ನಾನೊಂದು ಬಾಡಿದ ಹೂ
ಹುಟ್ಟಿದ ದಿನದಿಂದಲೇ
"ಮಗು ಹುಡುಗಿ"
ಎಂದು ನೀಡಿದ ಶಾಪ
ಎಲ್ಲರ ನಿರ್ಲಕ್ಷ
ಅಪಾದನೆ ಲಕ್ಷ
ನನ್ನ ಕೋಮಲ ಮನಸ್ಸು
ನುಚ್ಚು ನೂರು
ಬಾಲ್ಯ ಪ್ರತಿಬಂಧಕ
ಇಲ್ಲ ಯಾರೂ ಸಖ
ಆಡುವ ವಯಸ್ಸಲ್ಲಿ
ಕೆಲಸದ ಭಾರ
ಹೆಜ್ಜೆ ಹೆಜ್ಜೆಯಲಿ ಪರೀಕ್ಷೆ
ಸ್ವತಃ ಪಾಲಕರ ಶಿಕ್ಷೆ
ಮಗನಿಗೆ ರಾಜೋಪಚಾರ
ನನಗೆ ಊಟ ಅಂದರೆ ಭಿಕ್ಷೆ
ಯೌವನ ಮುಳ್ಳ ಕಟ್ಟು
ಸುಂದರತೆ ಅಪತ್ತು
ಬದುಕಲು ದಿನನಿತ್ಯ
ಹೊಡತೆಗಳ ಆಹಾರ
ಕನಸು ಕಾಣಲು ಭಯ
ನನ್ನ ನಗುವಿನಲೂ ಸಂಶಯ
ಮನೆಯಿಂದ ಹೊರ ದೂಡಲು
ಮಾಡುವರು ಉಪಾಯ
ನಾನೊಂದು ಬಾಡಿದ ಹೂ
ಹುಟ್ಟಿದ ದಿನದಿಂದಲೇ
"ಮಗು ಹುಡುಗಿ"
ಎಂದು ನೀಡಿದ ಶಾಪ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment