Tuesday, September 11, 2012

ನಾನೊಂದು ಹಳೆ ಬಾಣಲೆ

ನಾನೊಂದು ಹಳೆ ಬಾಣಲೆ
ನನ್ನದಿತ್ತು ಒಂದು ಕಾಲ
ಆ ಸಮಯದಲ್ಲಿ
ಈ ಮನೆಯಲ್ಲಿ ನನ್ನದೇ ರಾಜ್ಯ!

ಮನೆ ಹೆಂಗಸರಿಗೆ ನಾನಂದರೆ ಜೀವದ ಗಂಟು
ನನ್ನಿಂದಲೇ ಅವರೆಲ್ಲ ಒಗ್ಗಟ್ಟು
ಅನ್ನ , ಪಾಯಸ , ಸಾರು, ಸಾಂಬಾರು , ಚಿತ್ರಾನ್ನ
ಎಲ್ಲದಕ್ಕೂ ಅವರಿಗೆ ಅಗತ್ಯ ನನ್ನ !

ಯುಗಾದಿ, ಅಷ್ಟಮಿ , ದೀಪಾವಳಿ
ನಾನು ನಿರತ ಎಲ್ಲ ಉತ್ಸವದಲ್ಲಿ
ನಾನಂದರೆ ಇಷ್ಟ  ಸಂಬಂಧಿಕರಿಗೆ, ನೆಂಟರಿಷ್ಟರಿಗೆ
ಹೊಗಳುತ್ತಿದ್ದರು ಅವರು ನನ್ನ ಸಾಮರ್ಥ್ಯಕ್ಕೆ!

ಪ್ರತಿ ದಿನ ನನಗೆ ಭವ್ಯ ಸ್ನಾನ
ತೊಳೆಯುತ್ತಿದ್ದರು ಪಳ ಪಳ ಮಿಂಚುವಂತೆ ನನ್ನ
ನನಗೆ ವಿಶ್ರಾಂತಿಸಲು ಒಂದು ಪ್ರತ್ಯೇಕ ಜಾಗ
ಹೊದೆಯುತ್ತಿದ್ದರು ನನ್ನ ಮೇಲೆ ರೇಷ್ಮೆ ಬಟ್ಟೆ ಆಗ !

ಸಮಯ ಕಳೆದಂತೆ ನನ್ನ ಅವಸ್ಥೆ ಹಾಳಾಯಿತು
ಹೊಸ ಹೊಸ ಜನಾಂಗ
ಹೊಸ ಹೊಸ ತರಹದ ಪಾತ್ರೆಗಳ ರಾಜ್ಯವಾಯಿತು
ಯಾರಿಗೂ ನನ್ನ ಅಗತ್ಯ ಇಲ್ಲದಾಯಿತು !

ಈಗ ಈ ಮನೆಯಲ್ಲಿ ಯಾರಿಲ್ಲ
ಇದ್ದವರಿಗೆ ನನ್ನ ಗೋಚರವಿಲ್ಲ
ಎಲ್ಲ ನೆಲೆಸಿದ್ದಾರೆ ಪಟ್ಟಣದಲ್ಲಿ
ನಾನು ಬಿದ್ದಿದ್ದೇನೆ ಒಂದು ಮೂಲೆಯಲ್ಲಿ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...