ಈ ಜಗದಲ್ಲಿ ನಾನೊಬ್ಬನೇ
ಯಾರಿಲ್ಲ ನನ್ನ
ಸಾಗುತ್ತಿದೆ ಜೀವನ ಏಕಾಂಗಿ!
ಸಿಗುವವರು ನನ್ನವರಲ್ಲ
ಅವರು ನಕ್ಕಾಗ ನಗುವೆ
ಅವರು ಅಳುವಾಗ ಅಳುವೆ !
ತಾಯಿ ಎಂದು ಕರೆಯುವೆ ಹಲವರನ್ನು
ಆದರೆ ಅವರಲ್ಲಿ ಅಮ್ಮ ಕಂಡಿಲ್ಲ
ಮೌನದಿ ಮಲಗಲು ಮಮತೆಯ ಮಡಿಲಿಲ್ಲ !
ಐಶ್ವರ್ಯ ಸಂಪತ್ತು ಪಡೆಯುವ ಬಯಕೆ ಇಲ್ಲ
ಪರಿವಾರ ಬೇಕೆಂಬ ಆಸೆ ಈ ಮನಸ್ಸಲ್ಲಿ
ಆದರೆ ನನ್ನ ಭಾಗ್ಯದಲ್ಲಿ ಈ ಸುಖವಿಲ್ಲ !
ಮನೆ ಎಂಬ ಆಶ್ರಯ ಇಲ್ಲ
ಶ್ರಮ ಪಟ್ಟು ಜೀವನ ಸಾಗಿಸುವೆ
ಆದರೆ ಈ ಜೀವನಕ್ಕೆ ಅರ್ಥವಿಲ್ಲ !
ಏಕಾಂತದಲ್ಲಿ ಕಣ್ಣೀರು ಹರಿಸುವೆ
ಆದರೆ ಈ ಕಣ್ಣೀರಿಗೆ ಕೊನೆ ಇಲ್ಲ
ಅನಾಥ ಬಾಳಿಗಿಂತ ದೊಡ್ಡ ಯಾವುದೇ ಶಿಕ್ಷೆ ಇಲ್ಲ !
by ಹರೀಶ್ ಶೆಟ್ಟಿ, ಶಿರ್ವ
ಯಾರಿಲ್ಲ ನನ್ನ
ಸಾಗುತ್ತಿದೆ ಜೀವನ ಏಕಾಂಗಿ!
ಸಿಗುವವರು ನನ್ನವರಲ್ಲ
ಅವರು ನಕ್ಕಾಗ ನಗುವೆ
ಅವರು ಅಳುವಾಗ ಅಳುವೆ !
ತಾಯಿ ಎಂದು ಕರೆಯುವೆ ಹಲವರನ್ನು
ಆದರೆ ಅವರಲ್ಲಿ ಅಮ್ಮ ಕಂಡಿಲ್ಲ
ಮೌನದಿ ಮಲಗಲು ಮಮತೆಯ ಮಡಿಲಿಲ್ಲ !
ಐಶ್ವರ್ಯ ಸಂಪತ್ತು ಪಡೆಯುವ ಬಯಕೆ ಇಲ್ಲ
ಪರಿವಾರ ಬೇಕೆಂಬ ಆಸೆ ಈ ಮನಸ್ಸಲ್ಲಿ
ಆದರೆ ನನ್ನ ಭಾಗ್ಯದಲ್ಲಿ ಈ ಸುಖವಿಲ್ಲ !
ಮನೆ ಎಂಬ ಆಶ್ರಯ ಇಲ್ಲ
ಶ್ರಮ ಪಟ್ಟು ಜೀವನ ಸಾಗಿಸುವೆ
ಆದರೆ ಈ ಜೀವನಕ್ಕೆ ಅರ್ಥವಿಲ್ಲ !
ಏಕಾಂತದಲ್ಲಿ ಕಣ್ಣೀರು ಹರಿಸುವೆ
ಆದರೆ ಈ ಕಣ್ಣೀರಿಗೆ ಕೊನೆ ಇಲ್ಲ
ಅನಾಥ ಬಾಳಿಗಿಂತ ದೊಡ್ಡ ಯಾವುದೇ ಶಿಕ್ಷೆ ಇಲ್ಲ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment