
ಸುರಿಯುವೆ ಅವನ ಅಂಗಳದಲಿ
ಸುಗಂಧರಾಜ ಹೂವು ನಿನ್ನ ......

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್
ಸಂಗೀತ : ಸಲೀಲ್ ಚೌಧರಿ
ಚಿತ್ರ : ರಜನಿಗಂಧ

rajanigandha phool tumhare,
mahake yunhi jeevan mein
yunhi mahake preet piya ki
mere anuraagee man mein

adhikaar ye jab se saajan ka
har dhadakan par maanaa maine
main jab se un ke saath bandhi,
ye bhed tabhi jaana maine
kitana sukh hain bandhan mein

har pal mere in aakhon mein
bas rahate hain sapane un ke
man kahata hain main rangon ki,
ek pyaar bhari badali ban ke
barsoo un ke aangan mein


www.youtube.com/watch?v=5qa58miSJ-c

Friday, August 17, 2012

ಸಮಯ

ಅಸೂಯೆ

ಅಸೂಯೆ......
ಶರೀರ ಕಬ್ಬಿಣ
ತುಕ್ಕು ಅಸೂಯೆ
ತುಕ್ಕು ಹಿಡಿದ ಕಬ್ಬಿಣ ನಿಷ್ಫಲ
ಅಸೂಯೆ ತುಂಬಿದ ಶರೀರ ದುರ್ಬಲ
ಶುಭ ರಾತ್ರಿ
by ಹರೀಶ್ ಶೆಟ್ಟಿ, ಶಿರ್ವ

Thursday, August 16, 2012

ಜೀವನ ಎಂಬುದೊಂದು ಒಗಟು


ಜೀವನ ಎಂಬುದೊಂದು ಒಗಟು
ಕೆಲವೊಮ್ಮೆ ನಗುವುದು
ಕೆಲವೊಮ್ಮೆ ಅಳುವುದು -೨

ಕೆಲವೊಮ್ಮೆ ಎಚ್ಚರವಾಗದೆ
ಈ ಮನಸ್ಸು 
ಕನಸಿನ ಹಿಂದೆ ಹಿಂದೆ ಓಡುವುದು-೨ 
ಒಂದು ದಿನ ಕನಸಿನ
ಪಯಣಿಗ
ಹೋಗುತ್ತಿರುವನು ಕನಸಿನ ಮುಂದೆ ಎಲ್ಲಿಗೆ 
ಜೀವನ.....

ಇಲ್ಲಿ ಉತ್ಸವ
ಆಚರಿಸಿಕೊಳ್ಳುವವರು
ಸುಖ ದುಃಖ ಒಟ್ಟಿಗೆ ಕಳೆಯುವರು-೨
ಅವರೇ ಒಂದು ದಿನ
ಮೌನದಿಂದಲೇ
ತೆರಳುವರು ಹೀಗೆಯೇ ಏಕಾಂಗಿ ಎಲ್ಲಿಗೆ
ಜೀವನ.....


ಮೂಲ :ಯೋಗೇಶ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮನ್ನಾ ಡೇ
ಸಂಗೀತ : ಸಲೀಲ್ ಚೌಧರಿ
ಚಿತ್ರ : ಆನಂದ್
Zindagi ...kaisi hai paheli, haaye
Kabhi to hansaaye kabhi ye rulaaye
Zindagi...

Kabhi dekho man nahi jaage
peechhe peechhe sapno ke bhaage
Ek din sapno ka raahi
chalaa jaaye sapno ke aage kahan
Zindagi...

Jinhone sajaaye yaha mele
sukh-dukh sang-sang jhele
Wahi chunkar khaamoshi
yu chali jaaye akele kahan
Zindagi...

www.youtube.com/watch?v=3vgDb4TQneA

ನಿನ್ನ ನೆನಪು

ಗೆಳತಿ
ನನ್ನ ದಿನದ ಆರಂಭ
ನಿನ್ನ ನೆನಪಿನಿಂದ
ನನ್ನ ದಿನದ ಅಂತ್ಯ
ನಿನ್ನ ನೆನಪಿನಿಂದ
ನನ್ನ ಜೀವನದ ಆಧಾರ ನಿನ್ನ ನೆನಪು
ನಿನ್ನ ನೆನಪಿನಿಂದಲೇ ಜೀವಿತ ಈ ಮನಸ್ಸು
by ಹರೀಶ್ ಶೆಟ್ಟಿ, ಶಿರ್ವ

Wednesday, August 15, 2012

ಶುಭ ರಾತ್ರಿ

ಭಾರತದ ದ್ವಜ

ಸ್ವತಂತ್ರ

ಹಾಡು

ಗೆಳತಿ
ಈಗ ನನ್ನ ನೆರೆಯವರಿಗೆ
ನನ್ನಿಂದ ಕಿರಿಕಿರಿ
ಅಂದು
ನೀನು ಇಂಪಾದ ಸ್ವರದಲಿ
ಹಾಡುತ್ತಿದ್ದ ಹಾಡನ್ನು
ಇಂದು
ನಾನು ನನ್ನ ಕರ್ಕಶ
ಸ್ವರದಲ್ಲಿ
ಹಾಡುತ್ತಿದ್ದೇನೆ ಅದಕ್ಕೆ
by ಹರೀಶ್ ಶೆಟ್ಟಿ, ಶಿರ್ವ

Tuesday, August 14, 2012

ಆಕಾಶದ ಮೋಡಗಳೆ

ಹೇ ಆಕಾಶದ ಮೋಡಗಳೆ
ಧರೆಗೆ ನೀರಾಗಿ ಇಳಿದು ಬನ್ನಿ
ಕಣ್ಣು ಮುಚ್ಚಾಲೆಯ ಆಟ ಬೇಡ
ಪೃಥ್ವಿಯ ಹೃದಯ ತಣಿಸಲು ಬನ್ನಿ
ಗಿಡ ಮರಗಳಿಗೆ ಇಲ್ಲ ಉಸಿರು
ನಿಸರ್ಗವನ್ನು ಹಸಿರು ಮಾಡಲು ಬನ್ನಿ
ಬಂಜರು ಭೂಮಿ ರೈತನ ರಕ್ತ ಹೀರುತಿದೆ
ನೀರ ಹನಿ ಬಯಸುತಿದೆ
ಬಂಜರು ಭೂಮಿಗೆ ಜೀವನ ನೀಡಲು ಬನ್ನಿ
by ಹರೀಶ್ ಶೆಟ್ಟಿ, ಶಿರ್ವ

ದೊಡ್ಡ ತುಂಟ ಈ ಕೃಷ್ಣ ನಮ್ಮ

ದೊಡ್ಡ ತುಂಟ ಈ ಕೃಷ್ಣ ನಮ್ಮ
ಏನು ಮಾಡಲಿ ಯಶೋಧೆ ಅಮ್ಮ
ಓಹ್....
ದೊಡ್ಡ ತುಂಟ ಈ ಕೃಷ್ಣ ನಮ್ಮ
ಏನು ಮಾಡಲಿ ಯಶೋಧೆ ಅಮ್ಮ

ಹುಡುಕುತ್ತಿದೆ ಕಣ್ಣ
ನಾಲ್ಕು ದಿಶೆಯಲಿ
ಹೋಗಿ ಎಲ್ಲಿ ಅಡಗಿದ್ದಾನೆ
ಮೋಹನ ಮುರಳಿ

ಮರೆಯಾದೆ ಹೀಗೆ
ಮೂಡಲ ಹೊಳಪಿನ ಹಾಗೆ
ಏನು ಮಾಡಲಿ ಯಶೋಧೆ ಅಮ್ಮ
ಅಮ್ಮಯ್ಯ ....ಓ
ಏನು ಮಾಡಲಿ ಯಶೋಧೆ ಅಮ್ಮ
ದೊಡ್ಡ ತುಂಟ ಈ ಕೃಷ್ಣ ನಮ್ಮ...

ನನ್ನ ಜೀವನದ
ನೀನೊಂದು ಕನಸು
ಯಾರು ನಿನ್ನನ್ನು ನೋಡುವರೋ
ಸೋತರು ಮನಸ್ಸು
ಎಲ್ಲರ ಪ್ರೀತಿಯ
ಓ......ಎಲ್ಲರ ಪ್ರೀತಿಯ
ಗೋಪಾಲ ಕೃಷ್ಣ ನಮ್ಮ
ಏನು ಮಾಡಲಿ ಯಶೋಧೆ ಅಮ್ಮ
ಅಮ್ಮಯ್ಯ ....ಓಹ್
ಏನು ಮಾಡಲಿ ಯಶೋಧೆ ಅಮ್ಮ
ದೊಡ್ಡ ತುಂಟ ಈ ಕೃಷ್ಣ ನಮ್ಮ...

ಮೂಲ : ಆನಂದ್ ಬಕ್ಷಿ
ಅನುವಾದ :by ಹರೀಶ್ ಶೆಟ್ಟಿ. ಶಿರ್ವ
ಸಂಗೀತ : ಆರ್ .ಡಿ.ಬರ್ಮನ್
ಹಾಡಿದವರು : ಲತಾ ಮಂಗೇಶ್ಕರ್

bada natkhat hai re
krishan kanhaiya
kaa kare yashoda maiya
haan..

bada natkhat hai re
krishan kanhaiya
kaa kare yashoda maiya
ho..
bada natkhat hai re

dhoondhe ri ankhiyaan
use chahun ore
jaane kahaan chhup gaya
nandkishore

dhoondhe ri ankhiyaan
use chahun ore
jaane kahaan chhup gaya
nandkishore

ud gaya aise jaise purvaiya
kaa kare yashoda maiya
maiya re haan..
haan kaa kare yashoda maiya
ho bada natkhat hai re..

mere jeevan ka
tu ek hi sapna
jo koi dekhe tohe
samjhe wo apna

mere jeevan ka
tu ek hi sapna
jo koi dekhe tohe
samjhe wo apna

sab ka hai pyara
ho sab ka hai pyara
bansi bajaiya
kaa kare yashoda maiya
maiya re..
haan..

haan bada natkhat hai re
krishan kanhaiya
kaa kare yashoda maiya
ho bada natkhat hai re
http://www.metacafe.com/watch/3178018/bada_natkhat_hai_re_kishan_kanhaiya_amar_prem_1971/


Monday, August 13, 2012

ಬಂಡೆ

"ಪ್ರೀತಿ"

ತೊಂದರೆ

ಅಸಾಧಾರಣ ಪ್ರೀತಿ

ನಿನ್ನೆ ಅವಳು
ನನ್ನ ಕನಸಲಿ ಬಂದಿದ್ದಳು
ಅವಳ ಮುಖದಲಿ
ಮೊದಲಿನ ಆ ತೇಜಸ್ಸು ಕಾಣಲಿಲ್ಲ
ತುಂಬಾ ದುಃಖದಲ್ಲಿ ಇದ್ದಂತೆ ಕಂಡಳು !

ನನ್ನನ್ನೆ ನೋಡುತ ನಿಂತಿದ್ದಳು
ಕಣ್ಣಿಂದ ಅಶ್ರು ಧಾರೆ ಸುರಿದು
ಅವಳ ಕಪಾಳದಲ್ಲಿ ಹರಿಯುತ್ತಿತ್ತು
ಹೃದಯದಲ್ಲಿ ಏನೋ ವೇದನೆ
ಇದ್ದಂತೆ ಬಾಸವಾಯಿತು !

ನಾನು ಮೌನವಾಗಿದ್ದೆ
ಅವಳಲ್ಲಿ ನೀನೇಕೆ ಹೀಗೆ ಎಂದು
ಕೇಳಲು ನನಗೆ ಧೈರ್ಯ ಆಗಲಿಲ್ಲ
ನನಗೆ ಗೊತ್ತಿತ್ತು ನನ್ನ ಈ ದೀನ ಅವಸ್ಥೆ ಕಂಡು
ಅವಳಿಗೆ ದುಃಖ ಉಕ್ಕಿ ಬಂದಿತೆಂದು !

ಮೆಲ್ಲನೆ ಹೇಳಿದೆ
ಬೇಸರಿಸ ಬೇಡ
ನಾನು ನನ್ನನ್ನು ಸಾವರಿಸುವೆ
ಅವಳು ಉತ್ತರಿಸಲಿಲ್ಲ
ನನ್ನನ್ನೆ ನೋಡುತ್ತಿದ್ದಳು !

ಕಡೆಗೆ ಕೇವಲ
ಎರಡೆ ಶಬ್ದ ನುಡಿದು
ನಡೆದಳು
ನೀನು ದುಃಖದಲ್ಲಿದ್ದರೆ
ನಾನು ಸುಖದಲ್ಲಿ ಇರಲಾರೆ ಎಂದು !
by ಹರೀಶ್ ಶೆಟ್ಟಿ, ಶಿರ್ವ

Tuesday, August 7, 2012

ಲೋಭ

ಮನುಜ...
ಲೋಭ
ಸರ್ವ ನಾಶಕ
ಸ್ವಾರ್ಥ ಘಾತಕ
ಪಾಪದ ಕಾರಕ
ಹಿಂಸೆ, ಸುಳ್ಳು, ವ್ಯಭಿಚಾರ, ಸಂಚು, ಕೋಪ, ದ್ವೇಷ ಇದರ ಉತ್ಪಾದಕ
ಲೋಭಿ ವ್ಯಕ್ತಿಯ ಹತ್ತಿರ ಇರುವುದಿಲ್ಲ ಸದ್ಗುಣದ ಅಸ್ತಿತ್ವ
ಲೋಭ ಸಮಸ್ತ ಸದ್ಗುಣಗಳ ಹಂತಕ
ಲೋಭ ಮಾಡದಿರು, ಇದರಿಂದ ದೂರವಿರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಶವ

ಮುಚ್ಚಿದ ಕೋಣೆ
ಒಳಗಿಂದ ಗಬ್ಬು ವಾಸನೆ
ದೊಡ್ಡ ಬೀಗ ದ್ವಾರದಲಿ

ಕಾರಣ ಅರಿವಿಲ್ಲ
ಯಾರಿಗೂ ಗೋಚರವಿಲ್ಲ
ಎಲ್ಲರೂ ಮಗ್ನ ತನ್ನದೇ ಲೋಕದಲಿ

ರಾತ್ರಿಯ ಸಮಯ
ಕಳ್ಳನ ಗಮನ ಆ ಮನೆಯಲಿ

ಕದಿಯುವ ವಿಚಾರ ಅವನಲಿ

ಒಡೆದ ಬೀಗ
ಒಳಗೆ ಒಂದು ಕೊಳೆತ ಹೆಣ್ಣು ಶರೀರ
ಮೈ ತುಂಬಾ ಒಡವೆಗಳು

ಬಂತು ವಾಕರಿಕೆ ಕಳ್ಳನಿಗೆ
ಭಯದಿಂದ ಕಾಲು ನಡುಗಿತು
ಅಲ್ಲೇ ಕುಸಿದು ಬಿದ್ದ

ಬಂದಿದ ಕದಿಯಲು
ಸಂಪತ್ತಿಗೆ ಇರಲಿಲ್ಲ ಯಾವುದೇ ಕಾವಲು
ಆದರೂ ಧೈರ್ಯ ಬರಲಿಲ್ಲ ಕದಿಯಲು
by ಹರೀಶ್ ಶೆಟ್ಟಿ, ಶಿರ್ವ

ಭಾವ

ಗೆಳತಿ...
ನಾನು ಬರೆದ
ಕವಿತೆಗಳಲ್ಲಿ ಭಾವ ಇಲ್ಲವಂತೆ
ಹೇಗೆ ಇರುವುದು
ಅದರಲ್ಲಿ ಯಾವುದೇ
ಭಾವನೆ ಇಲ್ಲದೆ
ನನ್ನನ್ನು ಬಿಟ್ಟು ಹೋದ ನೀನಿದ್ದೆ
by ಹರೀಶ್ ಶೆಟ್ಟಿ , ಶಿರ್ವ

Monday, August 6, 2012

ದುಃಖ

ಮನುಜ...
ದುಃಖ ನೀನು ಮಾಡಿದ ತಪ್ಪಿನ ಪರಿಣಾಮ
ಇದನ್ನು ಪ್ರತಿ ಮನುಷ್ಯನಿಗೆ ಸಹಿಸ ಬೇಕಾಗುತ್ತದೆ
ನಿನ್ನ ದುಃಖ ಬೇರೆ ಯಾರು ಹಂಚಲಾರರು
ನಿನ್ನ ಆಪ್ತ ಮಿತ್ರನಾಗಲಿ ,ಸಂಭಂದಿಕರಾಗಲಿ, ಕುಟುಂಬಿಯರಾಗಲಿ
ಇವರೆಲ್ಲ ನಿನಗೆ ಸಾಂತ್ವನೆ ಕೊಡಬಲ್ಲರು
ಸಹಾಯ ಮಾಡಬಲ್ಲರು
ಆದರೆ ನಿನ್ನ ದುಃಖ ಕಸಿದು ಕೊಳ್ಳಲಾರರು
ನಿನ್ನ ದುಃಖ ಕೇವಲ ನಿನ್ನದೇ
ನಿನ್ನ ದುಃಖದ ನೀನೆ ವಾರಸುದಾರ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸ್ನೇಹ

ಚಾರಿತ್ರ್ಯ

Thursday, August 2, 2012

ದಾರಿ ದೀಪ

ಮನುಜ...
ದೀಪದ ಗುಣ ನೋಡು
ಸ್ವತಃ ಉರಿದು ಅನ್ಯರಿಗೆ ಬೆಳಕು ನೀಡುತ್ತದೆ 
ನಿನ್ನ ಜೀವನವೂ ಹೀಗೆಯೇ ಇರಲಿ
ಸನ್ಮಾರ್ಗದ ಹಾದಿ ನಿನ್ನದಾಗಲಿ
ನಿನ್ನ ಜೀವನ ಅನ್ಯರ ಬದುಕಿನ ದಾರಿ ದೀಪ ಆಗಲಿ
ಅನ್ಯರ ಕಷ್ಟವನ್ನು ತನ್ನದೆಂದು ತಿಳಿದು
ಅದರಲ್ಲಿ ನೀನು ಬೆಂದು
ನಿನ್ನ ಜೀವನ ಕಂಚನವಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಗುಲಾಬಿ ಹೂ

ಗೆಳತಿ...
ನೀನು ಕೊಟ್ಟ ಗುಲಾಬಿ ಹೂ
ಇಂದು ಒಣಗಿದೆ
ಆದರೆ ಅದರಲ್ಲಿ ನಿನ್ನ
ನೆನಪ ಪರಿಮಳ ಇಂದೂ
ಘಮ ಘಮಿಸುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

ವಾಣಿ

ಗೆಲುವು

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...