Monday, September 17, 2012

ಖಾಲಿ ಹಾಳೆಯಾಗಿತ್ತು ಮನಸ್ಸು ನನ್ನ

ಹೇಯ್  ಹೇಯ್  ಅಹ  ಹ್ಮ್ಮ್  ಹ್ಮ್ಮ್  ಅಹ  ಅಹ  ಹ  ಹಾ  ಅಹ  ಉಮ್ಮ್  ಹ್ಮ್ಮ್ಮ್

ಕಿಶೋರ್ :
ಖಾಲಿ ಹಾಳೆಯಾಗಿತ್ತು ಮನಸ್ಸು ನನ್ನ
ನನ್ನ ನನ್ನ ನನ್ನ
ಬರೆದೆ ಅದರಲ್ಲಿ ನಾಮ ನಿನ್ನ
ನಿನ್ನ ನಿನ್ನ ನಿನ್ನ
ಖಾಲಿ ಹಾಳೆಯಾಗಿತ್ತು ಮನಸ್ಸು ನನ್ನ
ಬರೆದೆ ಅದರಲ್ಲಿ ನಾಮ ನಿನ್ನ

ಲತಾ :
ಪಾಳು ಅಂಗಳವಾಗಿತ್ತು ಜೀವನ ನನ್ನ
ಪ್ರೀತಿ ತುಂಬಿತು ಅದರಲ್ಲಿ ನಿನ್ನ

ಕಿಶೋರ್ :
ಕನಸು ನನಸಾಗದೆಂದು ಹೆದರುವೆ ನಾನು
ಪ್ರತಿನಿತ್ಯ ಕನಸಲಿ ಕಾಣುವೆ ನಿನ್ನನು -೨
ನಯನ ಚಂಚಲ ಮನೋಹರ ಈ ಸನ್ನೆ
ಖಾಲಿ ದರ್ಪಣ ಇತ್ತು ಈ ಮನಸ್ಸು ನನ್ನ
ರಚಿಸಿತು ರೂಪ ಅದರಲ್ಲಿ ನಿನ್ನ
ಖಾಲಿ ಹಾಳೆಯಾಗಿತ್ತು.....

ಲತಾ :
ನೆಮ್ಮದಿ ಕಳೆದೆ ನಿದ್ದೆ ಕಳೆದೆ ನಾನು
ಎಲ್ಲ ಎಲ್ಲ ರಾತ್ರಿ ಎಚ್ಚರವಾಗಿದ್ದು ಕಳೆಯುವೆ ನಾನು-2
ಮುಂದೇನು ಹೇಳಲಿ ನಿದ್ದೆ ಕಣ್ಣಲ್ಲಿ ಮನಸ್ಸೆಲ್ಲಿ
ಯಾವುದೇ ವೈರಿ ಆಗಿತ್ತು ಈ ಮನಸ್ಸು ನನ್ನ 
ಆಯಿತು ಪ್ರೇಮಿ ಈಗ ನಿನ್ನ
ಖಾಲಿ ಹಾಳೆಯಾಗಿತ್ತು.....

ಕಿಶೋರ್ :
ಉದ್ಯಾನದಲ್ಲಿ ಹೂವು ಅರಳುವ ಮುನ್ನ
ಲತಾ :
ನಿನ್ನ ನನ್ನ ಕಣ್ಣ ಮಿಲನದ ಮುನ್ನ-2
ಕಿಶೋರ್ :
ಎಲ್ಲಿತ್ತು ಈ ಮಾತುಗಳು 
ಲತಾ:
ಈ ಭೇಟಿಗಳು
ಕಿಶೋರ್ :
ಈ ರೀತಿಯ ರಾತ್ರಿಗಳು
ಲತಾ :
ತುಂಡಾದ ತಾರೆ ಇತ್ತು ಈ ಮನಸ್ಸು ನನ್ನ
ಕಿಶೋರ್ :
ಆಯಿತು ಚಂದಿರ ಆಗಿ ನಿನ್ನ
ಖಾಲಿ ಹಾಳೆಯಾಗಿತ್ತು...

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್, ಕಿಶೋರ್ ಕುಮಾರ್
ಸಂಗೀತ : ಎಸ್. ಡಿ.ಬರ್ಮನ್
ಚಿತ್ರ : ಆರಾಧನ

K: kora kaagaz tha ye mann mera
likh liya naam is pe tera
L: suna aangan tha jivan mera
bas gaya pyaar jis pe tera

K: (toot na jaaye sapane main darata hun
nit din sapanon men dekha karata hun) \- 2
naina kajaraare matavaare ye ishaare
khaali darapan tha ye mann mera
rach gaya roop is men tera

L: kora kaagaz tha ye man mera
likh liya naam is pe tera

L: chain ganvaaya maine nindiya ganvaai
saari saari raat jaagun dun main duhaai
kahun kya main aage neha laage ji na laage
koi dushman tha ye mann mera
ban gaya meet ja ke tera

K: kora kaagaz tha ye mann mera
likh liya naam is pe tera

K: baagon men phoolon ke khilane se pahale
L: tere mere nainon ke milane se pahale
K: kahaan ki ye baaten
L: mulaaqaaten
K: aisi raaten
L: toota taara tha ye mann mera
K: ban gaya chaand hoke tera

Both: kora kaagaz tha ye mann mera
likh liya naam is pe tera

www.youtube.com/watch?v=ql1-jjEPErw

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...