Wednesday, September 12, 2012

ಮೇಘ ಹಬ್ಬಿದೆ ಮಧ್ಯ ರಾತ್ರಿಯಲಿ

ಮೇಘ ಹಬ್ಬಿದೆ ಮಧ್ಯ ರಾತ್ರಿಯಲಿ
ನಿದ್ರೆ ಆಗಿದೆ ವೈರಿ-2
ಹೇಳು ನಾನೇನು ಮಾಡಲಿ
ಮೇಘ ಹಬ್ಬಿದೆ......

ಎಲ್ಲರ ಅಂಗಳದಲಿ 
ದೀಪ ಉರಿಯುತ್ತಿದೆ
ನನ್ನ ಅಂಗಳದಲ್ಲಿ ಹೃದಯ
ಗಾಳಿಯ ತಾಪ ಕಂಟಕದಂತೆ
ಕೆಣಕುತಿದೆ ಈ ಸೆರಗು ಸೀರೆಯ-2
ಬಂದಿದೆ ಕಣ್ಣೀರ ಮೆರವಣಿಗೆ
ನಿದ್ರೆ ಆಗಿದೆ ವೈರಿ
ಹೇಳು ನಾನೇನು ಮಾಡಲಿ
ಮೇಘ ಹಬ್ಬಿದೆ......

ಮುನಿಸಿದೆ ಕನಸುಗಳೆಲ್ಲ
ಮುರಿದಿದೆ ಎಲ್ಲ ಆಸೆ ಮೋಹ
ನಯನದಿಂದ ಗಂಗೆ ಹರಿಯುತ್ತಿದೆ
ಆದರೂ ಮನಸ್ಸಲಿ ದಾಹ-2
ಯಾರಿಗೆ ಹೇಳಲಿ ಮನಸ್ಸ ಮಾತನ್ನು
ನಿದ್ರೆ ಆಗಿದೆ ವೈರಿ
ಹೇಳು ನಾನೇನು ಮಾಡಲಿ
ಮೇಘ ಹಬ್ಬಿದೆ...

ಮೂಲ : ನೀರಜ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಸಂಗೀತ : ಎಸ್ .ಡಿ. ಬರ್ಮನ್
ಚಿತ್ರ : ಶರ್ಮಿಲಿ

(Meghaa Chhaye Aadhee Raat
Bairan Ban Gayee Nindeeyaa )-2
Bataa De Main Kyaa Karu
Meghaa Chhaye....

(Sab Ke Aangan Diyaa Jale Re,
More Aangan Jiyaa
Hawaa Laage Shool Jaisee,
Taanaa Maare Chunareeyaan)-2
Aayee Hain Aansoo Kee Baaraat
Bairan Ban Gayee Nindeeyaa
Bataa De Main Kyaa Karu
Meghaa Chhaye....

(Ruthh Gaye Re Sapane Saare,
Toot Gayee Re Aashaa
Nain Bahe Re Gangaa More,
Fir Bhee Man Hain Pyaasaa)-2
Kise Kahoo Re Man Kee Baat
Bairan Ban Gayee Nindeeyaa
Bataa De Main Kyaa Karu
Meghaa Chhaye....

www.youtube.com/watch?v=2aQDjbwc-v8

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...